ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಸೃಷ್ಟಿಯಲ್ಲಿ ರಾಜ್ಯವೇ ನಂ.1, ಇ ಆಡಳಿತ ಅವಲೋಕನ

ಕರ್ನಾಟಕ, ದೇಶದ ನಕ್ಷೆಯಲ್ಲಿ ವಿಸ್ತೀರ್ಣದಲ್ಲಿ 8 ನೆಯ ದೊಡ್ಡರಾಜ್ಯವಾಗಿದ್ದು ಅಸೋಚಾಮ್ ವರದಿಯಂತೆ ಉದ್ಯೋಗ ಸೃಷ್ಟಿಯಲ್ಲಿ ರಾಜ್ಯವೇ ನಂ.1 ಸ್ಥಾನದಲ್ಲಿದೆ. ಇ ಆಡಳಿತದ ಬಗ್ಗೆ ಅವಲೋಕನ

By Mahesh
|
Google Oneindia Kannada News

ಕರ್ನಾಟಕ, ದೇಶದ ನಕ್ಷೆಯಲ್ಲಿ ವಿಸ್ತೀರ್ಣದಲ್ಲಿ 8ನೇ ದೊಡ್ಡ ರಾಜ್ಯ ಎನ್ನುವ ಹೆಗ್ಗಳಿಕೆಯ ಹಾಗೂ ಜನಸಂಖ್ಯೆಯಲ್ಲಿ ಒಂಭತ್ತನೆಯ ಸ್ಥಾನದಲ್ಲಿರುವ ಅತಿ ವೇಗವಾಗಿ ಕೈಗಾರೀಕರಣಗೊಳ್ಳುತ್ತಿರುವ ರಾಜ್ಯ.

'ಕರ್ನಾಟಕದಲ್ಲಿ ಬಂಡವಾಳ ಹೂಡಿ, ನೀವೂ ಬೆಳೆಯಿರಿ ಮತ್ತು ಕೈಗಾರಿಕಾ ಕ್ಷೇತ್ರವನ್ನು ಬೆಳೆಸಿರಿ' ಎನ್ನುವ ಆಶಯದೊಂದಿಗೆ ಈಚೆಗಷ್ಟೇ ಬೆಂಗಳೂರಿನಲ್ಕಲಿ ನಡೆದ 'ಇನ್ವೆಸ್ಟ್ ಕರ್ನಾಟಕ- 2016' ಅಪೂರ್ವ ಯಶಸ್ಸು ಕಂಡಿದೆ.

ಕೈಗಾರಿಕಾ ಕ್ಷೇತ್ರದಲ್ಲಿ ವಿವಿಧ ಕೌಶಲಗಳನ್ನು, ನಾವೀನ್ಯತೆ- ವೈಪುಣ್ಯತೆಗಳನ್ನು ಅಳವಡಿಸಿಕೊಂಡು ದೇಶದ ಕೈಗಾರಿಕರಂಗದಲ್ಲಿ 'ತಾಂತ್ರಿಕ ಕೌಶಲ'ಕ್ಕೆ ಮಾದರಿಯಾಗಿ ತನ್ನದೇ ಛಾಪು ಮೂಡಿಸಿರುವಂಥತಹ ಹೆಮ್ಮೆಯ ರಾಜ್ಯ ಕರ್ನಾಟಕ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉದ್ದಿಮೆ, ಕಂಪ್ಯೂಟರ್ ಸಾಫ್ಟ್ ವೇರ್ ಕ್ಷೇತ್ರಗಳಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿ ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿರುವಂಥ ರಾಜ್ಯ.

ರಾಜ್ಯದ ಮಾಹಿತಿ ತಂತ್ರಜ್ಞಾನದ ಸರ್ವಾಂಗೀಣ ಅಭಿವೃದ್ಧಿಗೆ ಉತ್ಸಾಹಿ ಉದ್ದಿಮೆದಾರರು, ತಾಂತ್ರಿಕ ಪರಿಣಿತರ ಲಭ್ಯತೆ ಅಷ್ಟೇ ಅಲ್ಲದೆ ರಾಜ್ಯದ ಪರಿಸರ ಸ್ನೇಹಿ ವಾತಾವರಣ, ಕೈಗಾರಿಕಾ ಸ್ನೇಹಿ ನೀತಿಗಳು ಕೂಡಾ ಕಾರಣವಾಗಿವೆ.

