ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಜನ್ಯ ಕೊಲೆ ಪ್ರಕರಣ: ಅಧಿಕೃತವಾಗಿ ಸಿಬಿಐ ಸುಪರ್ದಿಗೆ

|
Google Oneindia Kannada News

ಬೆಳ್ತಂಗಡಿ, ಡಿ 10: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ಹಸ್ತಾಂತರಿಸಿದೆ. ಸಿಬಿಐ ಜೊತೆ ಪತ್ರ ವ್ಯವಹಾರ ಆರಂಭಿಸುವ ಮೂಲಕ ತನಿಖೆಗೆ ಗೃಹ ಇಲಾಖೆ ಅಧಿಕೃತ ಚಾಲನೆ ನೀಡಿದೆ.

ಸಿಐಡಿ ತನಿಖೆಯಲ್ಲಿ ನಂಬಿಕೆಯಿಲ್ಲ, ಸಿಬಿಐ ತನಿಖೆ ನಡೆಸಬೇಕೆಂದು ವಿವಿಧ ಸಂಘಟನೆಗಳು ಭಾರೀ ಪ್ರತಿಭಟನೆಗಳನ್ನು ನಡೆಸಿದ್ದವು. ಕೊನೆಗೂ ಪ್ರತಿಭಟನೆಗೆ ಮಣಿದ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸುವ ಘೋಷಣೆ ಮಾಡಿತ್ತು. ಈಗ ಅದು ಅಧಿಕೃತವಾಗಿ ಕಾರ್ಯರೂಪಕ್ಕೆ ಬಂದಿದೆ. (ಕೇಮಾರು ಶ್ರೀ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿಶೇಷ ಸಂದರ್ಶನ)

ಸಿಬಿಐ ತನಿಖಾ ಪ್ರಕ್ರಿಯೆ ಆರಂಭವಾಗಿದೆ. ಸಿಬಿಐ ಸೌಜನ್ಯ ಪ್ರಕರಣವನ್ನು ಯಾವಾಗ ಕೈಗೆತ್ತಿ ಕೊಳ್ಳುತ್ತೆ ಎನ್ನುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದ ಕುರಿತು ಪೊಲೀಸ್ ಇಲಾಖೆಗೆ ಪತ್ರ ಬಂದಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಶಂತನು ಸಿನ್ಹಾ ಹೇಳಿದ್ದಾರೆ.

ಯಾರ ಒತ್ತಾಯಕ್ಕೂ ಮಣಿಯದೆ ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಸೌಜನ್ಯಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು, ಹೆತ್ತವರಿಗೆ ನ್ಯಾಯ ಸಿಗಬೇಕು. ಈ ಪ್ರಕರಣವನ್ನು ಸರಕಾರ ಮತ್ತು ಸಿಬಿಐ ಗಂಭೀರವಾಗಿ ಪರಿಗಣಿಸಿ, ಜನತೆಗೆ ಸಿಬಿಐ ಮೇಲಿನ ನಂಬಿಕೆ ಉಳಿಯುವಂತಾಗ ಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿದ್ದವು.

ನವೆಂಬರ್ 6ರಂದು ಸೌಜನ್ಯ ಕೊಲೆ ಪ್ರಕರಣವನ್ನು ಇನ್ನೆರಡು ದಿನಗಳಲ್ಲಿ ಸಿಬಿಐ ತನಿಖೆಗೆ ವಹಿಸಲಾಗುವುದು ಎಂದು ಗೃಹ ಸಚಿವ ಕೆ ಜೆ ಜಾರ್ಜ್ ದಾವಣಗೆರೆಯಲ್ಲಿ ಹೇಳಿದ್ದರು. (ಸೌಜನ್ಯ ಕೊಲೆ ಪ್ರಕರಣ ಸಿಬಿಐ ತನಿಖೆಗೆ : ಜಾರ್ಜ್)

ಧರ್ಮಸ್ಥಳದ ಮುಂಡಾಸುದಾರರಿಗೆ ತಾಯಿ ಬೆಲೆ ಗೊತ್ತೇ? ಮುಂದೆ ಓದಿ..

