ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು | K. R. Ramesh Kumar | Oneindia Kannada

ಬೆಂಗಳೂರು, ಜುಲೈ 09: ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರತೆಯ ನಡುವೆಯೂ ಸರ್ಕಾರವನ್ನು ಉಳಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ. ಇನ್ನೊಂದೆಡೆ ಸರ್ಕಾರ ರಚನೆ ಹಕ್ಕು ಮಂಡಿಸಲು ಬಿಜೆಪಿ ಸಿದ್ಧವಾಗುತ್ತಿದೆ. ಎಲ್ಲಕ್ಕೂ ಮುಂದಿನ ಅಧಿವೇಶನ ವೇದಿಕೆ ಒದಗಿಸಲಿದೆ.

13 ಶಾಸಕರ ರಾಜೀನಾಮೆ ಹಾಗೂ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ.

ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ

ಆದರೆ, ಸರ್ಕಾರ ಇನ್ನು ಬಿದ್ದಿಲ್ಲ, ಅತೃಪ್ತರು ತಮ್ಮ ಬೇಡಿಕೆಯೊಂದಿಗೆ ಮರಳಿ ಬಂದು ಭೇಟಿಯಾಗಲಿ, ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಕರ್ನಾಟಕ ಉಸ್ತುವಾರಿ ಕೆಸಿ ವೇಣುಗೋಪಾಲ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದೆಲ್ಲವೂ ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿದೆ.

Karnataka crisis: 7 options before Speaker while deciding on resignation of MLAs

ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈ ಮೂಲಕ ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಎಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ.

ಸಿದ್ದರಾಮಯ್ಯ ಸಿಎಂ, ಎಚ್ ಡಿ ರೇವಣ್ಣ ಡಿಸಿಎಂ : ದೇವೇಗೌಡರ ಅಸ್ತ್ರಸಿದ್ದರಾಮಯ್ಯ ಸಿಎಂ, ಎಚ್ ಡಿ ರೇವಣ್ಣ ಡಿಸಿಎಂ : ದೇವೇಗೌಡರ ಅಸ್ತ್ರ

ಈ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವ ಶಾಸಕರ ಭವಿಷ್ಯ, ಸರ್ಕಾರದ ಭವಿಷ್ಯ ಈಗ ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ. ಸ್ಪೀಕರ್ ಅವರ ಮುಂದೆ ಅನೇಕ ಆಯ್ಕೆಗಳಿದ್ದರೂ ಪ್ರಮುಖ 7 ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.

ಸರ್ಕಾರದ ಭವಿಷ್ಯ ಈಗ ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ

ಸರ್ಕಾರದ ಭವಿಷ್ಯ ಈಗ ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ

ಈ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವ ಶಾಸಕರ ಭವಿಷ್ಯ, ಸರ್ಕಾರದ ಭವಿಷ್ಯ ಈಗ ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ. ಸ್ಪೀಕರ್ ಅವರ ಮುಂದೆ ಅನೇಕ ಆಯ್ಕೆಗಳಿದ್ದರೂ ಪ್ರಮುಖ 7 ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.
ಜುಲೈ 09 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
ಒಟ್ಟು ಸದಸ್ಯ ಬಲ : 211
ಕಾಂಗ್ರೆಸ್ + ಜೆಡಿಎಸ್ : 104
ಮ್ಯಾಜಿಕ್ ನಂಬರ್ : 106
ಬಿಜೆಪಿ : 105+1(ಪಕ್ಷೇತರ ಎಚ್ ನಾಗೇಶ್)
ಬಿಎಸ್ ಪಿ: 1
ಕಾಂಗ್ರೆಸ್ : 69
ಜೆಡಿಎಸ್ : 34
ಪಕ್ಷೇತರ : 1 (ಕಾಂಗ್ರೆಸ್ ಸೇರಿರುವ ಶಂಕರ್)
***

