ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆಯಲ್ಲಿ ಹಲವು ರಾಜ್ಯಗಳು ಕರ್ನಾಟಕದ ಹಿಂದೆ

By Prasad
|
Google Oneindia Kannada News

ಕರ್ನಾಟಕ, ಅದರಲ್ಲೂ ಬೆಂಗಳೂರು ಯಾವತ್ತಿದ್ದರೂ ಐಟಿಬಿಟಿ ಕ್ಷೇತ್ರದಲ್ಲಾಗಲಿ, ಉದ್ಯಮಿಗಳಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರಲ್ಲಾಗಲಿ, ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುವುದರಲ್ಲಾಗಲಿ ಎಂದೂ ಹಿಂದೆ ಬಿದ್ದಿಲ್ಲ, ಯಾವತ್ತೂ ದೇಶದಲ್ಲಿ ಮುಂಚೂಣಿಯಲ್ಲಿದೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಪ್ರಥಮಗಳಿಗೆ ಪಾತ್ರವಾಗಿದೆ. ಕೃಷಿ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ತರುವುದರಿಂದ ಹಿಡಿದು, ಯುವ ಉದ್ಯಮಿಗಳಿಗೆ ಹೂಡಿಕೆಯೋಗ್ಯ ವಾತಾವರಣ ಸೃಷ್ಟಿಸುವುದರವರೆಗೆ ದೇಶದಲ್ಲಿ ಹಲವಾರು ರಾಜ್ಯಗಳನ್ನು ಕರ್ನಾಟಕ ಹಿಂದೆ ಹಾಕಿದೆ.

ಹಸಿವು ಮುಕ್ತ ಸಮಾಜ ನಮ್ಮ ಸಾಧನೆ: ಸಿದ್ದರಾಮಯ್ಯಹಸಿವು ಮುಕ್ತ ಸಮಾಜ ನಮ್ಮ ಸಾಧನೆ: ಸಿದ್ದರಾಮಯ್ಯ

ಆರಂಭದಲ್ಲಿಯೇ ಹಾಕಲಾದ ಭದ್ರ ಅಡಿಪಾಯದಿಂದಾಗಿ, ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡುತ್ತಲೇ ಬಂದಿದೆ. ಔದ್ಯೋಗಿಕ ಕ್ಷೇತ್ರವಾಗಿರಬಹುದು, ಆರೋಗ್ಯ ಕ್ಷೇತ್ರವಾಗಿರಬಹುದು, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಾಗಿರಬಹುದು ಕರ್ನಾಟಕ ಇಡೀ ದೇಶದಲ್ಲಿ ದೊಡ್ಡಣ್ಣನಂತೆ ಮುನ್ನುಗ್ಗುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಹತ್ತಿರದಲ್ಲಿದ್ದು, ಈ ಸಂಗತಿ ಕೂಡ ಚುನಾವಣಾ ಪ್ರಚಾರದ ಪ್ರಮುಖ ಸಂಗತಿಯಾಗಲಿದೆ. ಕರ್ನಾಟಕ ಸರಕಾರ ಸಾಧಿಸಿರುವ ಹಲವಾರು ಪ್ರಥಮಗಳ ಪಟ್ಟಿ ಇಲ್ಲಿದೆ.

ದೇಶದ ಮೊದಲ ಇಂಡಸ್ಟ್ರಿಯಲ್ ಟೆಕ್ ಪಾರ್ಕ್

ದೇಶದ ಮೊದಲ ಇಂಡಸ್ಟ್ರಿಯಲ್ ಟೆಕ್ ಪಾರ್ಕ್

ದೇಶದ ಪ್ರಪ್ರಥಮ ಇಂಡಸ್ಟ್ರಿಯಲ್ ಟೆಕ್ ಪಾರ್ಕ್ ಕಲ್ಪನೆಗೆ ಜೀವ ತುಂಬಿದ್ದು ಕರ್ನಾಟಕ. ಅದರಲ್ಲೂ ಈ ಟೆಕ್ ಪಾರ್ಕ್ ಮಹಿಳಾ ಉದ್ಯಮಿಗಳಿಗಾಗಿಯೇ ಡಿಸೈನ್ ಮಾಡಲಾಗಿದ್ದು, ಅವರಿಗಾಗಿಯೇ ಅರ್ಪಿಸಲಾಗಿದೆ. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಶೇ.20ರಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ ಮತ್ತು 10 ಕೋಟಿ ರುಪಾಯಿಯಷ್ಟು ಬಂಡವಾಳವನ್ನು ನಿಗದಿಪಡಿಸಲಾಗಿದೆ.

