ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನಕ್ಕೂ 48 ಗಂಟೆ ಮೊದಲು ಕರ್ನಾಟಕದಲ್ಲಿ ಮದ್ಯ ನಿಷೇಧ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Karnataka Elections 2018 : ಮದ್ಯ ಪ್ರಿಯರಿಗೆ ಶಾಕ್! ಮತದಾನಕ್ಕೂ 48 ಗಂಟೆಗಳ ಮುಂಚೆ ಬಾರ್ ಗಳು ಬಂದ್

ಬೆಂಗಳೂರು, ಏಪ್ರಿಲ್ 27: ವಿಧಾನಸಭೆ ಚುನಾವಣೆಯನ್ನು ಎದುರು ನೋಡುತ್ತಿರುವ ಕರ್ನಾಟಕದಲ್ಲಿ ಮದ್ಯ ಪ್ರಿಯರು ಈಗಾಗಲೇ ಮದ್ಯ ಸಿಗದೆ ಪರದಾಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಹಲವು ಬಾರ್ ಗಳು ಸೀಮಿತ ಮದ್ಯ ಪೂರೈಕೆಯಿಂದ ಎಣ್ಣೆ ಕೊರತೆ ಅನುಭವಿಸುತ್ತಿವೆ.

ಇವೆಲ್ಲದರ ಮಧ್ಯೆ ಚುನಾವಣೆಗೆ 48 ಗಂಟೆಗಳ ಮೊದಲು ಕರ್ನಾಟಕದ ಗಡಿ ಜಿಲ್ಲೆಗಳೂ ಸೇರಿ ರಾಜ್ಯದಾದ್ಯಂತ ಬಾರ್ ಗಳು ಬಂದ್ ಆಗಲಿವೆ.

ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆ

ಇದೇ ಸಂದರ್ಭದಲ್ಲಿ ಕರ್ನಾಟಕದ ಚುನಾವಣೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಪಕ್ಕದ ತೆಲಂಗಾಣ ರಾಜ್ಯವೂ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ತೆಲಂಗಾಣ ಮುಖ್ಯ ಕಾರ್ಯದರ್ಶಿ ಎಸ್.ಕೆ. ಜೋಶಿ, ಈಗಾಗಲೇ ಚುನಾವಣಾ ಕಾರ್ಯಕ್ಕೆ 800 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ. ಇನ್ನು ಕರ್ನಾಟಕದ ಗಡಿಗಳಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ, ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ.

Karnataka election: No booze, 48 hours before polling

ಇದೇ ವೇಳೆ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಷ್ಠಾಧಿಕಾರಿಗಳಿಗೆ ವಿವರವಾದ ಸೂಚನೆಗಳನ್ನು ನೀಡಲಾಗುತ್ತದೆ. ಕರ್ನಾಟಕದ ಚುನಾವಣೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಕರ್ನಾಟಕದ ಗಡಿಯಲ್ಲಿರುವ ತೆಲಂಗಾಣದ ಜಿಲ್ಲೆಗಳಾದ ಮೆಹಬೂಬ್ ನಗರ, ಗಡ್ವಾಲ್, ಸಂಗಾರೆಡ್ಡಿ, ಕಮ್ಮಾರೆಡ್ಡಿ, ವಿಕರಾಬಾದ್ ನಲ್ಲೂ ಮದ್ಯದ ಅಂಗಡಿಗಳು ಮತದಾನಕ್ಕೂ 48 ಗಂಟೆಗಳ ಮೊದಲು ಬಂದ್ ಆಗಲಿವೆ ಎಂದಿದ್ದಾರೆ.

English summary
Tipplers would have trouble in accessing liquor in the poll bound state of Karnataka. While most liquor shops have already started running dry with limited stock being supplied, a decision has been taken to shut down liquor shops along the bordering districts of Karnataka, 48 hours ahead of polling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X