ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ಬದಲು 2016ರ ಫೆಬ್ರವರಿಯಲ್ಲಿ ಜಿಮ್

|
Google Oneindia Kannada News

ಬೆಂಗಳೂರು, ಸೆ. 18 : ನವೆಂಬರ್‌ನಲ್ಲಿ ನಡೆಯಬೇಕಿದ್ದ ಕೈಗಾರಿಕಾ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2016ರ ಫೆಬ್ರವರಿಗೆ ಮುಂದೂಡಲಾಗಿದೆ. ರಾಜ್ಯದಲ್ಲಿನ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.

'ನವೆಂಬರ್ 23, 24 ಮತ್ತು 25ರಂದು ನಡೆಸಲು ಉದ್ದೇಶಿಸಿದ್ದ ಕೈಗಾರಿಕಾ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು (ಜಿಮ್‌) ಅನ್ನು ಮುಂದೂಡಲಾಗಿದ್ದು, 2016ರ ಫೆಬ್ರವರಿ 3, 4 ಮತ್ತು 5ರಂದು ನಡೆಸಲು ತೀರ್ಮಾನಿಸಲಾಗಿದೆ' ಎಂದು ಸಚಿವರು ತಿಳಿಸಿದ್ದಾರೆ. [ಜಿಮ್ ಗಾಗಿ ದೇಶಪಾಂಡೆ ಅವರ ಖಾತೆ ಬದಲಾವಣೆ]

rv deshpande

'ಕರ್ನಾಟಕದಲ್ಲಿ ತೀವ್ರವಾದ ಬರಪರಿಸ್ಥಿತಿ ಇದೆ. 136 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸುಮಾರು 15,600 ಕೋಟಿ ರೂ. ಮೌಲ್ಯದ ಬೆಳೆಗಳಿಗೆ ಹಾನಿಯಾಗಿದೆ. 1,168 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಪರಿಸ್ಥಿತಿ ಇದೆ. ಆದ್ದರಿಂದ, ಸಮಾವೇಶ ಮುಂದೂಡಲಾಗಿದೆ' ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.[ತುಮಕೂರಿನಲ್ಲಿ ಟೊಯೋಟಾ ಘಟಕಕ್ಕೆ ಒಪ್ಪಿಗೆ]

'ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಮತ್ತು ಬರ ಪರಿಸ್ಥಿತಿಗೆ ಸಂಬಂಧವಿಲ್ಲ ಎಂದು ಹೇಳುವಂತಿಲ್ಲ. ಜನರ ಭಾವನೆಗೆ ಸರ್ಕಾರ ಬೆಲೆ ಕೊಡಲಿದೆ. ಜನರು ಸಂಕಷ್ಟದಲ್ಲಿರುವಾಗ ಸಮಾವೇಶ ನಡೆಸಲಾಗುತ್ತಿದೆ ಎಂಬ ಭಾವನೆ ಸರ್ಕಾರಕ್ಕೆ ಬರುವುದು ಬೇಡ. ಆದ್ದರಿಂದ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮಾವೇಶ ಮುಂದೂಡಲಾಗಿದೆ' ಎಂದು ದೇಶಪಾಂಡೆ ತಿಳಿಸಿದ್ದಾರೆ. [ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]

ಮತ್ತೆ ಹೀರೋ ತರಲು ಯತ್ನ : 'ಆಂಧ್ರಪ್ರದೇಶಕ್ಕೆ ಹೊರಟಿರುವ ಹೀರೋ ಮೋಟಾರ್ಸ್‌ಅನ್ನು ಪುನಃ ಕರ್ನಾಟಕಕ್ಕೆ ತರಲು ಪ್ರಯತ್ನ ನಡೆಸುವುದಾಗಿ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ. ಹೀರೋ ಕರ್ನಾಟಕ ತೊರೆಯಲು ಸರ್ಕಾರ ಕಾರವಣವಲ್ಲ. ಎಲ್ಲಾ ಸೌಲಭ್ಯಗಳನ್ನು ನೀಡಲಾಗಿತ್ತು. ಆದರೆ, ಆಂಧ್ರದಲ್ಲಿ ಹೆಚ್ಚಿನ ರಿಯಾಯಿತಿ ದೊರೆಯಲಿದೆ ಎಂದು ಅಲ್ಲಿಗೆ ಹೋಗಿದೆ' ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು.

English summary
A global investors meet planned by the Karnataka government for the end of November 2015, has been postponed to early next year due to drought conditions in the state. Global investors meet will be held on 3rd, 4th, 5th February 2016 said, Industries minister RV Deshpande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X