ಧರ್ಮಸ್ಥಳದ ಮುಂಡಾಸುದಾರರು

ಧರ್ಮಸ್ಥಳದ ಮುಂಡಾಸುದಾರರು

ಇಡೀ ನಾಡಿನ ಜನತೆಗೆ ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇವೆ. ನಮ್ಮ ಹೋರಾಟ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವುದು. ಆಕೆಯ ತಾಯಿ ಪಡುತ್ತಿರುವ ವೇದನೆ ಯಾವ ತಾಯಿಯೂ ಪಡೆಯಬಾರದು. ಧರ್ಮಸ್ಥಳದ ದೇವರ ದುಡ್ಡಿನ ಮದದಲ್ಲಿರುವ ಮುಂಡಾಸುದಾರರಿಗೆ ತಾಯಿ ಬೆಲೆ ಏನು ಗೊತ್ತು - ಮಹೇಶ್ ಶೆಟ್ಟಿ ತಿಮರೋಡಿ.

ನ್ಯಾಯಕ್ಕಾಗಿ ನಮ್ಮ ಧ್ವನಿ

ನ್ಯಾಯಕ್ಕಾಗಿ ನಮ್ಮ ಧ್ವನಿ

ನಮ್ಮ ನಡುವೆ ಪ್ರಾಭಲ್ಯ ಸಾಧಿಸುತ್ತಿರುವ ರಾಕ್ಷಸೀ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆದು ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ - ಕೇಮಾರು ಶ್ರೀ.

ದಬ್ಬಾಳಿಕೆಯಿಂದ ನೊಂದವರು ಸಿಡಿದೇಳುತ್ತಾರೆ

ದಬ್ಬಾಳಿಕೆಯಿಂದ ನೊಂದವರು ಸಿಡಿದೇಳುತ್ತಾರೆ

ತುಳುನಾಡಿನ ಜನರನ್ನು ಶೋಷಿಸಲಾಗುತ್ತದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ವಿರುದ್ದ ಹಾಕಲಾದ ಬ್ಯಾನರಿಗೆ ಬೆಂಕಿ ಹಚ್ಚಲಾಗುತ್ತಿದೆ. ಅತ್ಯಾಚಾರದಲ್ಲಿ ಭಾಗಿಯಾದವರೇ ಬ್ಯಾನರಿಗಳಿಗೆ ಬೆಂಕಿ ಹಚ್ಚಿರುತ್ತಾರೆ - ತುಳು ಸಾಹಿತಿ ಅಮೃತಾ.

ವಿಧಾನಸೌಧಕ್ಕೆ ನಮ್ಮ ಕೂಗು ತಲುಪಿದೆ

ವಿಧಾನಸೌಧಕ್ಕೆ ನಮ್ಮ ಕೂಗು ತಲುಪಿದೆ

ಕೋಟಿ ಕೋಟಿ ಜನರ ಕೂಗು ವಿಧಾನಸೌಧಕ್ಕೆ ತಲುಪಿದೆ. ಆದರೆ ಇಲ್ಲಿನ ಪೊಲೀಸ್ ವ್ಯವಸ್ಥೆ ಕಣ್ಣುಮುಚ್ಚಿ ಕೂತಿದೆ. ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯಿದೆ. ಅಣ್ಣಪ್ಪ, ಮಂಜುನಾಥನ ಹೆಸರಿನಲ್ಲಿ ದುಡ್ಡು ಮಾಡಿಕೊಂಡು ಅದರ ಮದದಲ್ಲಿ ದಬ್ಬಾಳಿಕೆ ನಡೆಸುತ್ತಿರುವ ಮುಂಡಾಸುದಾರಿಗಳ ವಿರುದ್ದ ನಮ್ಮ ಹೋರಾಟ - ಮಹೇಶ್ ಶೆಟ್ಟಿ

ಭಾರೀ ಪ್ರತಿಭಟನೆ

ಭಾರೀ ಪ್ರತಿಭಟನೆ

ಸರಕಾರ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಬಾರದು. ಸುಪ್ರೀಕೋರ್ಟ್ ಸುಪರ್ದಿಯಲ್ಲಿ ಸಿಬಿಐ ತನಿಖೆ ನಡೆಯಬೇಕು. ಇಡೀ ರಾಜ್ಯದ ಯುವ ಜನತೆಯ ಬೆಂಬಲ ವ್ಯಕ್ತವಾಗಿದೆ - ಸೌಜನ್ಯ ಪರ ಹೋರಾಟ ಸಮಿತಿ ಮುಖ್ಯಸ್ಥ.

English summary
Karnataka Government officially handed over Sowjanya case to CBI, Dakshina Kannada Superident of Police Shanthanu Sinha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X