ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ

|
Google Oneindia Kannada News

ಬೆಂಗಳೂರು, ಮೇ 31 : ಕರ್ನಾಟಕ ಸರ್ಕಾರ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್‌ ಅನ್ನು ಜೂನ್ 30ರ ತನಕ ವಿಸ್ತರಣೆ ಮಾಡಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 299 ಹೊಸ ಪ್ರಕರಣಗಳು ದಾಖಲಾಗಿವೆ.

Recommended Video

ಕೊರೋನಾ ವಾರಿಯರ್ಸ್ ಗೆ ಕಾಸ್ಟ್ಲಿ ಶೂ ಕೊಟ್ಟ ಕನ್ನಡಿಗ ಕೆಎಲ್ ರಾಹುಲ್| Oneindia Kannada

ಭಾನುವಾರ ಸಂಜೆ ಕರ್ನಾಟಕ ಸರ್ಕಾರ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆ ಶನಿವಾರ ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿತ್ತು. ಈ ಆದೇಶದ ಬಳಿಕ ಕರ್ನಾಟಕ ಸರ್ಕಾರ ಲಾಕ್ ಡೌನ್ ವಿಸ್ತರಿಸಿದೆ.

ಜೂನ್ 1ರಿಂದ 30ರ ತನಕ 5ನೇ ಹಂತದ ಲಾಕ್ ಡೌನ್; ಮಾರ್ಗಸೂಚಿ ವಿವರಗಳುಜೂನ್ 1ರಿಂದ 30ರ ತನಕ 5ನೇ ಹಂತದ ಲಾಕ್ ಡೌನ್; ಮಾರ್ಗಸೂಚಿ ವಿವರಗಳು

Karnataka Extends Lockdown Till June 30

ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಜೂನ್ 30ರ ತನಕ ಲಾಕ್ ಡೌನ್ ಆದೇಶ ಜಾರಿಯಲ್ಲಿ ಇರುತ್ತದೆ. ಇತರ ಪ್ರದೇಶಗಳಲ್ಲಿ ಕೆಲವು ಷರತ್ತಿನೊಂದಿಗೆ ಲಾಕ್ ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಭಕ್ತರ ಗಮನಕ್ಕೆ; ಸೋಮವಾರ ದೇವಾಲಯ ಬಾಗಿಲು ತೆರೆಯಲ್ಲ ಭಕ್ತರ ಗಮನಕ್ಕೆ; ಸೋಮವಾರ ದೇವಾಲಯ ಬಾಗಿಲು ತೆರೆಯಲ್ಲ

ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಸಂಚಾರವಿದೆ. ದೇಶಿಯ ವಿಮಾನಗಳು ಹಾರಾಟ ನಡೆಸುತ್ತಿವೆ. ಜೂನ್ 1ರಿಂದ 30ರ ತನಕ 5ನೇ ಹಂತದ ಲಾಕ್ ಡೌನ್ ನಿಯಮಾವಳಿಗಳು ಜಾರಿಯಲ್ಲಿರುತ್ತದೆ.

ಲಾಕ್ ಡೌನ್ 5.0; ವಿನಾಯಿತಿ ಇದ್ದರೂ ಇವುಗಳ ಪಾಲನೆ ಕಡ್ಡಾಯ ಲಾಕ್ ಡೌನ್ 5.0; ವಿನಾಯಿತಿ ಇದ್ದರೂ ಇವುಗಳ ಪಾಲನೆ ಕಡ್ಡಾಯ

ರಾಜ್ಯದಲ್ಲಿ ಜೂನ್ 1ರಿಂದ ಪ್ರಾರ್ಥನಾ ಮಂದಿರ, ಮಾಲ್, ಹೋಟೆಲ್ ತೆರೆಯಲು ಅನುಮತಿ ನೀಡಲಾಗುತ್ತದೆ ಎಂದು ಸರ್ಕಾರ ಕೇಳಿತ್ತು. ಆದರೆ, ಕೇಂದ್ರ ಗೃಹ ಸಚಿವಾಲಯ ಜೂನ್ 8ರಿಂದ ಪ್ರಾರ್ಥನಾ ಮಂದಿರ, ಹೋಟೆಲ್ ತೆರೆಯಬಹುದು ಎಂದು ಹೇಳಿತ್ತು.

English summary
Karnataka government ordered to extend lock down till June 30, 2020.Lock down 5.0 will in effect from June 1 to 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X