ರಮೇಶ್ ಮುಂದಿರುವ ಮೊದಲ ಆಯ್ಕೆ

ರಮೇಶ್ ಮುಂದಿರುವ ಮೊದಲ ಆಯ್ಕೆ

* ಎಲ್ಲಾ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬಹುದು.
-ಈಗ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ 13 ಶಾಸಕರ ರಾಜೀನಾಮೆ ಪತ್ರವನ್ನು ಯಾವುದೇ ಪ್ರಶ್ನೆ ಎತ್ತದೆ, ಅಂಗೀಕರಿಸಿ ಸಹಿ ಹಾಕಬಹುದು. ಇದರಿಂದ ಬಿಜೆಪಿಗೆ ತಕ್ಷಣಕ್ಕೆ ಲಾಭವಾಗಲಿದ್ದು, ರಾಜೀನಾಮೆ ಅಂಗೀಕಾರವಾಗಿದ್ದು, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಆಗ್ರಹಿಸಲು ಸೂಕ್ತ ಸಾಕ್ಷ್ಯ ಸಿಕ್ಕಂತಾಗುತ್ತದೆ.

ರಮೇಶ್ ಮುಂದಿರುವ ಎರಡನೇ ಆಯ್ಕೆ

ರಮೇಶ್ ಮುಂದಿರುವ ಎರಡನೇ ಆಯ್ಕೆ

* ಎಲ್ಲಾ ಶಾಸಕರು ಖುದ್ದು ಹಾಜರಾಗಿ, ರಾಜೀನಾಮೆಯನ್ನು ಕೈಗೆ ನೀಡಬೇಕು ಎನ್ನಬಹುದು.

- ವಿಜಯನಗರದ ಶಾಸಕ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಾಗ ಸ್ಪೀಕರ್ ರಮೇಶ್ ಕುಮಾರ್ ಅವರು ಖುದ್ದು ಹಾಜರಾಗಿ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಫ್ಯಾಕ್ಸ್ ನಲ್ಲಿ ರಾಜೀನಾಮೆ ಕಳಿಸಲು ಅಂಚೆ ಕಚೇರಿಯಲ್ಲಿ ನಾನಿಲ್ಲ, ನನ್ನ ಮನೆಗೆ ಬರುವುದು ಬೇಕಿಲ್ಲ. ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಲಿ ಎಂದು ಎಚ್ಚರಿಸಿದ್ದರು.

ರಮೇಶ್ ಮುಂದಿರುವ ಆಯ್ಕೆ 3

ರಮೇಶ್ ಮುಂದಿರುವ ಆಯ್ಕೆ 3

* ಎಲ್ಲಾ ರಾಜೀನಾಮೆ ಅಂಗೀಕಾರ ವಿಳಂಬ ಮಾಡಬಹುದು. ಕಡತ ಕೈ ತಲುಪಿಲ್ಲ ಎನ್ನಬಹುದು.

- ಆನಂದ್ ಸಿಂಗ್ ರಾಜೀನಾಮೆ ಪ್ರಹಸನದ ನಂತರ ಊರಿಗೆ ತೆರಳಿ, ನೆಂಟರೊಬ್ಬರ ಆರೋಗ್ಯದ ಬಗ್ಗೆ ವಿಚಾರಿಸಲು ಬಿಡುವು ಮಾಡಿಕೊಂಡ ಸ್ಪೀಕರ್ ರಮೇಶ್ ಕುಮಾರ್ ಅವರು ಜುಲೈ 09ರ ತನಕ ಕಚೇರಿಗೆ ಬರುವುದಿಲ್ಲ ಎಂದಿದ್ದರು. ಅದರಂತೆ, ಈಗ ಅವರ ಕಚೇರಿಗೆ ಶಾಸಕರ ರಾಜೀನಾಮೆ ಪತ್ರ ತಲುಪಿದ್ದರೂ, ನನ್ನ ಕೈ ಸೇರಿಲ್ಲ, ಮತ್ತೊಮ್ಮೆ ರಾಜೀನಾಮೆ ಪತ್ರ ತಂದುಕೊಡಲಿ ಎನ್ನಬಹುದು. ಕಡತಗಳು ಲಭ್ಯವಿಲ್ಲ, ಸೂಕ್ತವಾಗಿಲ್ಲ

