ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಒಂದು ಲಕ್ಷ ಸಾಲಮನ್ನಾ ಮಾಡುತ್ತಿದ್ದಾರೆ ಕುಮಾರಸ್ವಾಮಿ

By Manjunatha
|
Google Oneindia Kannada News

Recommended Video

ಮತ್ತೆ ರೈತರಿಗೆ ಸಿಹಿ ಸುದ್ದಿ ಕೊಟ್ಟ ಎಚ್ ಡಿ ಕುಮಾರಸ್ವಾಮಿ| Oneindia Kannada

ಬೆಂಗಳೂರು, ಜುಲೈ 12: ಈಗಾಗಲೇ 34000 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮತ್ತೊಂದು ಸುತ್ತು ಸಾಲಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿದರು.

ಸುಸ್ತಿ ಸಾಲಮನ್ನಾ ಘೋಷಿಸಿದ್ದ ಕುಮಾರಸ್ವಾಮಿ ಅವರು, ಇಂದು ಬಜೆಟ್ ಕುರಿತು ಪ್ರಶ್ನೆಗಳಿಗೆ ಉತ್ತರ ನೀಡಿ ರೈತರ ಚಾಲ್ತಿ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದರು.

ಈ ಬಜೆಟ್‌ ಬಿಬಿಎಂಪಿಯದ್ದಾ, ಕರ್ನಾಟಕದ್ದಾ?: ಸದನದಲ್ಲಿ ಹೀಗೊಂದು ಪ್ರಶ್ನೆಈ ಬಜೆಟ್‌ ಬಿಬಿಎಂಪಿಯದ್ದಾ, ಕರ್ನಾಟಕದ್ದಾ?: ಸದನದಲ್ಲಿ ಹೀಗೊಂದು ಪ್ರಶ್ನೆ

ರಾಷ್ಟ್ರೀಕೃತ, ಸಹಕಾರಿ, ಕಿಸಾನ್ ಕಾರ್ಡ್‌ಗಳ 2 ಲಕ್ಷದ ವರೆಗಿನ ಸುಸ್ತಿ ಸಾಲವನ್ನು ಈಗಾಗಲೇ ಮನ್ನಾ ಮಾಡಿ ಘೋಷಣೆ ಹೊರಡಿಸಿದ್ದಾರೆ. ಆದರೆ ಚಾಲ್ತಿ ಸಾಲದ ರೈತರಿಗೆ ಅನ್ಯಾಯವಾಗಬಾರದೆಂದು ರೈತರ ಚಾಲ್ತಿ ಸಾಲವನ್ನೂ ಮನ್ನಾ ಮಾಡುತ್ತಿದ್ದಾರೆ.

karnataka farmers current loan will be waive off soon

ಒಂದು ಲಕ್ಷದ ವರೆಗಿನ ಚಾಲ್ತಿ ಖಾತೆಯ ಸಾಲವನ್ನು ಸರ್ಕಾರ ಮಾಡುತ್ತದೆ ಎಂದು ಕುಮಾರಸ್ವಾಮಿ ಘೋಷಿಸಿದರು. ಆದರೆ ಇದು ಸಹಕಾರಿ ವಲಯದ ಸಾಲಗಳಿಗೆ ಮಾತ್ರವೇ ಅನ್ವಯಿಸಲಿದ್ದು, ರಾಷ್ಟ್ರೀಕೃತ ಬ್ಯಾಂಕು ಅಥವಾ ಕಿಸಾನ್ ಕಾರ್ಡ್‌ಗೆ ಅನ್ವಯಿಸುವುದಿಲ್ಲ.

ಇಂದು ಬಜೆಟ್ ಉತ್ತರದಲ್ಲಿ ಕುಮಾರಸ್ವಾಮಿ ಅವರು ಘೋಷಿಸಿದ್ದು, ಕೆಲವೇ ದಿನಗಳಲ್ಲಿ ರಾಜಪತ್ರಕ್ಕೆ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

English summary
CM Kumaraswamy today announced that farmers current loan till one lakh will be waive off by the government. He already waive off the farmers mortgage loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X