• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?

|
   Karnataka Political Crisis : ಸುಪ್ರೀಂಕೋರ್ಟ್ ತೀರ್ಪಿನ ನಂತರ ಸ್ಪೀಕರ್ ರಮೇಶ್ ಕುಮಾರ್ ಮುಂದಿರುವ ಆಯ್ಕೆ

   ಬೆಂಗಳೂರು, ಜುಲೈ 17: ಬೆಂಗಳೂರು ಬಿಟ್ಟು ಮುಂಬೈ ಸೇರಿರುವ ಕರ್ನಾಟಕ ಕಾಂಗ್ರೆಸ್ಸಿನ ಶಾಸಕರಿಗೆ ಸುಪ್ರೀಂಕೋರ್ಟ್ ಇಂದು ನೀಡಿದ ಮಧ್ಯಂತರ ತೀರ್ಪು ಸಮಾಧಾನ ತಂದಿದೆ. ಶಾಸಕರ ರಾಜೀನಾಮೆ, ಅನರ್ಹತೆ, ವಿಪ್, ವಿಶ್ವಾಸಮತ ಯಾಚನೆ, ಕೈ ತೆನೆ ಸರ್ಕಾರದ ಅಳಿವು ಉಳಿವು ಎಲ್ಲಾ ಲೆಕ್ಕಾಚಾರಗಳಲ್ಲಿ ಕೊಂಚ ಬದಲಾವಣೆಯಾಗಿದೆ. 'ಸಂವಿಧಾನಬದ್ಧವಾಗಿ ಬಂದ ಅಧಿಕಾರವನ್ನು ನಾನು ಅಂಪೈರ್ ರೀತಿ ನಿರ್ವಹಿಸುತ್ತೇನೆ' ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ತೀರ್ಪಿನ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

   ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?

   ಸದನಕ್ಕೆ ಯಾರು ಹಾಜರಾಗಿದ್ದಾರೆ, ಯಾರು ಗೈರಾಗಿದ್ದಾರೆ, ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸುವುದು ಹೇಗೆ? ಶಾಸಕರಿಗೆ ಆದ್ಯತೆ ಮೇರೆಗೆ ಚುಕ್ಕಿ ಪ್ರಶ್ನೆಗಳು, ವಾಕ್ಸಮರಗಳನ್ನು ನಿಭಾಯಿಸುವುದು ಎಲ್ಲವೂ ವಿಧಾನಸಭೆಯ 'ಅಂಪೈರ್' ಎಂದು ತಮಗೆ ತಾವೇ ಕರೆದುಕೊಂಡಿರುವ ಸಭಾಪತಿ ಕೆ. ಆರ್ ರಮೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯ ವ್ಯಾಪ್ತಿಗೆ ಬರಲಿದೆ. ಹಾಗಾದರೆ, ಸ್ಪೀಕರ್ ಕಾರ್ಯವ್ಯಾಪ್ತಿ ಸೀಮಿತವಾಗಿದೆಯೇ? ಸದನಕ್ಕೆ ಹಾಜರಾಗುವಂತೆ ಪಕ್ಷಗಳು ನೀಡುವ ವಿಪ್ ಉಲ್ಲಂಘಿಸುವ ಶಾಸಕರ ಮೇಲೆ ಆಯಾ ಪಕ್ಷಗಳೇ ಕ್ರಮ ಜರುಗಿಸಬೇಕೆ? ಶಾಸಕರ ಅನರ್ಹತೆಗೆ ವಿಪ್ ಉಲ್ಲಂಘನೆಯನ್ನು ಪರಿಗಣಿಸಲು ಬರುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ.

   ಎಚ್ಡಿಕೆ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸಭೆ ಸಂಖ್ಯಾಬಲವೇನು?

   ಜನಪ್ರತಿನಿಧಿ ಕಾಯ್ದೆ, ಪಕ್ಷಾಂತರ ನಿಷೇಧ ಕಾಯ್ದೆ, ಕರ್ನಾಟಕ ವಿಧಾನಸಭಾ ಸದನ ನಿರ್ವಹಣೆ ನಿಯಮಾವಳಿ ಸೇರಿದಂತೆ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಮುಂದೆ ನಡೆ ಇಡಲಿದ್ದಾರೆ, ಗುರುವಾರ(ಜುಲೈ 18) ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸ್ಪೀಕರ್ ಅವರು ಯಾವ ರೀತಿ ಕಾರ್ಯ ನಿರ್ವಹಿಸಲಿದ್ದಾರೆ? ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ಮುಂದಿರುವ ಆಯ್ಕೆಗಳೇನು? ಇದರಿಂದ ಮೈತ್ರಿ ಸರ್ಕಾರ ಅಳಿವು, ಹೊಸ ಸರ್ಕಾರ ಉದಯಕ್ಕೆ ಯಾವ ರೀತಿ ನೆರವಾಗಲಿದೆ? ಉತ್ತರ ಮುಂದಿದೆ...

   ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕಾರ

   ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕಾರ

   ಎಲ್ಲಾ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬಹುದು. -ಈಗ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ 13 ಶಾಸಕರ ರಾಜೀನಾಮೆ ಪತ್ರವನ್ನು ಯಾವುದೇ ಪ್ರಶ್ನೆ ಎತ್ತದೆ, ಅಂಗೀಕರಿಸಿ ಸಹಿ ಹಾಕಬಹುದು. ಜೊತೆಗೆ ಇಬ್ಬರು ಪಕ್ಷೇತರರು ರಾಜೀನಾಮೆ ಸಲ್ಲಿಸಿದ್ದು, ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದಿರುವಾಗಿ ಹೇಳಿದ್ದಾರೆ. ಇದರಿಂದ ಬಿಜೆಪಿಗೆ ತಕ್ಷಣಕ್ಕೆ ಲಾಭವಾಗಲಿದ್ದು, ರಾಜೀನಾಮೆ ಅಂಗೀಕಾರವಾಗಿದ್ದು, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಆಗ್ರಹಿಸಲು ಸೂಕ್ತ ಸಾಕ್ಷ್ಯ ಸಿಕ್ಕಂತಾಗುತ್ತದೆ.

   ಶಾಸಕರಿಗೆ ವಿಪ್ ಜಾರಿಯಾಗಿದೆ

   ಶಾಸಕರಿಗೆ ವಿಪ್ ಜಾರಿಯಾಗಿದೆ

   ರಾಜೀನಾಮೆ ನೀಡಿರುವ ಶಾಸಕರಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷದವರು ವಿಪ್ ಜಾರಿಗೊಂಡಿದೆ. ವಿಪ್ ಜಾರಿಗೊಳಿಸುವ ಮೂಲಕ ಕಡ್ಡಾಯವಾಗಿ ಸ್ಪೀಕರ್ ಮುಂದೆ ಖುದ್ದು ಹಾಜರಾಗುವಂತೆ ಮಾಡಬಹುದು. ರಾಜೀನಾಮೆ ನೀಡಿದ್ದರೂ ತಾಂತ್ರಿಕವಾಗಿ ಇನ್ನೂ ಪಕ್ಷದಲ್ಲಿರುತ್ತಾರೆ. ಹೀಗಾಗಿ, ಸ್ಪೀಕರ್ ಆದೇಶಕ್ಕೆ ಒಳಪಟ್ಟಿರುತ್ತಾರೆ. ಇದಲ್ಲದೆ, ಸದನದ ಕಲಾಪಕ್ಕೆ ಹಾಜರಾಗುವಂತೆ, ಮೈತ್ರಿ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಿದರೆ, ಸರ್ಕಾರದ ಪರ ಮತ ಹಾಕುವಂತೆ ವಿಪ್ ಜಾರಿಗೊಂಡರೆ, ಶಾಸಕರ ಬಲಾಬಲದ ಎಣಿಕೆ, ಮತದಾನ ಪ್ರಕ್ರಿಯೆ ಎಲ್ಲವೂ ಸ್ಪೀಕರ್ ಕೈಲಿರುತ್ತದೆ

   ಸ್ಪೀಕರ್ ಸ್ಥಾನಕ್ಕೆ ಬಲ ತುಂಬಿದ ಸುಪ್ರೀಂ: ಆದೇಶದಲ್ಲಿ ಏನಿದೆ?

