ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ದ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ ಜಿಗ್ನೇಶ್ ಮೇವಾನಿ

|
Google Oneindia Kannada News

Recommended Video

Karnataka Elections 2018 : ಕಾಂಗ್ರೆಸ್ ನ ಕಾಪಾಡಲು ಬಂದ ಜಿಗ್ನೇಶ್ ಮೇವಾನಿ ಹಾಗು ನಟ ಪ್ರಕಾಶ್ ರೈ

ಬೆಂಗಳೂರು, ಏಪ್ರಿಲ್ 03 : ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕರ್ನಾಟಕದಲ್ಲಿ ಪ್ರಚಾರ ಆರಂಭವಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಡಿ ಎಂದು ಜಿಗ್ನೇಶ್ ಮೇವಾನಿ ಮತ್ತು ಪ್ರಕಾಶ್ ರೈ ಪ್ರಚಾರ ನಡೆಸುತ್ತಿದ್ದಾರೆ.

ಬಹುಭಾಷ ನಟ ಪ್ರಕಾಶ್ ರೈ ಮತ್ತು ಗುಜರಾತ್‌ನ ವಡಗಾಂ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಇಬ್ಬರು ಪ್ರವಾಸ ನಡೆಸುತ್ತಿದ್ದು, ಬಿಜೆಪಿಗೆ ಮತ ನೀಡಬೇಡಿ ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಜಿಗ್ನೇಶ್ ಸಂಕಲ್ಪಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಜಿಗ್ನೇಶ್ ಸಂಕಲ್ಪ

Karnataka election : Jignesh Mevani, Prakash Raj campaign against BJP

ಗುರುವಾರ 'ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನ'ಕ್ಕೆ ಜಿಗ್ನೇಶ್ ಮೇವಾನಿ ಶಿರಸಿಯಲ್ಲಿ ಚಾಲನೆ ನೀಡಿದರು. 'ಸಂಘ ಪರಿವಾರವನ್ನು ಒಳಗೊಂಡ ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಪ್ರಜಾಪ್ರಭುತ್ವದ ಅವನತಿ ನಿಶ್ಚಿತ. ಹೀಗಾಗಿ ಬಿಜೆಪಿಗೆ ಲಾಭವಾಗದ ರೀತಿಯಲ್ಲಿ ಮತ ಚಲಾಯಿಸಬೇಕು' ಎಂದು ಕರೆ ನೀಡಿದರು.

'ಮೋದಿಗೆ ಯಾರಾದರೂ 'ಐ ಲವ್ ಯೂ' ಹೇಳಿದ್ದಾರಾ?: ಜಿಗ್ನೇಶ್ ಮೇವಾನಿ'ಮೋದಿಗೆ ಯಾರಾದರೂ 'ಐ ಲವ್ ಯೂ' ಹೇಳಿದ್ದಾರಾ?: ಜಿಗ್ನೇಶ್ ಮೇವಾನಿ

'ಏಪ್ರಿಲ್ 14ರಂದು ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಬಿಜೆಪಿ ನಾಯಕರು ಅಂಬೇಡ್ಕರ್ ಅವರ ಭಾವಚಿತ್ರ, ಪುತ್ಥಳಿಯನ್ನು ಮುಟ್ಟದಂತೆ ನೋಡಿಕೊಳ್ಳಿ' ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಜಿಗ್ನೇಶ್ ಮೇವಾನಿ ಹೇಳಿದ್ದೇನು?

* 'ನರೇಂದ್ರ ಮೋದಿ ಅವರೇ 2 ಕೋಟಿ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಾಗದಿದ್ದರೆ ಹಿಮಾಲಯಕ್ಕೆ ಹೋಗಿ ಅಲ್ಲಿಯೇ ಸೆಟೆಲ್ ಆಗಿಬಿಡಿ'.

* 'ನಮಗೆ ಉದ್ಯೋಗ ನೀಡದಿದ್ದರೂ ಪರವಾಗಿಲ್ಲ. ದಶಕಗಳ ಕಾಲದಿಂದ ಚಡ್ಡಿ ಹಾಕಿಕೊಂಡು ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುತ್ತಿರುವ ಸಂಘ ಪರಿವಾರದ ಯುವಕರಿಗೆ ಉದ್ಯೋಗ ಕೊಡಿ'.

* 'ಹಿಂದೂ ರಾಷ್ಟ್ರ ನಿರ್ಮಿಸುವ ಬಗ್ಗೆ ಬಿಜೆಪಿ ಮುಖಂಡರಿಗೆ ನಿಜಕ್ಕೂ ಕಳಕಳಿ ಇದ್ದರೆ ಸಂಘ ಪರಿವಾರದಲ್ಲಿನ ಯುವಕರಿಗೆ ಉದ್ಯೋಗ ಅಥವ ಸ್ವಯಂ ಉದ್ಯೋಗ ಕೈಗೊಳ್ಳಲು 2 ಕೋಟಿ ಸಾಲ ಸೌಲಭ್ಯ ನೀಡಲಿ'

* 'ಏಪ್ರಿಲ್ 15ರಂದು ಚುನಾವಣಾ ಪ್ರಚಾರ ಮಾಡಲು ನರೇಂದ್ರ ಮೋದಿ ಅವರು ಬರುತ್ತಾರೆ. ಆಗ ಖುರ್ಚಿಗಳನ್ನು ಎಸೆಯಿರಿ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಅವರು ಹೇಳಿಕೆ ನೀಡಿ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ'

English summary
Dalit leader and Gujarat MLA Jignesh Mevani and Actor Prakash Raj touring in Karnataka and campaigning against BJP ahead of the Karnataka assembly elections 2018. In a rally Chitradurga Jignesh Mevani said, that, Throw chairs during PM Modi's rally. He has duped the entire nation and created no jobs after promising 2 crore jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X