ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ಇನ್ಮುಂದೆ ನೈಟ್‌ ಶಿಫ್ಟ್‌

|
Google Oneindia Kannada News

Recommended Video

ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅನುಮತಿ ಕೊಟ್ಟ ರಾಜ್ಯ ಸರ್ಕಾರ | Oneindia Kannada

ಬೆಂಗಳೂರು, ನವೆಂಬರ್ 21: ಕರ್ನಾಟಕದ ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲೂ ಮಹಿಳೆಯರಿಗೆ ಕೆಲಸ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಮದ್ರಾಸ್ ಹೈಕೋರ್ಟ್ ಆದೇಶದಂತೆ ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮಹಿಳೆಯರೂ ಕೂಡ ಕೆಲಸ ಮಾಡಬಹುದು. ಹೈಕೋರ್ಟ್ ಆದೇಶದ ಪ್ರಕಾರ ಮಹಿಳೆಯರ ರಾತ್ರಿ ಪಾಳಿಗೆ ನಿರ್ಬಂಧ ಹೇರಿದ್ದ ಕಾರ್ಖಾನೆ ಕಾಯ್ದೆ ಸೆಕ್ಷನ್ 66(1) ರದ್ದುಪಡಿಸಲಾಗಿದೆ.

ರೈತರಿಗೆ ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲು ಹಾಕಿ: ಸಿಎಂ ಸೂಚನೆರೈತರಿಗೆ ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲು ಹಾಕಿ: ಸಿಎಂ ಸೂಚನೆ

ಹೀಗಾಗಿ ಮಹಿಳೆಯರ ರಾತ್ರಿ ಪಾಳಿಗಿದ್ದ ನಿರ್ಬಂಧ ತೆರವಾದಂತಾಗಿದೆ.ಆದರೆ ರಾತ್ರಿ ಪಾಳಿಗೆ ಸರ್ಕಾರ ಹಾಗೂ ಕಂಪನಿಗಳು ಇನ್ನಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ನಿಯಮಗಳಂತೆ ಸೂಕ್ತ ಭದ್ರತೆಗಳನ್ನು ತೆಗೆದುಕೊಳ್ಳುಕೊಳ್ಳುವುದು ಅನಿವಾರ್ಯವಾಗಲಿದೆ. ರಾತ್ರಿ ಪಾಳಿಯ ಪೂರಕವಾದ ವಾತಾವರಣವನ್ನು ಕಾರ್ಖಾನೆಗಳು ಸೃಷ್ಟಿಸಬೇಕಿದೆ.

ತೆಲಂಗಾಣದಲ್ಲಿ ದುರಂತ: ಮಣ್ಣು ಕುಸಿದು 10 ಮಹಿಳಾ ಕಾರ್ಮಿಕರು ಜೀವಂತ ಸಮಾಧಿತೆಲಂಗಾಣದಲ್ಲಿ ದುರಂತ: ಮಣ್ಣು ಕುಸಿದು 10 ಮಹಿಳಾ ಕಾರ್ಮಿಕರು ಜೀವಂತ ಸಮಾಧಿ

ರಾಜ್ಯ ಸರ್ಕಾರದ ಈ ಆದೇಶವು ಐಟಿ ವಲಯದಲ್ಲಿನ ಕಾರ್ಯನಿರ್ವಹಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸಧ್ಯಕ್ಕೆ ಅಲ್ಲಿ ಕೂಡ ಮಹಿಳೆಯ ರಾತ್ರಿ ಪಾಳಿ ಮೇಲೆ ನಿರ್ಬಂಧವಿತ್ತು.

ರಾತ್ರಿ ಪಾಳಿಗೆ ಸರ್ಕಾರವೇನೋ ಅನುಮತಿ ನೀಡಿದೆ. ಆದರೆ ಮಹಿಳೆಯರಿಗೆ ಸುರಕ್ಷತೆಗೆ ಸಂಬಂಧಿಸಿ ಕಂಪನಿಗಳು ಈ ಕ್ರಮವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

10 ವರ್ಷಗಳ ಹಿಂದೆ ಐಟಿ ಆಧಾರಿತ ಕ್ಷೇತ್ರದಲ್ಲಿ ಮಹಿಳೆಯರಿಗೆ ರಾತ್ರಿಪಾಳಿ

10 ವರ್ಷಗಳ ಹಿಂದೆ ಐಟಿ ಆಧಾರಿತ ಕ್ಷೇತ್ರದಲ್ಲಿ ಮಹಿಳೆಯರಿಗೆ ರಾತ್ರಿಪಾಳಿ

ಸುಮಾರು ಹತ್ತು ವರ್ಷಗಳ ಹಿಂದೆ ಐಟಿ ಹಾಗೂ ಐಟಿ ಆಧಾರಿತ ಸೇವಾ ವಲಯಗಳಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶವಾಗುವಂತೆ ಈ ಕಾನೂನುಗಳಿಗೆ ಕರ್ನಾಟಕ ಸರ್ಕಾರ ತಿದ್ದುಪಡಿ ತಂದಿತ್ತು. ಈಗ ತಯಾರಿಕಾ ವಲಯಗಳಲ್ಲೂ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ಮೂಲಕ ಕರ್ನಾಟಕ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಈಗಾಗಲೇ ರಾಜಸ್ಥಾನ ಹಾಗೂ ಮಹಾರಾಷ್ಟ್ರ ಸರ್ಕಾರಗಳೂ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟಿವೆ.

