ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಈ ಕಳ್ಳರು ನಮ್ಮನ್ನಾಳಬೇಕಾ'? ಮೋದಿ, ಬಿಜೆಪಿ ಮೇಲೆ ಪ್ರಕಾಶ್ ರೈ ಟ್ವೀಟಾಸ್ತ್ರ

|
Google Oneindia Kannada News

Recommended Video

ಪ್ರಕಾಶ್ ರೈರಿಂದ ಮತ್ತೊಮ್ಮೆ ನರೇಂದ್ರ ಮೋದಿ ಮೇಲೆ ಟ್ವಿಟ್ಟರ್ ಪ್ರಹಾರ | Oneindia Kannada

ಬೆಂಗಳೂರು, ಮೇ 10: ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಎಲ್ಲಿ ಹೋದರು? ಕನ್ನಡದ ಕೀರ್ತಿಯನ್ನು ಬಾಲಿವುಡ್, ಹಾಲಿವುಡ್ ಗಳಲ್ಲೂ ಪಸರಿಸಿದ ಪ್ರಕಾಶ್ ರೈ ಇವರೇನಾ? ಇತ್ತೀಚಿನ ದಿನಗಳಲ್ಲಿ ಅವರು ನೀಡುತ್ತಿರುವ ಹೇಳಿಕೆ, ಅವರ ವರ್ತನೆಯನ್ನು ನೋಡಿದರೆ ಸಾವಿರಾರು ಅಭಿಮಾನಿಗಳು ಮೆಚ್ಚಿದ್ದ ಪ್ರಕಾಶ್ ರೈ ಎಲ್ಲೋ ಕಾಣೆಯಾಗಿದ್ದಾರೆ ಎಂದೆನ್ನಿಸುವುದು ಖಂಡಿತ.

ಬಹುಶಃ ಗೌರಿ ಲಂಕೇಶ್ ಹತ್ಯೆಯಾದ ನಂತರವಿರಬೇಕು. ಪ್ರಕಾಶ್ ರೈ ಸಂಪೂರ್ಣ ಬದಲಾಗಿದ್ದಾರೆ. ಬಲಪಂಥೀಯರನ್ನು, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಂಸದ ಅನಂತಕುಮಾರ್ ಹೆಗಡೆ ಅವರನ್ನು ತೆಗಳುವುದನ್ನು ತಮ್ಮ 'ಪಾರ್ಟ್ ಟೈಂ ಡ್ಯೂಟಿ'ಯನ್ನಾಗಿ ಮಾಡಿಕೊಂಡಿರುವ ಪ್ರಕಾಶ್ ರೈ ಚುನಾವಣೆ ಹತ್ತಿರಬರುತ್ತಿದ್ದಂತೆಯೇ ಮತ್ತಷ್ಟು active ಆಗಿದ್ದಾರೆ.

ಮೋದಿಯವರೇ, ನಿಮಗ್ ಓಟು ಹಾಕೋದು ನಾಯಿಯಲ್ರೀ, ಮನುಷ್ಯರು: ಪ್ರಕಾಶ್ ರೈ!ಮೋದಿಯವರೇ, ನಿಮಗ್ ಓಟು ಹಾಕೋದು ನಾಯಿಯಲ್ರೀ, ಮನುಷ್ಯರು: ಪ್ರಕಾಶ್ ರೈ!

ಯಾವುದೇ ಒಂದು ವ್ಯಕ್ತಿ, ಪಕ್ಷ, ಸಿದ್ಧಾಂತವನ್ನಷ್ಟೇ ಗುರಿಯಾಗಿರಿಸಿಕೊಳ್ಳದೆ, ಸಾಮಾಜಿಕ ನ್ಯಾಯ, ಸಮಾನತೆಗಾಗಿ ಅವರು ಧ್ವನಿ ಎತ್ತಿದ್ದರೆ ಅವರಿಗೆ ಬೆಂಬಲ ನೀಡುವುದಕ್ಕೆ ಸಾಕಷ್ಟು ಜನರಿದ್ದರು. ಆದರೆ ಅವರು ಟ್ವಿಟ್ಟರ್ ನಲ್ಲಿ ದಿನೇ ದಿನೇ ಹಾಕುತ್ತಿರುವ ವಿಡಿಯೋಗಳು, ಸ್ಟೇಟಸ್ ಗಳನ್ನು ನೋಡಿದರೆ ಒಂದು ನಿರ್ದಿಷ್ಟ ಸಮುದಾಯ, ವ್ಯಕ್ತಿ, ಪಕ್ಷವನ್ನು ಗುರಿಯಾಗಿರಿಸಿಕೊಂಡಿರುವುದು ದಿಟವಾಗುತ್ತದೆ. ಅದಕ್ಕೆ ಪುಷ್ಠಿ ನೀಡುವಂಥ ಅವರ ಹೊಸ ಟ್ವಿಟ್ಟರ್ ಪೋಸ್ಟ್ ಗಳು ಇಲ್ಲಿವೆ.

