ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಜ್ ವಿರುದ್ಧದ ಚುನಾವಣೆ 'ಧರ್ಮ ಯುದ್ಧ': ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನ ಸಭೆ ಚುನಾವಣೆ-2018ರಲ್ಲಿ ಅಖಾಡಕ್ಕಿಳಿಯಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ. ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಎಪಿ ನಿರ್ಧರಿಸಿದ್ದು ಅವುಗಳಲ್ಲಿ ಸರ್ವಜ್ಞನಗರವೂ ಒಂದು.

ಬೆಂಗಳೂರು ಅಭಿವೃದ್ಧಿ ಸಚಿವ, ಪ್ರಭಾವಿ ಕಾಂಗ್ರೆಸ್ ರಾಜಕಾರಣಿ ಕೆ.ಜೆ ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರ ಕ್ಷೇತ್ರ ಈ ಬಾರಿ ಕುತೂಹಲ ಹುಟ್ಟಿಸಿದೆ. ಎಎಪಿ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಪೃಥ್ವಿ ರೆಡ್ಡಿ ಇಲ್ಲಿ ಜಾರ್ಜ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಜಾರ್ಜ್ ವಿರುದ್ಧ ಯಾಕೆ ರೆಡ್ಡಿ ಕಣಕ್ಕಿಳಿದಿದ್ದಾರೆ? ರೆಡ್ಡಿಯ ಆಲೋಚನೆಗಳು ಏನು ಎಂಬುದನ್ನುಅವರು 'ಒನ್ಇಂಡಿಯಾ' ಜತೆಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಜಾರ್ಜ್ ವಿರುದ್ಧ ಕಣಕ್ಕಿಳಿಯಲು ಯಾಕೆ ನಿರ್ಧರಿಸಿದ್ರಿ?

ಜಾರ್ಜ್ ವಿರುದ್ಧ ಕಣಕ್ಕಿಳಿಯಲು ಯಾಕೆ ನಿರ್ಧರಿಸಿದ್ರಿ?

ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್ ವಿರುದ್ಧ ಹೋರಾಟವೆಂದರೆ ಸತ್ಯ ಮತ್ತು ಅನ್ಯಾಯದ ವಿರುದ್ಧದ ಹೋರಾಟ. ಜನರಿಗೆ ಆಯ್ಕೆ ನೀಡಲು ಇದು ಸೂಕ್ತ ಸಮಯ.

ಸ್ವಲ್ಪ ವಿವರಿಸಿ..

ಒಂದೊಮ್ಮೆ ಸಂತೋಷ್ ಹೆಗ್ಡೆಯಂಥ ಲೋಕಾಯುಕ್ತರು ಇದ್ದಿದ್ದರೆ ಜಾರ್ಜ್ ಇವತ್ತು ಕಂಬಿ ಹಿಂದೆ ಇರಬೇಕಾಗಿತ್ತು. ಅವರು ಮತ್ತು ಅವರ ಸಹವರ್ತಿಗಳು ಹಗರಣಗಳಲ್ಲಿ ಭಾಗಿಯಾದ ಬಗ್ಗೆ ಮಾತ್ರ ಅನುಮಾನವಿಲ್ಲ, ಡಿವೈಎಸ್ಪಿ ಎಂಕೆ ಗಣಪತಿ ಸಾವಿಗೆ ಸಂಬಂಧಿಸಿದಂತೆಯೂ ಅನುಮಾನಗಳಿವೆ.

ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅವರ ಕೆಲಸ ಹೇಗಿದೆ?

ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅವರ ಕೆಲಸ ಹೇಗಿದೆ?

ತನ್ನ ಅಭಿವೃದ್ಧಿ ಮತ್ತು ತನಗೆ ಸೇರಿದ ಕಂಪೆನಿಗಳ ಅಭಿವೃದ್ಧಿ ಮಾಡಿದ್ದು ಬಿಟ್ಟರೆ ನಗರ ಬೇರೆ ರೀತಿಯಲ್ಲಿ ಅಬಿವೃದ್ಧಿಗೊಂಡಿಲ್ಲ. ಅನ್ಯಾಯ ಮಾತ್ರವಲ್ಲ ಹಿತಾಸಕ್ತಿಗಳೂ ಕೆಲಸ ಮಾಡಿವೆ.

