ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೆಡೆ ತಾಂತ್ರಿಕ ತೊಂದರೆ, ಮತದಾನ ಬಹುತೇಕ ಯಶಸ್ವಿ: ಸಂಜೀವ್‌ ಕುಮಾರ್‌

By Manjunatha
|
Google Oneindia Kannada News

ಬೆಂಗಳೂರು, ಮೇ 12: ಕರ್ನಾಟಕದ ವಿಧಾನಸಭಾ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ 70ಕ್ಕೂ ಹೆಚ್ಚು ಮತದಾನ ಆಗಿದೆ, ಆದರೆ ನಿಖರವಾದ ಅಂಕಿ ಸಂಖ್ಯೆ ಇನ್ನೂ ದೊರೆತಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್‌ ಕುಮಾರ್‌ ಹೇಳಿದರು.

ಮತದಾನ ಪ್ರಕ್ರಿಯೆ ಮುಗಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಕೆಲವೆಡೆ ಇವಿಎಂ ಮತ್ತು ವಿವಿಪ್ಯಾಟ್‌ಗಳು ತೊಂದರೆ ಕೊಟ್ಟಿವೆ 57.786 ವಿವಿಪ್ಯಾಟ್‌ಗಳಲ್ಲಿ ಶೇ 1.02% ವಿವಿಪ್ಯಾಟ್‌ಗಳನ್ನು ಬದಲಾಯಿಸಬೇಕಾಯಿತು ಎಂದು ಅವರು ಹೇಳಿದರು.

LIVE:6 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 70%LIVE:6 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 70%

ಚುನಾವಣಾ ಸಿಬ್ಬಂದಿ, ಮೇಲ್ವಿಚಾರಕರು ಮತಯಂತ್ರಗಳ ಸಂಖ್ಯೆ, ಭದ್ರತೆ ಇನ್ನಿತರ ಮಾಹಿತಿಗಳ ಬಗ್ಗೆ ಮಾತನಾಡಿದ ಅವರು, ಎಲ್ಲ ಚುನಾವಣಾ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

Karnataka election commissioner Sanjeev Kumar press meet

ಇವಿಎಂ ಮತ್ತು ವಿವಿಪ್ಯಾಟ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ ನಡೆಯದ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಗ್ರಾಮ ಮತಗಟ್ಟೆ ಸಂಕ್ಯೆ 156ರಲ್ಲಿ ಮರು ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಂಜೀವ್ ಕುಮಾರ್ ಅವರು ಹೇಳಿದರು.

ಕೆಟ್ಟ ಮತ ಯಂತ್ರ, ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರುಮತದಾನಕೆಟ್ಟ ಮತ ಯಂತ್ರ, ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರುಮತದಾನ

ಲೊಟ್ಟೆಗೊಲ್ಲಹಳ್ಳಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯನ್ನು ಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಮೇ 14ರಂದು ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರು ಮತದಾನ ಮಾಡಲಾಗುವುದು, ಈಗಾಗಲೇ ಮತ ಹಾಕಿ ಬೆರಳಿಗೆ ಶಾಯಿ ಹಾಕಿಸಿಕೊಂಡವರಿಗೆ ಬೇರೆ ಬೆರಳಿಗೆ ಶಾಯಿ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.

English summary
election commission Karnataka CEO Sanjeev Kumar said almost peacefull polling has been done. Some where EVM and VVPAT gave trouble but almost good polling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X