ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಲೇವಡಿ ಮಾಡಿದವರ ಮುಂದೆಯೇ ಇಂದು ಮಂಡಿಯೂರಿದ ಸಿದ್ದು.!

By Harshitha
|
Google Oneindia Kannada News

ರಾಜಕೀಯದಲ್ಲಿ ಯಾರು ಯಾವಾಗ ಶತ್ರುಗಳಾಗಿರುತ್ತಾರೆ, ಮಿತ್ರರಾಗಿ ಕೈ ಜೋಡಿಸುತ್ತಾರೆ ಅಂತ ಹೇಳುವುದೇ ಕಷ್ಟ. ಮೊನ್ನೆ ಮೊನ್ನೆವರೆಗೂ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರನ್ನ ಕಂಡರೆ ಸಿದ್ದರಾಮಯ್ಯ ಉರಿದು ಬೀಳುತ್ತಿದ್ದರು.

ಇನ್ನೂ ಎಚ್.ಡಿ.ಕುಮಾರಸ್ವಾಮಿ ಕೂಡ ಅಷ್ಟೇ. ಸಿದ್ದರಾಮಯ್ಯ ವಿರುದ್ಧ ಎಷ್ಟೋ ಬಾರಿ ವಾಗ್ದಾಳಿ ನಡೆಸಿದ್ದರು. ಆದ್ರೆ, ಇಂದಿನ ಪರಿಸ್ಥಿತಿ ಹಾಗಿಲ್ಲ. ಇಬ್ಬರೂ ಸೇರಿ ಸಮಿಶ್ರ ಸರ್ಕಾರ ಮಾಡಲು ಹೊರಟಿದ್ದಾರೆ. ಏನೂ ಆಗೇ ಇಲ್ಲ ಎನ್ನುವ ತರಹ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅಕ್ಕ-ಪಕ್ಕದಲ್ಲಿ ನಿಂತುಕೊಂಡು ಜಂಟಿ-ಪತ್ರಿಕಾಗೋಷ್ಟಿ ನಡೆಸಿದ್ದಾರೆ.

ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಮಿಷ: ಕುಮಾರಸ್ವಾಮಿ ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಮಿಷ: ಕುಮಾರಸ್ವಾಮಿ

''ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಬೇಷರತ್ ಬೆಂಬಲ ನೀಡುತ್ತೇವೆ'' ಅಂತ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೆ, ಇದೇ ಸಿದ್ದರಾಮಯ್ಯ ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏನೇನೆಲ್ಲ ಮಾತನಾಡಿದ್ದರು ಗೊತ್ತಾ.?

ಅಯ್ಯೋ ಪಾಪ: ಕಾಂಗ್ರೆಸ್ ಸೋತಿದ್ದಕ್ಕೆ ಕಣ್ಣೀರಿಟ್ಟ ಸಿದ್ದರಾಮಯ್ಯ.! ಅಯ್ಯೋ ಪಾಪ: ಕಾಂಗ್ರೆಸ್ ಸೋತಿದ್ದಕ್ಕೆ ಕಣ್ಣೀರಿಟ್ಟ ಸಿದ್ದರಾಮಯ್ಯ.!

ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ನಡೆಸಿದ್ದ ವಾಕ್ಸಮರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿರಿ...

ಇವರಿಂದ ನಾನು ಪಾಠ ಕಲಿಯಬೇಕಾ.?

ಇವರಿಂದ ನಾನು ಪಾಠ ಕಲಿಯಬೇಕಾ.?

''ಎಚ್.ಡಿ.ಕುಮಾರಸ್ವಾಮಿ ಏನೇನೋ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಇವರಿಂದ ಪಾಠ ಕಲಿಯಬೇಕಾ ನಾನು.? ಕುಮಾರಸ್ವಾಮಿ ರಾಜಕೀಯಕ್ಕೆ ಬರುವ ಮುಂಚಿಯೇ ನಾನು ಮಂತ್ರಿ ಆಗಿದ್ದೆ'' ಎಂದು ಹಿಂದೊಮ್ಮೆ ಗರ್ವದಿಂದ ಹೇಳಿಕೆ ನೀಡಿದ್ದರು ಸಿದ್ದರಾಮಯ್ಯ.

