ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಶಾನ ವ್ಯವಸ್ಥೆ ಮಾಡಿದ್ದೇವೆ, ಅಂತ್ಯಕ್ರಿಯೆಗೆ ಸಮಸ್ಯೆ ಇಲ್ಲ, "ಸತ್ತು ಹೋಗಿ"

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಮೊದಲೇ ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶಕ್ಕೆ ಒಳಗಾಗಿರುವ ಯಡಿಯೂರಪ್ಪ ಸರಕಾರಕ್ಕೆ ಮತ್ತೊಂದು ಕಪ್ಪುಚುಕ್ಕೆ ಅಂಟಿಕೊಂಡಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವ ಉಮೇಶ್ ಕತ್ತಿಯವರ 'ಸತ್ತು ಹೋಗು'ಎನ್ನುವ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿದೆ.

ಕೊರೊನಾ ನಿಯಮ ಪಾಲನೆ ರಾಜ್ಯಗಳ ಹೊಣೆ; ಚುನಾವಣಾ ಆಯೋಗಕೊರೊನಾ ನಿಯಮ ಪಾಲನೆ ರಾಜ್ಯಗಳ ಹೊಣೆ; ಚುನಾವಣಾ ಆಯೋಗ

ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್, ಉಮೇಶ್ ಕತ್ತಿಯವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ ಎಂದು ಸಿಎಂ ಯಡಿಯೂರಪ್ಪನವರನ್ನು ಆಗ್ರಹಿಸಿದೆ. ಖುದ್ದು, ಮುಖ್ಯಮಂತ್ರಿಗಳೇ, ಕತ್ತಿ ಹೇಳಿಕೆಗೆ ವಿಷಾದ ವ್ಯಕ್ತ ಪಡಿಸಿದ್ದಾರೆ.

 ಕೊರೊನಾ ಸೋಂಕಿತರು ಮನೆಯಲ್ಲಿದ್ದುಕೊಂಡೇ ರೋಗ ಗೆಲ್ಲುವುದು ಹೇಗೆ? ಕೊರೊನಾ ಸೋಂಕಿತರು ಮನೆಯಲ್ಲಿದ್ದುಕೊಂಡೇ ರೋಗ ಗೆಲ್ಲುವುದು ಹೇಗೆ?

ಕೋವಿಡ್ ನಿಯಂತ್ರಿಸುವಲ್ಲಿ ಸರಕಾರ ಎಡವಿದೆ ಎಂದು ವಿರೋಧ ಪಕ್ಷಗಳು ದಿನಾ ಬೆಳಗ್ಗೆ ಆರೋಪಿಸುತ್ತಿರುವ ಸಮಯದಲ್ಲಿ ಸಚಿವ ಉಮೇಶ್ ಕತ್ತಿ ನೀಡಿದ ಹೇಳಿಕೆ, ಸಿಎಂಗೆ ನುಂಗಲಾರದ ತುತ್ತಾಗುತ್ತಿದೆ. ಸ್ಮಶಾನ ವ್ಯವಸ್ಥೆ ಮಾಡಿದ್ದೇವೆ, ಅಂತ್ಯಕ್ರಿಯೆಗೆ ಸಮಸ್ಯೆ ಇಲ್ಲ, "ಸತ್ತು ಹೋಗಿ" ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ. ಅಸಲಿಗೆ ಕತ್ತಿ ಹೇಳಿದ್ದೇನು?

 ರೈತ ಸಂಘದ ಕಾರ್ಯಕರ್ತನಿಗೆ ಉದ್ಧಟತನದ ಪ್ರತಿಕ್ರಿಯೆ ನೀಡಿದ ಸಚಿವ ಕತ್ತಿ

ರೈತ ಸಂಘದ ಕಾರ್ಯಕರ್ತನಿಗೆ ಉದ್ಧಟತನದ ಪ್ರತಿಕ್ರಿಯೆ ನೀಡಿದ ಸಚಿವ ಕತ್ತಿ

ರೈತ ಸಂಘದ ಕಾರ್ಯಕರ್ತ ಈಶ್ವರ ಎಂಬುವರು ಸಚಿವ ಉಮೇಶ ಕತ್ತಿ ಅವರಿಗೆ ದೂರವಾಣಿ ಕರೆ ಮಾಡಿ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಯಾವ ಕಾರಣಕ್ಕೆ ಕಡಿಮೆ ಮಾಡಿದ್ದೀರಾ. ಮೊದಲೇ ಕೊರೊನಾ ಸಮಸ್ಯೆ ಇದೆ. ಉದ್ಯೋಗ ಇಲ್ಲ. ಹೀಗಿರುವಾಗ ನಾವು ಸಾಯಬೇಕೇ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ 'ಸಾಯೋದು ಒಳ್ಳೆಯದು' ಎಂದು ಸಚಿವ ಕತ್ತಿ ಉದ್ಧಟತನದ ಪ್ರತಿಕ್ರಿಯೆ ನೀಡಿದ್ದರು.

