ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ? ಗೊಂದಲ, ದ್ವಂದ್ವ

|
Google Oneindia Kannada News

Recommended Video

Karnataka Crisis : ಕರ್ನಾಟಕದ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ? ಗೊಂದಲ, ದ್ವಂದ್ವ | Oneindia Kannada

ಬೆಂಗಳೂರು, ಜುಲೈ 18: ಕರ್ನಾಟಕದ ರೆಬೆಲ್ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕಮಾರ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟಿನಲ್ಲಿ ದೂರು ಸಲ್ಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಮಧ್ಯಂತರ ತೀರ್ಪು ಬಂದ ಬಳಿಕ ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ನಡೆಸಲು ಮುಂದಾಗಿದ್ದಾರೆ.

ಬೆಂಗಳೂರು ಬಿಟ್ಟು ಮುಂಬೈ ಸೇರಿರುವ ಕರ್ನಾಟಕ ಕಾಂಗ್ರೆಸ್ಸಿನ ಶಾಸಕರಿಗೆ ಸುಪ್ರೀಂಕೋರ್ಟ್ ಇಂದು ನೀಡಿದ ಮಧ್ಯಂತರ ತೀರ್ಪು ಸಮಾಧಾನ ತಂದಿದೆ. ಶಾಸಕರ ರಾಜೀನಾಮೆ, ಅನರ್ಹತೆ, ವಿಪ್, ವಿಶ್ವಾಸಮತ ಯಾಚನೆ, ಕೈ ತೆನೆ ಸರ್ಕಾರದ ಅಳಿವು ಉಳಿವು ಎಲ್ಲಾ ಲೆಕ್ಕಾಚಾರಗಳಲ್ಲಿ ಕೊಂಚ ಬದಲಾವಣೆಯಾಗಿದೆ. 'ಸಂವಿಧಾನಬದ್ಧವಾಗಿ ಬಂದ ಅಧಿಕಾರವನ್ನು ನಾನು ಅಂಪೈರ್ ರೀತಿ ನಿರ್ವಹಿಸುತ್ತೇನೆ' ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ತೀರ್ಪಿನ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಾಸಮತ ಯಾಚನೆ LIVE: ವಿಧಾನಸಭೆ ಕಲಾಪ ಆರಂಭ, ಚರ್ಚೆ ಪ್ರಾರಂಭವಿಶ್ವಾಸಮತ ಯಾಚನೆ LIVE: ವಿಧಾನಸಭೆ ಕಲಾಪ ಆರಂಭ, ಚರ್ಚೆ ಪ್ರಾರಂಭ

ಸ್ಪೀಕರ್ ಕಾರ್ಯವ್ಯಾಪ್ತಿ ಸೀಮಿತವಾಗಿದೆಯೇ? ಸದನಕ್ಕೆ ಹಾಜರಾಗುವಂತೆ ಪಕ್ಷಗಳು ನೀಡುವ ವಿಪ್ ಉಲ್ಲಂಘಿಸುವ ಶಾಸಕರ ಮೇಲೆ ಆಯಾ ಪಕ್ಷಗಳೇ ಕ್ರಮ ಜರುಗಿಸಬೇಕೆ? ಶಾಸಕರ ಅನರ್ಹತೆಗೆ ವಿಪ್ ಉಲ್ಲಂಘನೆಯನ್ನು ಪರಿಗಣಿಸಲು ಬರುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲ ಬಂದಿದೆ.

ಕರ್ನಾಟಕದ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ?

ಕರ್ನಾಟಕದ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ?

ವಿಪ್ ಅನ್ವಯವಾಗುತ್ತಾ?: ಸುಪ್ರೀಂಕೋರ್ಟ್ ಆದೇಶದಲ್ಲಿ ಅತೃಪ್ತ ಶಾಸಕರ ಮೇಲೆ ಒತ್ತಡ ಹೇರಿ ಸದನಕ್ಕೆ ಹಾಜರಾಗುವಂತೆ ಆದೇಶಿಸುವಂತಿಲ್ಲ ಎಂದು ಹೇಳಲಾಗಿದೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿಲ್ಲ, ಹೀಗಾಗಿ, ರಾಜೀನಾಮೆ ಸಲ್ಲಿಸಿ ಮಾನಸಿಕವಾಗಿ ಪಕ್ಷದಿಂದ ದೂರವಿರುವ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂಬ ವಾದವಿದೆ.

