ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನಲ್ಲಿ ಮೋದಿ : ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ

|
Google Oneindia Kannada News

ಚಿಕ್ಕಮಗಳೂರು, ಮೇ 09 : 'ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನರ ಚಿಂತೆ ಇಲ್ಲ. ಕುಟುಂಬದವರಿಗೆ ಅಧಿಕಾರ ಕೊಡಿಸುವ ಚಿಂತೆ ಮಾತ್ರ ಇದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇಂದು ಬಂಗಾರಪೇಟೆ, ಚಿಕ್ಕಮಗಳೂರು, ಬೆಳಗಾವಿ ಮತ್ತು ಬೀದರ್‌ನಲ್ಲಿ ಚುನಾವಣಾ ಪ್ರಚಾರವನ್ನು ಅವರು ನಡೆಸಲಿದ್ದಾರೆ.

ಬಂಗಾರಪೇಟೆಯಲ್ಲಿ ಮೋದಿ : ಕಾಂಗ್ರೆಸ್ 6 ರೋಗದಿಂದ ಬಳಲುತ್ತಿದೆ!ಬಂಗಾರಪೇಟೆಯಲ್ಲಿ ಮೋದಿ : ಕಾಂಗ್ರೆಸ್ 6 ರೋಗದಿಂದ ಬಳಲುತ್ತಿದೆ!

ಬೆಳಗ್ಗೆ 11 ಗಂಟೆಗೆ ಅವರು ಬಂಗಾರಪೇಟೆಯಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದರು. ಮಧ್ಯಾಹ್ನ ಚಿಕ್ಕಮಗಳೂರಿಗೆ ಆಗಮಿಸಿದ್ದು, ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

Karnataka elections : Narendra Modi election campaign rally Chikkamagaluru

ಮೋದಿ ಭಾಷಣದ ಮುಖ್ಯಾಂಶಗಳು

* ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಶೃಂಗೇರಿ ಶಾರದಾಂಬೆಗೆ, ಹೊರನಾಡು ಅನ್ನಪೂರ್ಣೇಶ್ವರಿಗೆ, ರಂಭಾಪುರಿ ಶ್ರೀಗಳಿಗೆ ನಮನ ಸಲ್ಲಿಸಿದರು.

'ದುರ್ಗೆ' ಇಂದಿರಾ ಗೆದ್ದಿದ್ದ ಕಾಫಿ ನಾಡಲ್ಲಿ ಹೆಜ್ಜೆ ಮೂಡಿಸಿದ ರಾಹುಲ್'ದುರ್ಗೆ' ಇಂದಿರಾ ಗೆದ್ದಿದ್ದ ಕಾಫಿ ನಾಡಲ್ಲಿ ಹೆಜ್ಜೆ ಮೂಡಿಸಿದ ರಾಹುಲ್

* ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಂದೊಂದೇ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ. ಆದರೆ, ಪಕ್ಷದ ನಾಯಕರಿಗೆ ಅಹಂಕಾರ ಕಡಿಮೆ ಆಗಿಲ್ಲ. 2019ರಲ್ಲಿ ಪ್ರಧಾನಿಯಾಗುವೆ ಎಂದು ಹೇಳುತ್ತಿದ್ದಾರೆ ಎಂದರು.

* ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಆದ್ದರಿಂದ, ಅವರು ಚುನಾವಣೆ ಸೋತಾಗ ಇವಿಎಂ ಮೇಲೆ ಆರೋಪವನ್ನು ಮಾಡುತ್ತಿದ್ದಾರೆ.

* ಚುನಾವಣೆಯಲ್ಲಿ ಸೋತ ನಂತರ EVM ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ಪಕ್ಷ ಇಲ್ಲಿನ ಸಮಾವೇಶದಲ್ಲಿ ಸೇರಿರುವ ಜನರನ್ನು ಒಮ್ಮೆ ನೋಡಲಿ. ಬಿಜೆಪಿ ಈ ಬಾರಿ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬುದನ್ನು ಇಲ್ಲಿನ ಜರನ್ನು ನೋಡಿಯೇ ಹೇಳಬಹುದು.

* ವೈದಿಕ ಪರಂಪರಗೆ, ಅದ್ವೈತ ಪರಂಪರೆಗೆ ಹೊಸದಿಕ್ಕು ನೀಡಿದ ಶಂಕರಾಚಾರ್ಯರ ಪುಣ್ಯಭೂಮಿ ಇದು. ಆದರೆ, ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಮಠ, ಮಂದಿರಗಳನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳಲು ಕಾಂಗ್ರೆಸ್ ಮುಂದಾಗುತ್ತಿರುವುದು ಸರಿಯಲ್ಲ.

* ಪ್ರಧಾನಿ ಸ್ಥಾನ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ಕಾಂಗ್ರೆಸ್ ನವರ ಅಭಿಪ್ರಾಯ. ಅದಕ್ಕಾಗಿಯೇ ಜನರ ತೀರ್ಪಿಗೂ ಬೆಲೆ ನೀಡಿದೆ 2019ರಲ್ಲಿ ಪ್ರಧಾನಿಯಾಗುವೆ ಎಂದು ಹೇಳುತ್ತಿದ್ದಾರೆ.

* ಎಲ್ಲಾ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡ ಕಾಂಗ್ರೆಸ್ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದೆ. ಆದ್ದರಿಂದ, ಬೇರೆ ಮಾರ್ಗದಲ್ಲಿ ಅಧಿಕಾರವನ್ನು ಪಡೆಯಲು ಪ್ರಯತ್ನ ನಡೆಸುತ್ತಿದೆ.

* ಬಿಜೆಪಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ ಇದೆ. ಕಾಫಿ ಬೋರ್ಡ್‌ಗೆ ಒಬ್ಬ ರೈತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಬಿಜೆಪಿ.

* ಭದ್ರಾ ಮೇಲ್ಡಂಡೆ ಯೋಜನೆ ಆರಂಭಿಸಿದ್ದು ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ .ಈ ಯೋಜನೆಯನ್ನು ಪೂರ್ಣಗೊಳಿಸುವ ಹೊಣೆಯೂ ನಮ್ಮ ಮೇಲಿದೆ.

* ಅಡಿಕೆ ಬೆಳೆಯುವ ರೈತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕಾಳಜಿ ಇಲ್ಲ. ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದು ಇದೇ ಕಾಂಗ್ರೆಸ್.

* ನಕಲಿ ವೋಟರ್ ಐಡಿ ಸೃಷ್ಟಿಸಿ ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಸೋಲುವ ಭಯ, ಅವರನ್ನು ಇಷ್ಟೊಂದು ಹತಾಶೆಯ ಮಟ್ಟಕ್ಕೆ ಇಳಿಸಿದೆ ಎಂಬದು ಇದರಿಂದ ಸ್ಪಷ್ಟವಾಗುತ್ತದೆ

English summary
As campaigning is underway in poll-bound Karnataka. PM Narendra Modi address rally in Chikkamagaluru on May 09, 2018. Here are the Live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X