ಜಾರ್ಜ್ ಭ್ರಷ್ಟ ಎಂದು ಸಂಕ್ಷಿಪ್ತವಾಗಿ ಹೇಳುತ್ತಿದ್ದೀರಾ?

ಜಾರ್ಜ್ ಭ್ರಷ್ಟ ಎಂದು ಸಂಕ್ಷಿಪ್ತವಾಗಿ ಹೇಳುತ್ತಿದ್ದೀರಾ?

ಸರಕಾರದ ಜತೆ ಸಂಬಂಧ ಇದ್ದವರು ಸರಕಾರದ ಟೆಂಡರ್ ಗಳನ್ನು ಪಡೆದುಕೊಳ್ಳಬಾರದು. ಆಶ್ಚರ್ಯದ ವಿಷಯವೆಂದರೆ ಪಾಡ್ ಟಾಕ್ಸಿಯಲ್ಲಿ ಅವರ ಸಂಬಂಧಿಗಳು ಮಾತ್ರ ಏಕೈಕ ಟೆಂಡರುದಾರರಾಗಿದ್ದರು. ಭ್ರಷ್ಟಾಚಾರವೆಂದರೆ ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲ ಎಂದು ಜನರು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿಸ್ತೃತ ಅ಻ರ್ಥದಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡುವುದು ಒಂದು; ಜಾರ್ಜ್ ಅದನ್ನು ಮಾಡಿದರು.

ಕರ್ನಾಟಕ ಕಾಂಗ್ರೆಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕರ್ನಾಟಕ ಕಾಂಗ್ರೆಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇಶದಾದ್ಯಂತ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಮ್ಮ ರಾಜ್ಯವನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅಷ್ಟು ಸಾಕು.

ಜಾರ್ಜ್ ಎದುರಿಸುವ ಮೂಲಕ ನೀವು ಪ್ರಬಲ ಸ್ಪರ್ಧೆಗೆ ಕೈಹಾಕಿದ್ದೀರಿ ಎನಿಸುತ್ತಿಲ್ವಾ?

ಜಾರ್ಜ್ ಎದುರಿಸುವ ಮೂಲಕ ನೀವು ಪ್ರಬಲ ಸ್ಪರ್ಧೆಗೆ ಕೈಹಾಕಿದ್ದೀರಿ ಎನಿಸುತ್ತಿಲ್ವಾ?

ನನಗೆ ಸೋಲು ಗೆಲುವು ಮುಖಯವಲ್ಲ. ಸರಿಯಾದ ಕೆಲಸ ಮಾಡುವುದು ಮುಖ್ಯ. ಇದು ಧರ್ಮ ಯುದ್ಧ. ರಾಜ್ಯದಲ್ಲಿ ಕೋಮು ಮತ್ತು ಭ್ರಷ್ಟರನ್ನು ಬಹಿರಂಗಗೊಳಿಸಲು ಇರುವ ಅವಕಾಶ. ಪ್ರಬಲ ನಾಯಕರ ವಿರುದ್ಧ ಮತ್ತೊಂದು ಪಕ್ಷದಿಂದ ಪ್ರಬಲ ನಾಯಕರನ್ನು ಕಣಕ್ಕಿಳಿಸದೇ ಇರುವ ರಾಜಕೀಯ ಹೊಂದಾಣಿಕೆಗಳು ನನಗೆ ಗೊತ್ತಿವೆ. ಇದು ಅಲಿಖಿತ ನಿಯಮ. ಆದರೆ ಇಲ್ಲಿ ಸೌಹಾರ್ದ ಪಂದ್ಯವಾಗಲು ಸಾಧ್ಯವಿಲ್ಲ.

ಎಷ್ಟು ಕ್ಷೇತ್ರಗಳಲ್ಲಿ ಎಎಪಿ ಕಣಕ್ಕಿಳಿಯುತ್ತದೆ?

ಎಷ್ಟು ಕ್ಷೇತ್ರಗಳಲ್ಲಿ ಎಎಪಿ ಕಣಕ್ಕಿಳಿಯುತ್ತದೆ?

