ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್‌ನ 7 ಬಂಡಾಯ ಶಾಸಕರಲ್ಲಿ ಗೆದ್ದವರು, ಬಿದ್ದವರು!

|
Google Oneindia Kannada News

ಬೆಂಗಳೂರು, ಮೇ 15 : ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದ ಜೆಡಿಎಸ್ ಶಾಸಕರಿಗೆ ಜನರು ತಕ್ಕಪಾಠ ಕಲಿಸಿದ್ದಾರೆ. ಜಮೀರ್ ಅಹಮದ್ ಖಾನ್, ಅಖಂಡ ಶ್ರೀನಿವಾಸಮೂರ್ತಿ ಹೊರತುಪಡಿಸಿ ಎಲ್ಲಾ ಶಾಸಕರು ಸೋಲುಕಂಡಿದ್ದಾರೆ.

7 ಜೆಡಿಎಸ್‌ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಇದರಿಂದಾಗಿ ಜೆಡಿಎಸ್‌ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಎಲ್ಲಾ ಶಾಸಕರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷ ಸೇರಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಎಲ್ಲಾ ಬಂಡಾಯ ಶಾಸಕರನ್ನು ಸೋಲಿಸಲು ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡ ಅವರು ಪಣ ತೊಟ್ಟಿದ್ದರು. ತಮ್ಮ ಹಠ ಸಾಧಿಸಲು ಇಬ್ಬರು ನಾಯಕರು ಯಶಸ್ವಿಯಾಗಿದ್ದಾರೆ. 5 ಬಂಡಾಯ ಶಾಸಕರು ಸೋಲು ಕಂಡಿದ್ದಾರೆ.

LIVE: ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಗೆಲುವುLIVE: ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಗೆಲುವು

ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಆಪ್ತರಾಗಿದ್ದ ಎನ್.ಚೆಲುವರಾಯಸ್ವಾಮಿ ಅವರು ಸೋಲುಕಂಡಿದ್ದಾರೆ. ಬಂಡಾಯ ಶಾಸಕರಲ್ಲಿ ಗೆದ್ದವರು, ಸೋತವರು ಯಾರು? ಪಟ್ಟಿ ನೋಡಿ.

ಜಮೀರ್ ಅಹಮದ್ ಖಾನ್ ಗೆಲುವು

ಜಮೀರ್ ಅಹಮದ್ ಖಾನ್ ಗೆಲುವು

ಬಂಡಾಯ ಶಾಸಕರ ನಾಯತ್ವ ವಹಿಸಿದ್ದ ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಮೀರ್ ಸೋಲಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಮಾಡಿದ್ದ ತಂತ್ರವನ್ನು ವಿಫಲಗೊಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಜಮೀರ್ ಅಹಮದ್ ಖಾನ್ 33099 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಎಂ.ಲಕ್ಷ್ಮೀನಾರಾಯಣ ಅವರು 11447 ಮತ, ಜೆಡಿಎಸ್‌ನ ಅಲ್ತಾಫ್ ಅವರು 9003 ಮತಗಳನ್ನು ಪಡೆದಿದ್ದಾರೆ.

ಅಖಂಡ ಶ್ರೀನಿವಾಸಮೂರ್ತಿ ಗೆಲುವು

ಅಖಂಡ ಶ್ರೀನಿವಾಸಮೂರ್ತಿ ಗೆಲುವು

ಪುಲಿಕೇಶಿ ನಗರ ಕ್ಷೇತ್ರದಲ್ಲಿ ಅಂಖಂಡ ಶ್ರೀನಿವಾಸಮೂರ್ತಿ ಅವರು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಬಂಡಾಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಅವರು 97,574 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದ ಬಿ.ಪ್ರಸನ್ನ ಕುಮಾರ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. 15,948 ಮತಗಳನ್ನು ಮಾತ್ರ ಅವರು ಪಡೆದು ಸೋಲುಕಂಡಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಶೀಲ ದೇವರಾಜ್ ಅವರು 9479 ಮತಗಳನ್ನು ಪಡೆದಿದ್ದಾರೆ.

ಚಲುವರಾಯಸ್ವಾಮಿಗೆ ಸೋಲು

ಚಲುವರಾಯಸ್ವಾಮಿಗೆ ಸೋಲು

ನಾಗಮಂಗಲ ಕ್ಷೇತ್ರದಲ್ಲಿ ಎನ್.ಚಲುವರಾಯಸ್ವಾಮಿ ಅವರು ಸೋಲು ಅನುಭವಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮಾಪ್ತರಾಗಿ ಚಲುವರಾಯಸ್ವಾಮಿ ಅವರನ್ನು ಜೆಡಿಎಸ್‌ನ ಸುರೇಶ್‌ ಗೌಡ ಅವರು ಸೋಲಿಸಿದ್ದಾರೆ.

