• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಎಲ್ ರಾಹುಲ್, ಮಯಾಂಕ್, ವೇದಾ ಕೃಷ್ಣಮೂರ್ತಿಗೆ ಏಕಲವ್ಯ ಪ್ರಶಸ್ತಿ

|

ಬೆಂಗಳೂರು, ನ.1: ಕ್ರೀಡಾಕ್ಷೇತ್ರದಲ್ಲಿ ಸರ್ವಶ್ರೇಷ್ಠ ಸಾಧನೆ ಮೆರೆದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕಳೆದ ಮೂರು ವರ್ಷಗಳಿಂದ ಪ್ರಶಸ್ತಿ ಘೋಷಿಸಿರಲಿಲ್ಲ.

ಕ್ರೀಡಾಪಟುಗಳು ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ತೋರಿದ್ದನ್ನು ಪರಿಗಣಿಸಿ ಈ ಬಾರಿ ಏಕಲವ್ಯ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಕರ್ನಾಟಕ ಸರ್ಕಾರದ ಪ್ರಕಟಣೆ ತಿಳಿಸಿದೆ.

2017ನೇ ಸಾಲಿನಲ್ಲಿ 14 ಮಂದಿಗೆ ಏಕಲವ್ಯ, ಇಬ್ಬರಿಗೆ ಜೀವಮಾನ ಸಾಧನೆ, 10 ಮಂದಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.

2018ನೇ ಸಾಲಿನಲ್ಲಿ 9 ಮಂದಿಗೆ ಏಕಲವ್ಯ, ಇಬ್ಬರಿಗೆ ಜೀವಮಾನ ಸಾಧನೆ,7 ಮಂದಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.

2019ನೇ ಸಾಲಿನಲ್ಲಿ 8 ಮಂದಿಗೆ ಏಕಲವ್ಯ, ಇಬ್ಬರಿಗೆ ಜೀವಮಾನ ಸಾಧನೆ, 9 ಮಂದಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.

2018ನೇ ಸಾಲಿನ ಏಕಲವ್ಯ ಪ್ರಶಸ್ತಿ ಕೆಎಲ್ ರಾಹುಲ್ (ಕ್ರಿಕೆಟ್), 2019ನೇ ಸಾಲಿನಲ್ಲಿ ವೇದಾ ಕೃಷ್ಣಮೂರ್ತಿ ಹಾಗೂ ಮಯಾಂಕ್ ಅಗರವಾಲ್ ಅವರಿಗೆ ಘೋಷಿಸಲಾಗಿದೆ.

ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು 1992ರಿಂದ ರಾಜ್ಯದ ಕ್ರೀಡಾಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ 2 ಲಕ್ಷ ರು. ನಗದು ಹಾಗೂ ಏಕಲವ್ಯನ ಕಂಚಿನ ಮೂರ್ತಿಯನ್ನು ಒಳಗೊಂಡಿದೆ.

ಕ್ರೀಡಾ ಕ್ಷೇತ್ರಕ್ಕೆ ಅಪ್ರತಿಮ ಕ್ರೀಡಾಪಟುಗಳನ್ನು ನೀಡಿದ ಕರ್ನಾಟಕದ ತರಬೇತುದಾರರಿಗೆ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರತಿ ವರ್ಷ 2 ಕ್ರೀಡಾ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಜೀವಮಾನ ಸಾಧನೆ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ತರಬೇತುದಾರರಿಗೆ ತಲಾ ರೂ.1.50 ಲಕ್ಷಗಳ ನಗದು ಬಹುಮಾನ, ಸ್ಕ್ರೋಲ್ ಮತ್ತು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.

