ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಣ್ಣೀರಿಟ್ಟ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಮೇ 15 : ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಟ್ಟು 222(224) ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 104 ಸ್ಥಾನ ಬಿಜೆಪಿ, 78 ಸ್ಥಾನ ಕಾಂಗ್ರೆಸ್, 38 ಸ್ಥಾನ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳಿ 2 ಸ್ಥಾನ ಗೆಲ್ಲುವಲ್ಲಿ ಸಫಲವಾಗಿವೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಅತಂತ್ರ ವಿಧಾನಸಭೆ ತಲೆದೂರಿದೆ.

ಕರ್ನಾಟಕ ಚುನಾವಣೆ ಫಲಿತಾಂಶ : ಸಿದ್ದರಾಮಯ್ಯ ಬೆಂಗಳೂರಿನಲ್ಲಿದ್ದಾರೆ! ಕರ್ನಾಟಕ ಚುನಾವಣೆ ಫಲಿತಾಂಶ : ಸಿದ್ದರಾಮಯ್ಯ ಬೆಂಗಳೂರಿನಲ್ಲಿದ್ದಾರೆ!

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಲದೆ ಸರಿ ಸುಮಾರು 28ಕ್ಕೂ ಅಧಿಕ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217.

In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ

Karnataka Election Results, Trends 2018 LIVE Updates

ಮತ ಎಣಿಕೆ ಶುರುವಾಗಿಲ್ಲ, ಟ್ವೀಟಿಗರು ಆಗಲೇ ಭವಿಷ್ಯ ನುಡಿತಾವ್ರಲ್ಲ.!ಮತ ಎಣಿಕೆ ಶುರುವಾಗಿಲ್ಲ, ಟ್ವೀಟಿಗರು ಆಗಲೇ ಭವಿಷ್ಯ ನುಡಿತಾವ್ರಲ್ಲ.!

ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963. 2013ರಲ್ಲಿ ಶೇ 71.45ರಷ್ಟು ಮಾತ್ರ ಮತದಾನ ದಾಖಲಾಗಿತ್ತು. 2018ರಲ್ಲಿ ಶೇ 72ರಷ್ಟು ಮತದಾನವಾಗಿದೆ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣದ LIVE ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

ಮಲ್ಲೇಶ್ವರದಲ್ಲಿ ಡಾ. ಅಶ್ವತ್ಥ ನಾರಾಯಣ ಭರ್ಜರಿ ಜಯಮಲ್ಲೇಶ್ವರದಲ್ಲಿ ಡಾ. ಅಶ್ವತ್ಥ ನಾರಾಯಣ ಭರ್ಜರಿ ಜಯ

Newest FirstOldest First
1:27 PM, 16 May

ನಮ್ಮ ಸರ್ಕಾರ ಉತ್ತಮ ಆಡಳಿತ ನೀಡಿದ್ದರೂ ಜನರು ನಮಗೆ ಬಹುಮತ ನೀಡಿಲ್ಲ ಎಂದು ಕಣ್ಣೀರಿಟ್ಟ ಸಿದ್ದರಾಮಯ್ಯ
12:44 PM, 16 May

ನನಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಡೆಯಿಂದ ಆಫರ್ ಇದೆ. ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡಬೇಡಿ. ಅಂತಹ ಪ್ರಯತ್ನ ಮಾಡಿದರೆ ನಾವು ನಿಮ್ಮ ಪಕ್ಷದ ಡಬಲ್ ಶಾಸಕರನ್ನು ಕರೆತರಲು ಸಿದ್ಧ
12:13 PM, 16 May

'ಪಕ್ಷವು ನನ್ನನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆರಿಸಿದೆ. ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯಪಾಲರ ಪತ್ರ ಪಡೆದ ನಂತರ ಈ ಕುರಿತು ಮಾತನಾಡುತ್ತೇನೆ'- ಬಿ ಎಸ್ ಯಡಿಯೂರಪ್ಪ
12:00 PM, 16 May

ಬೆಂಗಳೂರಿನಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ನಡೆಸುತ್ತಿರುವ ಸಭೆ ಆನಂದ್ ಸಿಂಗ್, ಅಖಂಡ ಶ್ರೀನಿವಾಸ್, ನಾಗೇಂದ್ರ, ಭೀಮಾ ನಾಯ್ಕ್, ಎಂ ವೈ ಪಾಟೀಲ್ ಸೇರಿದಂತೆ 12 ಶಾಸಕರು ಗೈರು.
11:52 AM, 16 May

ವಿಧಾನಸಭೆ ಚುನಾವಣೆಯ ಫಲಿತಾಂಶ ನಿನ್ನೆ ಹೊರಬಿದ್ದಿದ್ದು ಅತಂತ್ರ ವಿಧಾನಸಭೆಯಾದ ಕಾರಣ ಇಂದು ಸಹ ಮೂರೂ ಪಕ್ಷಗಳು ಸರ್ಕಾರ ರಚನೆಗೆ ಕಸರತ್ತು ನಡೆಸಿವೆ.
7:06 PM, 15 May

ಸದ್ಯದ ಫಲಿತಾಂಶದ ಪ್ರಕಾರ ಬಿಜೆಪಿ 103, ಜೆಡಿಎಸ್ 38, ಕಾಂಗ್ರೆಸ್ 78 ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ
7:03 PM, 15 May

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಫಲಿತಾಂಶ ತಡೆ.
Advertisement
5:45 PM, 15 May

ರಾಜ್ಯಪಾಲರ ಬಳಿ ಸಮ್ಮಿಶ್ರ ಸರ್ಕಾರಕ್ಕೆ ಉಭಯ ಪಕ್ಷಗಳ ಒಪ್ಪಿಗೆ ಇದೆ. ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವಂತೆ ಕೋರಿದ ಜೆಡಿಎಸ್-ಕಾಂಗ್ರೆಸ್ ನಾಯಕರು.
5:34 PM, 15 May

ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು. ಸಿದ್ದರಾಮಯ್ಯ, ಜಿ ಪರಮೇಶ್ವರ್ ನೇತೃತ್ವದ ತಂಡದಿಂದ ರಾಜ್ಯಪಾಲರ ಭೇಟಿ
5:30 PM, 15 May

ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಒಂದು ವಾರಗಳ ಅವಕಾಶ ಕೋರಿದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ನಾಯಕರ ತಂಡ
5:24 PM, 15 May

ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರ ಸಂಭವ. ಕಾಂಗ್ರೆಸ್ಸಿಗರಿಗೆ ಸಂಪುಟದಲ್ಲಿ ಸ್ಥಾನ. ಉಪಮುಖ್ಯಮಂತ್ರಿ ಹುದ್ದೆ ಯಾರಿಗೆ ಎಂಬ ಕುರಿತು ಚರ್ಚೆಯಾಗಿಲ್ಲ
5:18 PM, 15 May

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಲು ಕಾಯುತ್ತಿರುವ ಎಚ್ ಡಿ ಕುಮಾರಸ್ವಾಮಿ
Advertisement
5:16 PM, 15 May

ರಾಜಭವನದ ಒಳಗೆ ತೆರಳಿ ರಾಜ್ಯಪಾಲ ವಾಜುಬಾಯ್ ವಾಲಾ ಅವರನ್ನು ಭೇಟಿಯಾದ ಬಿಜೆಪಿ ನಾಯಕರು.
5:02 PM, 15 May

ಇಂದು ಸಂಜೆ 5:30 ರಾಜ್ಯಪಾಲರನ್ನು ಭೇಟಿಯಾಗಲಿರುವ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ವರಿಷ್ಠರ ತಂಡ
5:01 PM, 15 May

5 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಬಿಜೆಪಿ ನಾಯಕರು
4:30 PM, 15 May