ಕೃಷಿ ಮಾರುಕಟ್ಟೆಯಲ್ಲಿ ತಂತ್ರಜ್ಞಾನದ ಬಳಕೆ

ಕೃಷಿ ಮಾರುಕಟ್ಟೆಯಲ್ಲಿ ತಂತ್ರಜ್ಞಾನದ ಬಳಕೆ

ಕೃಷಿ ಮಾರುಕಟ್ಟೆಯಲ್ಲಿ ಆನ್ ಲೈನ್ ಟ್ರೇಡಿಂಗ್ ಮಾಡಲು ತಂತ್ರಜ್ಞಾನದ ಬಳಕೆ ಮಾಡುವಲ್ಲಿ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ರೈತರು ತಮಗೆ ಬೇಕಾದ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ನೇರವಾಗಿಯೇ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ಈ ಸೌಲಭ್ಯದಿಂದಾಗಿ ರೈತರು ಶೇ.38ರಷ್ಟು ಹೆಚ್ಚಿನ ಆದಾಯವನ್ನು ತಮ್ಮ ಉತ್ಪನ್ನಗಳಿಗಾಗಿ ಪಡೆದುಕೊಳ್ಳುತ್ತಿದ್ದಾರೆ. ಭಾರತ ಸರಕಾರ ಕೂಡ ಇದೇ ಮಾಡೆಲ್ ಅನ್ನು ಇತರ ರಾಜ್ಯಗಳು ಕೂಡ ಪಾಲಿಸಬೇಕು ಎಂದು ಹೇಳಿದೆ.

ಎಲೆಕ್ಟ್ರಾನಿಕ್ ವಾಹನ ತಯಾರಿಕೆಯಲ್ಲಿ ಪ್ರಥಮ

ಎಲೆಕ್ಟ್ರಾನಿಕ್ ವಾಹನ ತಯಾರಿಕೆಯಲ್ಲಿ ಪ್ರಥಮ

ಮೇಕ್ ಇನ್ ಕರ್ನಾಟಕದ ಮತ್ತೊಂದು ಪ್ರಮುಖ ಮೈಲಿಗಲ್ಲೆಂದರೆ ಎಲೆಕ್ಟ್ರಾನಿಕ್ ವಾಹನ ಮತ್ತು ಇಂಧನ ಶೇಖರಣಾ ನೀತಿ. ಎಲೆಕ್ಟ್ರಾನಿಕ್ ವಾಹನ ತಯಾರಿಕೆ ಮಾರುಕಟ್ಟೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿರಬೇಕು ಎಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಇದಕ್ಕಾಗಿ 31 ಸಾವಿರ ಕೋಟಿ ರುಪಾಯಿ ಬಂಡವಾಳವನ್ನು ಕರ್ನಾಟಕ ಹೂಡಿದೆ ಮತ್ತು ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಈ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ನಿರ್ಮಿಸಬೇಕೆಂಬ ಕನಸನ್ನೂ ಕಂಡಿದೆ.

ಉತ್ಪಾದನಾ ಕ್ಷೇತ್ರದಲ್ಲಿಯೂ ಕರ್ನಾಟಕ ನಂ.1

ಉತ್ಪಾದನಾ ಕ್ಷೇತ್ರದಲ್ಲಿಯೂ ಕರ್ನಾಟಕ ನಂ.1

ಮಾಹಿತಿ ತಂತ್ರಜ್ಞಾನ ಮತ್ತು ಬಯೋ ಟೆಕ್ನಾಲಜಿಯಲ್ಲಿ ಮಾತ್ರವಲ್ಲ ಉತ್ಪಾದನಾ ಕ್ಷೇತ್ರದಲ್ಲಿಯೂ ಕೂಡ ಕರ್ನಾಟಕ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ. ಉತ್ಪಾದನಾ ಕ್ಷೇತ್ರದಲ್ಲಿ ಹೂಡಲಾಗಿರುವ ಬಂಡವಾಳದ ಶೇ.10ರಷ್ಟು ಬಂಡವಾಳ ಕರ್ನಾಟಕಕ್ಕೇ ಹರಿದುಬಂದಿದೆ ಮತ್ತು ಶೇ.32ರಷ್ಟು ಉತ್ಪಾದನಾ ಕ್ಷೇತ್ರದಲ್ಲಿ ಶೇರುಗಳು ಕರ್ನಾಟಕದಲ್ಲಿ ಹೂಡಿಕೆಯಾಗಿವೆ.

ಸರ್ವರಿಗೂ ಉಚಿತವಾಗಿ ಆರೋಗ್ಯ ಭಾಗ್ಯ

ಸರ್ವರಿಗೂ ಉಚಿತವಾಗಿ ಆರೋಗ್ಯ ಭಾಗ್ಯ

ಕರ್ನಾಟಕದಲ್ಲಿ ಸರ್ವರಿಗೂ ಉಚಿತವಾಗಿ ಆರೋಗ್ಯ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಮಹತ್ತರವಾದ, ಆರೋಗ್ಯ ಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಆರಂಭಿಸಿದೆ. ಇದರಿಂದ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ಲಭಿಸುತ್ತಿದ್ದು, 1.4 ಕೋಟಿಗೂ ಹೆಚ್ಚು ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.

