ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ ಅಭಿಯಾನ; ಸಿಬ್ಬಂದಿಗೆ ಭಾನುವಾರ ವಿರಾಮ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24; ಕೋವಿಡ್ ಲಸಿಕೆ ನೀಡುವ ಸಿಬ್ಬಂದಿಗೆ ಭಾನುವಾರ ರಜೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಇನ್ನು ಮುಂದೆ ಭಾನುವಾರ ಲಸಿಕೆ ಸಿಗುವುದಿಲ್ಲ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಈ ಕುರಿತು ಸೂಚನೆ ನೀಡಿದ್ದಾರೆ. ಕೋವಿಡ್ ಲಸಿಕಾ ಅಭಿಯಾನದಲ್ಲಿ ಭಾಗಿಯಾಗಿರುವ ಸಿಬ್ಬಂದಿ ಇನ್ನು ಮುಂದೆ ಭಾನುವಾರ ವಿರಾಮ ಪಡೆಯುವಂತೆ ತಿಳಿಸಿದ್ದಾರೆ.

 18 ವರ್ಷಕ್ಕಿಂತ ಮೇಲ್ಪಟ್ಟ ಶೇ.66ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ 18 ವರ್ಷಕ್ಕಿಂತ ಮೇಲ್ಪಟ್ಟ ಶೇ.66ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ

ಈ ಸುತ್ತೋಲೆ ಪ್ರಕಟವಾಗಿದ್ದು, ಜನವರಿ 16ರಿಂದ ರಾಜ್ಯದಲ್ಲಿ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಹಂತ-ಹಂತವಾಗಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಆರೋಗ್ಯ ಸಿಬ್ಬಂದಿ ಶ್ರಮಿಸುತ್ತಿದ್ದು, ಅವರು ಭಾನುವಾರ ವಿರಾಮ ಪಡೆಯಬಹುದು ಎಂದು ಸುತ್ತೋಲೆ ಹೇಳಿದೆ.

 ಭಾರತದ ಕೊರೊನಾ ಲಸಿಕೆ ಪ್ರಮಾಣಪತ್ರದ ಕುರಿತು ಬ್ರಿಟನ್ ಹೇಳಿದ್ದೇನು? ಭಾರತದ ಕೊರೊನಾ ಲಸಿಕೆ ಪ್ರಮಾಣಪತ್ರದ ಕುರಿತು ಬ್ರಿಟನ್ ಹೇಳಿದ್ದೇನು?

 Karnataka Covid 19 Vaccination No Coronavirus Vaccinations On Sundays

ಎಷ್ಟು ಲಸಿಕೆ ನೀಡಲಾಗಿದೆ?; ಕರ್ನಾಟಕದ ಆರೋಗ್ಯ ಇಲಾಖೆ ಮಾಹಿತಿಯಂತೆ ಗುರುವಾರ ರಾತ್ರಿ 9 ಗಂಟೆಯ ತನಕ 5,39,41,986 ಡೋಸ್ ಲಸಿಕೆಯನ್ನು ನೀಡಲಾಗಿದೆ. ಗುರುವಾರ ಒಂದೇ ದಿನ 1,94,906 ಡೋಸ್ ಲಸಿಕೆ ಕೊಡಲಾಗಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಸಲಾದ ಕೊರೊನಾವೈರಸ್ ಲಸಿಕೆ ಎಷ್ಟು?ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಸಲಾದ ಕೊರೊನಾವೈರಸ್ ಲಸಿಕೆ ಎಷ್ಟು?

ಗುರುವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 46,114 ಡೋಸ್, ಬೆಳಗಾವಿಯಲ್ಲಿ 17,940 ಡೋಸ್ ಮತ್ತು ಕಲಬುರಗಿಯಲ್ಲಿ 13,547 ಡೋಸ್ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 23ರ ಹೆಲ್ತ್ ಬುಲೆಟಿನ್ ಪ್ರಕಾರ 836 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 13,590.

ಅಂತರರಾಜ್ಯ ಮಾರ್ಗಸೂಚಿ ಬದಲು; ಕೋವಿಡ್ ಸಂದರ್ಭದಲ್ಲಿ ಹೊರಡಿಸಿದ್ದ ಅಂತರರಾಜ್ಯ ಪ್ರಯಾಣಿಕರ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಚೆಕ್ ಪೋಸ್ಟ್ ಮೂಲಕ ತಮಿಳುನಾಡಿಗೆ ಹೋಗಲು, ಅಲ್ಲಿಂದ ರಾಜ್ಯಕ್ಕೆ ಬರಲು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಲ್ಲ.