ಇಂದು ಸಂಜೆ 5-6 ಗಂಟೆಗೆ ರಾಜ್ಯಪಾಲರನು ಭೇಟಿಯಾಗಲಿರುವ ಎಚ್ ಡಿ ಕುಮಾರಸ್ವಾಮಿ
4:29 PM, 15 May

ಸಂಜೆ 6 ಗಂಟೆಗೆ ಭೇಟಿಯಾಗಲಿರುವ ಸಿದ್ದರಾಮಯ್ಯ -ಎಚ್ ಡಿ ಕುಮಾರಸ್ವಾಮಿ
4:23 PM, 15 May

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ
4:01 PM, 15 May

ರಾಜೀನಾಮೆ ನೀಡಲು ರಾಜಭವನಕ್ಕೆ ತೆರಳಿದ ಸಿದ್ದರಾಮಯ್ಯ.
3:58 PM, 15 May

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಸಿದ್ದರಾಮಯ್ಯ
3:53 PM, 15 May

ಹೆಚ್ ಡಿ ದೇವೇಗೌಡ ವರನ್ನು ಭೇಟಿ ಮಾಡಿದ ಜಾಫರ್ ಶರೀಫ್
3:49 PM, 15 May

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ. ಅತಂತ್ರ ವಿಧಾನಸಭೆ ಹಿನ್ನೆಲೆ. ಬಿಜೆಪಿ ಉಸ್ತುವಾರಿ ಮುರಳೀಧರರಾವ್ ನೇತೃತವದಲ್ಲಿ ಸಭೆ. ಬಿ ಎಸ್ ಯಡಿಯೂರಪ್ಪ, ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಮುಂತಾದವರ ಉಪಸ್ಥಿತಿ
3:09 PM, 15 May

ಮೈತ್ರಿ ಕುರಿತು ಎಚ್ ಡಿ ದೇವೇಗೌಡರೊಂದಿಗೆ ಫೋನಿನಲ್ಲಿ ಚರ್ಚೆ ನಡೆಸಿದ ಸೋನಿಯಾ ಗಾಂಧಿ.
3:06 PM, 15 May

ಇತ್ತ ಬಿಜೆಪಿಯಿಂದಲೂ ಕುಮಾರಸ್ವಾಮಿ ಭೇಟಿಗೆ ಹರಸಾಹಸ. ಮೈತ್ರಿ ಕುರಿತು ಚರ್ಚಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು
3:02 PM, 15 May

ಅತಂತ್ರ ವಿಧಾನಸಭೆಯ ಹಿನ್ನೆಲೆ: ದೇವೇಗೌಡ ನಿವಾಸಕ್ಕೆ ಆಗಮಿಸಿದ ಎಚ್ ಡಿ ಕುಮಾರಸ್ವಾಮಿ
2:58 PM, 15 May

ಜೆಡಿಎಸ್ ಗೆ ನಮ್ಮ ಬೆಂಬಲವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಅಚ್ಚರಿಯ ಬೆಳವಣಿಗೆ ಎನ್ನಿಸಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಜನರ ಅಭಿಪ್ರಾಯಕ್ಕೆ ತಲೆಬಾಗುತ್ತೇನೆ. ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
2:49 PM, 15 May

ರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಹಿನ್ನೆಲೆಯಲ್ಲಿ ದೇವೇಗೌಡರ ಆಪ್ತರನ್ನು ಸಂಪರ್ಕಿಸುತ್ತಿರುವ ಅಹ್ಮದ್ ಪಟೇಲ್. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಾಧ್ಯತೆಯ ಬಗ್ಗೆ ನಾಯಕರು ಚರ್ಚಿಸುವ ಸಾಧ್ಯತೆ.
1:51 PM, 15 May

ಯಮನಕರಡಿಯಲ್ಲಿ ಕಾಂಗ್ರೆಸ್ಸಿನ ಸತೀಶ್ ಜಾರಕಿಹೊಳಿ ಗೆಲುವು
1:50 PM, 15 May

ಅರಬಾವಿಯಲ್ಲಿ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಗೆಲುವು
1:48 PM, 15 May

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಣೆಬೆನ್ನೂರು ಪಕ್ಷೇತರ ಶಾಸಕ ಶಂಕರ್ ಅವರನ್ನು ಭೇಟಿಯಾದ ಬಿಜೆಪಿ ನಾಯಕರು. ಬಿಜೆಪಿಗೆ ಸೇರಲು ಸಿದ್ಧರಾದ ಶಂಕರ್
READ MORE

English summary
Karnataka Election Results 2018 Live Updates in Kannada : Get latest Trends, Results, Party wise swing for 222 (224) assembly constituencies. Polling for the 15th Karnataka assembly was held on May 12 The results announced on May 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X