ಸುರೇಶ್ ಗೌಡ ಅವರು 102790 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಚಲುವರಾಯಸ್ವಾಮಿ ಅವರು 59,865 ಮತಗಳನ್ನು ಪಡೆದಿದ್ದಾರೆ.

ಭೀಮಾನಾಯಕ್ ಗೆಲುವು

ಭೀಮಾನಾಯಕ್ ಗೆಲುವು

ಜೆಡಿಎಸ್ ಬಂಡಾಯ ಶಾಸಕರ ಜೊತೆ ಗುರುತಿಸಿಕೊಂಡಿದ್ದ ಹಗರಿಬೊಮ್ಮನಹಳ್ಳಿಯ ಭೀಮಾನಾಯಕ್ಅವರು ಗೆಲುವು ಸಾಧಿಸಿದ್ದಾರೆ. ಇವರು ಸಹ ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿದ್ದರು.

ಭೀಮಾನಾಯಕ್ ಅವರು 47,627 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ನೇಮಿರಾಜ ನಾಯಕ್ ಅವರು 41,203 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಎಸ್.ಕೃಷ್ಣನಾಯಕ್ 3516 ಮತಗಳನ್ನು ಮಾತ್ರ ಪಡೆದಿದ್ದಾರೆ.

ಪರಣ್ಣ ಮುನವಳ್ಳಿ

ಪರಣ್ಣ ಮುನವಳ್ಳಿ

ಜೆಡಿಎಸ್ ಬಂಡಾಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಇಕ್ಬಾಲ್ ಅನ್ಸಾರಿ ಅವರು ಸೋತಿದ್ದಾರೆ. ಆದರೆ, ಅವರು ಸೋತಿರುವುದು ಬಿಜೆಪಿಯ ಪರಣ್ಣ ಮುನವಳ್ಳಿ ಅವರ ವಿರುದ್ಧ. 67,617 ಮತಗಳನ್ನು ಪಡೆದು ಮುನವಳ್ಳಿ ಗೆಲುವು ಸಾಧಿಸಿದ್ದಾರೆ.

ಇಕ್ಬಾಲ್ ಅನ್ಸಾರಿ ಅವರು 59,644 ಮತಗಳನ್ನು ಮಾತ್ರ ಪಡೆದಿದ್ದಾರೆ. ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕರಿಯಣ್ಣ ಸಂಘಟಿ ಅವರು 14,161 ಮತಗಳನ್ನು ಪಡೆದಿದ್ದಾರೆ.

ಎಚ್.ಸಿ.ಬಾಲಕೃಷ್ಣಗೆ ಸೋಲು

ಎಚ್.ಸಿ.ಬಾಲಕೃಷ್ಣಗೆ ಸೋಲು

ಮಾಗಡಿ ಕ್ಷೇತ್ರದಲ್ಲಿ ಎಚ್.ಸಿ.ಬಾಲಕೃಷ್ಣ ಅವರು ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 67,482 ಮತಗಳನ್ನು ಪಡೆದು ಜೆಡಿಎಸ್‌ನ ಎ.ಮಂಜು ವಿರುದ್ಧ ಸೋತಿದ್ದಾರೆ.

ಎ.ಮಂಜುನಾಥ್ ಅವರು 118849 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಮಂಜುನಾಥ್‌ ಅವರನ್ನು ಜೆಡಿಎಸ್‌ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿತ್ತು. ಬಾಲಕೃಷ್ಣ ಸೋಲಿಸಲು ಜೆಡಿಎಸ್ ಮಾಡಿದ ತಂತ್ರ ಫಲ ನೀಡಿದೆ.

ರಮೇಶ್ ಬಂಡಿಸಿದ್ದೇಗೌಡ ಸೋಲು

ರಮೇಶ್ ಬಂಡಿಸಿದ್ದೇಗೌಡ ಸೋಲು

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಂಡಾಯ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ ಅವರು 101307 ಮತಗಳನ್ನು ಪಡೆದು ರಮೇಶ್ ಬಂಡಿಸಿದ್ದೇಗೌಡ ಅವರನ್ನು ಸೋಲಿಸಿದ್ದಾರೆ.

ಕೆಪಿಸಿಸಿ ಸದಸ್ಯರಾಗಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ರಮೇಶ್ ಬಂಡಿಸಿದ್ದೇಗೌಡ ಅವರು 57619 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

English summary
Karnataka Election Results 2018 Live Updates. Here is a list of 7 JD(S) rebel MLA’s election result. 7 JD(S) rebel MLA’s quit the party and contest for elections as Congress candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X