 ಅಯೋಗ್ಯ ಸರ್ಕಾರ, ಅನರ್ಹ ಮಂತ್ರಿಗಳು, ಮಗನ ಕೈಗೊಂಬೆ ಮುಖ್ಯಮಂತ್ರಿ

ಅಯೋಗ್ಯ ಸರ್ಕಾರ, ಅನರ್ಹ ಮಂತ್ರಿಗಳು, ಮಗನ ಕೈಗೊಂಬೆ ಮುಖ್ಯಮಂತ್ರಿ

"ಅಯೋಗ್ಯ ಸರ್ಕಾರ, ಅನರ್ಹ ಮಂತ್ರಿಗಳು, ಮಗನ ಕೈಗೊಂಬೆ ಮುಖ್ಯಮಂತ್ರಿ, ಪುಕ್ಕಲು ಸಂಸದರು, ತಿಕ್ಕಲು ಸಂಪುಟ! ಇಂತಹ ನಾಲಾಯಕ್ @BJP4Karnataka ಸರ್ಕಾರದಿಂದ ಜನತೆ ಇನ್ನೇನು ನಿರೀಕ್ಷಿಸಲು ಸಾಧ್ಯ?" ಎಂದು ಕೆಪಿಸಿಸಿ ಘಟಕ ಟ್ವೀಟ್ ಮಾಡಿದೆ.

ಮೊನ್ನೆ ಸ್ಮಶಾನ ವ್ಯವಸ್ಥೆ ಮಾಡಿದ್ದೇವೆ, ಅಂತ್ಯಕ್ರಿಯೆಗೆ ಸಮಸ್ಯೆ ಇಲ್ಲ ಇಂದು "ಸತ್ತು ಹೋಗಿ

ಜನತೆ ನೋವು, ಹತಾಶೆಯಿಂದ ಬದುಕಬೇಕೋ ಸಾಯಬೇಕೋ ಎಂದು ಕೇಳಿದರೆ. ಸಾಯುವುದನ್ನೇ ಆಯ್ಕೆ ಮಾಡಿಕೊಳ್ಳಿ ಎಂದಿದೆ ಬಿಜೆಪಿ ಸರ್ಕಾರ. ಇಂತಹ ಅತೀ ನೀಚ @BJP4Karnataka ಸರ್ಕಾರದಿಂದ ರಾಜ್ಯಕ್ಕೆ ಉಳಿಗಾಲವಿಲ್ಲ. ಮೊನ್ನೆ ಸ್ಮಶಾನ ವ್ಯವಸ್ಥೆ ಮಾಡಿದ್ದೇವೆ, ಅಂತ್ಯಕ್ರಿಯೆಗೆ ಸಮಸ್ಯೆ ಇಲ್ಲ - @RAshokaBJP, ಇಂದು "ಸತ್ತು ಹೋಗಿ" - @UMESHKATTI3 ಜನತೆಯನ್ನು ಸಾಯಿಸಲೆಂದೇ @BJP4Karnataka ಬಂದಿರುವುದು" ಇದು ಕೆಪಿಸಿಸಿ ಮಾಡಿರುವ ಟ್ವೀಟ್.

Recommended Video

By Election Result : ಮೇ 2ಕ್ಕೆ ನಿರ್ಧಾರವಾಗಲಿದೆ ಅಪ್ಪ - ಮಗನ ಭವಿಷ್ಯ | Oneindia Kannada

ಜನರನ್ನು ಅವರ ಸಮಸ್ಯೆಗಳನ್ನು ಅತೀ ನೀಚ ಮಟ್ಟಕ್ಕಿಳಿದು ಅವಮಾನಿಸಿದ ಸಚಿವ ಉಮೇಶ್ ಕತ್ತಿ

"ಸಂಕಷ್ಟದಲ್ಲಿ, ನೋವಿನಲ್ಲಿ ನರಳುತ್ತಿರುವ ಜನತೆಗೆ "ಸತ್ತು ಹೋಗಿ" ಎನ್ನುವ ಮೂಲಕ ತಮ್ಮ ಅಯೋಗ್ಯತನವನ್ನು ಧೂರ್ತ ಮಾತುಗಳಿಂದ ಸಾಬೀತು ಮಾಡಿದ್ದಾರೆ. @BSYBJP ಅವರೇ, ಜನರನ್ನು ಅವರ ಸಮಸ್ಯೆಗಳನ್ನು ಅತೀ ನೀಚ ಮಟ್ಟಕ್ಕಿಳಿದು ಅವಮಾನಿಸಿದ ಸಚಿವ ಉಮೇಶ್ ಕತ್ತಿಯ ರಾಜೀನಾಮೆ ಕೂಡಲೇ ಪಡೆಯಿರಿ. ಆ ವ್ಯಕ್ತಿ ಒಂದು ಕ್ಷಣವೂ ಅಧಿಕಾರದಲ್ಲಿರಲು ಅನರ್ಹ" ಎಂದು ಕೆಪಿಸಿಸಿ ಕತ್ತಿ ರಾಜೀನಾಮೆ ಒತ್ತಾಯಿಸಿದೆ.

English summary
Karnataka Food And Civil Supply Minister Umesh Katti Arrogancy During Discussion With Farmer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X