• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

|
   ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? | Oneindia Kannada

   ಬೆಂಗಳೂರು, ಜುಲೈ 18: ಶಾಸಕರ ಸರಣಿ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡಿದ್ದಾರೆ ಎಂಬ ಕೇಸಿನ ಬಗ್ಗೆ ಸುಪ್ರೀಂಕೋರ್ಟಿನ ಮಧ್ಯಂತರ ತೀರ್ಪು ನೀಡಿದ ಬಳಿಕ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತ ಯಾಚನೆ ಕುತೂಹಲ ಕೆರಳಿಸಿದೆ.

   ಜುಲೈ 06ರಿಂದ ಆರಂಭವಾದ ರಾಜೀನಾಮೆ ನೀಡುವ ನಾಟಕ ಇನ್ನೂ ಮುಂದುವರೆದಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಅತೃಪ್ತ ಶಾಸಕರಿಗೆ ಹೆಚ್ಚಿನ ಬಲ ಬಂದಿದೆ ಎನ್ನಲಾಗಿದೆ. ಆದರೆ, ಎಲ್ಲವೂ ಸ್ಪೀಕರ್ ಕೈಲಿದ್ದು, ರಾಜೀನಾಮೆ ಅಂಗೀಕರಿಸಿದರೆ, ಸದನದಲ್ಲಿ ಸಂಖ್ಯಾಬಲ ಲೆಕ್ಕಾಚಾರದಲ್ಲಿ ಎಲ್ಲಾ ರಾಜಕೀಯ ತಂತ್ರಗಳು ಉಲ್ಟಾ ಹೊಡೆಯಲಿವೆ. ಕೊನೆಯದಾಗಿ ಲೆಕ್ಕಕ್ಕೆ ಬರುವುದು ಯಾವ ಪಕ್ಷಕ್ಕೆ ಎಷ್ಟು ಸದಸ್ಯರ ಬಲ ಇದೆ? ಎಂಬುದು ಮಾತ್ರ.

   ವಿಶ್ವಾಸಮತಯಾಚನೆ : ಸದನದಲ್ಲಿ ಏನೆಲ್ಲ ಘಟನೆಗಳು ನಡೆಯಲಿವೆ?

   ಜುಲೈ 18ರಂದು ಬೆಳಗ್ಗೆ 11 ಗಂಟೆಗೆ ವಿಶ್ವಾಸಯತ ಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ. ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾಷಣ ಮಾಡಿ, ವಿಶ್ವಾಸಮತ ಯಾಚಿಸಿ ಮತ ಹಾಕಲು ಕೋರಬಹುದು ಅಥವಾ ವಿಶ್ವಾಸಮತಯಾಚನೆ ಬಗ್ಗೆ ಚರ್ಚೆ ಆರಂಭಿಸಬಹುದು. ಈ ಚರ್ಚೆಯ ಅವಧಿಯನ್ನು ಸ್ಪೀಕರ್ ನಿರ್ಧರಿಸಲಿದ್ದು, ನಿಮಿಷ, ಗಂಟೆ, ದಿನದ ಮಟ್ಟಿಗೆ ಅವಕಾಶ ನೀಡಬಹುದು. ಇಡೀ ಪ್ರಕ್ರಿಯೆ ಹೇಗೆ ಹೇಗೆ ನಡೆಸಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸಲಿದ್ದಾರೆ. ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಸದನದ ಘಟನಾವಳಿಗಳ ಬಗ್ಗೆ ಈಗಾಗಲೆ ಓದಿರುತ್ತೀರಿ, ಈಗ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬಗ್ಗೆ ಇನ್ನಷ್ಟು ವಿವರ ತಿಳಿದುಕೊಳ್ಳಿ...

   ವಿಶ್ವಾಸಮತ ಹೇಗೆ ನಡೆಯುತ್ತದೆ?

   ವಿಶ್ವಾಸಮತ ಹೇಗೆ ನಡೆಯುತ್ತದೆ?

