• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮ್ಯಾಜಿಕ್ ನಂಬರ್ ಸಿಕ್ಕರೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿಲ್ಲವೇಕೆ?

|
   ಮ್ಯಾಜಿಕ್ ನಂಬರ್ ಸಿಕ್ಕಿದರೂ ಸರ್ಕಾರ ರಚನೆಗೆ ಬಿಜೆಪಿ ಮುಂದಾಗಿಲ್ಲ ಯಾಕೆ? | Oneindia Kannada

   ಬೆಂಗಳೂರು, ಜುಲೈ 11: ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಶಾಸಕರ ರಾಜೀನಾಮೆ ನಂತರವೇ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ಅಲ್ಪಮತಕ್ಕೆ ಕುಸಿದಿತ್ತು. ಈಗ ಈ ಸಂಖ್ಯೆ 18ಕ್ಕೇರಿದೆ. ತಾಂತ್ರಿಕವಾಗಿ ಬಿಜೆಪಿಗೆ ಬಹುಮತ ಸಿಕ್ಕಿದೆ, ಆದರೆ, ಸರ್ಕಾರ ರಚನೆಗೆ ಇನ್ನು ಮುಂದಾಗಿಲ್ಲವೇಕೆ? ವಿಧಾನಸಭೆಯಲ್ಲಿ ಜುಲೈ 11ಕ್ಕೆ ಸಂಖ್ಯಾಬಲ ಎಷ್ಟಿದೆ? ಕರ್ನಾಟಕದ ರಾಜಕೀಯ ನಾಟಕ, ನಂಬರ್ ಗೇಮ್ ಗೆ ಬಜೆಟ್ ಅಧಿವೇಶನ ಅಂತಿಮ ಷರಾ ಹಾಕಲಿದೆಯೇ? ಉತ್ತರ ಇಲ್ಲಿದೆ.

   ಸರ್ಕಾರ ಬೀಳಿಸಬೇಕಾದರೆ ಬಿಜೆಪಿ ಕನಿಷ್ಠ 14 ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಬೇಕು. ನಂತರ ನಡೆಯುವ ಉಪ ಚುನಾವಣೆಯಲ್ಲಿ ಕನಿಷ್ಠ 8-10 ಸ್ಥಾನ ಗೆಲ್ಲಬೇಕಾಗಿದೆ ಎಂಬ ಸಣ್ಣ ಸತ್ಯ ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. 14 ಅಲ್ಲ 20 ಮಂದಿ ಶಾಸಕರು ರಾಜೀನಾಮೆ ಘೋಷಣೆ, ಸಲ್ಲಿಕೆ ಮಾಡಿದರೂ ಪ್ರಯೋಜನವಿಲ್ಲ.

   ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು

   ಹೊಸ ಸರ್ಕಾರದ ಉದಯ, ಮೈತ್ರಿ ಸರ್ಕಾರದ ಪತನ ಎಲ್ಲವೂ ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ. ಸದ್ಯ ಸರಣಿ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಅಂಗೀಕರಿಸಿದರೆ ಮಾತ್ರ ಬಿಜೆಪಿ ತನ್ನ ಮುಂದಿನ ನಡೆ ಇಡಬಹುದು. ಈಗ ರಾಜೀನಾಮೆ ಸಲ್ಲಿಸಿರುವ ಶಾಸಕರು ಮತ್ತೊಮ್ಮೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸುವುದು ಅನಿವಾರ್ಯವಾಗಿದೆ.

   ಕುತೂಹಲ ಮೂಡಿಸಿದ ಕುಮಾರಸ್ವಾಮಿ ನಡೆ

   ಕುತೂಹಲ ಮೂಡಿಸಿದ ಕುಮಾರಸ್ವಾಮಿ ನಡೆ

   ಇನ್ನೊಂದೆಡೆ,ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದರು.

   ಅಲ್ಪಮತಕ್ಕೆ ಕುಸಿದ ಸರ್ಕಾರ, ಕರ್ನಾಟಕ ಬಿಜೆಪಿ ಮುಂದಿರುವ ಆಯ್ಕೆಗಳೇನು?

