ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕರ್ನಾಟಕದಲ್ಲಿ ಪ್ರವಾಹ: ಮೋದಿ 1000 ಕೋಟಿ ರೂ ಬಿಡುಗಡೆ ಮಾಡಲಿ"

|
Google Oneindia Kannada News

ಬೆಂಗಳೂರು, ಆಗಸ್ಟ್ 08: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಕೃಷ್ಣ ನದಿಯ ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿ ಇದುವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಗಂಭೀರ ಆತಂಕದ ಪರಿಸ್ಥಿತಿ ಉಂಟಾಗಿದೆ. ಸುಮಾರು 36 ತಾಲೂಕುಗಳ 240 ಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗಿವೆ. ಮಳೆಯ ಆರ್ಭಟ ಮುಂದುವರೆಯುವ ಮುನ್ಸೂಚನೆ ಸಿಕ್ಕಿದ್ದು, ಪ್ರವಾಹವು ಮತ್ತಷ್ಟು ಹೆಚ್ಚಾಗುವ ಸಂಭವ ವಿರುವುದರಿಂದ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ, ತಕ್ಷಣ ಕೇಂದ್ರ ಸರಕಾರ ಕೂಡಲೇ ಒಂದು ಸಾವಿರ ಕೊಟಿ ರೂ.ಗಳ ನೆರವನ್ನು ನೀಡಬೇಕೆಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸುತ್ತದೆ.

ಪ್ರಾಥಮಿಕ ಮಾಹಿತಿಯಂತೆ ಲಕ್ಷಾಂತರ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ನದಿ ಪಾತ್ರಗಳಲ್ಲಿನ ಮತ್ತು ಇತರೆಡೆಯ 2.50 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದ ಬೆಳೆಯು ಹಾನಿಯಾಗಿದೆ. ನಿರಾಶ್ರಿತರ ಸಂಖ್ಯೆಯು ಬೆಳೆಯುತ್ತಲೇ ಇದೆ. ಇದುವರೆಗೆ ಸುಮಾರು 11 ಕ್ಕೂ ಹೆಚ್ಚು ನಾಗರೀಕರು ಸಾವಿಗೀಡಾಗಿದ್ದಾರೆ. ನೂರಾರು ಜಾನುವಾರುಗಳು ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿವೆ.

ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?

ಲಕ್ಷಾಂತರ ನಿರಾಶ್ರಿತರಿಗೆ ಎಲ್ಲೆಡೆ ನೆರವು ಕೇಂದ್ರಗಳನ್ನು ತೆರೆಯಬೇಕಿದೆ. ಸಾವಿರಾರು ವಾಸದ ಮನೆಗಳು, ನೂರಾರು ಸರಕಾರಿ ಕಟ್ಟಡಗಳು, ಸಾರ್ವಜನಿಕ ರಸ್ತೆ, ನೂರಾರು ಸೇತುವೆಗಳು ಹಾನಿಗೀಡಾಗಿವೆ.

Karnataka Floods: CPI(M) demand PM Modi to release Rs 1000 Cr fund

ಪ್ರವಾಹಕ್ಕೆ ಸಿಲುಕಿದ ಸಾವಿರಾರು ಜನತೆ ಮತ್ತು ಜಾನುವಾರುಗಳನ್ನು ರಕ್ಷಿಸಿದ ರಕ್ಷಣ ಸಿಬ್ಬಂದಿ ಮತ್ತು ನಾಗರೀಕರನ್ನು ಸಿಪಿಐ(ಎಂ) ಅಭಿನಂದಿಸಿದೆ. ರಾಜ್ಯದ ಜನತೆ ಹಾನಿಗೀಡಾದ ಕುಟುಂಬಗಳ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಮುಖ್ಯಮಂತ್ರಿಗಳು ಸಮರ್ಪಕ ಕಾರ್ಯ ನಿರ್ವಹಣೆಗೆ ಕ್ರಮವಹಿಸಲಿ:
ರಾಜ್ಯ ಸರ್ಕಾರದ ಇದುವರೆಗಿನ ಪರಿಹಾರದ ಕ್ರಮ ಅಸಮರ್ಪಕವಾಗಿದೆ. ತೆರೆದಿರುವ ಗಂಜಿ ಕೇಂದ್ರಗಳು ಸಾಲದಾಗಿವೆ. ಜಾನುವಾರುಗಳಿಗೆ ಮೇವು ಒದಗಿಸಬೇಕು ಮತ್ತು ನೆರೆ ಹಾವಳಿಗೀಡಾದ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಅದೇರೀತಿ ರಾಜ್ಯದಲ್ಲದ ಹಾನಿಯನ್ನು ಅಂದಾಜು ಮಾಡಲು ತುರ್ತು ಕ್ರಮ ವಹಿಸಬೇಕು ಮತ್ತು ಜಿಲ್ಲೆಗಳಿಗೆ ಕೂಡಲೇ ಅಗತ್ಯ ಹಣಕಾಸಿನ ನೆರವನ್ನು ಒದಗಿಸುವಂತೆ ಹಾಗೂ ಪ್ರವಾಹ ನಿರ್ವಹಣೆಯ ಕೆಲಸವನ್ನು ಆಧ್ಯತೆಯ ಮೇರೆಗೆ ನಿರ್ವಹಿಸುವಂತೆ ಅಧಿಕಾರಿ ವರ್ಗದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.

English summary
Karnataka Floods: CPI(M) demand PM Modi to release Rs 1000 Cr fund to Karnataka state from PM national relief fund(PMNRF).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X