ನಾವು ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಕಣಕ್ಕಿಳಿಯುತ್ತೇವೆ. ಅಭ್ಯರ್ಥಿಗಳ ಬಗ್ಗೆ ಪಕ್ಷವು ಭರವಸೆ ನೀಡಬೇಕಾಗಿದ್ದು ಪ್ರಮುಖ ವಿಷಯವಾಗಿದೆ.

ಜಗದೀಶ ಶೆಟ್ಟರ್ ವಿರುದ್ಧ ಎಎಪಿ ಅಭ್ಯರ್ಥಿ ನಿಲ್ಲಿಸುತ್ತದೆ ಎಂದು ಕೇಳಲ್ಪಟ್ಟೆ?

ಜಗದೀಶ ಶೆಟ್ಟರ್ ವಿರುದ್ಧ ಎಎಪಿ ಅಭ್ಯರ್ಥಿ ನಿಲ್ಲಿಸುತ್ತದೆ ಎಂದು ಕೇಳಲ್ಪಟ್ಟೆ?

ಹೌದು ಜಗದೀಶ್ ಶೆಟ್ಟರ್ ವಿರುದ್ಧ ಅಭ್ಯರ್ಥಿ ಇರಲಿದ್ದಾರೆ. ಸಂತೋಷ್ ನರಗುಂದ ಅಂತ ಏರೋನಾಟಿಕಲ್ ಇಂಜಿನಿಯರ್ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ನೀವು ಏನು ಸಂದೇಶ ನೀಡಲು ಇಚ್ಚಿಸುತ್ತೀರಿ?

ನೀವು ಏನು ಸಂದೇಶ ನೀಡಲು ಇಚ್ಚಿಸುತ್ತೀರಿ?

ನಾನು ನೀಡಬೇಕಾದ ಸಂದೇಶವೆಂದರೆ ನಾವು ಎದ್ದು ನಿಲ್ಲಬೇಕು. ಇದು ಕರ್ನಾಟಕದ ಜನರು ಮತ್ತು ಸಾಂಪ್ರದಾಯಿಕ ಭ್ರಷ್ಟ ಮತ್ತು ಕೋಮು ಶಕ್ತಿಗಳ ವಿರುದ್ಧದ ಹೋರಾಟ. ಸಾಮಾನ್ಯ ಮನುಷ್ಯ ಮತ್ತು ಈ ಶಕ್ತಿಗಳ ವಿರುದ್ಧದ ಹೋರಾಟ. ಹೀಗಾಗಿ ಸೈದ್ಧಾಂತಿಕ ರಾಜಕಾರಣ ಮಾಡಬೇಕೇ ವಿನಃ ವೈಯಕ್ತಿಕ ರಾಜಕಾರಣವನ್ನಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ.

ಎಎಪಿ ಬಿಜೆಪಿಯ ಇನ್ನೊಂದು ಮುಖವೇ?

ಎಎಪಿ ಬಿಜೆಪಿಯ ಇನ್ನೊಂದು ಮುಖವೇ?

ಬಿಜೆಪಿಗೆ ತಲೆನೋವು ತಂದ ಪಕ್ಷ ಅಂತ ಇದ್ದರೆ ಅದು ಎಎಪಿ ಮಾತ್ರ. ನಿಮ್ಮ ಆರೋಪ ಹಾಸ್ಯಾಸ್ಪದವಾಗಿದೆ. ನಾವು ಆಮ್ ಆದ್ಮಿ ಪಕ್ಷದ ಬಗ್ಗೆ ಮಾತ್ರ ಚಿಂತಿಸಿದ್ದೇವೆ.

English summary
The Aam Aadmi Party has decided to throw its hat into the Karnataka Assembly Elections 2018. It would contest in several constituencies, the party has said. While it promises to be an interesting battle, the fight against Karnataka’s most controversial minister, K J George would be closely watched. The Aam Aadmi Party’s Karnataka convenor and national executive member, Prithvi Reddy has decided to take on George in the elections. In this interview with OneIndia, Reddy explains why he wants to take the fight to George.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X