ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸುದ್ದಿಗೋಷ್ಠಿಯ ಹೈಲೈಟ್ಸ್

|
Google Oneindia Kannada News

ಬೆಂಗಳೂರು, ಜುಲೈ 15: ಪ್ಲಾಸ್ಮಾ ದಾನ ಮಾಡಿದರೆ ಪ್ರತಿಯೊಬ್ಬರಿಗೂ 5 ಸಾವಿರ ರೂ, ನೀಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಕರ್ನಾಟಕದ ಪರಿಸ್ಥಿತಿ ಹೇಗಿದೆ, ಜನರು ಹೇಗೆ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಸೇರಿದಂತೆ ಹಲವು ವಿಚಾರಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗುಣಮುಖರಾಗಿರುವ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ಸಚಿವ ಸುಧಾಕರ್ ಮನವಿ. ಪ್ಲಾಸ್ಮಾದಾನ ಮಾಡುವವರಿಗೆ ಸರ್ಕಾರದಿಂದ 5000 ರೂ. ಪ್ರೋತ್ಸಾಹಧನ. ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು 17,370 ಜನ ಈಗಾಗಲೇ ಗುಣಮುಖರಾಗಿದ್ದಾರೆ.

ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್; ಪ್ಲಾಸ್ಮಾ ದಾನ ಮಾಡುವುದು ಹೇಗೆ?ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್; ಪ್ಲಾಸ್ಮಾ ದಾನ ಮಾಡುವುದು ಹೇಗೆ?

ಐಸಿಯು ನಲ್ಲಿ 597 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹವರ ಚಿಕಿತ್ಸೆಗೆ ಗುಣಮುಖರಾದವರ ಪ್ಲಾಸ್ಮಾ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ಲಾಸ್ಮಾ ದಾನ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.

25 ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಚಿವ ಸುಧಾಕರ್ ಸಭೆ. ಕೋವಿಡ್ ಟೆಸ್ಟ್ ಮಾಡದ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ. ಲ್ಯಾಬ್ ಗಳಲ್ಲಿ ಉಪಕರಣಗಳ ಕೊರತೆ ಪೂರೈಸಲು ಸಚಿವರ ನಿರ್ದೇಶನ. 1 ವಾರದಲ್ಲಿ ಎಲ್ಲಾ ಲ್ಯಾಬ್ ಗಳನ್ನು ಮೇಲ್ದರ್ಜೆಗೇರಿಸಲು ಕ್ರಮ. ಪ್ರತಿದಿನ ಕನಿಷ್ಠ 500 ಟೆಸ್ಟ್ ನಡೆಸಲು ಖಾಸಗಿ ಸಂಸ್ಥೆಗಳಿಗೆ ಸೂಚನೆ. 1 ವಾರದೊಳಗೆ 25,000 - 30,000 ಟೆಸ್ಟ್ ನಡೆಸುವ ಗುರಿ.

ಪ್ರತಿಭಟನೆ ನಡೆಸುತ್ತಿರುವ ದಾವಣಗೆರೆಯ ಜೆಜೆ‌ಎಂ‌ಎಂಸಿ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ 3-4 ದಿನಗಳಲ್ಲಿ ಬಿಡುಗಡೆ. ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಅರಿಯರ್ಸ್ ಸಮೇತ ಪಾವತಿಗೆ ಕ್ರಮ. ಸಚಿವ ಸುಧಾಕರ್ ಮಹತ್ವದ ಘೋಷಣೆ

ಎರಡು ದಿನಗಳಲ್ಲಿ ಕಾರ್ಯಪಡೆ ರಚಿಸಲು ಸೂಚನೆ

ಎರಡು ದಿನಗಳಲ್ಲಿ ಕಾರ್ಯಪಡೆ ರಚಿಸಲು ಸೂಚನೆ

ಬೆಂಗಳೂರಿನ ಎಲ್ಲಾ ವಲಯಗಳ ಬೂತ್ ಕಾರ್ಯಪಡೆಯ ನೋಡಲ್ ಅಧಿಕಾರಿಗಳೊಂದಿಗೆ ಸಚಿವ ಸುಧಾಕರ್ ಸಮಾಲೋಚನೆ. 2 ದಿನಗಳಲ್ಲಿ ಕಾರ್ಯಪಡೆ ರಚಿಸಲು ನಿರ್ದೇಶನ. ಸದಸ್ಯರ ಕರ್ತವ್ಯ ಮತ್ತು ನಿರ್ವಹಿಸಬೇಕಾದ ಕೆಲಸಗಳ ಕುರಿತು ಮಾರ್ಗಸೂಚಿ.

ಮನೆ ಮನೆ ಸಮೀಕ್ಷೆ

ಮನೆ ಮನೆ ಸಮೀಕ್ಷೆ

ಲಾಕ್ ಡೌನ್ ಅವಧಿಯಲ್ಲಿ ಮನೆಮನೆ ಸಮೀಕ್ಷೆ ನಡೆಸಿ 60 ವರ್ಷ ಮೇಲ್ಪಟ್ಟವರಿಗೆ ರಿವರ್ಸ್ ಐಸೋಲೇಶನ್ ಮಾಡಲು ಸೂಚನೆ. ಹಾಸಿಗೆ ವ್ಯವಸ್ಥೆ, ಆಂಬುಲೆನ್ಸ್ ಒದಗಿಸುವುದು ಮುಂತಾದ ನಿರ್ಧಾರಗಳನ್ನು ಕಾರ್ಯಪಡೆ ತೆಗೆದುಕೊಳ್ಳುವುದು.

ಕೊವಿಡ್ ನಿಗ್ರಹಕ್ಕೆ ಸರ್ಕಾರದ ಜತೆ ಕೈ ಜೋಡಿಸಿ

ಕೊವಿಡ್ ನಿಗ್ರಹಕ್ಕೆ ಸರ್ಕಾರದ ಜತೆ ಕೈ ಜೋಡಿಸಿ

ಕೊವಿಡ್ ನಿರ್ವಹಣೆ ಮತ್ತು ನಿಗ್ರಹಕ್ಕೆ ಸರ್ಕಾರದ ಜೊತೆ ಕೈಜೋಡಿಸುವಂತೆ ನಾಗರಿಕರಲ್ಲಿ ಸಚಿವರ ಮನವಿ. ಸಹಕಾರ ನೀಡುತ್ತಿರುವ ಸಂಘ ಸಂಸ್ಥೆಗಳಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು .

9 ಲಕ್ಷ ಕೊವಿಡ್ ಪರೀಕ್ಷೆ

9 ಲಕ್ಷ ಕೊವಿಡ್ ಪರೀಕ್ಷೆ

ರಾಜ್ಯದಲ್ಲಿ ಕೊವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು. ಇಂದಿಗೆ 9 ಲಕ್ಷ ಕೋವಿಡ್ ಟೆಸ್ಟ್ ಗಳು ಪೂರ್ಣ. ಇಂದೇ 22,204 ಪರೀಕ್ಷೆ ನಡೆಸಲಾಗಿದೆ.

ರಾಜ್ಯದಲ್ಲಿ ಇಂದು 3000 ಕ್ಕೂ ಅಧಿಕ ಸೋಂಕಿತರು, ಬೆಂಗಳೂರಿನಲ್ಲಿ 1975 ಸೋಂಕಿತರು.

English summary
Karnataka Medical Education Minister Dr. K Sudhakar Announced 5 Thousand Rupees For each Plasma doners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X