   ವಿಪ್ ಉಲ್ಲಂಘನೆ ಮಾಡಿದರೆ, ಸದನಕ್ಕೆ ಗೈರಾದರೆ

   ವಿಪ್ ಉಲ್ಲಂಘನೆ ಮಾಡಿದರೆ, ಸದನಕ್ಕೆ ಗೈರಾದರೆ

   ರಮೇಶ್ ಕುಮಾರ್ ಮುಂದಿರುವ ಆಯ್ಕೆ : ವಿಪ್ ಉಲ್ಲಂಘನೆ ಮಾಡಿದರೆ, ಸದನದ ಕಲಾಪಕ್ಕೆ ಗೈರಾದರೆ, ಜನಪ್ರತಿನಿಧಿ ಕಾಯ್ದೆ 164 ಅನ್ವಯ ಕ್ರಮ ಜರುಗಿಸಬಹುದು. - ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸದನದ ಕಲಾಪಕ್ಕೆ ಹಾಜರಾಗದ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಕ್ಕೆ ಕ್ರಮ ಜರುಗಿಸಬಹುದು. - ಜನಪ್ರತಿನಿಧಿ ಕಾಯ್ದೆ 164 1ಬಿ 10ನೇ ಶೆಡ್ಯೂಲ್ ಅನ್ವಯ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ದೂರು ದಾಖಲಾದರೆ, ಈ ಬಗ್ಗೆ ಕ್ರಮ ಜರುಗಿಸಬಹುದು. ಅಮಾನತು, ಅನರ್ಹತೆ, ಸದನದಿಂದ ಹೊರ ಹಾಕುವುದು ಎಲ್ಲವೂ ಸ್ಪೀಕರ್ ಕೈಲಿರುತ್ತದೆ.

   ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಬಹುದು

   ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಬಹುದು

   ತಮಿಳುನಾಡು ಮಾದರಿಯಲ್ಲಿ ಎಲ್ಲಾ ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. - 10ನೇ ಶೆಡ್ಯೂಲ್ ಪ್ರಕಾರ ದೂರು ದಾಖಲಾಗಿ,ವಿಪ್ ಉಲ್ಲಂಘನೆ ಎಲ್ಲವನ್ನು ಪರಿಗಣಿಸಿ ಶಾಸಕರನ್ನು ಉಚ್ಚಾಟಿಸಬಹುದು. ಶಾಸಕರ ವಿರುದ್ಧ ಕ್ರಮ ಜರುಗಿಸಲು ತಮಿಳುನಾಡು ಮಾದರಿಯಲ್ಲಿ ದೂರು ಬಂದರೆ, ಒಟ್ಟಿಗೆ ಪ್ರಯಾಣಿಸಿದ ಚಿತ್ರ, ವಿಡಿಯೋ ಸಾಕ್ಷಿ ಪರಿಗಣಿಸಬಹುದು. - ಉಚ್ಚಾಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದರೂ ಈ ಶಾಸಕರಿಗೆ ಸಚಿವರಾಗುವ ಯೋಗ ತಕ್ಷಣಕ್ಕೆ ಸಿಗುವುದಿಲ್ಲ. ಉಪ ಚುನಾವಣೆ ಎದುರಿಸಿ ಮತ್ತೆ ಆಯ್ಕೆಯಾದರೂ, ಕೇಸಿನಲ್ಲಿ ಖುಲಾಸೆಗೊಂಡರೆ ಸಚಿವರಾಗಬಹುದು.

   16 ಮಂದಿ ರಾಜೀನಾಮೆ ಬಳಿಕ ಸಂಖ್ಯಾಬಲ

   16 ಮಂದಿ ರಾಜೀನಾಮೆ ಬಳಿಕ ಸಂಖ್ಯಾಬಲ

   16 ಮಂದಿ ರಾಜೀನಾಮೆ ಬಳಿಕ ಜುಲೈ 17ರಂದು 16 ಮಂದಿ ರಾಜೀನಾಮೆ ಬಳಿಕ

   ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:

   ಒಟ್ಟು ಸದಸ್ಯ ಬಲ : 224 -16

   ಕಾಂಗ್ರೆಸ್ + ಜೆಡಿಎಸ್ : 101

   ಮ್ಯಾಜಿಕ್ ನಂಬರ್ : 105

   ಬಿಜೆಪಿ : 107 ಬಿಎಸ್ ಪಿ: 1 (ಎನ್ ಮಹೇಶ್)

   English summary
   Amidst the looming crisis in Karnataka, the speaker of the Legislative Assembly would need to take a very important call today(Jul 17) after Supreme court's interim order on rebel MLAs plea. There are several options before the Speaker and below let us take a look at what they are.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X