ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಉಸ್ತುವಾರಿ ಸಮಿತಿ ರಚನೆ ಮಾಡಿದ ಬಿಜೆಪಿ

|
Google Oneindia Kannada News

ಬೆಂಗಳೂರು, ಮಾರ್ಚ್ 26 : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಉಸ್ತುವಾರಿ ಸಮಿತಿಯನ್ನು ರಚನೆ ಮಾಡಿದೆ. ಸಂಸದ ಪಿ.ಸಿ.ಮೋಹನ್ ಸಮಿತಿಯ ಸಂಚಾಲಕರಾಗಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕರ್ನಾಟಕ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಮಿತಿ ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಸಮೀಕ್ಷೆ: 'ಮತ್ತೊಮ್ಮೆ ಕಾಂಗ್ರೆಸ್' 126 ಸೀಟುಗಳೊಂದಿಗೆ ಅಧಿಕಾರಕ್ಕೆಸಮೀಕ್ಷೆ: 'ಮತ್ತೊಮ್ಮೆ ಕಾಂಗ್ರೆಸ್' 126 ಸೀಟುಗಳೊಂದಿಗೆ ಅಧಿಕಾರಕ್ಕೆ

ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯ ಮಟ್ಟದ ನಾಯಕರು ಮತ್ತು ಪದಾಧಿಕಾರಿಗಳು ತಮ್ಮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಕ್ರಿಯರಾಗಲಿದ್ದಾರೆ. ಹಿರಿಯ ನಾಯಕರು ರಾಜ್ಯವ್ಯಾಪ್ತಿ ಪ್ರವಾಸ ಕೈಗೊಳ್ಳುತ್ತಾರೆ.

Karnataka elections 2018 : BJP forms in-charge committees

ಆದ್ದರಿಂದ, ವಿವಿಧ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವುದು ಅವರಿಗೆ ಕಷ್ಟವಾಗಲಿದೆ. ಅದಕ್ಕಾಗಿಯೇ ಹೊಸ ಉಸ್ತುವಾರಿ ಸಮಿತಿಯನ್ನು ರಚನೆ ಮಾಡಲಾಗಿದೆ. ರಾಜ್ಯದ ಹಲವು ಸಂಸದರು ಈ ಸಮಿತಿಗೆ ಸಂಚಾಲಕರಾಗಿದ್ದಾರೆ.

ಸಮೀಕ್ಷೆ: ಕೇಂದ್ರ ಕರ್ನಾಟಕ ಬಿಜೆಪಿಗೆ, ಉಳಿದೆಡೆ ಕಾಂಗ್ರೆಸ್ ನಾಗಾಲೋಟಸಮೀಕ್ಷೆ: ಕೇಂದ್ರ ಕರ್ನಾಟಕ ಬಿಜೆಪಿಗೆ, ಉಳಿದೆಡೆ ಕಾಂಗ್ರೆಸ್ ನಾಗಾಲೋಟ

ಉಸ್ತುವಾರಿ ಸಮಿತಿಗೆ : ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಪಕ್ಷದ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸುಬ್ಬನರಸಿಂಹ ಅವರು ಸಮಿತಿಯ ಸಂಚಾಲಕರಾಗಿದ್ದಾರೆ.

* ಹಣಕಾಸು ಸಮಿತಿ : ಲೆಹರ್ ಸಿಂಗ್, ಸುಬ್ಬನರಸಿಂಹ
* ರಾಷ್ಟ್ರ ನಾಯಕರ ಕಾರ್ಯಕ್ರಮ : ಹಿರೇಂದ್ರ ಶಾ
* ಮಾಧ್ಯಮ : ಅಶ್ವಥನಾರಾಯಣ, ಎ.ಎಚ್.ಆನಂದ್, ಎಸ್.ಪ್ರಕಾಶ್, ಶಾಂತಾರಾಂ
* ಸಾಮಾಜಿಕ ಜಾಲತಾಣ : ಬಾಲಾಜಿ ಶ್ರೀನಿವಾಸ್
* ಪ್ರಚಾರ ಸಾಹಿತ್ಯ : ಬೇಳೂರು ಸುದರ್ಶನ
* ಧಾರ್ಮಿಕ ಮುಖಂಡರ ಸಂಪರ್ಕ : ಶಿವಯೋಗಿ ಸ್ವಾಮಿ, ಶಂಕರ ಬಿದರಿ, ಅಬ್ಧುಲ್ ಅಜೀಜ್

English summary
Karnataka BJP has formed a in-charge committee to look Karnataka assembly elections 2018 preparations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X