ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 98 ಬರಪೀಡಿತ ತಾಲೂಕುಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಆಗಸ್ಟ್ 12 : 26 ಜಿಲ್ಲೆಗಳ 98 ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಪ್ರಾಥಮಿಕ ಹಂತದಲ್ಲಿ ಈ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ಕಳೆದ ಬಾರಿಗಿಂತ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. 16 ಜಿಲ್ಲೆಗಳಲ್ಲಿ ಸರಾಸರಿ ಶೇಕಡಾ 22 ರಷ್ಟು ಕಡಿಮೆ ಮಳೆಯಾಗಿದೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು. [ಕೈಕೊಟ್ಟ ಮುಂಗಾರು, KRSನಲ್ಲಿ ಎಷ್ಟು ನೀರಿದೆ?]

ಬರ ಪೀಡಿತ ತಾಲೂಕುಗಳಲ್ಲಿ ಟ್ಯಾಂಕರ್ ಮೂಲಕ ತುರ್ತಾಗಿ ಕುಡಿಯುವ ನೀರು ಸರಬರಾಜು ಮಾಡಲು 25 ಕೋಟಿ ರೂ., ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 50 ಕೋಟಿ ರೂ. ಸೇರಿದಂತೆ 200 ಕೋಟಿ ರೂ.ಗಳನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ ಎಂದು ಸಚಿವರು ಹೇಳಿದರು.[ಬರಗಾಲ : ಲೋಕಸಭೆಯಲ್ಲಿ ಯಡಿಯೂರಪ್ಪ ವಿಷಯ ಪ್ರಸ್ತಾಪ]

ಆಗಸ್ಟ್ 16 ರಂದು ಎಲ್ಲಾ ಜಿಲ್ಲಾಡಳಿತದಿಂದ ವರದಿ ತರಿಸಿಕೊಂಡು ಸಚಿವ ಸಂಪುಟ ಉಪ ಸಮಿತಿ ಸಮಾಲೋಚನೆ ನಡೆಸಿ ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಟಿ.ಬಿ.ಜಯಚಂದ್ರ ವಿವರಿಸಿದರು.

ಬೆಂಗಳೂರು, ಕೋಲಾರ, ತುಮಕೂರು ಮುಂತಾದ ಜಿಲ್ಲೆ

ಬೆಂಗಳೂರು, ಕೋಲಾರ, ತುಮಕೂರು ಮುಂತಾದ ಜಿಲ್ಲೆ

* ಬೆಂಗಳೂರು ನಗರ - ಆನೇಕಲ್‌
* ರಾಮನಗರ - ಕನಕಪುರ, ರಾಮನಗರ
* ಕೋಲಾರ - ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು
* ಚಿಕ್ಕಬಳ್ಳಾಪುರ - ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ಶಿಢ್ಲಘಟ್ಟ
* ತುಮಕೂರು - ಕುಣಿಗಲ್, ಪಾವಗಡ, ತುಮಕೂರು

ಚಿತ್ರುದರ್ಗ, ದಾವಣಗೆರೆ, ಮೈಸೂರು, ಮಂಡ್ಯ ಮುಂತಾದ ಜಿಲ್ಲೆಗಳು

ಚಿತ್ರುದರ್ಗ, ದಾವಣಗೆರೆ, ಮೈಸೂರು, ಮಂಡ್ಯ ಮುಂತಾದ ಜಿಲ್ಲೆಗಳು

* ಚಿತ್ರದುರ್ಗ - ಚಳ್ಳಕೆರೆ, ಮೊಳಕಾಲ್ಮೂರು
* ದಾವಣಗೆರೆ - ಹರಪನಹಳ್ಳಿ, ಜಗಳೂರು
* ಚಾಮರಾಜನಗರ - ಕೊಳ್ಳೆಗಾಲ
* ಮೈಸೂರು - ಹೆಗ್ಗಡದೇವನಕೋಟೆ
* ಮಂಡ್ಯ - ಮಂಡ್ಯ
* ಬಳ್ಳಾರಿ - ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು, ಶಿರಗುಪ್ಪ, ಬಳ್ಳಾರಿ

ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳು

ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳು

* ಬೆಳಗಾವಿ - ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಖಾನಾಪುರ, ರಾಮದುರ್ಗ, ರಾಯಬಾಗ, ಸವದತ್ತಿ
* ಕೊಪ್ಪಳ - ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗ
* ರಾಯಚೂರು - ದೇವದುರ್ಗ, ಲಿಂಗಸಗೂರು, ಮಾನ್ವಿ, ರಾಯಚೂರು, ಸಿಂಧನೂರು
* ಯಾದಗಿರಿ - ಶಹಾಪುರ, ಸುರಪುರ, ಯಾದಗಿರಿ

ಕಲಬುರಗಿ, ಬೀದರ್, ಗದಗ ಜಿಲ್ಲೆಗಳು

ಕಲಬುರಗಿ, ಬೀದರ್, ಗದಗ ಜಿಲ್ಲೆಗಳು

* ಕಲಬುರಗಿ - ಅಫ್ಜಲ್‌ಪುರ, ಆಳಂದ, ಚಿತ್ತಾಪುರ, ಚಿಂಚೋಳಿ, ಕಲಬುರಗಿ, ಜೇವರ್ಗಿ, ಸೇಡಂ

* ಬೀದರ್ - ಔರಾದ್‌, ಬೀದರ್‌, ಭಾಲ್ಕಿ, ಬಸವಕಲ್ಯಾಣ, ಹುನ್ಮಾಬಾದ್
* ಗದಗ - ಗದಗ, ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ

ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು

ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು

* ಶಿವಮೊಗ್ಗ - ಶಿಕಾರಿಪುರ ಮತ್ತು ಸೊರಬ
* ಬಾಗಲಕೋಟೆ - ಜಮಖಂಡಿ, ಬಾದಾಮಿ, ಬಾಗಲಕೋಟೆ, ಬೀಳಗಿ, ಹುನುಗುಂದ, ಮುಧೋಳ
* ವಿಜಯಪುರ - ಬಸವನಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ, ಸಿಂಧಗಿ
* ಚಿಕ್ಕಮಗಳೂರು - ಚಿಕ್ಕಮಗಳೂರು

ಹಾವೇರಿ, ಧಾರವಾಡ, ಹಾಸನ ಮುಂತಾದ ಜಿಲ್ಲೆಗಳು

ಹಾವೇರಿ, ಧಾರವಾಡ, ಹಾಸನ ಮುಂತಾದ ಜಿಲ್ಲೆಗಳು

* ಹಾವೇರಿ - ಹಾನಗಲ್‌, ಹಾವೇರಿ, ಹಿರೇಕೆರೂರು, ರಾಣಿಬೆನ್ನೂರು, ಸವಣೂರು, ಶಿಗ್ಗಾಂವ್‌
* ಧಾರವಾಡ - ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ
* ಹಾಸನ - ಆಲೂರು, ಅರಕಲಗೂಡು, ಬೇಲೂರು, ಹಾಸನ, ಹೊಳೆನರಸೀಪುರ
* ಉತ್ತರ ಕನ್ನಡ - ಹಳಿಯಾಳ, ಮುಂಡಗೋಡ, ಯಲ್ಲಾಪುರ

English summary
After cabinet meeting law and parliamentary affairs minister T.B.Jayachandra said, As many as 98 taluks in 26 districts in the Karnataka will be declared drought hit following the failure of the monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X