ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಸಿಎಂ ಪ್ರತಿಮೆ ಅನಾವರಣಕ್ಕೆ ಇಷ್ಟು ದಿನನಾ?ವಸಂತ ಕವಿತಾ ಕೆಸಿಆರ್ ರೆಡ್ಡಿ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮೊದಲ ಸಿಎಂ ಪ್ರತಿಮೆ ಅನಾವರಣಕ್ಕೆ ಇಷ್ಟು ದಿನನಾ? ವಸಂತ ಕವಿತಾ ಕೆಸಿಆರ್ ರೆಡ್ಡಿ ಸಂದರ್ಶನ | Oneindia Kannada

ಭಾನುವಾರವಷ್ಟೇ ( ಜ 11) ರಾಜ್ಯದ ಪ್ರಥಮ ಸ್ವಾತಂತ್ರ್ಯೋತ್ತರ ಮುಖ್ಯಮಂತ್ರಿ ದಿ. ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ (ಕೆ ಸಿ ರೆಡ್ಡಿಯವರ) ಪ್ರತಿಮೆಯನ್ನು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಅನಾವರಣ ಮಾಡಿದ್ದರು. ಈ ಪ್ರತಿಮೆ ಸ್ಥಾಪನೆಯ ಹಿಂದೆ, ಬಹಳಷ್ಟು ಶ್ರಮವಹಿಸಿದ್ದು ಕೆ ಸಿ ರೆಡ್ಡಿಯವರ ಹಿರಿಯ ಮೊಮ್ಮಗಳು ವಸಂತ ಕವಿತಾ ಕೆಸಿಆರ್ ರೆಡ್ಡಿ.

ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ವಸಂತ ಕವಿತಾ ರೆಡ್ಡಿ, ಕೆ ಸಿ ರೆಡ್ಡಿಯವರ ಪ್ರತಿಮೆ ಅನಾವರಣದ ಹಿಂದಿನ ಪರಿಶ್ರಮ, ಪ್ರಸಕ್ತ ಚುನಾವಣೆಯ ಬಗ್ಗೆ 'ಒನ್ ಇಂಡಿಯಾ' ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದಭಾಗ:

ಪ್ರ: ಕೆ ಸಿ ರೆಡ್ಡಿಯವರ ಪ್ರತಿಮೆ ಅನಾವರಣಕ್ಕಾಗಿ ನಾಲ್ಕು ವರ್ಷ ಓಡಾಡಿದ್ದೀರಾ, ಮಾಜಿ ಸಿಎಂ ಒಬ್ಬರ ಪ್ರತಿಮೆಗೆ ಇಷ್ಟು ದಿನ ಬೇಕಾ?
ಕವಿತಾ: ಕೆ ಸಿ ರೆಡ್ಡಿಯವರ ಬಗ್ಗೆ ಸಣ್ಣವಯಸ್ಸಿನಲ್ಲಿ ನನಗೆ ಹೆಚ್ಚು ಗೊತ್ತಿರಲಿಲ್ಲ. ವಿಧಾನಸೌಧಕ್ಕೆ ಹೋದಾಗಲೂ, ಜನರು ಕೆಂಗಲ್ ಹನುಮಂತಯ್ಯನವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರೇ ಹೊರತು ಕೆ ಸಿ ರೆಡ್ಡಿಯವರ ಬಗ್ಗೆ ಮಾತನಾಡುತ್ತಿರಲಿಲ್ಲ. ಕೆಎಎಸ್ ಓದಿದಾಗ ಮಾತ್ರ ಪ್ರಥಮ ಸಿಎಂ ಎನ್ನುವ ಪ್ರಶ್ನೆ ಬಂದಿತ್ತು, ಹಾಗಾಗಿ ಕೆ ಸಿ ರೆಡ್ಡಿಯವರ ಬಗ್ಗೆ ಗೊತ್ತು ಎಂದು ಸ್ಟೂಡೆಂಟ್ ಗಳು ಹೇಳುತ್ತಿದ್ದರು.

ಕ್ಯಾಸಂಬಳ್ಳಿಯ ಕೆ ಸಿ ರೆಡ್ಡಿಯವರ ಮನೆಗೆ ಹೋಗಿದ್ದೆ, ಸ್ವಲ್ಪ ತಿಂಗಳ ನಂತರ ಮತ್ತೆ ಹೋದಾಗ, ಅವರ ಸಮಾಧಿ ಅರ್ದ ನಾಶವಾಗಿತ್ತು. ಆಗ ಕೆ ಸಿ ರೆಡ್ಡಿಯವರ ಪ್ರತಿಮೆ ವಿಧಾನಸೌಧದಲ್ಲಿ ಸ್ಥಾಪಿಸಲು ಓಡಾಡಲೇ ಬೇಕು ಎನ್ನುವ ನಿರ್ಧಾರಕ್ಕೆ ಬಂದೆ. 2014ರಲ್ಲಿ ಸಿದ್ದರಾಮಯ್ಯನವರು ಕೆ ಸಿ ರೆಡ್ಡಿಯವರ ಪುಸ್ತಕ ಅನಾವರಣ ಮಾಡಿದ್ದರು.

