ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ರಣಾಂಗಣ : ವಿಶ್ವಾಸಮತವನ್ನು ಹೇಗೆ ನಡೆಸಲಾಗುತ್ತದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 18 : ಕರ್ನಾಟಕ ವಿಧಾನಸಭೆಯಲ್ಲಿ ಶನಿವಾರ, ಮೇ 19ರಂದು ಗೌಪ್ಯ ಮತದಾನಕ್ಕೆ ಅವಕಾಶ ಕೊಡಬೇಕೆಂದು ಬಿಜೆಪಿ ಮಾಡಿದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿರುವುದರಿಂದ ಭಾರೀ ಕೋಲಾಹಲವುಂಟಾಗಿ ವಿವಾದವೆಬ್ಬಿಸುವ ಸಾಧ್ಯತೆಯಿದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಧ್ವನಿಮತದ ಮೂಲಕ ಮತದಾನ ಮಾಡುವ ಸಂದರ್ಭದಲ್ಲಿ ವಿವಾದ ಸೃಷ್ಟಿಯಾಗಿತ್ತು. ದೇವೇಂದ್ರ ಫಡ್ನವೀಸ್ ಅವರ ನೇತೃತ್ವದ ಬಿಜೆಪಿ ಸರಕಾರ ವಿಶ್ವಾಸಮತ ಗೆದ್ದಿತ್ತು. ಕೆಲ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಮೇಲೆ ಕೈಕೂಡ ಮಾಡಿದ್ದರು.

ಶನಿವಾರ 15 ನೇ ವಿಧಾನಸಭೆ ಅಸ್ತಿತ್ವದ ಜತೆಗೆ ಬಹುಮತ ಸಾಬೀತು! ಶನಿವಾರ 15 ನೇ ವಿಧಾನಸಭೆ ಅಸ್ತಿತ್ವದ ಜತೆಗೆ ಬಹುಮತ ಸಾಬೀತು!

ವಿಶ್ವಾಸಮತ ಹೇಗೆ ನಡೆಯುತ್ತದೆ?

ಸಾಮಾನ್ಯವಾಗಿ ಧ್ವನಿಮತದ ಮೂಲಕ ವಿಶ್ವಾಸಮತ ನಡೆಯುತ್ತದೆ. ಧ್ವನಿಮತದ ಮೂಲಕ ನಡೆದರೆ ವಿಶ್ವಾಸಮತದ ಪರವಾಗಿರುವವರು 'ಹೌದು' ಅಥವಾ 'ಇಲ್ಲ' ಎನ್ನುವ ಮೂಲಕ ಮತ ಚಲಾಯಿಸುತ್ತಾರೆ. ಕೈ ಎತ್ತುವ ಅಥವಾ ಚೀಟಿಯ ಮೂಲಕ ಅಥವಾ ಎಲೆಕ್ಟ್ರಾನಿಕ್ ಎಂತ್ರದ ಮೂಲಕವೂ ಮತ ಚಲಾವಣೆ ನಡೆಯುತ್ತದೆ.

ಸಸ್ಪೆನ್ಸ್ ಥ್ರಿಲ್ಲರ್ : ಬಹುಮತ ಸಾಬೀತುಪಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್ಸಸ್ಪೆನ್ಸ್ ಥ್ರಿಲ್ಲರ್ : ಬಹುಮತ ಸಾಬೀತುಪಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್

Karnataka floor test : How the events will unfold

ವಿಭಾಗೀಕರಣ ಎಂದರೇನು?

ಧ್ವನಿಮತದ ಮೂಲಕ ಬಂದ ಮತಎಣಿಕೆಯ ವಿರುದ್ಧ ಯಾವ ಪಕ್ಷವಾದರೂ ಧ್ವನಿಯೆತ್ತಿದರೆ, ಬಿದ್ದ ಮತಗಳ ಸರಿಯಾದ ಲೆಕ್ಕ ತೆಗೆದುಕೊಳ್ಳಲು ವಿಭಾಗೀಕರಣ ಮಾಡಲಾಗುತ್ತದೆ. ಆಗ, ಸ್ಪಷ್ಟ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ.

ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು? ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು?

ಯಾವಾಗ ವಿಭಾಗೀಕರಣದ ಅಗತ್ಯವಿರುತ್ತದೆ?

ಇದನ್ನು ಸಾಮಾನ್ಯವಾಗಿ ಸಂಸತ್ತಿನಲ್ಲಿ ಪಾಲಿಸಲಾಗುತ್ತದೆ. ವಿಧಾನಸಭೆಗಳಲ್ಲಿ ಪಾಲಿಸಲಾಗುವುದಿಲ್ಲ. ಯಾವುದಾದರೂ ಸಾಂವಿಧಾನಿಕ ತಿದ್ದುಪಡಿಗೆ ಮತಹಾಕುವ ಸಮಯದಲ್ಲಿ ಈ ವಿಭಾಗೀಕರಣದ ಅಗತ್ಯವಿರುತ್ತದೆ.

ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಲು ಸುಪ್ರೀಂ ಆದೇಶ ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಲು ಸುಪ್ರೀಂ ಆದೇಶ

ಈ ಪ್ರಕ್ರಿಯೆಯ ಬಗ್ಗೆ ಯಾವುದಾದರೂ ಪಕ್ಷ ಅಸಮಾಧಾನ ತೋರಿದರೆ?

ಇಂಥ ಸಂದರ್ಭ ಬಂದಾಗ ರಾಜ್ಯಪಾಲರಿಗೆ ಮನವಿ ಸಲ್ಲಿಸಬಹುದು. ಆಗ, ರಾಜ್ಯಪಾಲರು ಮತ್ತೊಮ್ಮೆ ಸದನವನ್ನು ಕರೆದು ಮತ್ತೆ ವಿಶ್ವಾಸಮತ ಯಾಚಿಸಲು ಸೂಚಿಸಬಹುದು. ರಾಜ್ಯಪಾಲರು ಸಭಾಧ್ಯಕ್ಷರಿಗೆ ಸರಿಯಾಗಿ ನಿರ್ವಹಿಸಲು ಕೆಲ ಸೂಚನೆಗಳನ್ನೂ ನೀಡಬಹುದು. ಮತ್ತೂ ಸಮಸ್ಯೆ ಬಗೆಹರಿಯದಿದ್ದರೆ ಕೋರ್ಟಿನ ಕದವನ್ನೂ ತಟ್ಟಬಹುದು.

English summary
Karnataka floor test : How the events unfold in assembly? How floor tests are conducted?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X