ನುಡಿದಂತೆ ನಡೆಯೋದು ಬಿಟ್ಟು, ಇದೇನು ರಾಜಕೀಯ ಲಾಲಸೆ ಕುಮಾರಣ್ಣ!ನುಡಿದಂತೆ ನಡೆಯೋದು ಬಿಟ್ಟು, ಇದೇನು ರಾಜಕೀಯ ಲಾಲಸೆ ಕುಮಾರಣ್ಣ!

ಕಮೋಡ್ ಕೂಡ ಬಿಟ್ಟು ಬರಲಿಲ್ಲ.!

ಕಮೋಡ್ ಕೂಡ ಬಿಟ್ಟು ಬರಲಿಲ್ಲ.!

''ಕುಮಾರಸ್ವಾಮಿ 'ಕುಮಾರ ಪರ್ವ', 'ಮನೆ ಮನೆಗೆ ಕುಮಾರಣ್ಣ' ಅಂತೆಲ್ಲ ಮಾಡಿದರು. ಅವರ ಕೈಯಲ್ಲಿ ಎಲ್ಲೂ ಹೋಗಲು ಆಗಲ್ಲ. 20 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ, ಮಾಡಬಾರದ್ದನ್ನೆಲ್ಲ ಮಾಡಿಬಿಟ್ಟಿದ್ದೀನಿ ಅಂತ ಅವರು ಹೇಳಿಕೊಳ್ಳುತ್ತಾರೆ. ಅವರೇನು ಮಾಡಿದ್ದಾರೋ, ಅವರಿಗೇ ಗೊತ್ತಿಲ್ಲ. ಗ್ರಾಮ ವಾಸ್ತವ್ಯ ಮಾಡುವಾಗ, ಮನೆಗಳಿಗೆ ಕಮೋಡ್ ತೆಗೆದುಕೊಂಡು ಹೋಗುತ್ತಿದ್ದರು. ವಾಪಸ್ ಹೊರಟಾಗ ಕನಿಷ್ಟ ಕಮೋಡ್ ನೂ ಅಲ್ಲೇ ಬಿಟ್ಟು ಬರಲಿಲ್ಲ. ಅಂಥವರು ಕುಮಾರಸ್ವಾಮಿ'' ಅಂತ ಲೇವಡಿ ಮಾಡಿದ್ದರು ಸಿದ್ದರಾಮಯ್ಯ

ಹೆಚ್.ಡಿ.ಕೆ ಮುಖ್ಯಮಂತ್ರಿಯಾದ್ರೆ, ಎಂಬ ಪ್ರಶ್ನೆಗೆ ಜಮೀರ್ ಕೊಟ್ಟ ಉತ್ತರ ಹೆಚ್.ಡಿ.ಕೆ ಮುಖ್ಯಮಂತ್ರಿಯಾದ್ರೆ, ಎಂಬ ಪ್ರಶ್ನೆಗೆ ಜಮೀರ್ ಕೊಟ್ಟ ಉತ್ತರ

ಕುಮಾರಸ್ವಾಮಿ ಹತಾಶರಾಗಿದ್ದಾರೆ

ಕುಮಾರಸ್ವಾಮಿ ಹತಾಶರಾಗಿದ್ದಾರೆ

''ಈಗಲೂ ಹೇಳುವೆ ಅವರಪ್ಪನಾಣೆ ಗೆಲ್ಲಲ್ಲ ಅವರು (ಕುಮಾರಸ್ವಾಮಿ). ಯಡಿಯೂರಪ್ಪ ನೂ ಸೋಲಿಸ್ತೀನಿ, ಕುಮಾರಸ್ವಾಮಿ ನೂ ಸೋಲಿಸ್ತೀನಿ. ಏನು ಅವರಿಬ್ಬರಿಗೇನಾ ಶಕ್ತಿ ಇರೋದು.? ನನಗೂ ಶಕ್ತಿ ಇದೆ. ಕುಮಾರಸ್ವಾಮಿ ಹಾಗೂ ದೇವೇಗೌಡ ಹತಾಶರಾಗಿದ್ದಾರೆ'' ಅಂತೆಲ್ಲ ಹೇಳಿದ್ದರು ಸಿದ್ದರಾಮಯ್ಯ

ಜೆಡಿಎಸ್ - ಕಾಂಗ್ರೆಸ್ ದೋಸ್ತಿ: 5 ವರ್ಷವೂ ಎಚ್ಡಿಕೆ ಸಿಎಂ!ಜೆಡಿಎಸ್ - ಕಾಂಗ್ರೆಸ್ ದೋಸ್ತಿ: 5 ವರ್ಷವೂ ಎಚ್ಡಿಕೆ ಸಿಎಂ!