   ವಿಶ್ವಾಸಮತ ಹೇಗೆ ನಡೆಯುತ್ತದೆ? ಸಾಮಾನ್ಯವಾಗಿ ಧ್ವನಿಮತದ ಮೂಲಕ ವಿಶ್ವಾಸಮತ ನಡೆಯುತ್ತದೆ. ಧ್ವನಿಮತದ ಮೂಲಕ ನಡೆದರೆ ವಿಶ್ವಾಸಮತದ ಪರವಾಗಿರುವವರು 'ಹೌದು' ಅಥವಾ 'ಇಲ್ಲ' ಎನ್ನುವ ಮೂಲಕ ಮತ ಚಲಾಯಿಸುತ್ತಾರೆ. ಕೈ ಎತ್ತುವ ಅಥವಾ ಚೀಟಿಯ ಮೂಲಕ ಅಥವಾ ಎಲೆಕ್ಟ್ರಾನಿಕ್ ಎಂತ್ರದ ಮೂಲಕವೂ ಮತ ಚಲಾವಣೆ ನಡೆಯುತ್ತದೆ. ಹಾಜರಿರುವ ಸದಸ್ಯರು ಕೈ ಎತ್ತಿ ಧ್ವನಿಮತ ಕೂಗಬಹುದು. * ಮತದಾನ ಪ್ರಕ್ರಿಯೆ ಬಳಿಕ, ಸ್ಪೀಕರ್ ಅವರು ಫಲಿತಾಂಶ ಘೋಷಿಸುತ್ತಾರೆ. ಆದರೆ, ಕೆಲವೊಮ್ಮೆ ಧ್ವನಿಮತ ಸರಿಯಾಗಿ ದಾಖಲಾಗದೆ ಗಲಾಟೆಗಳು ನಡೆದ ಪ್ರಸಂಗಗಳು ಘಟಿಸಿವೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಬಗ್ಗೆ ಭಾರಿ ಕೋಲಾಹಲವೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

   ಬಿಜೆಪಿ ಒತ್ತಡಕ್ಕೆ ಮಣಿದ ಸ್ಪೀಕರ್: ಗುರುವಾರಕ್ಕೆ ಕಲಾಪ ಮುಂದೂಡಿಕೆ

   ವಿಭಾಗೀಕರಣ ಎಂದರೇನು?

   ವಿಭಾಗೀಕರಣ ಎಂದರೇನು?

   ವಿಭಾಗೀಕರಣ ಎಂದರೇನು? : ಧ್ವನಿಮತದ ಮೂಲಕ ಬಂದ ಮತಎಣಿಕೆಯ ವಿರುದ್ಧ ಯಾವ ಪಕ್ಷವಾದರೂ ಧ್ವನಿಯೆತ್ತಿದರೆ, ಬಿದ್ದ ಮತಗಳ ಸರಿಯಾದ ಲೆಕ್ಕ ತೆಗೆದುಕೊಳ್ಳಲು ವಿಭಾಗೀಕರಣ ಮಾಡಲಾಗುತ್ತದೆ. ಆಗ, ಸ್ಪಷ್ಟ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ.

   ವಿಭಾಗೀಕರಣದ ಅಗತ್ಯವೇನು?

   ವಿಭಾಗೀಕರಣದ ಅಗತ್ಯವೇನು?

   ಯಾವಾಗ ವಿಭಾಗೀಕರಣದ ಅಗತ್ಯವಿರುತ್ತದೆ? ಇದನ್ನು ಸಾಮಾನ್ಯವಾಗಿ ಸಂಸತ್ತಿನಲ್ಲಿ ಪಾಲಿಸಲಾಗುತ್ತದೆ. ವಿಧಾನಸಭೆಗಳಲ್ಲಿ ಪಾಲಿಸಲಾಗುವುದಿಲ್ಲ. ಯಾವುದಾದರೂ ಸಾಂವಿಧಾನಿಕ ತಿದ್ದುಪಡಿಗೆ ಮತಹಾಕುವ ಸಮಯದಲ್ಲಿ ಈ ವಿಭಾಗೀಕರಣದ ಅಗತ್ಯವಿರುತ್ತದೆ.

   ಎಚ್‌ಡಿಕೆ ಪರ ಸಿದ್ದರಾಮಯ್ಯ ಬೆಂಬಲಿಗರು ನಿಲ್ತಾರಾ?

