ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಟಿಕೆಟ್ ಘೋಷಣೆ ತಡ, ಎದುರಾಗಬಹುದಾದ ಸಮಸ್ಯೆಗಳೇನು?

By Manjunatha
|
Google Oneindia Kannada News

Recommended Video

Karnataka Elections 2018 : ಬಿಜೆಪಿ ಟಿಕೆಟ್ ಘೋಷಣೆ ಲೇಟ್ ಆದ್ರೆ ಎಷ್ಟೆಲ್ಲಾ ತೊಂದರೆ ಅನುಭವಿಸಬೇಕಾಗುತ್ತೆ

ನಾಮಪತ್ರ ಸಲ್ಲಿಸಲು ಪ್ರಾರಂಭವಾಗಿ ಎರಡು ದಿನವಾಗಿವೆ ಆದರೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್‌ 218 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಪ್ರಚಾರದಲ್ಲಿಯೂ ತೊಡಗಿಕೊಂಡಿವೆ. ಆದರೆ ಬಿಜೆಪಿಯು ಇನ್ನೂ ಸುಮಾರು 70 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನೇ ಪ್ರಕಟಿಸಿಲ್ಲ.

ಜೆಡಿಎಸ್ ಪಕ್ಷಗಳು ಮತದಾನ ದಿನಾಂಕ ಘೋಷಣೆ ಆಗುವ ಮೊದಲೇ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದು ಇನ್ನೂ ನೂರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ಆದರೆ ಜೆಡಿಎಸ್ ಪಕ್ಷವು ತನ್ನ ಪ್ರಭಾವ ಹೆಚ್ಚಿಗಿರುವ ಹಾಗೂ ಮಧ್ಯಮ ಪ್ರಮಾಣದಲ್ಲಿರುವ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವ ಕಾರಣ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಅದಕ್ಕೆ ಸಮಸ್ಯೆಗಳನ್ನೇನನ್ನೂ ತಂದೊಡ್ಡುವುದಿಲ್ಲ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಆದರೆ ಕರಾವಳಿ, ಹಳೆ ಮೈಸೂರು, ಉತ್ತರ ಕರ್ನಾಟಕದ ಹಲವು ಪ್ರಮುಖ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸದೆ ತಡ ಮಾಡುತ್ತಿರುವ ಬಿಜೆಪಿಗೆ ತನ್ನ ಈ ಕಾದು ನೋಡುವ ತಂತ್ರದಿಂದ ಚುನಾವಣೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇಲ್ಲದಿಲ್ಲ.

ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆ

ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆ

ಈಗಾಗಲೇ ಬಿಜೆಪಿಯ ಪ್ರಬಲ ಎದುರಾಳಿ ಕಾಂಗ್ರೆಸ್‌ ಪಕ್ಷ ಟಿಕೆಟ್ ಘೋಷಿಸಿದ್ದು ಅವರ ಅಭ್ಯರ್ಥಿಗಳು ಪ್ರಚಾರದಲ್ಲಿ ನಿರತರಾಗಿಬಿಟ್ಟಿದ್ದಾರೆ. ಟಿಕೆಟ್ ಅಂತಿಮವಾಗದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಾರದಲ್ಲಿ ಅಲ್ಪ ಹಿಂದುಳಿಯಲಿದ್ದಾರೆ ಇದು ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆಯೇ.

ದೊಡ್ಡ ಕ್ಷೇತ್ರದ ಅಭ್ಯರ್ಥಿಗಳಿಗೆ ಹಿನ್ನಡೆ?

ದೊಡ್ಡ ಕ್ಷೇತ್ರದ ಅಭ್ಯರ್ಥಿಗಳಿಗೆ ಹಿನ್ನಡೆ?

ಕೆಲವು ಕ್ಷೇತ್ರಗಳು ಬಹಳ ದೊಡ್ಡ ಕ್ಷೇತ್ರಗಳಿವೆ ಬಹಿರಂಗ ಪ್ರಚಾರಕ್ಕೆ ಉಳಿವ ಅತ್ಯಲ್ಪ ಸಮಯದಲ್ಲಿ ಪೂರ್ಣ ಕ್ಷೇತ್ರದ ಪರ್ಯಟನೆ ಮಾಡಲು ಆಗುವುದಿಲ್ಲ. ಇದು ಅಭ್ಯರ್ಥಿಗಳಿಗೆ ಅತಿ ದೊಡ್ಡ ಹಿನ್ನಡೆ ಆಗಬಹುದಾಗಿದೆ. ಪಕ್ಷದ ಸಂಘಟನೆಗೆ, ಗ್ರಾಮ ಭಾಗದ ಮುಖಂಡರ ಭೇಟಿಗೆ ಅಭ್ಯರ್ಥಿಗಳಿಗೆ ಸಮಯವೇ ದೊರಕದೇ ಹೋಗುತ್ತದೆ.