ಆದರೆ, ಒತ್ತಡ ಹೇರಬಾರದು ಎಂದಷ್ಟೇ ಸುಪ್ರೀಂಕೋರ್ಟ್ ಹೇಳಿದ್ದು, ಪಕ್ಷದ ವಿಪ್ ಅನ್ವಯವಾಗುವುದಿಲ್ಲ ಎಂದು ಮಧ್ಯಂತರ ಆದೇಶದಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ -ಜೆಡಿಎಸ್ ವಾದಿಸಿದೆ. ಕಾನೂನು ತಜ್ಞ ನಡುವಿನ ಚರ್ಚೆ ನಡುವೆ ಮುಂಬೈಯಲ್ಲಿರುವ ರೆಬೆಲ್ ಶಾಸಕರು ಇಂದು ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರುಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು

ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ?

ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ?

ಮಧ್ಯಂತರ ತೀರ್ಪಿನ ಅರ್ಥವೇನು?: "ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯವಾಗುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದು ಈ ಪ್ರಕರಣದ ಮಧ್ಯಂತರ ತೀರ್ಪು ಮಾತ್ರ, ಮಧ್ಯಕಾಲೀಕ ತೀರ್ಪಲ್ಲ. ತೀರ್ಪಿನ ಅನ್ವಯ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳಬಹುದು. ವಿಪ್ ಜಾರಿ ಅವರ ಕರ್ತವ್ಯ, ಸದನಕ್ಕೆ ಹಾಜರಾಗುವುದು ನೈತಿಕ ಹಕ್ಕು, ವಿಪ್ ಉಲ್ಲಂಘನೆ ಹಾಗೂ ಅದರ ಪರಿಣಾಮ ಮುಂದಿನ ಕ್ರಮಗಳ ಬಗ್ಗೆ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹೇಳಬಹುದು, ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸ್ಪೀಕರ್ ಏನು ಮಾಡಬೇಕು ಎಂಬುದನ್ನು ಸುಪ್ರೀಂಕೋರ್ಟ್ ಹೇಳಿಲ್ಲ, ಈ ಪ್ರಕ್ರಿಯೆ ಸ್ಪೀಕರ್ ಇಚ್ಛೆಯಂತೆ ನಡೆಸಬಹುದು" ಎಂದು ಮಾಜಿ ಅಡ್ವೋಕೇಟ್ ಜನರಲ್ ಎಸ್ ದೊರೈರಾಜು ಅವರು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಹೇಳಿದರು.

ಸುಪ್ರೀಂ ಆದೇಶದ ಬಗ್ಗೆ ಕಾಂಗ್ರೆಸ್ ವಾದ

ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿ, ವಿಪ್ ಜಾರಿಗೊಳಿಸುವುದು, ಶಾಸಕರ ನಡವಳಿಕೆಯನ್ನು ನಿಯಂತ್ರಿಸುವುದರ ಬಗ್ಗೆ, ಸಂವಿಧಾನದ 10ನೇ ಶೆಡ್ಯೂಲ್ ಬಳಸುವುದರ ಬಗ್ಗೆ, ಶಾಸಕರ ಅನರ್ಹತೆ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರವನ್ನೇ ಕಸಿದರೆ ಹೇಗೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸುತ್ತೀರಲ್ಲ

ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸುತ್ತೀರಲ್ಲ, ಈ ಹಿಂದೆ ನಿಮ್ಮ ಪರವಾಗಿ ಬಂದಾಗ ಸುಮ್ಮನಿದ್ದೀರಿ, ಯಡಿಯೂರಪ್ಪ ಅವರು ಸುಪ್ರೀಂ ಆದೇಶದಂತೆ ತ್ವರಿತವಾಗಿ ವಿಶ್ವಾಸಮತ ಯಾಚನೆ ಮಾಡಿದ್ದರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಆದರೆ, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಅವರು ಮೇ 2016ರಲ್ಲಿ ಉತ್ತರಾಖಂಡ್ ರಾಜ್ಯದಲ್ಲಿ ಸರ್ಕಾರ ಸ್ಥಾಪನೆ ಮಾಡಲು ಯತ್ನಿಸಿದಾಗ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಪರಿಗಣಿಸಿ ಎಂದಿದ್ದಾರೆ.

English summary
The Congress on Wednesday said the Supreme Court order on the Karnataka political crisis nullifying the whip and providing "blanket protection" to MLAs who have betrayed public mandate sets a "terrible judicial precedent". But, Here is the Law experts opinion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X