2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು

ರೀನಾ ಜಾರ್ಜ್ ಎಸ್. (ಆಥ್ಲೆಟಿಕ್),

ಮಿಥುಲಾ (ಬ್ಯಾಡ್ಮಿಂಟನ್),

ಅವಿನಾಶ ಮಣಿ (ಈಜು),

ಅರ್ಜುನ್ ಹಲ್ಕುರ್ಕಿ(ಕುಸ್ತಿ),

ಅನಿಲ್ ಕುಮಾರ್ ಬಿ.ಕೆ (ಬಾಸ್ಕೆಟ್‌ಬಾಲ್),

ಉಷಾರಾಣಿ ಎನ್. (ಕಬ್ಬಡಿ),

ಖುಷಿ ವಿ.(ಟೇಬಲ್ ಟೆನ್ನಿಸ್),

ಎಂ.ಎಸ್. ಪೊನ್ನಮ್ಮ (ಹಾಕಿ),

ವಿನಾಯಕ್ ರೋಖಡೆ(ವಾಲಿಬಾಲ್),

ಎಂ.ದೀಪಾ (ರೋಯಿಂಗ್),

ರಾಜು ಅಡಿವೆಪ್ಪಾ ಭಾಟಿ (ಸೈಕ್ಲಿಂಗ್),

ವರ್ಷಾ ಎನ್.(ಬಿಲಿಯಡ್ಸ, ಸ್ನೂಕರ್),

ತೇಜಸ್ ಕೆ. (ಶೂಟಿಂಗ್),

ಶೇಖರ್ ವೀರಾಸ್ವಾಮಿ( ಟೆನ್ನಿಸ್, ಪ್ಯಾರಾ)

2017 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ

ಎಂ.ಫ್ರೆಡ್ರಿಕ್ಸ್ (ಹಾಕಿ),

ಡಾ.ಪಟೇಲ್ ಮೊಹಮದ್ ಇಲಿಯಾಸ್(ವಾಲಿಬಾಲ್)

2017ನೇ ಸಾಲಿನ ಕ್ರೀಡಾರತ್ನ ಪ್ರಶಸ್ತಿ

ವೀಣಾ ಎಂ(ಖೋ ಖೋ),

ಕೌಶಲ್ಯ ಕೆ.ಎಸ್ ( ಕಬ್ಬಡ್ಡಿ ),

ಜಯಲಕ್ಷ್ಮಿ ಜಿ. (ಬಾಲ್ ಬ್ಯಾಡ್ಮಿಂಟನ್),

ಅನುಶ್ರೀ ಎಚ್.ಎಸ್. (ಕುಸ್ತಿ),

ರಂಜಿತ ಎಂ. (ಥ್ರೋ ಬಾಲ್),

ಭಿಮ್ಮಪ್ಪ ಹಡಪದ (ಮಲ್ಲಕಂಬ),

ಮಹೇಶ ಆರ್ ಎರೆಮನೆ (ಆಟ್ಯಾಪಾಟ್ಯಾ),

ಚಂದ್ರಶೇಖರ ಎಚ್.ಕಲ್ಲಹೊಲದ (ಗುಂಡು ಎತ್ತುವುದು),

ಗೋಪಾಲ ಕೃಷ್ಣ ಪ್ರಭು, (ಕಂಬಳ),

ಶ್ರೀನಿವಾಸ್ ಗೌಡ(ಕಂಬಳ),

ಮಣಿಕಂದನ್ (ಪ್ಯಾರಾಕ್ಲೈಂಬಿಂಗ್)

****

2018ನೇ ಸಾಲಿನ ಏಕಲವ್ಯ ಪ್ರಶಸ್ತಿ

ವಿಜಯಕುಮಾರಿ ಜಿ.ಕೆ (ಅಥ್ಲೆಟಿಕ್),

ಬಾಂಧವ್ಯ ಎಚ್.ಎಂ (ಬ್ಯಾಸ್ಕೆಟ್ ಬಾಲ್),

ಕೆ.ಎಲ್.ರಾಹುಲ್ (ಕ್ರಿಕೆಟ್),

ಮೃಘಾ ಗೂಗಾಡ್ (ಸೈಕ್ಲಿಂಗ್),

ಫೌವಾದ್ ಮಿರ್ಜಾ (ಈಕ್ವೆಸ್ಟ್ರಿಯನ್)

ನಿಕ್ಕಿನ್ ತಿಮ್ಮಯ್ಯ ( ಹಾಕಿ),

ಗೀತಾ ದಾನಪ್ಪ ಗೊಳ್(ಜುಡೋ)

ಶ್ರೀಹರಿ ನಟರಾಜ(ಈಜು)

ಶಕೀನ ಖಾತೂನ್ (ಪ್ಯಾರಾ ಪವರ್ ಲಿಫ್ಟಿಂಗ್)

* 2018 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ *

ಸಿ.ಎಂ ಕುರುಂಬಯ್ಯ (ಹಾಕಿ)

ಮಂಜುನಾಥ್.ಆರ್ (ಕಬಡ್ಡಿ)

2018 ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿ

ಸಂಪತ್ ನಾಗಪ್ಪ ಯರಗಟ್ಟಿ(ಅಟ್ಯಾ_ಪಟ್ಯಾ)