ಅಸೆಂಬ್ಲಿಯಲ್ಲಿ ಸಿಕ್ಕಸಿಕ್ಕ ಎಲ್ಲಾ ಶಾಸಕರಲ್ಲಿ ಕೆ ಸಿ ರೆಡ್ಡಿಯವರ ಪ್ರತಿಮೆಗೆ ಡಿಮಾಂಡ್ ಮಾಡಿ ಎಂದು ಮನವಿ ಮಾಡಿದೆ. ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಪ್ರತಿಮೆಗಾಗಿ ಮನವಿ ಸಲ್ಲಿಸಿದ್ದೆ. ಪ್ರತೀ ಸರಕಾರೀ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಎರಡು ವರ್ಷದಿಂದ ಪರಿಶ್ರಮ ಪಡುತ್ತಲೇ ಬಂದೆ, ಕೊನೆಗೂ ಆಸೆ ಕೈಗೂಡಿತು. ಮುಂದೆ ಓದಿ

4ಗಂಟೆಗೆ ದೇವರ ಹಿಪ್ಪರಗಿಯಲ್ಲಿ, 5ಗಂಟೆಗೆ ವಿಧಾನಸೌಧದಲ್ಲಿ ಕಾರ್ಯಕ್ರಮ

4ಗಂಟೆಗೆ ದೇವರ ಹಿಪ್ಪರಗಿಯಲ್ಲಿ, 5ಗಂಟೆಗೆ ವಿಧಾನಸೌಧದಲ್ಲಿ ಕಾರ್ಯಕ್ರಮ

ಪ್ರ: ನಾಲ್ಕು ಗಂಟೆಗೆ ದೇವರ ಹಿಪ್ಪರಗಿಯಲ್ಲಿ ಒಂದು ಕಾರ್ಯಕ್ರಮ, ಐದು ಗಂಟೆಗೆ ವಿಧಾನಸೌಧದಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮವಿತ್ತು, ಕೊನೆಗೆ, ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರಿ?
ಕವಿತಾ: ದೇವರ ಹಿಪ್ಪರಗಿ ಕಾರ್ಯಕ್ರಮದ ಆಯೋಜಕರು ಹದಿನೈದು ದಿನದ ಹಿಂದೆಯೇ ನನ್ನಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದರು. ಎರಡು ದಿನದ ಮೊದಲಷ್ಟೇ ಕೆ ಸಿ ರೆಡ್ಡಿ ಪ್ರತಿಮೆ ಅನಾವರಣದ ಸುದ್ದಿ ನನಗೆ ಬಂದಿದ್ದು. ಪ್ರತಿಮೆಯನ್ನು ಹಿಂದಿನ ದಿನ ಸಂಜೆ ನಾಲ್ಕರಿಂದ ಆರು ಗಂಟೆಯೊಳಗೆ ನಿಲ್ಲಿಸುತ್ತಾರೆ ಎನ್ನುವ ಮಾಹಿತಿಯಿತ್ತು.

ಪ್ರತಿಮೆ ನಿಲ್ಲಿಸಿದ ನಂತರ ಹೂವು ಹಾಕಿ ಬರುವುದಷ್ಟೇ ನನ್ನ ಪ್ಲ್ಯಾನ್ ಆಗಿತ್ತು. ಆದರೆ ಹೇಳಿದ ಸಮಯಕ್ಕೆ ಪ್ರತಿಮೆ ನಿಲ್ಲಿಸಲಿಲ್ಲ. ಮರುದಿನ ಅನಾವರಣ ಮುಗಿಸಿ, ವಿಮಾನದಲ್ಲಿ ಬೆಳಗಾವಿ ಅಥವಾ ಹುಬ್ಬಳ್ಳಿಯಿಂದ ದೇವರ ಹಿಪ್ಪರಗಿಗೆ ಹೋಗೋಣ ಎನ್ನುವ ಯೋಜನೆಯೂ ಕೈಗೂಡಲಿಲ್ಲ.