   ಪ್ರಕ್ರಿಯೆ ಬಗ್ಗೆ ಅಸಮಾಧಾನವಿದ್ದರೆ?

   ಪ್ರಕ್ರಿಯೆ ಬಗ್ಗೆ ಅಸಮಾಧಾನವಿದ್ದರೆ?

   ಈ ಪ್ರಕ್ರಿಯೆಯ ಬಗ್ಗೆ ಯಾವುದಾದರೂ ಪಕ್ಷ ಅಸಮಾಧಾನ ತೋರಿದರೆ? ಇಂಥ ಸಂದರ್ಭ ಬಂದಾಗ ರಾಜ್ಯಪಾಲರಿಗೆ ಮನವಿ ಸಲ್ಲಿಸಬಹುದು. ಆಗ, ರಾಜ್ಯಪಾಲರು ಮತ್ತೊಮ್ಮೆ ಸದನವನ್ನು ಕರೆದು ಮತ್ತೆ ವಿಶ್ವಾಸಮತ ಯಾಚಿಸಲು ಸೂಚಿಸಬಹುದು. ರಾಜ್ಯಪಾಲರು ಸಭಾಧ್ಯಕ್ಷರಿಗೆ ಸರಿಯಾಗಿ ನಿರ್ವಹಿಸಲು ಕೆಲ ಸೂಚನೆಗಳನ್ನೂ ನೀಡಬಹುದು. ಮತ್ತೂ ಸಮಸ್ಯೆ ಬಗೆಹರಿಯದಿದ್ದರೆ ಕೋರ್ಟಿನ ಕದವನ್ನೂ ತಟ್ಟಬಹುದು.

   ವಿಧಾನಸಭೆ ಬಲಾಬಲ ಎಷ್ಟಿದೆ?

   ವಿಧಾನಸಭೆ ಬಲಾಬಲ ಎಷ್ಟಿದೆ?

   ಜುಲೈ 17ರಂದು ವಿಧಾನಸಭೆ ಬಲಾಬಲ ಜುಲೈ 17ರಂದು ವಿಧಾನಸಭೆ ಬಲಾಬಲ(16 ಶಾಸಕರ ರಾಜೀನಾಮೆ ಅಂಗೀಕಾರವಾದರೆ)

   ಒಟ್ಟು ಸದಸ್ಯ ಬಲ : 224-16=208

   ಕಾಂಗ್ರೆಸ್ + ಜೆಡಿಎಸ್ : 101 +1 (ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದರೆ)

   ಮ್ಯಾಜಿಕ್ ನಂಬರ್ : 105

   ಬಿಜೆಪಿ : 105+2 (ಪಕ್ಷೇತರ)=107

   ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 16 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಎಲ್ಲರ ರಾಜೀನಾಮೆ ಅಂಗೀಕಾರವಾದರೆ, ವಿಧಾನಸಭೆಯಲ್ಲಿ 224 ಸದಸ್ಯರ ಸಂಖ್ಯಾಬಲ 208ಕ್ಕೆ ಕುಸಿಯಲಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್- ಜೆಡಿಎಸ್ಸಿಗೆ ಕನಿಷ್ಠ 101 ಶಾಸಕರ ಬೆಂಬಲ ಬೇಕಾಗುತ್ತದೆ. ಇನ್ನೊಂದೆಡೆ, 105 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಸಿಗುವ ಸಾಧ್ಯತೆಯಿದೆ. ವಿಶ್ವಾಸ ಮತಯಾಚನೆಯಲ್ಲಿ ಸರ್ಕಾರದ ವಿರುದ್ಧ ಮತಗಳು ಅಧಿಕವಾಗಿ ಬೀಳುವ ನಿರೀಕ್ಷೆಯನ್ನು ಕೇಸರಿ ಪಡೆ ಹೊಂದಿದೆ.

   English summary
   Karnataka Crisis :What forms or trust votes can take place? Here is the procedure.A voice vote is a routine,In a voice vote those in support of the motion say 'ayes' (yes) and those against it say 'nay (no).'
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more