ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ನಗರದ 24 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

|
Google Oneindia Kannada News

Recommended Video

ಕರ್ನಾಟಕ ಚುನಾವಣೆ 2018 : ಬೆಂಗಳೂರು ನಗರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ | Oneindia Kannada

ಬೆಂಗಳೂರು, ಮಾರ್ಚ್ 10 : ಕರ್ನಾಟಕದ ಪ್ರಮುಖ ಪ್ರತಿಪಕ್ಷ ಬಿಜೆಪಿ 2018ರ ವಿಧಾನಸಭೆ ಚುನಾವಣೆಗೆ ಬೆಂಗಳೂರು ನಗರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ನಗರದ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಲು ಬಿಜೆಪಿ 120 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಬೆಂಗಳೂರು ನಗರದ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ.

ಚುನಾವಣೆ 2018 : ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಚುನಾವಣೆ 2018 : ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಯಶವಂತಪುರ, ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಗಾಂಧಿ ನಗರ ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಭಾರೀ ಪೈಪೋಟಿ ಇದೆ. ಆದ್ದರಿಂದ, ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ.

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

ಮೂರು ಸಮೀಕ್ಷಾ ವರದಿಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಮೂರು ಅಭ್ಯರ್ಥಿಗಳನ್ನು ಸೂಚಿಸಲಾಗಿದೆ. ಕೇಂದ್ರ ಚುನಾವಣಾ ಸಮಿತಿ ಯಾರು ಅಂತಿಮ ಅಭ್ಯರ್ಥಿ? ಎಂದು ತೀರ್ಮಾನ ಕೈಗೊಳ್ಳಲಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಬಾರಿಯ ವಿಧಾನಸಭೆ ಚುನಾವಣೆಗೆ ಜೆಡಿಸ್ ಮಾತ್ರ 126 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಾರ್ಚ್ ಅಂತ್ಯ ಅಥವ ಏಪ್ರಿಲ್ ತಿಂಗಳಿನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಪಟ್ಟಿಯಲ್ಲಿ ಅಭ್ಯರ್ಥಿಗಳು ಯಾರು? ಇಲ್ಲಿದೆ ಮಾಹಿತಿ...

ರಾಜಾಜಿನಗರ : ಸುರೇಶ್ ಕುಮಾರ್

ರಾಜಾಜಿನಗರ : ಸುರೇಶ್ ಕುಮಾರ್

ರಾಜಾಜಿನಗರ - ಸುರೇಶ್ ಕುಮಾರ್
ಪದ್ಮನಾಭನಗರ - ಆರ್.ಆಶೋಕ್
ಮಲ್ಲೇಶ್ವರಂ - ಅಶ್ವಥ್ ನಾರಾಯಣ
ಜಯನಗರ - ವಿಜಯ ಕಮಾರ್

ಈ ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿಗಳು ಹಾಲಿ ಶಾಸಕರಾಗಿದ್ದಾರೆ. ಸುರೇಶ್ ಕುಮಾರ್ ಮತ್ತು ಆರ್.ಅಶೋಕ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದರು.

ದಾಸರಹಳ್ಳಿ : ಎಸ್.ಮುನಿರಾಜು

ದಾಸರಹಳ್ಳಿ : ಎಸ್.ಮುನಿರಾಜು

ದಾಸರಹಳ್ಳಿ : ಎಸ್.ಮುನಿರಾಜು
ಬಸವನಗುಡಿ : ರವಿ ಸುಬ್ರಮಣ್ಯ
ಬೆಂಗಳೂರು : ಎಂ.ಕೃಷ್ಣಪ್ಪ
ಯಲಹಂಕ : ಎಸ್.ವಿಶ್ವನಾಥ್

ಈ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಲಿ ಶಾಸಕರು. ರವಿ ಸುಬ್ರಮಣ್ಯ ಅವರು ಎರಡು ಬಾರಿ ಗೆಲುವು ಕಂಡಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಬೊಮ್ಮನಹಳ್ಳಿ : ಸತೀಶ್ ರೆಡ್ಡಿ

ಬೊಮ್ಮನಹಳ್ಳಿ : ಸತೀಶ್ ರೆಡ್ಡಿ

ಮಹದೇವಪುರ : ಅರವಿಂದ ಲಿಂಬಾವಳಿ
ಹೆಬ್ಬಾಳ : ವೈ.ಎ.ನಾರಾಯಣಸ್ವಾಮಿ
ಸಿ.ವಿ.ರಾಮನ್ ನಗರ : ಸಿ.ರಘು
ಬೊಮ್ಮನಹಳ್ಳಿ : ಸತೀಶ್ ರೆಡ್ಡಿ

ಈ ಎಲ್ಲಾ ಅಭ್ಯರ್ಥಿಗಳು ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಅರವಿಂದ ಲಿಂಬಾವಳಿ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದರು.

ರಾಜರಾಜೇಶ್ವರಿ ನಗರದ ಟಿಕೆಟ್ ಯಾರಿಗೆ?

ರಾಜರಾಜೇಶ್ವರಿ ನಗರದ ಟಿಕೆಟ್ ಯಾರಿಗೆ?

