ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಮತಕ್ಕೆ ಹೊಡೆದಾಟ : ವಾಲಾ ಮುಂದೆ ಪರೇಡ್ ಗೆ ಕಾಂಗ್ರೆಸ್ ಚಿಂತನೆ

By Prasad
|
Google Oneindia Kannada News

ಬೆಂಗಳೂರು, ಮೇ 16 : ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದು ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮಾತ್ರವಲ್ಲ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲ ಮೂರು ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿದೆ.

ವಜುಭಾಯಿ ವಾಲಾ ಅವರು ಅತಿಹೆಚ್ಚು ಸ್ಥಾನಗಳನ್ನು ಗಳಿಸಿರುವ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಮೊದಲ ಅವಕಾಶವನ್ನು ನೀಡಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ. ಆದರೆ, ಬಿಜೆಪಿ ನಾಯಕರು ತಮಗೆ ಮೊದಲ ಅವಕಾಶ ನೀಡಬೇಕೆಂದು ಕೋರಿದ್ದಾರೆ ಅಷ್ಟೆ.

ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು

ಭಾರತೀಯ ಜನತಾ ಪಕ್ಷಕ್ಕೆ ಮೇಲ್ನೋಟಕ್ಕೆ ಬಹುಮತ ಸಾಬೀತುಪಡಿಸಲು ಸಂಖ್ಯೆಗಳಿಲ್ಲ. ಆದ್ದರಿಂದ, ನಮ್ಮ ಮೈತ್ರಿಕೂಟ (ಜೆಡಿಎಸ್ ಮತ್ತು ಕಾಂಗ್ರೆಸ್)ದಲ್ಲಿ ಬಿಜೆಪಿಗಿಂತ ಹೆಚ್ಚು ಶಾಸಕರಿರುವುದರಿಂದ ನಮಗೇ ಮೊದಲ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ದುಂಬಾಲು ಬಿದ್ದಿದ್ದಾರೆ.

Karnataka Elections : 3 options before Congress-JDS to prove majority

ಇದೀಗ ಬಿಜೆಪಿ ಬಳಿ 104 ಸ್ಥಾನಗಳಿವೆ. ಬಹುಮತ ಸಾಬೀತುಪಡಿಸಲು ಇನ್ನೂ 8 ಸ್ಥಾನಗಳ ಅವಶ್ಯಕತೆಯಿದೆ (222 ಸ್ಥಾನಗಳನ್ನು ತೆಗೆದುಕೊಂಡರೆ). ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ಜೊತೆಗೆ ತೆಗೆದುಕೊಂಡರೆ 78 + 38 = 116 ಸ್ಥಾನಗಳು ಇರುತ್ತವೆ. ಬಹುಮತಕ್ಕೆ ಇಷ್ಟು ಸಾಕು. ಆದ್ದರಿಂದ ನಮಗೇ ಮೊದಲ ಅವಕಾಶ ಕೊಡಬೇಕೆಂಬುದು ಕಾಂಗ್ರೆಸ್ ನಾಯಕರ ಆಗ್ರಹ.

ಸೋತು ಸುಣ್ಣವಾದ ಸಿದ್ದರಾಮಯ್ಯ ಸಂಪುಟದ 15 ಸಚಿವರುಸೋತು ಸುಣ್ಣವಾದ ಸಿದ್ದರಾಮಯ್ಯ ಸಂಪುಟದ 15 ಸಚಿವರು

ಆದರೆ, ವಜುಭಾಯಿ ವಾಲಾ ಅವರು ಪಕ್ಕಾ ಬಿಜೆಪಿ ನಾಯಕನಾಗಿರುವುದರಿಂದ ಯಡಿಯೂರಪ್ಪನವರಿಗೇ ಮೊದಲ ಅವಕಾಶ ಕೊಟ್ಟಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ಆರೋಪ. ಇದರ ವಿರುದ್ಧ ಹೋರಾಟ ನಡೆಸಲು ಅವರು ಈಗಾಗಲೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಮೂರು ಆಯ್ಕೆಗಳು ಅವರ ಮುಂದಿವೆ.

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕುಮಾರಸ್ವಾಮಿ-ಸಿದ್ದರಾಮಯ್ಯ ಆಂಡ್ ಟೀಮ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕುಮಾರಸ್ವಾಮಿ-ಸಿದ್ದರಾಮಯ್ಯ ಆಂಡ್ ಟೀಮ್

1) ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಮೊದಲ ಅವಕಾಶ ನೀಡಿದರೆ, ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟುವುದು. ಇದರಲ್ಲಿ ಕಾಂಗ್ರೆಸ್ಸಿಗೆ ಜಯ ಸಿಗುವ ಸಾಧ್ಯತೆಯಿಲ್ಲ. ಏಕೆಂದರೆ, ಬೊಮ್ಮಾಯಿ ಪ್ರಕರಣದಲ್ಲಿ ಅತಿದೊಡ್ಡ ಪಕ್ಷಕ್ಕೆ ಮೊದಲ ಅವಕಾಶ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತಿತ್ತು.

2) ಎರಡನೇ ಆಯ್ಕೆಯೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರನ್ನು ಕರ್ನಾಟಕದ ರಾಜ್ಯಪಾಲರ ಮುಂದೆ ಪರೇಡ್ ನಡೆಸಿ, ತಮ್ಮ ಬಳಿ ಬಹುಮತಕ್ಕೆ ಸಂಖ್ಯೆಗಳಿವೆ ಎಂದು ಋಜುವಾತು ಪಡಿಸುವುದು.

3) ಇದರಿಂದನೂ ನ್ಯಾಯ ಸಿಗದಿದ್ದರೆ, ಎಲ್ಲ ಶಾಸಕರನ್ನು ಕರೆದುಕೊಂಡು ಹೋಗಿ ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಿಸುವುದು.

English summary
Karnataka Assembly Elections 2018 : 3 options are there before Congress-JDS alliance to prove majority on the floor of assembly. Congress is demanding first opportunity should not be given to BJP as they don't have enough numbers to prove. They are comtemplating parading MLAs before governor or President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X