ರಮೇಶ್ ಮುಂದಿರುವ 4ನೇ ಆಯ್ಕೆ

ರಮೇಶ್ ಮುಂದಿರುವ 4ನೇ ಆಯ್ಕೆ

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಕೂಡಲೇ ಅಧಿವೇಶನಕ್ಕೆ ಬಿಜೆಪಿ ಆಗ್ರಹಿಸಿದರೆ, ಕೂಡಲೇ ಒಪ್ಪಬಹುದು

-ಕರ್ನಾಟಕ ವಿಧಾನಸಭೆ ಅಧಿವೇಶನ ಜುಲೈ 12 ರಿಂದ 20 ರ ತನಕ ಎಂದು ನಿಗದಿಯಾಗಿದೆ. ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ, ಸರ್ಕಾರ ಬಹುಮತ ಸಾಬೀತುಪಡಿಸಲು ಆಗ್ರಹಿಸುವುದು ಎಲ್ಲವೂ ನಡೆಯಬಹುದು. ಇದಕ್ಕೆ ಸ್ಪೀಕರ್ ಅನುಮತಿ ನೀಡಬಹುದು. ಮತದಾನ ಪ್ರಕ್ರಿಯೆಗೆ ಶಾಸಕರು ಗೈರು ಹಾಜರಾದರೆ ಮುಂದಿನ ಕ್ರಮ ಜರುಗಿಸಬಹುದು.

ರಮೇಶ್ ಮುಂದಿರುವ ಆಯ್ಕೆ 5

ರಮೇಶ್ ಮುಂದಿರುವ ಆಯ್ಕೆ 5

ರಾಜೀನಾಮೆ ನೀಡಿರುವ ಶಾಸಕರಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷದವರು ವಿಪ್ ಜಾರಿಗೊಳಿಸಬಹುದು.

ವಿಪ್ ಜಾರಿಗೊಳಿಸುವ ಮೂಲಕ ಕಡ್ಡಾಯವಾಗಿ ಸ್ಪೀಕರ್ ಮುಂದೆ ಖುದ್ದು ಹಾಜರಾಗುವಂತೆ ಮಾಡಬಹುದು. ರಾಜೀನಾಮೆ ನೀಡಿದ್ದರೂ ತಾಂತ್ರಿಕವಾಗಿ ಇನ್ನೂ ಪಕ್ಷದಲ್ಲಿರುತ್ತಾರೆ. ಹೀಗಾಗಿ, ಸ್ಪೀಕರ್ ಆದೇಶಕ್ಕೆ ಒಳಪಟ್ಟಿರುತ್ತಾರೆ. ಇದಲ್ಲದೆ, ಸದನದ ಕಲಾಪಕ್ಕೆ ಹಾಜರಾಗುವಂತೆ, ಮೈತ್ರಿ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಿದರೆ, ಸರ್ಕಾರದ ಪರ ಮತ ಹಾಕುವಂತೆ ವಿಪ್ ಜಾರಿಗೊಂಡರೆ, ಶಾಸಕರ ಬಲಾಬಲದ ಎಣಿಕೆ, ಮತದಾನ ಪ್ರಕ್ರಿಯೆ ಎಲ್ಲವೂ ಸ್ಪೀಕರ್ ಕೈಲಿರುತ್ತದೆ.
ರಮೇಶ್ ಕುಮಾರ್ ಮುಂದಿರುವ ಆಯ್ಕೆ 6

ರಮೇಶ್ ಕುಮಾರ್ ಮುಂದಿರುವ ಆಯ್ಕೆ 6

ವಿಪ್ ಉಲ್ಲಂಘನೆ ಮಾಡಿದರೆ, ಜನಪ್ರತಿನಿಧಿ ಕಾಯ್ದೆ 164 ಅನ್ವಯ ಕ್ರಮ ಜರುಗಿಸಬಹುದು.
-
ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸದನದ ಕಲಾಪಕ್ಕೆ ಹಾಜರಾಗದ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಕ್ಕೆ ಕ್ರಮ ಜರುಗಿಸಬಹುದು.

