ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಸಾಮಾಜಿಕ ಜಾಲ ತಾಣಗಳಿಗೂ ಈಗ ಕೊಕ್ಕೆ

By Srinath
|
Google Oneindia Kannada News

Karnataka Government bars social media in office computers
ಬೆಂಗಳೂರು, ಜ.7- ಕರ್ನಾಟಕ ರಾಜ್ಯ ಸರಕಾರಿ ನೌಕರರು ಇನ್ಮುಂದೆ ತಮ್ಮ ಕಚೇರಿಯಲ್ಲಿನ ಕಂಪ್ಯೂಟರ್ ಬಳಸಿ, ಅಂತರ್ಜಾಲದ ಮೂಲಕ ಸಾಮಾಜಿಕ ಜಾಲಗಳನ್ನೂ ಜಾಲಾಡುವಂತಿಲ್ಲ.

ಈ ಹಿಂದೆ ವಿಧಾನಸೌಧದಲ್ಲಿರುವ ಅಧಿಕಾರಿಗಳೂ ಸೇರಿದಂತೆ ರಾಜ್ಯದ ಹಲವೆಡೆ ಸರಕಾರಿ ಕಚೇರಿಗಳಲ್ಲಿ ಅಂತರ್ಜಾಲದ ಮೂಲಕ ಅಶ್ಲೀಲ ಚಿತ್ರಪಟಗಳನ್ನು ನೋಡುತ್ತಾರೆ ಎಂಬ ವರದಿಯನ್ನಾಧರಿಸಿ, ಸರಕಾರ ಈಗಾಗಲೇ ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸಿದೆ. ಇದೀಗ, Facebook ಮತ್ತು Twitter ನಂತಹ ವೈಯಕ್ತಿಕ ಜಾಲತಾಣಗಳನ್ನೂ ಬಳಸುವಂತಿಲ್ಲ ಎಂದು ಸರಕಾರಿ ಆದೇಶ ಹೊರಬಿದ್ದಿದೆ.

ಮೂರು ತಿಂಗಳ ಹಿಂದೆ ಸರಕಾರವು ಪೋರ್ನ್ ವೆಬ್ ಸೈಟ್ ಗಳು ಮತ್ತು ಮನರಂಜನಾ ತಾಣಗಳನ್ನು ನಿಷೇಧಿಸಿತ್ತು. ಆದರೆ ಸುದ್ದಿ ಮಾಧ್ಯಮ ವೆಬ್ ಸೈಟ್ ಗಳನ್ನು ನೋಡಿ. ನ್ಯೂಸ್ ಅಪ್ ಡೇಟ್ ಮಾಡಿಕೊಳ್ಳಬಹುದಾಗಿದೆ.

kar.nic.in ಮೂಲಕ ಕರ್ನಾಟಕ ಸರಕಾರಿ ನೌಕರರು ಯಾವುದೇ ಎಗ್ಗಿಲ್ಲದೆ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾರೆ ಎಂದು Central Bureau of Investigation ವರದಿ ಸಲ್ಲಿಸಿತ್ತು. ಭಯೋತ್ಪಾದನೆ ಚಟುವಟಿಕೆಗಳ ಮೇಲೆ ನಿಗಾಯಿಟ್ಟಿದ್ದ ಸಿಬಿಐಗೆ ಕರ್ನಾಟಕದ ಸರಕಾರಿ ನೌಕರರು ಅಶ್ಲೀಲ ಚಿತ್ರಗಳನ್ನು ನೋಡುತ್ತಿರುವುದು ಅಚಾನಕ್ಕಾಗಿ ಕಂಡುಬಂದಿತ್ತು.

ಇದೀಗ Vidhana Soudha, Vikasa Soudha, M S Building ಮತ್ತು Visvesvaraya Towersಗಳಲ್ಲಿರುವ ಸರಕಾರಿ ಕಚೇರಿಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು e-shopping site ಸೈಟ್ ಗಳನ್ನು department of e-governance ನಿಷೇಧಿಸಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ತಿಳಿಸಿದ್ದಾರೆ.

English summary
Karnataka Government bars social media in office computers. Government staff can no longer use their office computers to visit social media sites (such as Facebook and Twitter) or shop online. Three months after blocking porn sites, the government has acted against media and entertainment sites. Employees can, however, access news sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X