• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಕೊರೊನಾವೈರಸ್ ಸಾವಿನ ಲೆಕ್ಕದಲ್ಲಿ 6 ಪಟ್ಟು ಸುಳ್ಳು!?

|
Google Oneindia Kannada News

ಬೆಂಗಳೂರು, ಮೇ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಕರ್ನಾಟಕದಲ್ಲಿ ಸರ್ಕಾರವೇ ನೀಡಿರುವ ಸಾವಿನ ಲೆಕ್ಕಕ್ಕಿಂತ ಆರು ಪಟ್ಟು ಜನರು ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಇದೀಗ ಹೊರ ಬಿದ್ದಿದೆ.

ಕರ್ನಾಟಕದಲ್ಲಿ 2020ರ ಏಪ್ರಿಲ್ ತಿಂಗಳಿನಿಂದ 2021ರ ಮೇ ಅಂತ್ಯದವರೆಗೆ 29,090 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ನಾಗರಿಕ ನೋಂದಣಿ ವ್ಯವಸ್ಥೆ ನೀಡಿರುವ ಅಂಕಿ-ಅಂಶಗಳ ಪ್ರಕಾರ 5.80 ಪಟ್ಟು ಹೆಚ್ಚಾಗಿದೆ. ಅಂದರೆ ರಾಜ್ಯದಲ್ಲಿ 1,67,788 ಜನರು ಕೊರೊನಾವೈರಸ್ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ ಎಂದು "ದಿ ಹಿಂದೂ" ವರದಿ ಮಾಡಿದೆ.

ಕರ್ನಾಟಕದಲ್ಲಿ 5,000ಕ್ಕಿಂತ ಕಡಿಮೆ ಕೊರೊನಾವೈರಸ್ ಪ್ರಕರಣ!ಕರ್ನಾಟಕದಲ್ಲಿ 5,000ಕ್ಕಿಂತ ಕಡಿಮೆ ಕೊರೊನಾವೈರಸ್ ಪ್ರಕರಣ!

ಕಳೆದ ಏಪ್ರಿಲ್ ತಿಂಗಳಿನಲ್ಲೇ ಅತಿಹೆಚ್ಚು ಅಂದರೆ 46,000 ಮತ್ತು ಮೇ ತಿಂಗಳಿನಲ್ಲಿ 77,000ಕ್ಕೂ ಹೆಚ್ಚು ಮಂದಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾವೈರಸ್ ಎರಡನೇ ಅಲೆಯ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದ್ದು, ವಾಸ್ತವದಲ್ಲಿ 53,728 ಹೆಚ್ಚುವರಿ ಸಾವಿನ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಶೇ.3.25ರಷ್ಟು ಅಂದರೆ 16,523 ಸಾವಿನ ಪ್ರಕರಣಗಳನ್ನಷ್ಟೇ ನೋಂದಾಯಿಸಿಕೊಳ್ಳಲಾಗಿದೆ. ಜೂನ್ 19ರ ವೇಳೆಗೆ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆ 33,763ರಷ್ಟಿದೆ.

ಕರ್ನಾಟಕದಲ್ಲಿ ಹೆಚ್ಚುವರಿ ಸಾವಿನ ಲೆಕ್ಕ?

ಕರ್ನಾಟಕದಲ್ಲಿ ಹೆಚ್ಚುವರಿ ಸಾವಿನ ಲೆಕ್ಕ?

'ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗಿಂತಲೂ ಮೊದಲು ರಾಜ್ಯದಲ್ಲಿ ಅಂದರೆ 2015ರ ಜನವರಿಯಿಂದ ಮೇ 2021 ರವರೆಗೆ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ (ತಾತ್ಕಾಲಿಕ ಅಂಕಿ-ಅಂಶಗಳು) ನೋಂದಾಯಿಸಿದ ಸಾವಿನ ಸಂಖ್ಯೆಗಳ ಆಧಾರದ ಮೇಲೆ ಹೆಚ್ಚುವರಿ ಸಾವುಗಳನ್ನು ಲೆಕ್ಕಹಾಕಲಾಗಿದೆ,' ಎಂದು ದಿ ಹಿಂದೂ ವರದಿಯಲ್ಲಿ ಉಲ್ಲೇಖಿಸಿದೆ.

ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸಾಮ್ಯತೆ

ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸಾಮ್ಯತೆ

ಕೊರೊನಾವೈರಸ್ ಹೆಚ್ಚುವರಿ ಸಾವಿನ ಲೆಕ್ಕಾಚಾರ ಹಾಕುವಲ್ಲಿ ಕರ್ನಾಟಕದ ಜೊತೆ ತಮಿಳುನಾಡು ಕೂಡ ಹಿಂದೆ ಉಳಿದಿದೆ. ಕರ್ನಾಟಕದಲ್ಲಿ 5.8 ಪಟ್ಟು ಅಂದರೆ 1,67,788 ಜನರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದು, ಆಂಧ್ರ ಪ್ರದೇಶದಲ್ಲಿ 6.2 ಪಟ್ಟು ಅಂದರೆ ಹೆಚ್ಚುವರಿಯಾಗಿ 1,51,408 ಜನರು ಮೃತಪಟ್ಟಿದ್ದಾರೆ. 2021ರ ಆರಂಭದಿಂದ ಈಚೆಗೆ ಕರ್ನಾಟಕದಲ್ಲಿ ಸಾವಿನ ಪ್ರಮಾಣ 4.7 ಪಟ್ಟು ಹೆಚ್ಚಾಗಿದ್ದು, ತಮಿಳುನಾಡಿನಲ್ಲಿ 6.5 ಪಟ್ಟು ಹೆಚ್ಚಿದೆ. ಸರ್ಕಾರ ನೀಡಿದ ಅಂಕಿ ಅಂಶ ಮತ್ತು ನಾಗರಿಕೆ ನೋಂದಣಿ ವ್ಯವಸ್ಥೆಯಲ್ಲಿನ ವ್ಯತ್ಯಾಸದಲ್ಲಿ ಮಧ್ಯ ಪ್ರದೇಶ 42 ಮತ್ತು ಆಂಧ್ಕ ಪ್ರದೇಶದಲ್ಲಿ ಕೇವಲ 34 ಆಗಿದ್ದು, ಇದು ತೀರಾ ಕಡಿಮೆ ಎನಿಸಿದೆ.