ಕಾಂಗ್ರೆಸ್ ನಲ್ಲೇ ನಿಮ್ಮನ್ನು ಸೈಡ್ ಲೈನ್ ಮಾಡುವ ಕೆಲಸ ನಡೀತಾ?

ಕಾಂಗ್ರೆಸ್ ನಲ್ಲೇ ನಿಮ್ಮನ್ನು ಸೈಡ್ ಲೈನ್ ಮಾಡುವ ಕೆಲಸ ನಡೀತಾ?

ಪ್ರ: ಇಷ್ಟು ವಿದ್ಯಾಭ್ಯಾಸದ ಹಿನ್ನಲೆಯುಳ್ಳ ನೀವು ರಾಜಕೀಯ ಕ್ಷೇತ್ರ ಯಾಕೆ ಆಯ್ಕೆ ಮಾಡಿಕೊಂಡ್ರಿ?
ಕವಿತಾ: ಕೆ ಸಿ ರೆಡ್ಡಿಯವರು ಈ ರಾಜ್ಯಕ್ಕೆ ಇಷ್ಟೊಂದು ಕೆಲಸ ಮಾಡಿದ್ದಾಗ, ನಾನು ಏನಾದರೂ ಅವರಿಗೆ ಮಾಡಬೇಕು. ಅದಕ್ಕೆ ರಾಜಕೀಯಕ್ಕೆ ಸೇರುವುದೇ ಸೂಕ್ತ ವೇದಿಕೆ ಎನ್ನುವುದು ನನ್ನ ನಿರ್ಧಾರ.

ಪ್ರ: ರಾಜ್ಯ ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಬೇಕಾದರೆ ಸಾಕಷ್ಟು ಶ್ರಮವಹಿಸಿದ್ದೀರಾ ಎನ್ನುವ ಮಾತಿದೆ, ಕಾಂಗ್ರೆಸ್ ನಲ್ಲೇ ನಿಮ್ಮನ್ನು ಸೈಡ್ ಲೈನ್ ಮಾಡುವ ಕೆಲಸ ನಡೀತಾ?
ಕವಿತಾ: ನಾನು ಕೆಲವು ದಿನಗಳ ಹಿಂದಿನವರೆಗೆ ಕಾಂಗ್ರೆಸ್ ನಲ್ಲಿ ಯಾವುದೇ ಪೋಸ್ಟ್ ಕೊಡಿ ಎಂದು ಮನವಿ ಮಾಡಲಿಲ್ಲ. ಆದರೆ, ಬೇರೆ ಪಕ್ಷಗಳು ನನಗೆ ದೊಡ್ಡ ಪೋಸ್ಟ್ ಕೊಡುತ್ತೇವೆ ಎಂದು ಆಫರ್ ಮಾಡಿದಾಗ, ನಮ್ಮ ಕಾಂಗ್ರೆಸ್ ಇದು, ಕೆ ಸಿ ರೆಡ್ಡಿಯವರ ಕುಟುಂಬ ನಮ್ಮದು, ಅವರಾಗಿಯೇ ಕರೆದು ನನಗೆ ಟಿಕೆಟ್ ಅಥವಾ ಪೋಸ್ಟ್ ನೀಡಬೇಕು ಎನ್ನುವುದು ನನ್ನ ವಾದ. ಆದರೆ.. ದೇವರಾ ಹಿಪ್ಪರಗಿ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿ ಈಗ ನಾನು ಅರ್ಜಿ ಸಲ್ಲಿಸಿದ್ದೇನೆ.

ದೇವರ ಹಿಪ್ಪರಗಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?

ದೇವರ ಹಿಪ್ಪರಗಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?

ಪ್ರ: ಕೋಲಾರ ಮೂಲದವರು ನೀವು, ಬೆಂಗಳೂರಿನಲ್ಲೇ ಜಾಸ್ತಿ ಇರೋದು, ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಬಲವಾದ ಕಾರಣವೇನಾದರೂ ಇದೆಯಾ?
ಕವಿತಾ: ಬಿಜಾಪುರಕ್ಕೆ ನಾನು ಹೋಗುತ್ತಲೇ ಇರುತ್ತೇನೆ. ಲಕ್ಕಮ್ಮ ದೇವಸ್ಥಾನ ನಾನು ಇಷ್ಟಪಟ್ಟ ದೇವಾಲಯ. ಆ ದೇವಾಲಯದಲ್ಲಿ ಒಂದು ರೀತಿಯ ಕಾಕತಾಳೀಯ ಘಟನೆ ನಡೆಯಿತು. ಇನ್ನು ದೇವರ ಹಿಪ್ಪರಗಿಯಲ್ಲಿ ರೆಡ್ಡಿ ಸಮುದಾಯ ಜಾಸ್ತಿ ಸಂಖ್ಯೆಯಲ್ಲಿ ಇದ್ದಾರೆ. ಮೂರೂ ಪಕ್ಷವೂ ರೆಡ್ಡಿ ಸಮುದಾಯದವರಿಗೇ ಹೆಚ್ಚುಕಮ್ಮಿ ಟಿಕೆಟ್ ಕೊಡುತ್ತಾರೆ. ಕೆ ಸಿ ರೆಡ್ಡಿ ಕುಟುಂಬದವರು, ವಿದ್ಯಾವಂತೆ ಎನ್ನುವ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಮತದಾರ ನನಗೆ ಬೆಂಬಲಿಸಬಹುದು ಎನ್ನುವ ನಂಬಿಕೆ ನನ್ನದು.