ಗಾರ್ಮೆಂಟ್ ಉದ್ಯದಲ್ಲಿ ಶೇ.60ರಷ್ಟು ಮಹಿಳೆಯರು

ಗಾರ್ಮೆಂಟ್ ಉದ್ಯದಲ್ಲಿ ಶೇ.60ರಷ್ಟು ಮಹಿಳೆಯರು

ಹಣ ಹೂಡಿಕೆ ತಾಣ ಎಂಬಂತಹ ವರ್ಚಸ್ಸು ಇದರಿಂದ ಕರ್ನಾಟಕಕ್ಕೆ ದಕ್ಕಲಿದೆ. ಉದ್ಯಮಶೀಲತೆ ಬೆಳವಣಿಗೆಗೂ ಪರೋಕ್ಷವಾಗಿ ದಾರಿಯಾಗಲಿದೆ. ಗಾರ್ಮೆಂಟ್ ಉದ್ಯಮದಲ್ಲಿ ಕಾರ್ಮಿಕ ಶಕ್ತಿಯ ಶೇ.60ರಷ್ಟು ಮಹಿಳೆಯರಿದ್ದಾರೆ. ಜವಳಿ ಉದ್ಯಮದಲ್ಲಿ ಶೇ.50ರಷ್ಟಿದ್ದಾರೆ. ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಇನ್ನುಮುಂದೆ ಈ ಸಂಸ್ಥೆಗಳಿಗೆ ಸಾಧ್ಯವಾಗುವುದರಿಂದ ಈ ಕೈಗಾರಿಕೋದ್ಯಮಗಳಲ್ಲಿ ಉತ್ಪಾದಕತೆ ಹೆಚ್ಚಾಗಬಹುದು. ರೀಟೇಲ್, ಆತಿಥ್ಯ ಹಾಗೂ ಫಾರ್ಮಾ ಕ್ಷೇತ್ರಗಳಿಗೂ ಅನುಕೂಲವಾಗಲಿದೆ.

ಮಹಿಳೆಯರ ಭದ್ರತೆ ಮುಖ್ಯ

ಮಹಿಳೆಯರ ಭದ್ರತೆ ಮುಖ್ಯ

ಕೇವಲ ಕಂಪನಿಗಳಲ್ಲಿ, ಗಾರ್ಮೆಂಟ್ಸ್‌ಗಳಲ್ಲಿ ಮಹಿಳೆಯರಿಗೆ ರಾತ್ರಿಪಾಳಿಗೆ ಅವಕಾಶ ನೀಡಿದರೆ ಸಾಲದು ಅವರ ಭದ್ರತೆ ಕಡೆಗೂ ಹೆಚ್ಚು ಗಮನವಹಿಸಬೇಕು. ಕ್ಯಾಬ್ ವ್ಯವಸ್ಥೆ ಮಾಡಬೇಕು. ಕಚೇರಿಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಅಳವಡಿಸಬೇಕು. ಜೊತೆಗೆ ಕ್ಯಾಬ್‌ಗಳಲ್ಲಿ ಕೂಡ ಭದ್ರತಾ ಸಿಬ್ಬಂದಿಯೂ ಜೊತೆಗೆ ತೆರಳುವಂತಿರಬೇಕು.

ಮಹಿಳಾ ಉದ್ಯೋಗಿಗಳಿಗೆ ನೈಟ್‌ಶಿಫ್ಟ್‌ ತೆಗೆದಿದ್ದೇಕೆ?

ಮಹಿಳಾ ಉದ್ಯೋಗಿಗಳಿಗೆ ನೈಟ್‌ಶಿಫ್ಟ್‌ ತೆಗೆದಿದ್ದೇಕೆ?

ಭದ್ರತೆ ಕಲ್ಪಿಸಲು ಸಾಧ್ಯವಾಗದ ಕಾರಣ ಮಹಿಳೆಯರಿಗೆ ನೈಟ್ ಶಿಫ್ಟ್‌ ಎನ್ನುವ ಕಾನ್ಸೆಪ್ಟನ್ನೇ ತೆಗೆಯಲಾಗಿತ್ತು. ಈ ಕುರಿತಂತೆ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮುಂದೆ ಬಂದರೆ ಮಾತ್ರ ರಾತ್ರಿ 7ರಿಂದ ಬೆಳಗ್ಗೆ 6 ಗಂಟೆವರೆಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ.

English summary
Karnataka Government decided to Allows The Factories To Run Night Shift For Women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X