ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಆರಂಭ: ಸಲೂನ್, ಪಾರ್ಲರ್‌ಗಳು ಪಾಲಿಸಬೇಕಾದ ನಿಯಮಗಳು

|
Google Oneindia Kannada News

ಬೆಂಗಳೂರು, ಮೇ 19: ಕೊರೊನಾ ತಡೆಗಟ್ಟುವಿಕೆಗಾಗಿ ರಾಜ್ಯದಲ್ಲೂ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಹಿಂದೆ ಮೂರನೇ ಹಂತದಲ್ಲಿ ಹಲವು ಕ್ಷೇತ್ರಗಳಿಗೆ ಸರ್ಕಾರ ವಿನಾಯಿತಿ ಇತ್ತು.

ಆದರೆ, ಸಲೂನ್, ಕಟಿಂಗ್ ಶಾಪ್ ಹಾಗೂ ಪಾರ್ಲರ್‌ಗಳಿಗೆ ಅವಕಾಶ ಇರಲಿಲ್ಲ. ಈಗ ನಾಲ್ಕನೇ ಹಂತದ ಲಾಕ್‌ಡೌನ್ ನಲ್ಲಿ ಇವರಿಗೆ ಕೆಲಸ ಮಾಡಲು ಅವಕಾಶ ನೀಡಿದೆ.

ಮೈಸೂರಿನ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಬಂದ್ಮೈಸೂರಿನ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಬಂದ್

ಆದರೆ, ರಾಜ್ಯಾದ್ಯಂತ ಸಲೂನ್, ಕಟಿಂಗ್ ಶಾಪ್ ಹಾಗೂ ಪಾರ್ಲರ್‌ಗಳು ಕಾರ್ಯನಿರ್ವಹಿಸಬೇಕಾದರೆ ಸರ್ಕಾರ ಸೂಚಿಸಿರುವ ಕಟ್ಟಿನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲೇಬೇಕು. ಆರೋಗ್ಯ ಇಲಾಖೆ ಕಾರ್ಯದರ್ಶಿ ಇಂದು ಸಲೂನ್, ಕಟಿಂಗ್ ಶಾಪ್ ಹಾಗೂ ಪಾರ್ಲರ್‌ಗಳಿಗೆ 12 ಸೂಚನೆಗಳನ್ನು ಹೊರಡಿಸಿದ್ದಾರೆ. ಮುಂದೆ ಓದಿ...

ಮಾಸ್ಕ್‌ ಇಲ್ಲದವರಿಗೆ ಪ್ರವೇಶ ನಿಷಿದ್ಧ

ಮಾಸ್ಕ್‌ ಇಲ್ಲದವರಿಗೆ ಪ್ರವೇಶ ನಿಷಿದ್ಧ

1) ಜ್ವರ, ಕೆಮ್ಮು ಮತ್ತು ಗಂಟಲು ನೋವು ಇರುವಂತವರಿಗೆ ಒಳಗೆ ಪ್ರವೇಶ ನೀಡುವಂತಿಲ್ಲ, 2) ಮಾಸ್ಕ್‌ ಇಲ್ಲದವರಿಗೆ ಪ್ರವೇಶ ನಿಷಿದ್ಧ, 3) ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇರುವಂತೆ ನೋಡಿಕೊಳ್ಳಬೇಕು

ಹ್ಯಾಂಡ್ ಸ್ಯಾನಿಟೈಸರ್ ನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು

ಹ್ಯಾಂಡ್ ಸ್ಯಾನಿಟೈಸರ್ ನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು

4) ಅಂಗಡಿಗಳ ಸಿಬ್ಬಂದಿ, ಯಾವಾಗಲೂ ಮಾಸ್ಕ್, ಏಪ್ರಾನ್, ತಲೆಗೆ ಟೋಪಿ ಧರಿಸಿರಬೇಕು, 5) ಪ್ರತಿಯೊಬ್ಬ ಗ್ರಾಹಕನಿಗೂ ಬಳಸಿ ಬಿಸಾಡುವ ಕಾಗದ ಇಡಬೇಕು, 6) ವ್ಯಕ್ತಿಗಳಿಗೆ ಬಳಸಿದ ಸಾಧನಗಳನ್ನು ಲೈಸೂಲ್‌ನಲ್ಲಿ ಹಾಕಿ ಇಡಬೇಕು 7) ಪ್ರತಿ ಸಾರಿ ಹೇರ್ ಕಟ್ ಮಾಡಿದ ಮೇಲೆ ಕೆಲಸಗಾರರು ಹ್ಯಾಂಡ್ ಸ್ಯಾನಿಟೈಸರ್ ನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು

ಟೋಕನ್ ವ್ಯವಸ್ಥೆ ಮಾಡಬೇಕು

ಟೋಕನ್ ವ್ಯವಸ್ಥೆ ಮಾಡಬೇಕು

8) ಒಂದೇ ಸಾರಿ ಜನದಟ್ಟಣೆ ಮಾಡುವುದನ್ನು ತಪ್ಪಿಸಲು ಆನ್‌ಲೈನ್ ಬುಕ್ಕಿಂಗ್ ಅಥವಾ ಟೋಕನ್ ವ್ಯವಸ್ಥೆ ಮಾಡಬೇಕು 9) ಆಸನಗಳ ನಡುವೆ ಸಾಕಷ್ಟು ಅಂತರ ಇರುವಂತೆ ನೋಡಿಕೊಳ್ಳಬೇಕು

ತ್ಯಾಜ್ಯ ವಿಲೇವಾರಿ ಮಾಡಬೇಕು

ತ್ಯಾಜ್ಯ ವಿಲೇವಾರಿ ಮಾಡಬೇಕು

10) ಅಂಗಡಿಯವರು ಬಳಸಿದ ಬ್ಲೇಡ್, ಕಾಗದ ಹಾಗೂ ಇನ್ನಿತರ ವಸ್ತುಗಳನ್ನು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಎಲ್ಲಂದರಲ್ಲಿ ಬಿಸಾಡುವ ಹಾಗಿಲ್ಲ, 11) ಕೋವಿಡ್ ಬಗ್ಗೆ ಜಾಗೃತಿ ಬಿತ್ತಿ ಪತ್ರಗಳನ್ನು ಅಂಗಡಿಯ ಮುಂದೆ ಅಂಟಿಸಬೇಕು, 12) ಆರೋಗ್ಯ ಸಮಸ್ಯೆಯಾದರೆ 104 ಸಂಖ್ಯೆಗೆ ಕರೆ ಮಾಡಬೇಕು

English summary
Karnataka Government Issued The Standard Operating Procedures To Salon And Parlors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X