Array

ನಿಮ್ಮ ಖಾತೆಗೆ 15 ಲಕ್ಷ ರೂ. ಬಂದಿದೆಯಾ..?

"ಒಬ್ಬ ಮನುಷ್ಯ ನಿರಂತರವಾಗಿ ಮಾತನಾಡುತ್ತಾರೆ. ಆದರೆ ಆಡಿದ್ದನ್ನು ಮಾಡಿ ತೋರಿಸಲು ವಿಫಲರಾಗುತ್ತಾರೆ. ದೇಶ ಅಸ್ತಿತ್ವ ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಜನರು ಭಾರದ ಎದೆಯಲ್ಲಿ ದಿನದೂಡುತ್ತಿದ್ದಾರೆ. ಬನ್ನಿ ಒಂದಾಗೋಣ.

ಮೊದಲು ಸುಳ್ಳರಿಗೆ ಪಾಠ ಕಲಿಸೋಣ. ಮುಂದೆ ಯಾರೇ ಬಂದರೂ ಪ್ರಶ್ನಿಸುತ್ತಾ ನಮ್ಮ ಕೆಲಸ ಮಾಡಿಸೋಣ" ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೊತೆಯಲ್ಲಿ ವಿಡಿಯೋವೊಂದನ್ನು ಸಹ ಹಾಕಿದ್ದಾರೆ. ಈ ವಿಡಿಯೋದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾವಗುವ ಮೊದಲು, 'ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ತಂದು ಎಲ್ಲ ಭಾರತೀಯರ ಖಾತೆಗೂ 15 ಲಕ್ಷ ರೂ. ಜಮಾ ಮಾಡುತ್ತೇನೆ' ಎಂದಿರುವ ಕ್ಲಿಪ್ಪಿಂಗ್ಸ್ ಇದೆ. ಈ ಕುರಿತು ಜನಸಾಮಾನ್ಯರ ಬಳಿ ಪ್ರಶ್ನಿಸಲಾಗಿದ್ದು, 'ನಿಮ್ಮ ಖಾತೆಗೆ 15 ಲಕ್ಷ ರೂ. ಹಣ ಜಮಾ ಆಗಿದೆಯಾ' ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಎಲ್ಲರೂ ಇಲ್ಲ ಎಂದು ಉತ್ತರಿಸಿದ್ದಲ್ಲದೆ, ಪ್ರಧಾನಿ ಮೋದಿಯವರ ಅಚ್ಚೇ ದಿನ ಕೇವಲ ಭಾಷಣಕ್ಕಷ್ಟೇ ಮೀಸಲು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

Array

ಈ ಕಳ್ಳರು ನಮ್ಮನ್ನು ಆಳಬೇಕಾ?

"ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಇಡುವುದಿಲ್ಲ. ಇದ್ದರೂ ಅವರು ರಬ್ಬರ್ ಸ್ಟಾಂಪ್ ಅಷ್ಟೆ. ಕನ್ನಡಿಗರಾಗಿ ಯೋಚಿಸಿ, ವಿಧಾನಸೌಧದಿಂದ ನಿಮ್ಮ ಆಳುವವರು ರೆಡ್ಡಿಗಳು, ಮಾತಿಗೆ ಮಾತು ದ್ವೇಷ ಹೊತ್ತಿರುವ ಹೆಗಡೆಯಂಥವರು, ಅಶ್ಲೀಲವಾಗಿ ಮಾತನಾಡುವ ಪ್ರತಾಪ್ ಸಿಂಹನಂಥವರು.