ಇತ್ತೀಚಿನ ತನಕ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿತ್ತು. ಈಗ ಚೆಕ್ ಪೋಸ್ಟ್ ಮೂಲಕ ಸಾಗುವ ಜನರು ಕೋವಿಡ್ 2 ಡೋಸ್ ಲಸಿಕೆಯನ್ನು ಪಡೆದಿರಬೇಕು ಎಂದು ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ.

ಚಾಮರಾಜನಗರ ಜಿಲ್ಲಾಡಳಿ ವಾರದ ಹಿಂದೆಯೇ ಆರ್‌ಟಿಪಿಸಿಆರ್ ವರದಿ ಕಡ್ಡಾಯ ಆದೇಶವನ್ನು ವಾಪಸ್ ಪಡೆದಿತ್ತು. ಆದರೆ ತಮಿಳುನಾಡು ಸರ್ಕಾರ ರಾಜ್ಯದ ಪ್ರವೇಶಕ್ಕೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿತ್ತು.

ಈಗ ಎರಡು ದಿನದಿಂದ ತಮಿಳುನಾಡು ಸಿಬ್ಬಂದಿಗಳು ಸಹ ರಾಜ್ಯಕ್ಕೆ ಬರುವ ಜನರಿಗೆ ಕೋವಿಡ್ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕೇಳುತ್ತಿಲ್ಲ. ಆದರೆ ಇ-ಪಾಸ್ ಮತ್ತು ಕೋವಿಡ್ ಎರಡು ಡೋಸ್ ಲಸಿಕೆಪಡೆದ ಪ್ರಮಾಣ ಪತ್ರವನ್ನು ತೋರಿಸಬೇಕಿದೆ.

ಕೇಂದ್ರದಿಂದಲೇ ಲಸಿಕೆ ಪೂರೈಕೆ; ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್ ಲಸಿಕೆ ನೀಡುವ ವೇಗ ಹೆಚ್ಚಿಸಲು ಹೊಸ ಲಸಿಕಾ ಅಭಿಯಾನವನ್ನು ಜೂನ್ 21 ರಿಂದ ಪ್ರಾರಂಭ ಮಾಡಿದೆ.

ರಾಷ್ಟ್ರೀಯ ಲಸಿಕಾ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಕೆ ಮಾಡುತ್ತಿದೆ. ಹೊಸ ಲಸಿಕಾಕರಣದ ಅಂಗವಾಗಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕರಿಂದ ಲಸಿಕೆ ಖರೀದಿಸಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡುತ್ತದೆ.

ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕೆ ಅಭಿಯಾನವನ್ನು ಭಾರತ ನಡೆಸುತ್ತಿದೆ. ಗುರುವಾರ ಸಂಜೆ 7 ಗಂಟೆಯ ತನಕ 84,08,21,190 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಗುರುವಾರ ಒಂದೇ ದಿನ ದೇಶದಲ್ಲಿ 65,26,432 ಡೋಸ್ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಇದುವರೆಗೂ 62,24,19,377 ಜನರಿಗೆ ಮೊದಲ ಡೋಸ್, 21,84,01,813 ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. 18 ರಿಂದ 44 ವಯೋಮಿತಿಯವರು 34,05,90,440 ಮೊದಲ ಡೋಸ್, 6,88,05,465 ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

Recommended Video

ಮೋದಿ ಅಮೆರಿಕಾಕ್ಕೆ ಭೇಟಿ ಕೊಟ್ಟಿದ್ದಕ್ಕೆ ಚೀನಾ ತಾಲಿಬಾನ್ ಪಾಕಿಸ್ತಾನಕ್ಕೆ ಭಯ ಯಾಕೆ? | Oneindia Kannada

60 ವರ್ಷ ಮೇಲ್ಪಟ್ಟವರು 9,86,82,625 ಮೊದಲ ಡೋಸ್, 5,39,13,425 ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

English summary
In a circular director of the national health campaign said that people who busy in the Corona vaccination drive take leave on on Sundays in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X