ರಾಜ್ಯದ ಪಾಲು ಶೇಕಡ 30%

ರಾಜ್ಯದ ಪಾಲು ಶೇಕಡ 30%

ವಿಶ‍್ವಾದ್ಯಂತ ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರುತ್ತಿರುವುದು ಇದೇ ಕಾರಣಗಳಿಗಾಗಿಯೇ. ದೇಶದ ಮಾಹಿತಿ ತಂತ್ರಜ್ಞಾನ ರಫ್ತೀಕರಣ ಪ್ರಕ್ರಿಯೆಯಲ್ಲಿ ರಾಜ್ಯದ ಪಾಲು ಶೇಕಡ 30% ರಷ್ಟಿದೆ ಎಂಬುದೂ ಗಮನಾರ್ಹ ಅಂಶ.

ಉದ್ಯೋಗ ಸೃಷ್ಟಿ

ಉದ್ಯೋಗ ಸೃಷ್ಟಿ

ಅಸೋಚಾಮ್ ನ (ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್) ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಉದ್ಯೋಗ ಸೃಷ್ಟಿಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. 2015-16 ರ ನಾಲ್ಕನೆಯ ತ್ರೈಮಾಸಿಕ ಅಂತ್ಯಕ್ಕೆ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಕೊಡುಗೆ ಶೇಕಡ 24 ರಷ್ಟು! ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (ಶೇಕಡ 23%) ಹಾಗೂ ತಮಿಳುನಾಡು (10.5%) ಗಳಿವೆ.

ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ

ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ

ವರದಿಯ ಪ್ರಕಾರ ಮಾಹಿತಿ ತಂತ್ರಜ್ಞಾನ ವಲಯ 2016 ಜನವರಿ ಹಾಗೂ ಮಾರ್ಚ್ ವೇಳೆಗೆ ಸುಮಾರು 9 ಲಕ್ಷ ಉದ್ಯೋಗಗಳನ್ನು ಸೃಜಿಸಿ ಶೇ. 57% ರಷ್ಟು ಉದ್ಯೋಗವಕಾಶಗಳನ್ನು ಕಲ್ಪಿಸಿದೆ. ಕರ್ನಾಟಕ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅಂತ್ಯಕ್ಕೆ 2.16 ಲಕ್ಷ ಉದ್ಯೋಗವಕಾಶಗಳನ್ನು ಕಲ್ಪಿಸಿದ್ದು ಆನಂತರ ಸ್ಥಾನಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿವೆ.

ತಂತ್ರಜ್ಞಾನ ಸ್ನೇಹಿ ನೀತಿಗಳು

ತಂತ್ರಜ್ಞಾನ ಸ್ನೇಹಿ ನೀತಿಗಳು

ರಾಜ್ಯದ ಮಾಹಿತಿ ತಂತ್ರಜ್ಞಾನ ವಲಯದ ಈ ತ್ರಿವಿಕ್ರಮ ಬೆಳವಣಿಗೆಗೆ ಮುಖ್ಯ ಕಾರಣಗಳೆಂದರೆ ರಾಜ್ಯದ ಪರಿಸರ ಸ್ನೇಹಿ ವಾತಾವರಣ, ಮಾಹಿತಿ ತಂತ್ರಜ್ಞಾನ ಸ್ನೇಹಿ ನೀತಿಗಳು, ಜತೆಗೆ ಕರ್ನಾಟಕದ ರಾಜಧಾನಿ ಬೆಂಗಳೂರು- ದೇಶದ 'ಸಿಲಿಕಾನ್ ಕಣಿವೆ' ಎಂಬ ಹೆಗ್ಗಳಿಕೆಯೂ ಸೇರಿದೆ.

ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ ಇಲಾಖೆಗಳು ಏಕ ಗವಾಕ್ಷಿ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗಿದ್ದು ನವೋದ್ಯಮಿಗಳಿಗೆ ವರದಾನವಾಗಿದೆ.
ನವೋದ್ಯಮಿಗಳಿಗೆ ವರದಾನ

ನವೋದ್ಯಮಿಗಳಿಗೆ ವರದಾನ

ಕರ್ನಾಟಕ ಸರ್ಕಾರ ಕಳೆದ ವರ್ಷ ಪ್ರಕಟಿಸಿರುವ 'ಕರ್ನಾಟಕ ಐ-4' ನೀತಿಯು ಟಯರ್-2, ಟಯರ್-3 ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಬೆಳವಣಿಗೆಗೆ ಪೂರಕವಾಗಿದೆ.

ಅನಿಮೆಶನ್, ಕಂಪ್ಯೂಟರ್ ಗ್ರಾಫಿಕ್ಸ್, ಟೆಲಿಕಾಂ, ಬಿಪಿಒ ಕ್ಷೇತ್ರಗಳು ಇದರ ಲಾಭ ಪಡೆಯಲು ಗರಿಗೆದರಿ ನಿಂತಿವೆ.

ದೇಶದಲ್ಲಿಯೇ ಪ್ರಥಮ ಬಾರಿಗೆ ನವೋದ್ಯಮ ನೀತಿ ಜಾರಿಗೆ ತಂದ ರಾಜ್ಯ ಎಂಬ ಹೆಗ್ಗಳಿಕೆಯ ಕರ್ನಾಟಕ 2,000 ಕೋಟಿ ಹೂಡಿಕೆಯಲ್ಲಿ 20 ಸಾವಿರ ನವೋದ್ಯಮಗಳನ್ನು ಸೃಷ್ಟಿಸಿ ಸಂಶೋಧನೆ ಮತ್ತು ಅಭಿವೃದ್ಧಿಯ ಕಡೆಗೆ ದೃಢ ಹೆಜ್ಜೆಗಳ್ನನಿರಿಸಿದೆ.

ನ್ಯೂ ಏನ್ ಇನ್ ಕ್ಯುಬೇಷನ್ ನೆಟ್ ವರ್ಕ್

ನ್ಯೂ ಏನ್ ಇನ್ ಕ್ಯುಬೇಷನ್ ನೆಟ್ ವರ್ಕ್

ಇದರೊಂದಿಗೆ 2016-17 ರ ಆಯವ್ಯಯದಲ್ಲಿ ನ್ಯೂ ಏನ್ ಇನ್ ಕ್ಯುಬೇಷನ್ ನೆಟ್ ವರ್ಕ್ ಅಡಿ ರಾಜ್ಯಾಧ್ಯಂತ ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳ 10 ಹೊಸ ಇನ್ ಕ್ಯುಬೇಟರ್ ಗಳ ಸ್ಥಾಪನೆ;

ಕಿಯೋನಿಕ್ಸ್ ವತಿಯಿಂದ ಬೆಂಗಳೂರು ಮತ್ತು ಶಿವಮೊಗ್ಗ, ಬಾಗಲಕೋಟೆ ಮತ್ತು ಸಾಮಾನ್ಯ ಇನ್ಸ್ಟ್ರುಮೆಂಟ್ ಸೌಲಭ್ಯ. ಬೆಳಗಾವಿ , ಬೀದರ್ ಮತ್ತು ವಿಜಯಪುರಗಳಲ್ಲಿ ಹೊಸ ಐ ಟಿ ಪಾರ್ಕ್ ಇನ್ ಕ್ಯೂಬೇಟರ್ ಗಳ ಸ್ಥಾಪನೆ ಮಾಡುವುದಾಗಿ ಘೋಷಿಸಿರುವುದು ಮಾಹಿತಿ- ತಂತ್ರಜ್ಞಾನ ವಲಯದಲ್ಲಿನ ಅಭೂತಪೂರ್ವ ಬೆಳವಣಿಗೆಗೆ, ಅದ್ಭುತ ಸಾಧನೆಗಳಿಗೆ ನಾಂದಿ ಹಾಡಲಿದೆ.

English summary
Karnataka e governance growth overview : IT Services sector recorded 1.69 lakh jobs in January-March quarter of 2015-16 and Karnataka ranks no. 1 in creating jobs: Assocham study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X