ನಾಮಪತ್ರ ಸಲ್ಲಿಕೆಯಲ್ಲಿ ಗೊಂದಲ ಸಾಧ್ಯತೆ

ನಾಮಪತ್ರ ಸಲ್ಲಿಕೆಯಲ್ಲಿ ಗೊಂದಲ ಸಾಧ್ಯತೆ

ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿ ಎರಡು ದಿನ ಕಳೆದಿದೆ. ಅಭ್ಯರ್ಥಿಗಳಿಗೆ ಇನ್ನು ಆರು ದಿನ ಮಾತ್ರ ಬಾಕಿ ಇದೆ ಅದರಲ್ಲಿ ಒಂದು ಭಾನುವಾರ ಹಾಗಾಗಿ ಇನ್ನು ಉಳಿಯುವುದು 5 ದಿನ ಮಾತ್ರ. ಅಷ್ಟರಲ್ಲಿ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಿ, ಅವರು ಬಿ-ಫಾರಂ ಪಡೆದು ನಾಮಪತ್ರ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನು ತಯಾರಿ ಮಾಡಿಕೊಳ್ಳುವುದು ಸುಲಭದ ಕಾರ್ಯವೇನಲ್ಲ. ಅವಸರದಲ್ಲಿ ಅವಘಡವಾದರೆ ನಾಮಪತ್ರವೇ ತಿರಸ್ಕೃತವಾಗುವ ಸಾಧ್ಯತೆಯೂ ಇರುತ್ತದೆ.

ಬಿಜೆಪಿಗೆ ಮಂಗಳೂರಿನ 3 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟುಬಿಜೆಪಿಗೆ ಮಂಗಳೂರಿನ 3 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು

ಬಂಡಾಯ ಶಮನಕ್ಕೆ ಸಮಯ ದೊರಕದು

ಬಂಡಾಯ ಶಮನಕ್ಕೆ ಸಮಯ ದೊರಕದು

ಟಿಕೆಟ್‌ ಕೈತಪ್ಪಿದವರು ಬಂಡಾಯ ಏಳುವುದು ಸಾಮಾನ್ಯ. ಟಿಕೆಟ್ ವಿತರಣೆ ತಡವಾದಲ್ಲಿ ಬಂಡಾಯ ಎದ್ದವರ ಕೋಪ ಶಮನ ಮಾಡಲು, ಟಿಕೆಟ್ ಪಡೆದವರು ಟಿಕೆಟ್ ಕೈತಪ್ಪಿದವರ ಬಳಿ ರಾಜಿ ಸಂಧಾನ ಮಾಡಿಕೊಳ್ಳಲು ಸಮಯವೇ ಉಳಿಯುವುದಿಲ್ಲ.

ಚುನಾವಣಾ ತಯಾರಿಗೆ ಹಿನ್ನಡೆ

ಚುನಾವಣಾ ತಯಾರಿಗೆ ಹಿನ್ನಡೆ

ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು ತಯಾರಾಗಲು ಸಮಯವೇ ದೊರಕುವುದಿಲ್ಲ. ಬಂಟಿಂಗ್ಸ್, ಪಾಂಪ್ಲೆಟ್ಸ್‌, ಕಟೌಟ್ಸ್‌ ಇನ್ನೂ ಹೀಗೆ ಹಲವು ಪ್ರಚಾರ ಸಾಮಗ್ರಿಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಗಳು ತಯಾರು ಮಾಡಿಕೊಳ್ಳಬೇಕಾಗುತ್ತದೆ. ಕಾರ್ಯಕರ್ತರನ್ನು ವಿವಿಧ ಕಾರ್ಯಗಳಿಗಾಗಿ ನಿಯೋಜಿಸಬೇಕಾಗುತ್ತದೆ, ಜವಾಬ್ದಾರಿಗಳನ್ನು ಹಂಚಬೇಕಾಗುತ್ತದೆ, ಪಟ್ಟಿ ಘೋಷಣೆ ಆಗದ ಕಾರಣ ಟಿಕೆಟ್ ಆಕಾಂಕ್ಷಿಗಳು ಈ ಬಗ್ಗೆ ಇನ್ನೂ ತಲೆಯನ್ನೇ ಕೆಡಿಸಿಕೊಂಡಿರುವುದಿಲ್ಲ.

ಯಶವಂತಪುರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆ?ಯಶವಂತಪುರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆ?

ಪಕ್ಷಕ್ಕೆ ಅಭ್ಯರ್ಥಿಗಳ ಮೇಲೆ ಅಪನಂಬಿಕೆ?

ಪಕ್ಷಕ್ಕೆ ಅಭ್ಯರ್ಥಿಗಳ ಮೇಲೆ ಅಪನಂಬಿಕೆ?

ಟಿಕೆಟ್ ನೀಡಿದ ನಂತರ ಪಕ್ಷಾಂತರ ಮಾಡಿಬಿಟ್ಟರೆ ಎಂಬ ಭಯವೂ ಬೇಗನೆ ಟಿಕೆಟ್ ನೀಡದಿರುವ ನಿರ್ಧಾರದ ಹಿಂದೆ ಇದ್ದಂತಿದೆ. ಹಾಗಿದ್ದಲ್ಲಿ ಅದು ಅಭ್ಯರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಪಕ್ಷಕ್ಕೆ ಅಭ್ಯರ್ಥಿಗಳ ಮೇಲೆ ನಂಬಿಕೆ ಬಹಳ ಮುಖ್ಯವಾಗುತ್ತದೆ ಅದರಲ್ಲಿಯೂ ಚುನಾವಣೆ ಸಮಯದಲ್ಲಿ ಅದು ಬಹಳವೇ ಮುಖ್ಯ.

English summary
BJP delaying to release its 3rd list of candidates. It may cost BJP several problems. congress and JDS already announced most of the candidates for Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X