ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲೆಗೊಂದು ಮತ್ಸ್ಯದರ್ಶಿನಿ, ಅಗ್ಗದ ದರದಲ್ಲಿ ರುಚಿಕರ ಮೀನೂಟ

|
Google Oneindia Kannada News

ಬೆಂಗಳೂರು, ಮಾರ್ಚ್ 01: ದೆಹಲಿ ನಂತರ ದೇಶದಲ್ಲಿ ಎರಡನೇ ಮತ್ಸ್ಯದರ್ಶಿನಿ ಆರಂಭಿಸಿ ಯಶಸ್ಸು ಕಂಡ ಕರ್ನಾಟಕ ರಾಜ್ಯ ಮೀನುಗಾರಿಕೆ ಸಹಕಾರಿ ಮಹಾಮಂಡಳಿ(KFDC) ಈಗ ಪ್ರತಿ ಜಿಲ್ಲೆಗೊಂದು ಮತ್ಸ್ಯ ದರ್ಶಿನಿ ಹೋಟೆಲ್ ಸ್ಥಾಪಿಸಲು ಮುಂದಾಗಿದೆ. ಅಗ್ಗದ ದರದಲ್ಲಿ ರುಚಿಕರ ಮೀನೂಟ ಸವಿಯಬಹುದು ಎಂದು ಸಂಸ್ಥೆ ಹೇಳಿದೆ.

ರಾಜ್ಯದಲ್ಲಿ 560ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರಿ ಸಂಘಗಳಿದ್ದು, ಲಕ್ಷಾಂತರ ಮೀನುಗಾರರು ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿಕೊಂಡಿದ್ದಾರೆ. ಈ ಮತ್ಸ್ಯ ಭವನದಿಂದ ಮೀನುಗಾರರಿಗೆ ಹೆಚ್ಚಿನ ಉತ್ಪಾದನೆ ಸಿಗಲಿದೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮೊಬೈಲ್ ಮತ್ಸ್ಯದರ್ಶಿನಿಯನ್ನು ಮಾತ್ರವಲ್ಲದೆ ಸಾರ್ವಜನಿಕರಿಗೆ ತಾಜಾ ಮೀನನ್ನು ಶುದ್ಧೀಕರಿಸಿಕೊಡಲು ಮೊಬೈಲ್ ಮೀನು ಮಾರಾಟ ವಾಹನವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದೆ. ಇದರಲ್ಲಿ ಸಹ ಮೊಬೈಲ್ ಮತ್ಸ್ಯದರ್ಶಿನಿಯಲ್ಲಿದಂತೆ ಮೀನು ಸಂರಕ್ಷಿಸಲು ಬೇಕಾದ ಚಿಲ್ಲರ್, ನೀರಿನ ವ್ಯವಸ್ಥೆ ಹಾಗೂ ತ್ಯಾಜ್ಯ ಸಂಗ್ರಹಣ ವ್ಯವಸ್ಥೆ ಇರುತ್ತದೆ.

ಮಹಿಳಾ ಮೀನುಗಾರರಿಗೆ ಶುಭ ಸುದ್ದಿ ನೀಡಲಿರುವ ರಾಜ್ಯ ಸರ್ಕಾರಮಹಿಳಾ ಮೀನುಗಾರರಿಗೆ ಶುಭ ಸುದ್ದಿ ನೀಡಲಿರುವ ರಾಜ್ಯ ಸರ್ಕಾರ

ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಮತ್ಸ್ಯದರ್ಶಿನಿ ಹೋಟೆಲ್ ನಿರ್ವಹಿಸುತ್ತಿದ್ದು, ಈಗ ಪ್ರತಿಜಿಲ್ಲೆಯಲ್ಲಿ ಮೀನಿನ ಹೋಟೆಲ್ ಸ್ಥಾಪನೆಗೆ ನಿಗಮ ಮುಂದಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಮತ್ಸ್ಯದರ್ಶಿನಿ ಸ್ಥಾಪಿಸಲು 25 ರಿಂದ 30 ಲಕ್ಷ ರು ವೆಚ್ಚ ತಗುಲಲಿದೆ. ಹೋಟೆಲ್ ನಿರ್ಮಾಣಕ್ಕಾಗಿ ನಬಾರ್ಡ್ ನಿಂದ 100 ಕೋಟಿ ರು ಸಾಲ ರೂಪದಲ್ಲಿ ನೆರವು ಪಡೆಯಲು ನಿರ್ಧರಿಸಲಾಗಿದೆ. ಅಗತ್ಯ ಹಣಕಾಸು ನೆರವು ಸಿಕ್ಕ ಬಳಿಕ ಹೋಟೆಲ್ ಸ್ಥಾಪನೆಯಾಗಲಿದೆ.

Karnataka Fisheries Development Corporation to set up Matsya Darshini Hotel

ಸಹಕಾರಿ ಮಂಡಳಿಯ ಮೀನಿನ ಕ್ಯಾಂಟೀನುಗಳಲ್ಲಿ ಫಿಶ್ ಕರಿ ಮತ್ತು ಡ್ರೈ ಪದಾರ್ಥಗಳು ಮಾತ್ರ ಸಿಗುತ್ತಿದ್ದವು. ಇನ್ನು ಮುಂದೆ... ಫಿಶ್ ಕಟ್ಲೆಟ್, ಫಿಶ್ ಬರ್ಗರ್, ಫಿಶ್ ಉಪ್ಪಿನಕಾಯಿ, ಫಿಶ್ ಕಬಾಬ್, ಫಿಶ್ ಮಂಚೂರಿ, ಫಿಶ್ ಫಿಂಗರ್ಸ್, ಫಿಶ್ ಪಕೋಡೆ, ಗ್ರಿಲ್ಡ್ ಫಿಶ್... ಏನು ಬೇಕು ಹೇಳಿ ಅದೆಲ್ಲ ಇಲ್ಲಿ ಲಭ್ಯವಿರಲಿದೆ.

English summary
Karnataka Fisheries Development Corporation to open Matsya Darshini Hotel(fish stall) in each district of state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X