ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ನಾಯಕತ್ವ ಸಿದ್ದರಾಮಯ್ಯ ಕೈತಪ್ಪಿಸಲು ಮಸಲತ್ತು

|
Google Oneindia Kannada News

Recommended Video

ಸಿದ್ದರಾಮಯ್ಯ ನಾಯಕತ್ವ ಕೈತಪ್ಪಿಸಲು ಕಾಂಗ್ರೆಸ್ ನಲ್ಲೇ ನಡೀತಿದ್ಯಾ ತಂತ್ರ? | Oneindia Kannada

ಬೆಂಗಳೂರು, ನವೆಂಬರ್ 15: ಉಪಚುನಾವಣೆಯಲ್ಲಿ ಭರ್ಜರಿ ಫಸಲು ತೆಗೆದ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಯತ್ತ ದೃಷ್ಠಿ ನೆಟ್ಟಿದೆ. ಆದರೆ ಲೋಕಸಭೆ ಚುನಾವಣೆಯ ಉಸ್ತುವಾರಿಯ ನಾಯಕತ್ವ ಬದಲಾಯಿಸಲು ಪಕ್ಷದ ಒಳಗೇ ಮಸಲತ್ತುಗಳು ಪ್ರಾರಂಭವಾಗಿವೆ.

ಹೌದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ನಾಯಕತ್ವ ವಹಿಸಿದ್ದ ಸಿದ್ದರಾಮಯ್ಯ ಅವರೇ ಈ ಬಾರಿಯ ಲೋಕಸಭೆ ಉಪಚುನಾವಣೆಯ ನಾಯಕತ್ವವನ್ನೂ ವಹಿಸಲಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಪಕ್ಷದ ಒಳಗಿನ ಕೆಲವು ಪ್ರಭಾವಿ ಮುಖಂಡರು ಆಕ್ಷೇಪಣೆ ಹೊಂದಿದ್ದಾರೆ.

ಲಿಂಗಾಯತ ಧರ್ಮದ ವಿಚಾರದಲ್ಲಿ ನಮಗೆ ಹಿನ್ನಡೆ: ಸಿದ್ದರಾಮಯ್ಯ ಆತ್ಮಾವಲೋಕನಲಿಂಗಾಯತ ಧರ್ಮದ ವಿಚಾರದಲ್ಲಿ ನಮಗೆ ಹಿನ್ನಡೆ: ಸಿದ್ದರಾಮಯ್ಯ ಆತ್ಮಾವಲೋಕನ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಸ್ತುವಾರಿಯನ್ನು ಸಿದ್ದರಾಮಯ್ಯ ಅವರಿಂದ ತಪ್ಪಿಸಬೇಕು ಎಂದು ಪಕ್ಷದ ಕೆಲವು ಹಿರಿಯರು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ವೇಣುಗೋಪಾಲ್ ಅವರ ಬಳಿ ಒಂದು ಹಂತದ ಮನವಿಯೂ ಸೇರಿದೆ.

ರೆಡ್ಡಿ ಉಪ್ಪು ತಿಂದಿದ್ದಾರೆ, ಈಗ ನೀರು ಕುಡಿಯುತ್ತಿದ್ದಾರೆ: ಸಿದ್ದರಾಮಯ್ಯ ರೆಡ್ಡಿ ಉಪ್ಪು ತಿಂದಿದ್ದಾರೆ, ಈಗ ನೀರು ಕುಡಿಯುತ್ತಿದ್ದಾರೆ: ಸಿದ್ದರಾಮಯ್ಯ

ಇತ್ತೀಚೆಗೆ ಮುಗಿದ ಲೋಕಸಭೆ ಉಪಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಪರೀಕ್ಷೆ ನಡೆದು ಅವರು ಭಾರಿ ಅಂತರದಿಂದ ಪಾಸಾಗಿದ್ದಾರೆ. ಹಾಗಾಗಿ ಹೊಸ ನಾಯಕರಿಗೆ ಉಸ್ತುವಾರಿ ಹಸ್ತಾಂತರಿಸಬೇಕು ಎಂಬ ಮಾತುಗಳು ಕೆಪಿಸಿಸಿ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಸಿದ್ದರಾಮಯ್ಯ ಪ್ರಭಾವ ಕಡಿಮೆ ಮಾಡುವ ಯತ್ನ