ಯೋಗಿ, ಮೋದಿ, ಶಾ ಅವರಿಗೆ ದಕ್ಷಿಣ ಭಾರತದಲ್ಲಿ ರಾಜಕಾರಣ ಮಾಡಲು ನಮ್ಮ ಕರ್ನಾತಕ ಒಂದು ತಂಗುದಾಣ, ಹಾಲಿಡೇ ರೆಸಾರ್ಟ್ ಆಗಬೇಕೆ? ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯಬೇಕು. ಬಿಜೆಪಿ ಕಾರ್ಯಕರ್ತರ ಕೊಲೆಯ ಬಗ್ಗೆಯೂ ಸುಳು ಹೇಳುತ್ತಿದ್ದಾರೆ. ಎಲ್ಲ ಸುಳ್ಳುಗಳನ್ನು ನೀವು ಕೇಳಿದ್ದೀರಿ. ಇಂಥ ಕಳ್ಳರು ನಮ್ಮನ್ನು ಆಳಬೇಕೆ? ನಾನು ಯಾವ ಪಕ್ಷಕ್ಕೂ ಸೇರದೆ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯದಾದ್ಯಂತ ಓಡಾಡಿದರೆ ನನ್ನ ಮೀಟಿಂಗ್ ಗಳನ್ನು ಕ್ಯಾನ್ಸಲ್ ಮಾಡಿದ್ದೀರಿ. ನನ್ನೊಂದಿಗೆ ಚರ್ಚೆಗೆ ಬರದೆ ನನ್ನನ್ನು ಹೆದರಿಸಲು, ನನಗೆ ಕಲ್ಲು ಹೊಡೆಯಲು ಬಂದಿದ್ದೀರಿ."- ಪ್ರಕಾಶ್ ರೈ

ಟ್ವಿಟ್ಟರ್ ನಲ್ಲಿ ಮತ್ತೆ ಸುದ್ದಿ ಮಾಡುತ್ತಿದೆ ಪ್ರಕಾಶ್ ರೈ ವಿಡಿಯೋ ಟ್ವಿಟ್ಟರ್ ನಲ್ಲಿ ಮತ್ತೆ ಸುದ್ದಿ ಮಾಡುತ್ತಿದೆ ಪ್ರಕಾಶ್ ರೈ ವಿಡಿಯೋ

ವಿವೇಕಾನಂದರ ಧರ್ಮ ಬೇಕು, ಗೋಡ್ಸೆ ಧರ್ಮವಲ್ಲ

"ಸುಬ್ರಮಣಿಯನ್ ಸ್ವಾಮಿ ಅವರೊಂದಿಗೆ ಮಾತನಾಡುವಾಗ ಅವರು ಹೇಳಿದರು, ಹಿಂದುಗಳಲ್ಲದಿದ್ದರೆ ಅಲ್ಪಸಂಖ್ಯಾತರಿಗೆ ಮತದಾನದ ಹಕ್ಕು ಕೊಡುವುದಿಲ್ಲವಂತೆ ಅವರು. ಎಮಥ ಮಾತು ನೋಡಿ. ನಮ್ಮ ದೇಶವೂ ಶ್ರೀಲಂಕಾ, ಪಾಕಿಸ್ತಾನದಂತೆ ಆಗಬೇಕಾ? ನನ್ನನ್ನು ಹಿಂದು ವಿರೋಧಿ ಎನ್ನುತ್ತಿದ್ದಾರೆ ಇವರು. ನಮಗೆ ಸಾವರ್ಕರ್ ಮತ್ತು ಗೋಡ್ಸೆಯವರಂಥ ಧರ್ಮ ಬೇಡ. ವಿವೇಕಾನಂದರ ಧರ್ಮ ಬೇಕು. ಯುವಕ- ಯುವತಿಯರಿಗೆ ಭವಿಷ್ಯ ಏನು ಎಂಬುದು ಗೊತ್ತಾಗದಂಥ ಭಾರತ ನಿರ್ಮಿಸುತ್ತಿದ್ದಾರೆ. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ಏನಾಗ್ತಿದೆ ಈಗ? ಒಬ್ಬ ವ್ಯಕ್ತಿಯ ಕೊಲೆಯಾದರೆ ಮನುಷ್ಯನ ಕೊಲೆಯಲ್ಲ ಎಂದು ಕೋಮನ್ನು ತರುವವರು ಇವರು. ಇಂಥವರನ್ನೆಲ್ಲ ನಿಧಾನವಾಗಿ ಇಳಿಸೋಣ, ಮುನ್ನಡೆಯೋಣ... "- ಪ್ರಕಾಶ್ ರೈ

ದ್ವೇಷವನ್ನು ಯಾಕೆ ಬಿತ್ತುತ್ತಿದ್ದೀರಿ?

