ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ (ಜುಲೈ 08) ಕರ್ನಾಟಕದ ಜಿಲ್ಲಾವಾರು ಚುಟುಕು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 08: ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಲಭ್ಯವಾಗಿರುವ ಚುಟುಕು ಸುದ್ದಿಗಳ ಸಂಗ್ರಹ ಇಲ್ಲಿದೆ. ಸಕಲೇಶಪುರದಲ್ಲಿ ರೈಲು ಸಂಚಾರ ಸ್ಥಗಿತ, ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಓರ್ವ ಮಹಿಳೆ ಬಲಿ, ನಿಲ್ಲದ ರೈತರ ಆತ್ಯಹತ್ಯಾ ಸರಣಿ ಮುಂತಾದ ಸುದ್ದಿಗಳಿವೆ.

ಬಾಗಲಕೋಟೆ: ಜಿಲ್ಲಾ ಪ್ರವಾಸದಲ್ಲಿರುವ ಉಡುಪಿ ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿಗಳು, ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ ಆರೋಪ ಬಂದ ಮಾತ್ರಕ್ಕೆ ಅಪರಾಧಿಗಳು ಎನ್ನಬಾರದು, ಆರೋಪ ಸಾಬೀತಾದ ಮೇಲೆ ರಾಜೀನಾಮೆ ನೀಡಲಿ ಎಂದಿದ್ದಾರೆ. ರೈತರ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಮಸ್ಯೆಗಳನ್ನು ಬಗೆಹರಿಸಿದ್ದರೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ ಎಂದಿದ್ದಾರೆ.

Pejawar seer

ಹಾಸನ : ಸಕಲೇಶಪುರದಿಂದ ಸುಬ್ರಮಣ್ಯದ ಕಡೆಗೆ ಸಾಗುವ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಕಳೆದ ಕೆಲದಿನಗಳಿಂದ ಸುರಿದ ಭಾರಿ ಮಳೆಗೆ ರೈಲು ಮಾರ್ಗದ ಪಕ್ಕದ ಗುಡ್ಡ ಕುಸಿದು ಬಿದ್ದಿದೆ. ಬುಧವಾರ (ಜುಲೈ 08) ಬೆಳಗ್ಗೆ 6 ಗಂಟೆಗಳ ಕಾಲ ಪ್ಯಾಸೇಂಜರ್ ರೈಲು ಸಂಚರಿಸಲು ಸಾಧ್ಯವಾಗದೆ ಜನ ಪರದಾಡುವಂತಾಗಿದೆ. ರೈಲ್ವೆ ಅಧಿಕಾರಿಗಳು ಎಡಕುಮರಿ ನಿಲ್ದಾಣದ ಬಳಿ ರಿಪೇರಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕೊಡಗು: ವಿರಾಜಪೇಟೆಯ ಗುಯ್ಯ ಗ್ರಾಮದಲ್ಲಿ 35 ವರ್ಷ ವಯಸ್ಸಿನ ಕಮಲಮ್ಮ ಬಳಿ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದಾಗ ನಡೆದ ಘಟನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ಪರಿಶೀಲನೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Karnataka District news Updates on July 8, 2015

ಕುಶಾಲನಗರ : ಬ್ಯಾಗೊಟ್ಟ ಗ್ರಾಮದ ರೈತ ಎಚ್.ಆರ್.ನಾರಾಯಣ್ ತಮ್ಮ ಐದೂವರೆ ಎಕರೆ ಭೂಮಿಯಲ್ಲಿ ಜೋಳ ಮತ್ತು ಶುಂಠಿ ಬೇಸಾಯ ಮಾಡಿದ್ದರು. ಕಳೆದ 2 ವರ್ಷಗಳಿಂದ ಬೆಳೆ ಕೈಗೊಟ್ಟಿದ್ದರಿಂದ ಸುಮಾರು 6.5 ಲಕ್ಷ ರು ಸಾಲ ಮಾಡಿಕೊಂಡಿದ್ದರು, ಸಾಲದ ಬಾಧೆ ತಾಳಲಾದರೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಸನ: ಸಾಲಬಾಧೆ ತಾಳಲಾರದೆ ಹಾಸನ ಜಿಲ್ಲೆಯ ಕುರುವಂಕ ಗ್ರಾಮದ 38 ವರ್ಷದ ತಿಮ್ಮೇಗೌಡ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾವೇರಿ: ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಅರೇಮಲ್ಲಾಪುರದಲ್ಲಿ ಗುಡ್ಡಪ್ಪ ನಿಂಗಪ್ಪ ಚಳಗೇರಿ (25) ಅವರು ಸೌತೆಕಾಯಿ ಬೆಳೆ ಹಾಳಾದ ಕಾರನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ: ಕೆ.ಆರ್ ಪೇಟೆ ತಾಲೂಕಿನ ಹೇಮಗಿರಿ ಶ್ರೀ ಕ್ಷೇತ್ರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಲಕ್ಷ್ಮೀನಾರಾಯಣನಾಥ ಸ್ವಾಮೀಜಿ (50) ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ(ಜುಲೈ 07) ನಿಧನರಾಗಿದ್ದಾರೆ.

English summary
Karnataka District news Updates on July 8, 2015: A Passenger train struck in Sakaleshpur and Subramanya junction for more than 6 hours today (July 8) and many more news updates from interior parts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X