- ಜನಪ್ರತಿನಿಧಿ ಕಾಯ್ದೆ 164 1ಬಿ 10ನೇ ಶೆಡ್ಯೂಲ್ ಅನ್ವಯ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ದೂರು ದಾಖಲಾದರೆ, ಈ ಬಗ್ಗೆ ಕ್ರಮ ಜರುಗಿಸಬಹುದು. ಅಮಾನತು, ಅನರ್ಹತೆ, ಸದನದಿಂದ ಹೊರ ಹಾಕುವುದು ಎಲ್ಲವೂ ಸ್ಪೀಕರ್ ಕೈಲಿರುತ್ತದೆ.

ರಮೇಶ್ ಮುಂದಿರುವ ಆಯ್ಕೆ 7

ರಮೇಶ್ ಮುಂದಿರುವ ಆಯ್ಕೆ 7

* ತಮಿಳುನಾಡು ಮಾದರಿಯಲ್ಲಿ ಎಲ್ಲಾ ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು.

- 10ನೇ ಶೆಡ್ಯೂಲ್ ಪ್ರಕಾರ ದೂರು ದಾಖಲಾಗಿ,ವಿಪ್ ಉಲ್ಲಂಘನೆ ಎಲ್ಲವನ್ನು ಪರಿಗಣಿಸಿ ಶಾಸಕರನ್ನು ಉಚ್ಚಾಟಿಸಬಹುದು. ಶಾಸಕರ ವಿರುದ್ಧ ಕ್ರಮ ಜರುಗಿಸಲು ತಮಿಳುನಾಡು ಮಾದರಿಯಲ್ಲಿ ದೂರು ಬಂದರೆ, ಒಟ್ಟಿಗೆ ಪ್ರಯಾಣಿಸಿದ ಚಿತ್ರ, ವಿಡಿಯೋ ಸಾಕ್ಷಿ ಪರಿಗಣಿಸಬಹುದು.

- ಉಚ್ಚಾಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದರೂ ಈ ಶಾಸಕರಿಗೆ ಸಚಿವರಾಗುವ ಯೋಗ ತಕ್ಷಣಕ್ಕೆ ಸಿಗುವುದಿಲ್ಲ. ಉಪ ಚುನಾವಣೆ ಎದುರಿಸಿ ಮತ್ತೆ ಆಯ್ಕೆಯಾದರೂ, ಕೇಸಿನಲ್ಲಿ ಖುಲಾಸೆಗೊಂಡರೆ ಸಚಿವರಾಗಬಹುದು.

16 ಮಂದಿ ರಾಜೀನಾಮೆ ಬಳಿಕ

16 ಮಂದಿ ರಾಜೀನಾಮೆ ಬಳಿಕ

ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:
ಒಟ್ಟು ಸದಸ್ಯ ಬಲ : 224 -16
ಕಾಂಗ್ರೆಸ್ + ಜೆಡಿಎಸ್ : 101

ಮ್ಯಾಜಿಕ್ ನಂಬರ್ : 105
ಬಿಜೆಪಿ : 107

ಬಿಎಸ್ ಪಿ: 1 (ಎನ್ ಮಹೇಶ್)

ಎಲ್ಲಾ 16 ಶಾಸಕರ ರಾಜೀನಾಮೆಗಳು ಅಂಗೀಕಾರವಾದರೆ, ಬಿಜೆಪಿ ತನ್ನ ಮುಂದಿನ ನಡೆ ಇಡಬಹುದು. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಹೊಂದಿರುವ ಕಾರಣಕ್ಕೆ ಬಹುಮತ ಪಡೆದ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಸೂಚಿಸಬಹುದು. ಈ ನಡುವೆ ಕುಮಾರಸ್ವಾಮಿ ಅವರೇ ವಿಶ್ವಾಸ ಮತ ಯಾಚನೆಗೆ ಮುಂದಾದರೂ ಅಚ್ಚರಿಪಡಬೇಕಾಗಿಲ್ಲ. ಎಲ್ಲದ್ದಕ್ಕೂ ಜುಲೈ 12ರಿಂದ ಆರಂಭವಾಗಲಿರುವ ಅಧಿವೇಶನ ಉತ್ತರ ನೀಡಲಿದೆ.

English summary
Amidst the looming crisis in Karnataka, the speaker of the Legislative Assembly would need to take a very important call today(Jul 09). There are several options before the Speaker and below let us take a look at what they are.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X