ಕಿಂಗ್ ಅಲ್ವಾ.?

ಕಿಂಗ್ ಅಲ್ವಾ.?

''ಕುಮಾರಸ್ವಾಮಿ ಈಗ ಕಿಂಗ್ ಅಲ್ವಾ.? ಕಿಂಗ್ ಮೇಕರ್ ಆಗ್ಬಿಟ್ನಾ ಮತ್ತೆ.? ಇಲ್ಲಿಯವರೆಗೂ ಕಿಂಗ್... ಕಿಂಗ್... ಕಿಂಗ್ ಅಂತ ಕುಮಾರಸ್ವಾಮಿ ಹೇಳ್ತಿದ್ರು. ಈಗ ಕಿಂಗ್ ಮೇಕರ್ ಆಗ್ಬಿಟ್ರಾ.?'' ಅಂತ ಸಿದ್ದರಾಮಯ್ಯ ಕಿಚಾಯಿಸಿದ್ದರು.

ನನ್ನನ್ನ ದೇವೇಗೌಡ ಬೆಳೆಸಿಲ್ಲ

ನನ್ನನ್ನ ದೇವೇಗೌಡ ಬೆಳೆಸಿಲ್ಲ

''ಸಿದ್ದರಾಮಯ್ಯನ ನಾನ್ ಬೆಳೆಸಿದ್ದು ಅಂತ ದೇವೇಗೌಡ ಹೇಳಿಕೊಳ್ತಾರೆ. ಆದ್ರೆ, ನನ್ನನ್ನ ಸಚಿವ ಮಾಡಿದವರು ರಾಮಕೃಷ್ಣ ಹೆಗಡೆ. ದೇವೇಗೌಡ ಪಾತ್ರ ಇದರಲ್ಲಿ ಏನೂ ಇಲ್ಲ. ಅವರೇನು ನನ್ನನ್ನ ಬೆಳೆಸಿಲ್ಲ'' ಎಂದಿದ್ದರು ಸಿದ್ದರಾಮಯ್ಯ.

ಮಂಡಿಯೂರಿದ ಸಿದ್ದರಾಮಯ್ಯ

ಮಂಡಿಯೂರಿದ ಸಿದ್ದರಾಮಯ್ಯ

''ಒಬ್ಬ ರೈತನ ಮಗನಂತೆ. ಮತ್ತೊಬ್ಬ ಪ್ರಾಮಾಣಿಕ ಮಣ್ಣಿನ ಮಗನಂತೆ. ಹಾಗಾದ್ರೆ, ನಾವ್ಯಾರೂ ಮಣ್ಣಿನ ಮಕ್ಕಳು ಅಲ್ವೇ.? ನಿಜವಾದ ಮಣ್ಣಿನ ಮಗ ನಾನೇ'' ಎಂದು ಎದೆತಟ್ಟಿಕೊಂಡು ಹೇಳಿದ್ದ ಸಿದ್ದರಾಮಯ್ಯ ಇಂದು ದಿಕ್ಕೆಟ್ಟಿದ್ದಾರೆ. ಯಾವ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನ ಸಿದ್ದರಾಮಯ್ಯ ಲೇವಡಿ ಮಾಡುತ್ತಿದ್ದರೋ, ಅದೇ ಕುಮಾರಸ್ವಾಮಿ ಹಾಗೂ ದೇವೇಗೌಡರ ಮುಂದೆ ಮಂಡಿಯೂರಿ ಸಮಿಶ್ರ ಸರ್ಕಾರ ರಚಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

English summary
Karnataka Election Results 2018: Siddaramaiah joins hands with HD Kumaraswamy and HD Devegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X