ಬಿಬಿಎಂಪಿ ನೀಡಿರುವ ಲೆಕ್ಕಾಚಾರ ಹೇಗಿದೆ?

ಬಿಬಿಎಂಪಿ ನೀಡಿರುವ ಲೆಕ್ಕಾಚಾರ ಹೇಗಿದೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡಿರುವ ಸಾವಿನ ಅಂಕಿ-ಅಂಶಗಳನ್ನು "ದಿ ಹಿಂದೂ" ಪ್ರಕಟಿಸಿದೆ. ಕಳೆದ 2020ರ ಮೇ ತಿಂಗಳಿನಿಂದ 2021ರ ಮೇ ತಿಂಗಳವರೆಗೂ ನಾಗರಿಕ ನೋಂದಣಿ ವ್ಯವಸ್ಥೆ ಪ್ರಕಾರ, 40,264 ನೊಂದಾಯಿತಗೊಂಡಿದ್ದು, 75,441 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತು 2015-2019ರ ಅವಧಿಯಲ್ಲಿ ದಾಖಲಾದ ಮೂಲ ಮರಣ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 31,029 ಸಾವಿನ ಪ್ರಕರಣ ದಾಖಲಾಗಿದೆ.

ಕೊವಿಡ್-19 ಸಾವಿನ ಲೆಕ್ಕಾಚಾರದಲ್ಲಿ ವ್ಯತ್ಯಾಸ?

ಕೊವಿಡ್-19 ಸಾವಿನ ಲೆಕ್ಕಾಚಾರದಲ್ಲಿ ವ್ಯತ್ಯಾಸ?

ಕರ್ನಾಟಕದಲ್ಲಿ ನೋಂದಾಯಿಸಲಾದ ಮತ್ತು ವಾಸ್ತವದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಎಷ್ಟರ ಮಟ್ಟಿಗೆ ವ್ಯತ್ಯಾಸವಿದೆ ಎಂಬುದನ್ನು ಈ ಅಂಕಿ-ಅಂಶಗಳಿಂದ ತಿಳಿದುಕೊಳ್ಳೋಣ.

ಅವಧಿ ಹೆಚ್ಚುವರಿ ಸಾವಿನ ಸಂಖ್ಯೆ ನೊಂದಾಯಿತ ಸಾವಿನ ಸಂಖ್ಯೆ ಕರ್ನಾಟಕ ಯುಎಫ್ ಪ್ರಮಾಣ ತಮಿಳುನಾಡು ಯುಎಫ್ ಪ್ರಮಾಣ
ಏಪ್ರಿಲ್ 2020 ರಿಂದ ಮೇ 2021 1,67,788 29,090 5.8 6.2
2021 ಜನವರಿ ಯಿಂದ ಮೇ 80,562 4.7 6.5
2021 ಏಪ್ರಿಲ್ ನಿಂದ ಮೇ 53,728 16,523 3.3 5.2
  Rohini Sindhuri ಮೇಲೆ Prathap Simha ಅವರಿಗೆ ಈಗಲೂ ಸಿಟ್ಟು ಕಡಿಮೆಯಾಗಿಲ್ಲ | Oneindia Kannada
  ಜಿಲ್ಲಾವಾರು ಕೇಂದ್ರಗಳಲ್ಲಿ ಸಾವಿನ ಮರುಎಣಿಕೆ

  ಜಿಲ್ಲಾವಾರು ಕೇಂದ್ರಗಳಲ್ಲಿ ಸಾವಿನ ಮರುಎಣಿಕೆ

  ಕರ್ನಾಟಕದಲ್ಲಿ ಕೊರೊನಾವೈರಸ್ ಸಾವಿನ ಪ್ರಕರಣಗಳ ಬಗ್ಗೆ ಅಂಕಿ-ಅಂಶಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸುವುದಕ್ಕೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಸಾವಿನ ಸಂಖ್ಯೆಯ ಲೆಕ್ಕಾಚಾರದಲ್ಲಿ ತಪ್ಪುಗಳು ಆಗುತ್ತಿರುವುದು ಇತ್ತೀಚಿಗಷ್ಟೇ ಬೆಳಗಿಕೆ ಬಂದಿತ್ತು. ಉದಾಹರಣೆಗೆ: ಕಳೆದ ವಾರ ಮೈಸೂರಿನಲ್ಲಿ ಒಂದೇ ದಿನ 1910 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದರು, ಈ ಅಂಕಿ-ಅಂಶಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಿದಾಗ ಸಾವಿನ ಸಂಖ್ಯೆ 3,300 ಎಂದು ಗೊತ್ತಾಗಿತ್ತು.

  English summary
  Karnataka: Coronavirus Death Cases Reported Nearly 6 Times More Than Officially Declared.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X