ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂವಾದದಲ್ಲಿ ಕರ್ನಾಟಕವನ್ನು ಹಾಡಿ ಹೊಗಳಿದ ಮೋದಿ: ಮುಖ್ಯಾಂಶ

|
Google Oneindia Kannada News

"1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ರಾಜಕೀಯ ವ್ಯವಸ್ಥೆಯಲ್ಲಿ ಹಿಂಸೆ ಸಹಜವಾಗಿಬಿಟ್ಟಿದೆ. ತ್ರಿಪುರ, ಕೇರಳ, ಕರ್ನಾಟಕದಲ್ಲಿ ನಮ್ಮ ಹಲವು ಕಾರ್ಯಕರ್ತರ ಹತ್ಯೆಯಾಯಿತು. ಇದು ಪ್ರಜಾಪ್ರಭುತ್ವಕ್ಕೆ ಸೂಕ್ತವಾಗುವುದಿಲ್ಲ. ಹಿಂಸೆಯನ್ನು ಖಂಡಿತ ವಿರೋಧಿಸಲೇಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕರ್ನಾಟಕದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ನಮೋ(ನರೇಂದ್ರ ಮೊದಿ) app ಮೂಲಕ ಸಂವಾದ ನಡೆಸಿದ ನರೇಂದ್ರ ಮೋದಿ ಯುವ ಮೋರ್ಚಾ ಸದಸ್ಯರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಕಳೆದ ಐದಾರು ವರ್ಷಗಳಿಂದ ಕರ್ನಾಟಕದಲ್ಲಿ ರಾಜಕೀಯ ಪ್ರೇರಿತ ಹಿಂಸೆ ನಡೆಯುತ್ತಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು. 'ಇಂಥ ಹಿಂಸೆಯನ್ನು ವಿರೋಧಿಸಲೇಬೇಕು' ಎಂದು ಹೇಳಿದರು.

ದಿಲ್, ದಲಿತರು ಕಾಂಗ್ರೆಸ್ಸಿಗೆ ಬೇಕಿಲ್ಲ, ಬೇಕಿರುವುದು ಡೀಲ್ : ದುರ್ಗದಲ್ಲಿ ಮೋದಿದಿಲ್, ದಲಿತರು ಕಾಂಗ್ರೆಸ್ಸಿಗೆ ಬೇಕಿಲ್ಲ, ಬೇಕಿರುವುದು ಡೀಲ್ : ದುರ್ಗದಲ್ಲಿ ಮೋದಿ

"ಪ್ರಜಾಪ್ರಭುತ್ವದಲ್ಲಿ ಎಂದಿಗೂ ಹಿಂಸೆಗೆ ಜಾಗವಿಲ್ಲ. ಯಾವಾಗ ವ್ಯಕ್ತಿ ತನ್ನಲ್ಲೇ ತಾನು ನಂಬಿಕೆಯನ್ನು ಕಳೆದುಕೊಳ್ಳುತ್ತಾನೋ, ಯಾರಿಗೆ ಮಾತನಾಡುವ ಧೈರ್ಯ ಮತ್ತು ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲವೋ ಅವರು ರಾಜಕೀಯ ಹಿಂಸೆಯ ಹಾದಿ ಹಿಡಿಯುತ್ತಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ ಸಂವಾದದ ಮುಖ್ಯಾಂಶಗಳು ಇಲ್ಲಿವೆ:

ಕರ್ನಾಟಕವನ್ನು ಹಾಡಿ ಹೊಗಳಿದ ಮೋದಿ

ಕರ್ನಾಟಕವನ್ನು ಹಾಡಿ ಹೊಗಳಿದ ಮೋದಿ

"ಕ್ಷಮಿಸಿ ನಾನು 10 ನಿಮಿಷ ತಡವಾಗಿ ಸಂವಾದ ಆರಂಭಿಸುತ್ತಿದ್ದೇನೆ. ನಿನ್ನೆ ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಷಿಯಸ್ ಗಿಂತಲೂ ಹೆಚ್ಚು ತಾಪಮಾನದಲ್ಲಿ ಪ್ರಚಾರ ಕಾರ್ಯ ನಡೆಸಿದ್ದರಿಂದ ರಾತ್ರಿ ಮರಳುವುದು ತಡವಾಯ್ತು. ಆದರೆ ಆ ಬಿರುಬಿಸಿಲಿನಲ್ಲೂ ನೆರೆದಿದ್ದ ಕರ್ನಾಟಕದ ಲಕ್ಷಾಂತರ ಜನರನ್ನು ಕಂಡು ಖುಷಿಯಾಯಿತು. ಅವರಿಗೆ ತಮ್ಮ ರಾಜ್ಯದ ಮೇಲಿರುವ ಅಭಿಮಾನದ ಬಗ್ಗೆ ಹೆಮ್ಮೆ ಎನ್ನಿಸಿತು"- ನರೇಂದ್ರ ಮೋದಿ

