ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರನ್ನು ಮೋದಿ ಹೊಗಳಿದ್ದಕ್ಕೆ ವಿಶೇಷ ಅರ್ಥವಿಲ್ಲ: ಅನಂತ ಕುಮಾರ್

|
Google Oneindia Kannada News

Recommended Video

ದೇವೇಗೌಡ್ರ ಬಗ್ಗೆ ಮೋದಿ ಹೊಗಳಿಕೆಯನ್ನ ಸಮರ್ಥಿಸಿಕೊಂಡ ಸಚಿವ ಅನಂತ್ ಕುಮಾರ್ | Oneindia Kannada

ಬೆಂಗಳೂರು, ಮೇ 2: "ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಹೊಗಳಿದ್ದು ಶಿಷ್ಟಾಚಾರವಷ್ಟೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಶುರುವಾಯ್ತು ಮೋದಿ ಮೋಡಿ: ಚಿತ್ರಗಳಲ್ಲಿ ನೋಡಿ

"ದೇವೇಗೌಡರು ಮಾಜಿ ಪ್ರಧಾನಿಗಳು. ಮಾಜಿ ಪ್ರಧಾನಿಗಳ ಬಗ್ಗೆ ಒಳ್ಳೆಯ ಮಾತುಗಳನ್ನಾಡುವುದು ಶಿಷ್ಟಾಚಾರ. ಇದನ್ನಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ ಎನ್ನುವುದು ತಪ್ಪು. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 102 ಸ್ಥಾನಗಳನ್ನು ಗೆದ್ದಿದ್ದರೂ, ಅಪವಿತ್ರ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್" ಎಂದು ಅನಂತ ಕುಮಾರ್ ವ್ಯಂಗ್ಯವಾಡಿದ್ದಾರೆ.

ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅನಂತ ಕುಮಾರ್, 'ಐದು ವರ್ಷಗಳಿಂದ ಉತ್ತಮ ಆಡಳಿತ ನೀಡುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಕಾರಾತ್ಮಕ ಅಂಶಗಳ ಮೇಲೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ' ಎಂದರು.

ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ

Karnataka Elections: Anant Kumar defends Narendra Modis statement on Deve Gowda

"ಇಡೀ ರಾಜ್ಯದಲ್ಲಿ ಅಪರಾಧ ತಾಂಡವಾಡುತ್ತಿದೆ. ಸಿದ್ದರಾಮಯ್ಯ+ರಾಹುಲ್ ಗಾಂಧಿ= ವಿನಾಶ, ನರೇಂದ್ರ ಮೋದಿ+ ಬಿ ಎಸ್ ಯಡಿಯೂರಪ್ಪ= ವಿಕಾಸ" ಎಂಡು ಹೊಸ ಫಾರ್ಮುಲಾವೊಂದನ್ನು ಪರಿಚಯಿಸಿದರು.

English summary
Karnataka assembly elections 2018: Union minister Anant Kumar defends prime minister Narendra Modi's statement in which he praised former prime minister HD Deve Gowda, who is JDS supremo. Modi was addressing a rally in Udupi as part of his campaign for assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X