ರಾಜರಾಜೇಶ್ವರಿ ನಗರ : ಶಿಲ್ಪಾ ಗಣೇಶ್ / ಮುನಿರಾಜು
ಮಹಾಲಕ್ಷ್ಮಿ ಲೇಔಟ್ : ಎಸ್.ಹರೀಶ್ / ಎಂ.ನಾಗರಾಜ್
ಸರ್ವಜ್ಞ ನಗರ : ಪದ್ಮನಾಭ ರೆಡ್ಡಿ / ಶರವಣ
ಗೋವಿಂದರಾಜ ನಗರ : ಶಾಂತ ಕುಮಾರಿ / ಉಮೇಶ್ ಶೆಟ್ಟಿ
ವಿಜಯನಗರ : ಅಶ್ವಥ್ ನಾರಾಯಣ ಗೌಡ / ರವೀಂದ್ರ

ಎಲ್ಲಾ ಕ್ಷೇತ್ರಗಳಿಗೂ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಸೂಚಿಸಿ ಪಟ್ಟಿಯನ್ನು ದೆಹಲಿಗೆ ಕಳಿಸಲಾಗುತ್ತದೆ. ಅಂತಿಮವಾಗಿ ಅಭ್ಯರ್ಥಿ ಯಾರು? ಎಂದು ಕೇಂದ್ರ ಚುನಾವಣಾ ಸಮಿತಿ ತೀರ್ಮಾನ ಕೈಗೊಳ್ಳಲಿದೆ.

ಬಿಬಿಎಂಪಿಯ ಮಾಜಿ ಮೇಯರ್, ಬಿಬಿಎಂಪಿ ಸದಸ್ಯೆ ಶಾಂತ ಕುಮಾರಿ ಮತ್ತು ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಅವರು ವಿಧಾನಸಭೆಗೆ ಪ್ರವೇಶ ಬಯಸಿದ್ದಾರೆ. ಯಾರಿಗೆ ಟಿಕೆಟ್ ಸಿಗಲಿದೆ? ಎಂದು ಕಾದು ನೋಡಬೇಕಾಗಿದೆ.

ಚಾಮರಾಜಪೇಟೆಯಲ್ಲಿ ಅಭ್ಯರ್ಥಿ ಯಾರು?

ಚಾಮರಾಜಪೇಟೆಯಲ್ಲಿ ಅಭ್ಯರ್ಥಿ ಯಾರು?

ಚಾಮರಾಜಪೇಟೆ : ಲಹರಿ ವೇಲು/ಬಿ.ವಿ.ಗಣೇಶ್/ ಲಕ್ಷ್ಮೀ ನಾರಾಯಣ
ಆನೇಕಲ್ : ಎ.ನಾರಾಯಣಸ್ವಾಮಿ / ಕೆ.ಶಿವರಾಂ
ಬಿಟಿಎಂ ಲೇಔಟ್ : ವಿವೇಕ್ ರೆಡ್ಡಿ / ಪ್ರಸಾದ್ ರೆಡ್ಡಿ
ಪುಲಿಕೇಶಿ ನಗರ : ಸಿ.ಮುನಿಕೃಷ್ಣ
ಶಾಂತಿ ನಗರ : ವಾಸುದೇವ ಮೂರ್ತಿ / ಶ್ರೀಧರ್ ಮೂರ್ತಿ ರೆಡ್ಡಿ

ಚಾಮರಾಜೇಟೆ ಕ್ಷೇತ್ರದಲ್ಲಿ ಲಹರಿ ಆಡಿಯೋ ಸಂಸ್ಥೆಗಳ ಮಾಲೀಕ ಲಹರಿ ವೇಲು ಅವರು ಅಭ್ಯರ್ಥಿಯಾಗು ಸಾಧ್ಯತೆ ಇದೆ. ಕೆಲವು ದಿನಗಳ ಹಿಂದೆ ಅವರು ಬಿಜೆಪಿ ಸೇರಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇಬ್ಬರ ಹೆಸರನ್ನು ಪಕ್ಷ ದೆಹಲಿಗೆ ಕಳಿಸಲಿದೆ. ಯಾರು ಕಣಕ್ಕಿಳಿಯಬೇಕು ಎಂದು ಹೈ ಕಮಾಂಡ್ ನಾಯಕರು ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.

ಶಿವಾಜಿನಗರ : ಕಟ್ಟಾ ಸುಬ್ರಮಣ್ಯ ನಾಯ್ಡು

ಶಿವಾಜಿನಗರ : ಕಟ್ಟಾ ಸುಬ್ರಮಣ್ಯ ನಾಯ್ಡು

ಕೆ.ಆರ್.ಪುರಂ : ನಂದೀಶ್ ರೆಡ್ಡಿ /ಪೂರ್ಣಿಮಾ
ಗಾಂಧಿ ನಗರ : ಎಂ.ಬಿ.ಶಿವಪ್ಪ /ಪೂರ್ಣಿಮಾ
ಚಿಕ್ಕಪೇಟೆ : ಡಾ.ಹೇಮಚಂದ್ರ ಸಾಗರ್, ಉದಯ ಗರುಡಾಚಾರ್ / ಕೆಂಪೇಗೌಡ
ಶಿವಾಜಿನಗರ : ಕಟ್ಟಾ ಸುಬ್ರಮಣ್ಯ ನಾಯ್ಡು / ನಿರ್ಮಲ್ ಕುಮಾರ್ ಸುರಾನಾ
ಬ್ಯಾಟರಾಯನಪುರ : ಮುನೀಂದ್ರ ಕುಮಾರ್

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಶಿವಾಜಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. 2008ರ ಚುನಾವಣೆಯಲ್ಲಿ ಜಯಗಳಿಸಿ ಯಡಿಯೂರಪ್ಪ ಸಂಪುಟದಲ್ಲಿ ಅವರು ಸಚಿವರಾಗಿದ್ದರು. ಆದರೆ, 2013ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.

ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹೆಬ್ಬಾಳಕ್ಕೆ ವಲಸೆ ಹೋಗಿದ್ದಾರೆ. ಅದಕ್ಕೂ ಮೊದಲು ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು.

English summary
Karnataka BJP has finalized 24 probable candidates list for Bengaluru city assembly constituency out of 28. All sitting MLA's will get ticket for 2018 Karnataka assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X