ಹಿಂಸೆಗೆ ಅವಕಾಶ ಕೊಡದಿರಿ

ಹಿಂಸೆಗೆ ಅವಕಾಶ ಕೊಡದಿರಿ

ರಾಜಕೀಯ ಹಿಂಸೆಗೆ ನಮ್ಮ ಎಷ್ಟೋ ಕಾರ್ಯಕರ್ತರನ್ನು ನಾವು ಕಳೆದುಕೊಂಡರೂ ದಯವಿಟ್ಟು ಪ್ರತೀಕಾರದ ದೃಷ್ಟಿಯಲ್ಲಿಯಾರನ್ನೂ ನೋಡಬೇಡಿ. ಚರ್ಚೆಗಳಿಗೆ ಯಾವತ್ತಿಗೂ ಅವಕಾಶವಿದೆ. ಆದರೆ ಅದು ಹಿಂಸೆಗೆ ಬದಲಾಗಬಾರದು. ಪ್ರಜಾಪ್ರಭುತ್ವದಲ್ಲಿ ಯಾವ ಸಿದ್ಧಾಂತವಿರಲಿ, ಯಾವ ಪಕ್ಷವಿರಲಿ ಯಾವುದೇ ಕಾರಣಕ್ಕೂ ಹಿಂಸೆಗೆ ಅನುವುಮಾಡಿಕೊಡಬಾರದು- ನರೇಂದ್ರ ಮೋದಿ

ಆಧಾರ್, ಇವಿಎಂ ವಿರುದ್ಧ ಧ್ವನಿ

ಆಧಾರ್, ಇವಿಎಂ ವಿರುದ್ಧ ಧ್ವನಿ

ವಿರೋಧ ಪಕ್ಷ ಯಾವಾಗಲೂ ಆಧಾರ್ ಬಳಕೆ ಮತ್ತು ಇವಿಎಂ( electronic voting machines) ಬಳಕೆಯನ್ನು ವಿರೊಧಿಸುತ್ತಿದೆ. ಆದರೆ ಬಿಜೆಪಿ ಎಂದಿಗೂ ತಂತ್ರಜ್ಞಾನ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಕರ್ನಾಟಕದ ಯುವಜನತೆಯ ಬಗ್ಗೆ ನನಗೆ ಹೆಮ್ಮೆಯಿದೆ. ಇಲ್ಲಿನ ಯುವಕರು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಚುನಾವಣೆಯ ಸಮಯದಲ್ಲೂ ಅವರ ಉತ್ಸಾಹವನ್ನು ಕಂಡರೆ ಹೆಮ್ಮೆಯಾಗುತ್ತದೆ" - ನರೇಂದ್ರ ಮೋದಿ

ಗುರುರಾಜ್, ಅಶ್ವಿನಿ ಪೊನ್ನಪ್ಪ ಅವರನ್ನು ನೆನೆದ ಮೋದಿ

ಗುರುರಾಜ್, ಅಶ್ವಿನಿ ಪೊನ್ನಪ್ಪ ಅವರನ್ನು ನೆನೆದ ಮೋದಿ

"ಕರ್ನಾಟಕದ ಯುವಕರು ಯಾರಿಗೂ ಕಡಿಮೆ ಇಲ್ಲ. ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿದ್ದು ಕುಂದಾಪುರದ ಗುರುರಾಜ್. ವೇಯ್ಟ್ ಲಿಫ್ಟಿಂಗ್ ನಲ್ಲಿ ಅವರು ಬೆಳ್ಳಿ ಗೆದ್ದರು. ಈ ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ಸಾಧನೆಯಂತೂ ಗಮನಾರ್ಹ. ಅರದಲ್ಲೂ ಅಮೋಘ ಪ್ರದರ್ಶನ ನೀದಿದ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಸಹ ಕರ್ನಾಟಕದ ಮಗಳು"- ನರೇಮದ್ರ ಮೋದಿ

English summary
Karnataka assembly elections 2018: Prime minister Narendra Modi interacted with BJP Yuva Morcha workers of Karnataka through Namo app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X