ಸುರೇಶ್ ಶೆಟ್ಟಿ (ಕಂಬಳ)

ಶಿವಕುಮಾರ್ ಎಚ್.ಎನ್ ( ಖೋ ಖೋ)

ಕಿರಣ್ ಕುಮಾರ್.ಐ (ಟೆನ್ನಿ ಕ್ವಾಯಿಟ್), ಮಲ್ಲಪ್ಪ ಗೌಡ ಪಾಟೀಲ್(ಕುಸ್ತಿ)

ಯಮನಪ್ಪ ಮಾಯಪ್ಪ ಕಲ್ಲೋಳಿ ( ಮಲ್ಲಕಂಬ)

ಲಾವಣ್ಯ ಬಿ.ಡಿ( ಬಾಲ್ ಬ್ಯಾಟ್ಮಿಂಟನ್)

***

2019 ನೇ ಏಕಲವ್ಯ ಪ್ರಶಸ್ತಿ

ಅಭಿನಯ ಶೆಟ್ಟಿ (ಅಥ್ಲೆಟಿಕ್),

ವೇದಾ ಕೃಷ್ಣ ಮೂರ್ತಿ( ಕ್ರಿಕೆಟ್),

ವೆಂಕಪ್ಪ ಗೆಂಗಲಗುತ್ತಿ( ಸೈಕ್ಲಿಂಗ್),

ಪುಲಿಂದ ಲೋಕೇಶ್ ತಿಮ್ಮಣ್ಣ(ಹಾಕಿ),

ಖುಷಿ ದಿನೇಶ್( ಈಜು),

ಮಯಾಂಕ್ ಅಗರ್ವಾಲ್ (ಕ್ರಿಕೆಟ್),

ಪುನೀತ್ ನಂದಕುಮಾರ್( ಪ್ಯಾರಾ ಈಜು),

ಅಭಿಷೇಕ್ ಎನ್ ಶೆಟ್ಟಿ( ಅಥ್ಲೆಟಿಕ್)

2019 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ

ಶಾಂತಾ ರಂಗಸ್ವಾಮಿ (ಕ್ರಿಕೆಟ್),

ಸಂಜೀವ್ ಆರ್ ಕನಕ( ಖೊ ಖೋ)

2019 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ

ಅನಿತಾ ಬಿಚಗಟ್ಟಿ (ಅಟ್ಯಾ-ಪಟ್ಯಾ),

ಪಲ್ಲವಿ ಎಸ್ ಕೆ (ಬಾಲ್ ಬ್ಯಾಟ್ಮಿಂಟನ್)

ರಕ್ಷಿತ ಎಸ್ (ಕಬಡ್ಡಿ)

ಸುದರ್ಶನ್(ಖೋ ಖೋ),

ಅನುಪಮ ಹೆಚ್ ಕೆರಕಲಮಟ್ಟಿ(ಮಲ್ಲಕಂಬ)

ಪ್ರವೀಣ್ ಕೆ (ಕಂಬಳ)

ಮಂಜುನಾಥ್ ಹೆಚ್ (ಥ್ರೋ ಬಾಲ್),

ಸತೀಶ್ ಪಡತಾರೆ (ಕುಸ್ತಿ)

ಅನೀಶಾ ಮಣೇಗಾರ್ ( ಟೆನ್ನಿಕ್ವಾಯಿಟ್)

ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳು

2018_19: ಸ್ವರ್ಣ ಫುಟ್ ಬಾಲ್ ಅಭಿವೃದ್ಧಿ ಸಂಸ್ಥೆ, ಮಂಡ್ಯ

ವಿ.ಆರ್ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ , ಹಳಿಯಾಳ

2019 -20 : ಮಂಗಳೂರು ವಿಶ್ವವಿದ್ಯಾನಿಲಯ ಮಂಗಳೂರು

2020_21 : ಸಿದ್ದಗಂಗಾ ಮಠ ಸಂಸ್ಥೆ ತುಮಕೂರು

ಮಾಣಿಕಾ ಪ್ರಭು ಸ್ಪೋರ್ಟ್ಸ್ ಅಕಾಡೆಮಿ ಮಾಣಿಕನಗರ. ಬೀದರ್

English summary
Karnataka government announces Ekalavya award to KL Rahul, Mayank Agarwal and various sports awards for the year 2017, 2018 and 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X