ರೈತರ ಸಾಲಮನ್ನಾ ಮಾತ್ರ ಆತ್ಮಹತ್ಯೆ ನಿಲ್ಲಿಸಲು ಪರಿಹಾರನಾ?

ರೈತರ ಸಾಲಮನ್ನಾ ಮಾತ್ರ ಆತ್ಮಹತ್ಯೆ ನಿಲ್ಲಿಸಲು ಪರಿಹಾರನಾ?

ಪ್ರ: ರೈತರ ಸಾವು ನೋವು ರಾಜ್ಯದಲ್ಲಿ ಹೆಚ್ಚಾಗ್ತಾ ಇದೆ. ನಿಮ್ಮ ಪ್ರಕಾರ ರೈತರ ಸಾಲಮನ್ನಾ ಮಾತ್ರ ಇದಕ್ಕೆ ಪರಿಹಾರನಾ?
ಕವಿತಾ: ಯಾವ ಪಕ್ಷದ ಪರವಾಗಿಯೂ ನಾನು ಇದಕ್ಕೆ ಉತ್ತರ ಕೊಡುವುದಿಲ್ಲ. ರೈತರು ಯಾವ ಕಾರಣಕ್ಕಾಗಿ ಸಾಯುತ್ತಿದ್ದಾರೆ ಎನ್ನುವುದನ್ನು ಮೊದಲು ಸ್ಟಡಿ ಮಾಡಬೇಕು. ನಾನು ತುಂಬಾ ರೈತರನ್ನು ಭೇಟಿ ಮಾಡಿದ್ದೆ. ರೈತರ ಆತ್ಮಹತ್ಯೆಯ ಹಿಂದೆ ಸಾಲದ ಜೊತೆ ಬೇರೆ ಕಾರಣಗಳೂ ಇವೆ. ಹಳ್ಳಿಯಲ್ಲಿ ನೂರು ಜನ ಇದ್ದಾರೆ, ಎಲ್ಲರೂ ಸಾಯೋಲ್ಲಾ.. ಒಬ್ಬರು ಸಾಯುತ್ತಾರೆ. ಆ ಊರಿನ ಉಳಿದ ಜನ, ಆ ಕುಟುಂಬಕ್ಕಾಗಿ ನಿಂತುಕೊಳ್ಲಬೇಕು. ಎಲ್ಲಾ ಮಾಹಿತಿ ಮುಖ್ಯಮಂತ್ರಿಗಳಿಗೆ ಹೋಗಬೇಕು ಎನ್ನುವುದು ತಪ್ಪು. ಸ್ಥಳೀಯ ಶಾಸಕರನ್ನು ರೈತರು ಭೇಟಿ ಮಾಡಬೇಕು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸಿದಾಗ ನನ್ನ ಬಳಿ ಬನ್ನಿ ಎಂದು ರೈತರಿಗೆ ಹೇಳಿದ್ದೇನೆ. ರೈತರು ಈ ದೇಶದ ಬೆನ್ನೆಲುಬು, ಯಾವ ಕಾರಣಕ್ಕೂ ಅವರು ಆತ್ಮಹತ್ಯೆಯ ದಾರಿ ಹಿಡಿಯಬಾರದು.

ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆಯಾ?

ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆಯಾ?

