ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ, 'ನಿಟ್ಟುಸಿರು': 18,341 ರಿಂದ 61,766ರ ವರೆಗೆ, ದಾಖಲೆ!

|
Google Oneindia Kannada News

ಕೊರೊನಾ ಎರಡನೇ ಅಲೆಯ ಹಾವಳಿ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಾ ಸಾಗುತ್ತಿದೆ. ಇನ್ನೊಂದು ಕಡೆ, ಟೆಸ್ಟಿಂಗ್ ಸಂಖ್ಯೆಯೂ ನಿಧಾನವಾಗಿ ವೇಗ ಪಡೆಯುತ್ತಿದೆ. ಗರಿಷ್ಠ ಮಟ್ಟಕ್ಕೇರಿದ್ದ ಕೊರೊನಾ, ಗ್ರಾಮಾಂತರ ಭಾಗಗಳಲ್ಲಿ ಹೆಚ್ಚು ಹರಡಲು ಆರಂಭಿಸಿತ್ತು.

ರಾಜ್ಯದ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ ಕೊರೊನಾ ಹೊಸ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ, ಸಾವಿನ ಸಂಖ್ಯೆ ಇನ್ನೂ ಹತೋಟಿಗೆ ಬರುತ್ತಿಲ್ಲ. ಇದರಲ್ಲಿ ಕಳೆದ ಒಂದು ತಿಂಗಳಿನಿಂದ ಏರಿಳಿಕೆಯಾಗುತ್ತಿದೆ.

ರಾಜ್ಯದಲ್ಲಿ ಅನ್‌ಲಾಕ್ ಮಾಡಲು ತಾಂತ್ರಿಕ ಸಮಿತಿಯ ಸಲಹೆ ಏನು?ರಾಜ್ಯದಲ್ಲಿ ಅನ್‌ಲಾಕ್ ಮಾಡಲು ತಾಂತ್ರಿಕ ಸಮಿತಿಯ ಸಲಹೆ ಏನು?

ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಹೊಸ ಸೋಂಕಿತರ ಸಂಖ್ಯೆ ನಾಲ್ಕು ಸಾವಿರಕ್ಕಿಂತ ಕಮ್ಮಿಯಾಗಿರುವುದು ನೆಮ್ಮದಿಯ ವಿಚಾರ. ಆದರೆ, ಡೆತ್ ರೇಟ್ ಕಮ್ಮಿಯಾಗುತ್ತಿಲ್ಲ, ಕಳೆದ ವಾರಕ್ಕೆ ಹೋಲಿಸಿದರೆ, ಇದರಲ್ಲಿ ಸುಧಾರಣೆಯನ್ನು ಕಾಣಬಹುದು.

ಮೇ ತಿಂಗಳ ಆರಂಭದಲ್ಲಿ ಕೊರೊನಾ ಹಾವಳಿ ರಾಜ್ಯದಲ್ಲಿ ವಿಪರೀತವಾಗಿತ್ತು. ಜೊತೆಗೆ, ಆಕ್ಸಿಜನ್, ಬೆಡ್ ಮುಂತಾದ ಸಮಸ್ಯೆಗಳು ದೇಶದೆಲ್ಲಡೆ ಸುದ್ದಿಯಾಗಿತ್ತು. ಇನ್ನು, ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಳವಾಗಿರುವುದು ನಿರಾಳತೆಯನ್ನು ಮೂಡಿಸಿದೆ. ಆ ಅಂಕಿಅಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

 ಹೊಸ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತು

ಹೊಸ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತು

ಮೇ ತಿಂಗಳ ಆರಂಭದಲ್ಲಿ ಹೊಸ ಸೋಂಕಿತರ ಸಂಖ್ಯೆ ಗಾಭರಿ ಹುಟ್ಟಿಸುವಂತಿತ್ತು. ಮೇ ಒಂದನೇ ತಾರೀಕಿನಂದು ಒಂದೇ ದಿನ 40,990 ಪ್ರಕರಣ ದಾಖಲಾಗಿತ್ತು. ಮೇ ತಿಂಗಳ ಮೊದಲ ಹತ್ತು ದಿನ ಈ ಪ್ರಮಾಣ ಸರಾಸರಿಯಾಗಿ ಇದೇ ರೀತಿಯಲ್ಲಿ ಸಾಗುತ್ತಿತ್ತು. ಮೇ ಹತ್ತರ ನಂತರ, ಹೊಸ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತು.

 ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ

ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ

ಒಂದು ಕಡೆ ಕೊರೊನಾ ಇಳಿಮುಖವಾಗುತ್ತಿರುವುದು ಇನ್ನೊಂದೆಡೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ನಿಟ್ಟುಸಿರು ಬಿಡುವಂತಾಗಿದೆ. ಹೀಗಾಗಿ, ಸಕ್ರಿಯ ಪ್ರಕರಣದಲ್ಲೂ ಭಾರೀ ಇಳಿಕೆಯಾಗುತ್ತಿದೆ.

 61,766ರಕ್ಕೆ ಏರಿದ್ದು ಖುಷಿ ಪಡುವ ವಿಚಾರವಾಗಿದೆ

61,766ರಕ್ಕೆ ಏರಿದ್ದು ಖುಷಿ ಪಡುವ ವಿಚಾರವಾಗಿದೆ

ಮೇ ಒಂದರಂದು ಬಿಡುಗಡೆಯಾದವರ ಸಂಖ್ಯೆ 18,341ವಿತ್ತು. ಅದೇ ತಿಂಗಳ ಕೊನೆಯಲ್ಲಿ ಆ ಸಂಖ್ಯೆ 44,473ಕ್ಕೆ ಏರಿರುವುದು ಕೊರೊನಾ ತಹಬಂದಿಗೆ ಬಂತು ಎನ್ನುವುದರ ಸಂಕೇತದಂತಿದೆ. ಕಳೆದ ತಿಂಗಳಲ್ಲಿ ಒಂದು ದಿನ ಈ ಸಂಖ್ಯೆ 61,766ರಕ್ಕೆ ಏರಿದ್ದು ಖುಷಿ ಪಡುವ ವಿಚಾರವಾಗಿದೆ.

Recommended Video

ಪ್ರಪಂಚದಲ್ಲೇ ಮೊದಲ ಬಾರಿಗೆ ಮಾನವನ ದೇಹದಲ್ಲಿ ಕಾಣಿಸಿಕೊಂಡ H10N3 ವೈರಸ್ | Oneindia Kannada
 ಒಟ್ಟು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ದಾಖಲೆಯ 11,36,689

ಒಟ್ಟು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ದಾಖಲೆಯ 11,36,689

ಮೇ ಒಂದೇ ತಿಂಗಳಲ್ಲಿ ಒಟ್ಟು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ದಾಖಲೆಯ 11,36,689. ಇದರಿಂದ ಒಂದು ಹಂತಕ್ಕೆ ಆರು ಲಕ್ಷ ಸಕ್ರಿಯ ಪ್ರಕರಣ ದಾಖಲಾಗಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿ ಕರ್ನಾಟಕವಿತ್ತು. ಮೇ 31ರಂದು ಸಕ್ರಿಯ ಪ್ರಕರಣ 3,13,730ಕ್ಕೆ ಇಳಿದಿದೆ. ಆ ಮೂಲಕ, ಅರ್ಧಕರ್ಥ ಸಂಖ್ಯೆಯಲ್ಲಿ ಇದು ಇಳಿಮುಖವಾಗಿದೆ.

English summary
A gradual increase in the number of recoveries of Covid-19 patients in Karnataka over the last few days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X