ಧರ್ಮದ ಹೆಸರಿನಲ್ಲಿ ಕೊಲ್ಲುವುದು, ಸಾಯಿಸೋದು ತಪ್ಪು. ಮನುಷ್ಯ ತಪ್ಪು ಮಾಡೋದು ಸಹಜ. ಹಾಗಂತ ಒಂದು ಪಂಗಡ, ಮತದ ಮೇಲೆ ದ್ವೇಷ ಯಾಕೆ ಬಿತ್ತುತ್ತಿದ್ದೀರಿ. ನಾನು ಕಳೆದುಕೊಳ್ಳುವಷ್ಟು ಶ್ರೀಮಂತವಾಗಿದ್ದೀನಿ. ನನ್ನಿಂದ ಏನು ಕಿತ್ತುಕೊಳ್ಳುತ್ತೀರಿ. ಸಿನೆಮಾ ಬ್ಯಾನ್ ಮಾಡ್ತೀರಾ? ನನಗೆ ಮತ್ತೆ ಕಲಾವಿದ ಎಂದು ಸಾಬೀತುಪಡಿಸುವ ಅಗತ್ಯವಿಲ್ಲ. ಈಗಾಗಲೇ ನಾನದನ್ನು ಸಾಬೀತುಪಡಿಸಿದ್ದೀನಿ.

ನನಗೆ ಆಸ್ತಿ ಇದೆ, ಎಲ್ಲಾ ರಾಜ್ಯಗಳಲ್ಲೂ ಮನೆ ಇದೆ. ತೋಟ ಇದೆ. ನಾನು ಸುಖವಾಗಿದ್ದೀನಿ. ಆದರೆ ಸಮಾಜ ಸುಖವಾಗಿಲ್ಲ ಅಂದ್ರೆ ನನಗೆ ಸುಮ್ಮನಿರುವುದಕ್ಕೆ ಸಾಧ್ಯವಿಲ್ಲ. ನನಗೆ ಜವಾಬ್ದಾರಿಯಿದೆ. ಅದಿಲ್ಲ ಅಂದ್ರೆ ನಾನು ಯಾವುದಾದರೂ ಪಕ್ಷ ಸೇರಿಕೊಳ್ತಿದ್ದೆ. ನಾನು ಓದಿದ ಲಂಕೇಶ್ ಗಾಗಿ, ನಾನು ಓದಿದ ತೇಜಸ್ವಿಗಾಗಿ, ನನ್ನನ್ನು ಬೆಳೆಸಿದ ರಂಗಭೂಮಿಗಾಗಿ, ನನಗೆ ಹೆಸರು-ಊಟ ಕೊಟ್ಟ ಇಷ್ಟೊಂದು ತಂದೆ-ತಾಯಿಯರಿಗಾಗಿ ನಾನು ನಿಲ್ಲುತ್ತೇನೆ.

ನೀವು ಎಷ್ಟೇ ಏಟು ಕೊಟ್ಟರೂ ಸರಿ, ಕೊಟ್ಟಷ್ಟೂ ಉತ್ತಮ ಶಿಲ್ಪವಾಗುತ್ತೀನಿ. ಕಾಂಗ್ರೆಸ್ ಅಥವಾ ಜೆಡಿಎಸ್ ಯಾವುದೂ ಯೋಗ್ಯ ಎಂದು ಹೇಳುತ್ತಿಲ್ಲ. ಎಲ್ಲರೂ ಅಂಥವರೇ. ಆದರೆ ನನ್ನ ಕಾಳಜಿ, ದೇಶವನ್ನು ಆತಂಕದಲ್ಲಿ ದೂಡುವವರ ಬಗ್ಗೆ. ಯಾರೇ ಗೆದ್ದರೂ ಅವರನ್ನೂ ಪ್ರಶ್ನಿಸೋಣ"- ಪ್ರಕಾಶ್ ರೈ.

English summary
Karnataka assembly Elections 2018: Prakash Rai again started his campaign against BJP and Narendra Modi on twitter. Here are four videos of Prakash Rai in which he speaks about various issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X