ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದ ಗಿಫ್ಟ್: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸರ್ಕಾರದಿಂದ ರೈತರಿಗೆ ಹಬ್ಬಕ್ಕೆ ಭರ್ಜರಿ ಗಿಫ್ಟ್ | Oneindia Kannada

ಬೆಂಗಳೂರು, ಆಗಸ್ಟ್ 24: ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ.

ಸ್ವಲ್ಪ ತಡೆಯಿರಿ ಮೀನುಗಾರರ, ನೇಕಾರರ, ಸ್ತ್ರೀಶಕ್ತಿ ಸಂಘದ ಸಾಲ ಕೂಡ ಮನ್ನಾ ಆಗಲಿದೆಸ್ವಲ್ಪ ತಡೆಯಿರಿ ಮೀನುಗಾರರ, ನೇಕಾರರ, ಸ್ತ್ರೀಶಕ್ತಿ ಸಂಘದ ಸಾಲ ಕೂಡ ಮನ್ನಾ ಆಗಲಿದೆ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 2 ಲಕ್ಷದವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡುವ ಮಹತ್ವದ ನಿರ್ಧಾರವನ್ನು ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

karnataka government announced farmers loan waive in nationalized bank

ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾದ ಜತೆಗೆ 25 ಸಾವಿರ ಚಾಲ್ತಿ ಸಾಲವನ್ನು ಕೂಡ ಮನ್ನಾ ಮಾಡಲಾಗುವುದು. ಇದರಿಂದ ರಾಜ್ಯದ ಬೊಕ್ಕಸಕ್ಕೆ 32 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆ

ಸಾಲಮನ್ನಾ ಮಾಡಲು ಈಗಾಗಲೇ 6,500 ಕೋಟಿ ರೂ. ತೆಗೆದಿರಿಸಲಾಗಿದೆ. ಹಂತಹಂತವಾಗಿ ರೈತರ ಸಾಲ ಮನ್ನಾ ಆಗಲಿದೆ. 2019-20ನೇ ಸಾಲಿನಲ್ಲಿ 8,656 ಕೋಟಿ, 2020-21ನೇ ಸಾಲಿನಲ್ಲಿ 7,856 ಕೋಟಿ ಮತ್ತು 2021-22ನೇ ಸಾಲಿನಲ್ಲಿ 7,231 ಕೋಟಿ ರೂ. ಸಾಲಮನ್ನಾ ಮಾಡಲಾಗುವುದು.

karnataka government announced farmers loan waive in nationalized bank

ನಾಲ್ಕು ಹಂತದ ಸಾಲಮನ್ನಾದ ಬಡ್ಡಿ ವಿಚಾರದಲ್ಲಿ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಈ ಹಿಂದೆ ಹಿಂದೆ ಸರಿದಿದ್ದವು. ಹೀಗಾಗಿ ಮಾರುಕಟ್ಟೆಯ ಶೇ 12ರ ಬಡ್ಡಿದರ ಪಾವತಿಸಲು ಸರ್ಕಾರ ನಿರ್ಧರಿಸಿದೆ. 7,419 ಕೋಟಿ ರೂ. ಬಡ್ಡಿ ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಲಾಗುವುದು ಎಂದು ವಿವರಿಸಿದರು.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಕಂತುಗಳ ಪ್ರಕಾರ ಸಾಲಮನ್ನಾ ಮಾಡಿದರೂ ರೈತರಿಗೆ ಈ ವರ್ಷದಿಂದಲೇ ಋಣಮುಕ್ತ ಪತ್ರ ನೀಡಲಾಗುವುದು. ಅದನ್ನು ವಿತರಿಸಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು.

karnataka government announced farmers loan waive in nationalized bank

ನಾಲ್ಕು ಹಂತಗಳಲ್ಲಿ ಸಾಲಮನ್ನಾ ಮಾಡಲು ಬ್ಯಾಂಕುಗಳು ಒಪ್ಪಿಕೊಂಡಿರಲಿಲ್ಲ. ಸಾಲಮನ್ನಾ ಹೇಗೆ ಮಾಡಬೇಕು ಎನ್ನುವುದು ನನಗೆ ತಿಳಿಸಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆಯೇ ಸಾಲಮನ್ನಾ ಮಾಡಲಾಗುವುದು. ಸರ್ಕಾರದ ಖಜಾನೆಯಿಂದಲೇ ಅದಕ್ಕೆ ಬೇಕಾಗುವ ಆರ್ಥಿಕ ಮೂಲವನ್ನು ತುಂಬಿಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

English summary
Chief Minister HD Kumaraswamy announced waive of farmers loan in Nationalised banks upto Rs. 2 Lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X