ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ ಎಣಿಕೆ ಇನ್ನೂ ಶುರುವಾಗಿಲ್ಲ, ಟ್ವೀಟಿಗರು ಆಗಲೇ ಭವಿಷ್ಯ ನುಡಿತಾವ್ರಲ್ಲ.!

By Harshitha
|
Google Oneindia Kannada News

ಅಂತೂ ಮೇ 15 ಬಂದೇ ಬಿಟ್ಟಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಜನಾದೇಶ ಯಾರ ಪರವಾಗಿದೆ ಎಂಬುದನ್ನ ತಿಳಿಯಲು ಇನ್ನೂ ಕೆಲವೇ ಕೆಲವು ಕ್ಷಣಗಳು ಮಾತ್ರ ಬಾಕಿ ಇವೆ.

ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮೇ 12 ರಂದು ಮತದಾನ ನಡೆದಿತ್ತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ 28ಕ್ಕೂ ಹೆಚ್ಚು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಆ ಎಲ್ಲ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ ಆಗಲಿದೆ.

LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್ LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್

ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ ಆಗಲಿದೆ. ಮತ ಎಣಿಕೆ ಪ್ರಕ್ರಿಯೆ ಆರಂಭ ಆಗುವ ಮುನ್ನವೇ ನೆಟ್ಟಿಗರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ. ಅಂತಹ ಟ್ವೀಟ್ ಗಳ ಕಲೆಕ್ಷನ್ ಇಲ್ಲಿದೆ ನೋಡಿ...

ಈ ಘಟಾನುಘಟಿಗಳಲ್ಲಿ ಯಾರು ವಿಧಾನಸಭೆಗೆ, ಯಾರು ಮನೆಗೆ?ಈ ಘಟಾನುಘಟಿಗಳಲ್ಲಿ ಯಾರು ವಿಧಾನಸಭೆಗೆ, ಯಾರು ಮನೆಗೆ?

ಕಾಂಗ್ರೆಸ್ ಗೆಲ್ಲುತ್ತೆ.!

''ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಕಾಂಗ್ರೆಸ್ ಪಕ್ಷ 100% ಗೆಲ್ಲುತ್ತೆ'' ಅಂತ ಟ್ವೀಟಿಗರೊಬ್ಬರು ಭವಿಷ್ಯ ನುಡಿದಿದ್ದಾರೆ.

ಒಂದ್ವೇಳೆ ಮೋದಿ ಸೋತರೆ.?

''ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಮೋದಿ ಗೆದ್ದರೆ, ಮತ್ತೊಂದು ಗೆಲುವು ಸಿಕ್ಕ ಹಾಗೆ. ಒಂದ್ವೇಳೆ ಸೋತರೆ, ಅಂತ್ಯದ ಆರಂಭ ಶುರುವಾದ ಹಾಗೆ'' ಅಂತಿದ್ದಾರೆ ಟ್ವೀಟಿಗರು.

ಬಿಜೆಪಿ ಗೆಲ್ಲಬೇಕು.!

''ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಬಿಜೆಪಿ ಗೆಲ್ಲಲಿ ಎನ್ನುವುದೇ ನನ್ನ ಆಶಯ'' ಅಂತ ಹೇಳುವವರೂ ಇದ್ದಾರೆ.

ಊಹೆ ಶುರವಾಗಿದೆ.!

''ಜೆ.ಡಿ.ಎಸ್ ಪಕ್ಷಕ್ಕೆ ಅಬ್ಬಬ್ಬಾ ಅಂದ್ರೆ 20 ಸೀಟ್ ಬರುವುದು ಹೆಚ್ಚು'' ಎಂದು ಟ್ವೀಟಿಗರು ಊಹಿಸಿದ್ದಾರೆ.

ಮಾರ್ಕ್ ಮಾಡಿ ಇಟ್ಟುಕೊಳ್ಳಿ.!

''ಬಿಜೆಪಿ ಇಂದು 130 ಸೀಟ್ ಗೆಲ್ಲುತ್ತದೆ. ಬೇಕಾದ್ರೆ, ಈ ಟ್ವೀಟ್ ನ ಮಾರ್ಕ್ ಮಾಡಿ ಇಟ್ಟುಕೊಳ್ಳಿ'' ಎಂದು ಆದಿತ್ಯ ಎಂಬುವರು ಟ್ವೀಟ್ ಮಾಡಿದ್ದಾರೆ.

English summary
Karnataka Election Results 2018: Twitterati predicts Election results before counting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X