ತಂತ್ರಜ್ಞಾನ ವಿಭಾಗದಲ್ಲಿ ರಾಜ್ಯದ ನಾಗಾಲೋಟ

ತಂತ್ರಜ್ಞಾನ ವಿಭಾಗದಲ್ಲಿ ರಾಜ್ಯದ ನಾಗಾಲೋಟ

ತಂತ್ರಜ್ಞಾನ ವಿಭಾಗದಲ್ಲಿ ನಾಗಾಲೋಟದಲ್ಲಿರುವ ಕರ್ನಾಟಕದಲ್ಲಿ 2020ರ ಹೊತ್ತಿಗೆ 20 ಸಾವಿರಕ್ಕೂ ಹೆಚ್ಚು ಟೆಕ್ ಬೇಸ್ಡ್ ಸ್ಟಾರ್ಟ್ ಅಪ್ ಕಂಪನಿಗಳು ಕರ್ನಾಟಕದಲ್ಲಿ ನೆಲೆಯೂರಲಿವೆ. ಇದೆಲ್ಲ ಸಾಧ್ಯವಾಗಿದ್ದು ಮಲ್ಟಿ ಸೆಕ್ಟರ್ ಸ್ಟಾರ್ಟ್ ಅಪ್ ಪಾಲಿಸಿಯಿಂದಾಗಿ. ಬಂಡವಾಳ ಹರಿವಿಕೆಯಿಂದ ವಿಶ್ವದರ್ಜೆಯ ವಾತಾವರಣ ಸೃಷ್ಟಿಯಾಗಲಿದ್ದು, 1.8 ಮಿಲಿಯನ್ ಉದ್ಯೋಗ ಸೃಷ್ಟಿಯಾಗುತ್ತಿರುವುದು ಈ ಯೋಜನೆಯ ಹೆಗ್ಗಳಿಕೆ.

2017-22 ಬಯೋಟೆಕ್ ಪಾಲಿಸಿಗೆ ಅನುಮೋದನೆ

2017-22 ಬಯೋಟೆಕ್ ಪಾಲಿಸಿಗೆ ಅನುಮೋದನೆ

228 ಬಯೋಟೆಕ್ ಕಂಪನಿಗಳು ಮತ್ತು 65ಕ್ಕೂ ಹೆಚ್ಚು ಬಯೋಟೆಕ್ ಸ್ಟಾರ್ಟ್ ಅಪ್ ಕಂಪನಿಗಳಿಂದಾಗಿ, ಈ ಕ್ಷೇತ್ರದ ಶೇ.35ರಷ್ಟು ಆದಾಯ ಕರ್ನಾಟಕದಲ್ಲಿಯೇ ಉತ್ಪಾದನೆಯಾಗುತ್ತಿದೆ. ಬಯೋ-ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಮತ್ತು ದೇಶದ 100 ಬಿಲಿಯನ್ ಡಾಲರ್ ಬಯೋಟೆಕ್ ಉದ್ಯಮಕ್ಕೆ ಕಾಣಿಕೆ ನೀಡುವ ಉದ್ದೇಶದಿಂದ 2017-22 ಬಯೋಟೆಕ್ ಪಾಲಿಸಿಗೆ ಕರ್ನಾಟಕ ಅನುಮೋದನೆ ನೀಡಿದೆ.

ಕರ್ನಾಟಕ ವಿಶ್ವದ 4ನೇ ಅತೀದೊಡ್ಡ ಟೆಕ್ ಹಬ್

ಕರ್ನಾಟಕ ವಿಶ್ವದ 4ನೇ ಅತೀದೊಡ್ಡ ಟೆಕ್ ಹಬ್

ದೇಶದ ಐಟಿ ಹಬ್ ಆಗಿರುವ ಕರ್ನಾಟಕದಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕ ವಿಶ್ವದ 4ನೇ ಅತೀದೊಡ್ಡ ಟೆಕ್ ಹಬ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 2017ರಲ್ಲಿ 3 ಲಕ್ಷ ಕೋಟಿಯಷ್ಟು ರಫ್ತು ಮೌಲ್ಯ ಹೊಂದಿದ್ದು, ದೇಶದ ರಫ್ತಿನ ಶೇ.38ರಷ್ಟು ಪಾಲನ್ನು ಕರ್ನಾಟಕ ತನ್ನದಾಗಿಸಿಕೊಂಡಿದೆ.

English summary
From introducing innovations in Agriculture to empowering entrepreneurs with a dynamic ecosystem, Karnataka continues to excel across sectors with pioneering initiatives that has earned laurels across the country. These initiatives have defined the Karnataka Model of Development and has laid the path towards building a New Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X