   ಸರ್ಕಾರ ಉಳಿಸಲು 22 ಸಚಿವರುಗಳು ರಾಜೀನಾಮೆ ನೀಡಿ, ಅತೃಪ್ತರಿಗೆ ಸ್ಥಾನ ಕಲ್ಪಿಸಲು ಯೋಚನೆ ಹಾಕಿಕೊಂಡಿದ್ದಾರೆ. ಸಿಎಂ, ಡಿಸಿಎಂ ಕೂಡಾ ಬದಲಾಗಬಹುದು. ಕುಮಾರಸ್ವಾಮಿ ಅವರು ಯಾವ ರಗಳೆಯೂ ಬೇಡ ಎಂದು ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ಘೋಷಿಸಬಹುದು. ಒಂದು ವೇಳೆ ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದರೆ, ಬಿಜೆಪಿ ತನ್ನ ಹಕ್ಕು ಮಂಡನೆ ಮಾಡಲು ಮುಂದಾಗಬಹುದು.

   13 ಶಾಸಕರ ರಾಜೀನಾಮೆಗೂ ಮುನ್ನ

   13 ಶಾಸಕರ ರಾಜೀನಾಮೆಗೂ ಮುನ್ನ

   13 ಶಾಸಕರ ರಾಜೀನಾಮೆಗೂ ಮುನ್ನ(ಜುಲೈ 05) ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ:

   ಒಟ್ಟು ಸದಸ್ಯ ಬಲ : 224

   ಕಾಂಗ್ರೆಸ್ + ಜೆಡಿಎಸ್ : 118

   ಮ್ಯಾಜಿಕ್ ನಂಬರ್ : 113

   ಬಿಜೆಪಿ : 105

   ಬಿಎಸ್ ಪಿ: 1 (ಎನ್ ಮಹೇಶ್)

   ಕಾಂಗ್ರೆಸ್ : 79

   ಜೆಡಿಎಸ್ : 37

   ಪಕ್ಷೇತರ : 2 (ಎಚ್ ನಾಗೇಶ್, ಶಂಕರ್)

   13 ಮಂದಿ ಶಾಸಕರ ಸರಣಿ ರಾಜೀನಾಮೆ ಬಳಿಕ

   13 ಮಂದಿ ಶಾಸಕರ ಸರಣಿ ರಾಜೀನಾಮೆ ಬಳಿಕ

   ಜುಲೈ 06ರಂದು 13 ಮಂದಿ ಶಾಸಕರ ಸರಣಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ

   ಒಟ್ಟು ಸದಸ್ಯ ಬಲ : 211

   ಕಾಂಗ್ರೆಸ್ + ಜೆಡಿಎಸ್ : 105

   ಮ್ಯಾಜಿಕ್ ನಂಬರ್ : 106

   ಬಿಜೆಪಿ : 105

   ಬಿಎಸ್ ಪಿ: 1

   ಕಾಂಗ್ರೆಸ್ : 69

   ಜೆಡಿಎಸ್ : 34

   ಪಕ್ಷೇತರ : 2

   16 ಮಂದಿ ರಾಜೀನಾಮೆ ಬಳಿಕ

   16 ಮಂದಿ ರಾಜೀನಾಮೆ ಬಳಿಕ

   ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:

   ಒಟ್ಟು ಸದಸ್ಯ ಬಲ : 224 -16

   ಕಾಂಗ್ರೆಸ್ + ಜೆಡಿಎಸ್ : 101

   ಮ್ಯಾಜಿಕ್ ನಂಬರ್ : 105

   ಬಿಜೆಪಿ : 107

   ಬಿಎಸ್ ಪಿ: 1 (ಎನ್ ಮಹೇಶ್)

   ಎಲ್ಲಾ 16 ಶಾಸಕರ ರಾಜೀನಾಮೆಗಳು ಅಂಗೀಕಾರವಾದರೆ, ಬಿಜೆಪಿ ತನ್ನ ಮುಂದಿನ ನಡೆ ಇಡಬಹುದು. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಹೊಂದಿರುವ ಕಾರಣಕ್ಕೆ ಬಹುಮತ ಪಡೆದ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಸೂಚಿಸಬಹುದು. ಈ ನಡುವೆ ಕುಮಾರಸ್ವಾಮಿ ಅವರೇ ವಿಶ್ವಾಸ ಮತ ಯಾಚನೆಗೆ ಮುಂದಾದರೂ ಅಚ್ಚರಿಪಡಬೇಕಾಗಿಲ್ಲ. ಎಲ್ಲದ್ದಕ್ಕೂ ಜುಲೈ 12ರಿಂದ ಆರಂಭವಾಗಲಿರುವ ಅಧಿವೇಶನ ಉತ್ತರ ನೀಡಲಿದೆ.

   English summary
   The coalition government in Karnataka is on the brink of a collapse after 22 ministers from the Congress and JD(S) resigned. More than 16 MLAs have resigned, Speaker Ramesh Kumar is yet to accept the resignation and BJP technically secured magic number but has to wait till all the resignation letters accepted.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X