ಪ್ರ: ನಿಮ್ಮ ಪ್ರಕಾರ ಸಿದ್ದರಾಮಯ್ಯನವರ ಸರಕಾರ ನುಡಿದಂತೆ ನಡೆದಿದೆಯಾ?
ಕವಿತಾ: ಯಾವುದೇ ಸರಕಾರ ಇರಲಿ ಏನು ಹೇಳಿರುತ್ತೋ, ಎಲ್ಲವನ್ನೂ 100% ಕಂಪ್ಲೀಟ್ ಆಗಿ ಮಾಡಲು ಸಾಧ್ಯವೇ ಇಲ್ಲ. ಅಲ್ಪಸ್ವಲ್ಪ ಚೇಂಜ್ ಆಗೇ ಆರುತ್ತೆ. ಸರಕಾರದ ಎಲ್ಲಾ ಯೋಜನೆಗಳು ಜನರಿಗೆ ತಲಪದೇ ಇರಬಹುದು. ಎಲ್ಲರಿಗೂ ತಲುಪಲೇ ಬೇಕು ಎನ್ನುವುದೂ ತಪ್ಪು. ಸರಕಾರ ಏನು ಮಾಡಿತು ಅನ್ನುವುದಕ್ಕಿಂತ, ಜನರು ಏನು ಬೇಕು ಎಂದು ಸರಕಾರಕ್ಕೆ ಡಿಮಾಂಡ್ ಮಾಡಬೇಕು. ಅನ್ನಭಾಗ್ಯ ಮುಂತಾದ ಸಿದ್ದರಾಮಯ್ಯನವರ ಸರಕಾರದ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ.

ದೇವರ ಹಿಪ್ಪರಗಿ ಕ್ಷೇತ್ರದ ಮತದಾರರಿಗೆ ನಿಮ್ಮ ಮನವಿ?

ದೇವರ ಹಿಪ್ಪರಗಿ ಕ್ಷೇತ್ರದ ಮತದಾರರಿಗೆ ನಿಮ್ಮ ಮನವಿ?

ಪ್ರ: ಕಾಂಗ್ರೆಸ್ ಟಿಕೆಟ್ ನಿಮಗೆ ದೇವರ ಹಿಪ್ಪರಗಿಯಿಂದ ಸಿಕ್ಕಿದರೆ ಅಲ್ಲಿನ ಮತದಾರರಿಗೆ ನಿಮ್ಮ ಮನವಿ?
ಕವಿತಾ: ಎಲ್ಲಾದರೂ ನಾನು ಇರಲಿ, ನಾನು ದೇವರ ಹಿಪ್ಪರಗಿಯಲ್ಲಿ ಮನೆ ಮಾಡುತ್ತೇನೆ. ಹಣ ಮಾಡೋಕೆ ನಾನು ರಾಜಕೀಯಕ್ಕೆ ಬರುತ್ತಿಲ್ಲ, ದೇವರ ಹಿಪ್ಪರಗಿ ಕ್ಷೇತ್ರ ದೇವರ ಕ್ಷೇತ್ರದಂತೆ ಇರಬೇಕು. ಆ ಕ್ಷೇತ್ರಕ್ಕೆ ಏನು ಬೇಕು ಎನ್ನುವುದು ನನಗೆ ತಿಳಿದಿದೆ. ಸರಕಾರದಲ್ಲಿ ಫಂಡ್ ಇದೆ. ಕೆ ಸಿ ರೆಡ್ಡಿಯವರಿಗೆ ಇದುವರೆಗೂ ಯಾವುದೇ ಕೆಟ್ಟ ಹೆಸರಿಲ್ಲ,

ದೇವರು ನನಗೂ ಒಂದು ಅವಕಾಶವನ್ನು ಕೊಟ್ಟರೆ, ಮನಪೂರ್ವಕವಾಗಿ ಕೆಲಸ ಮಾಡುತ್ತೇನೆ. ಇದುವರೆಗೆ ಲಕ್ಷಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿದ್ದೇನೆ. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ನನ್ನದೇ ಆದ ಪ್ಲ್ಯಾನ್ ಸಿದ್ದಪಡಿಸಿಕೊಂಡಿದ್ದೇನೆ. ಕೆ ಸಿ ರೆಡ್ಡಿ ಮನೆತನದ ನನಗೆ ಕಾಂಗ್ರೆಸ್ ಯಾವುದೇ ಮುಲಾಜಿಲ್ಲದೇ ಟಿಕೆಟ್ ನೀಡಬೇಕು. ನಾನು ಹಂಡ್ರೆಡ್ ಪರ್ಸೆಂಟ್ ಗೆಲ್ಲುತ್ತೇನೆ ಎನ್ನುವ ವಿಶ್ವಾಸ ನನಗಿದೆ.

English summary
Karnataka's first Chief Minister KC Reddy grand daughter-in-law and Congress leader Vasantha Kavitha K C Reddy interview. Kavitha is one of the strong Congress ticket contestant from Devara Hipparagi (Bijapura district) assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X