ಸಿದ್ದರಾಮಯ್ಯ ಪ್ರಭಾವ ಕಡಿಮೆ ಮಾಡುವ ಯತ್ನ

ಪಕ್ಷದ ಮೇಲೆ ಸಿದ್ದರಾಮಯ್ಯ ಅವರ ಪ್ರಭಾವ ಕಡಿಮೆಗೊಳಿಸಲು ಈ ಯತ್ನ ನಡೆಸುತ್ತಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಷ್ಟೇನು ಉತ್ತಮ ಪ್ರದರ್ಶನ ತೋರಿಲ್ಲ ಎನ್ನುವುದನ್ನು ಮುಂದು ಮಾಡಿ ನೇತೃತ್ವ ಬದಲಾವಣೆಗೆ ಮನವಿ ಮಾಡಲಾಗುತ್ತಿದೆ.

ಮಕ್ಕಳ ದಿನಾಚರಣೆ : ನೆಹರೂರನ್ನು ನೆನಪಿಸಿಕೊಂಡ ಸಿದ್ದರಾಮಯ್ಯಮಕ್ಕಳ ದಿನಾಚರಣೆ : ನೆಹರೂರನ್ನು ನೆನಪಿಸಿಕೊಂಡ ಸಿದ್ದರಾಮಯ್ಯ

ಸಿದ್ದರಾಮಯ್ಯ ವಿರೋಧಿ ಬಣ ಒಟ್ಟುಮಾಡುವ ಯತ್ನ

ಸಿದ್ದರಾಮಯ್ಯ ವಿರೋಧಿ ಬಣ ಒಟ್ಟುಮಾಡುವ ಯತ್ನ

ಸಿದ್ದರಾಮಯ್ಯ ವಿರೋಧಿ ಬಣವನ್ನೆಲ್ಲಾ ಒಟ್ಟು ಮಾಡುವ ಯತ್ನ ತೆರೆಮರೆಯಲ್ಲಿ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಈ ಬಾರಿ ಕಾಂಗ್ರೆಸ್‌ ಪ್ರಚಾರ ಉಸ್ತುವಾರಿಯನ್ನಾಗಿಸಲು ಯತ್ನಗಳು ಆರಂಭವಾಗಿವೆ. ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಗಾಧಿ ಸಹ ಹೊಸಬರ ಕೈಯಲ್ಲಿದ್ದು, ಕರ್ನಾಟಕ ಕಾಂಗ್ರೆಸ್‌ ಚುನಾವಣೆ ಉಸ್ತುವಾರಿ ಸಹ ಹೊಸಬರೇ ಆದರೆ ಉತ್ತಮ ಎಂದು ಕೆಪಿಸಿಸಿ ಸಹ ಹೈಕಮಾಂಡ್‌ಗೆ ಹೇಳಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ ಎಚ್.ಸಿ.ಮಹದೇವಪ್ಪಸಿದ್ದರಾಮಯ್ಯ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ ಎಚ್.ಸಿ.ಮಹದೇವಪ್ಪ

ಜೆಡಿಎಸ್‌ ಕೂಡಾ ಸಾಥ್‌

ಜೆಡಿಎಸ್‌ ಕೂಡಾ ಸಾಥ್‌

ಹಠವಾದಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡುವ ಕಾಂಗ್ರೆಸ್‌ನ ಮುಖಂಡರ ಯತ್ನಕ್ಕೆ ಜೆಡಿಎಸ್‌ ಮುಖಂಡರೂ ಸಹ ಬೆಂಬಲ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೆ ಮೈತ್ರಿ ವಿಷಯದಲ್ಲಿ ಜೆಡಿಎಸ್‌ ಗೆ ತೊಡಿಸಿರುವ ಮೂಗುದಾರ ಸಡಿಲವಾಗುತ್ತದೆ ಎಂಬ ಯೋಚನೆ ಅದರದ್ದು.

ಹೈಕಮಾಂಡ್‌ ಏನು ಹೇಳುತ್ತದೆ

ಹೈಕಮಾಂಡ್‌ ಏನು ಹೇಳುತ್ತದೆ

ಹೈಕಮಾಂಡ್‌ ಲೋಕಸಭೆ ಚುನಾವಣೆಯಲ್ಲಿ ಸಂಘಟಿತ ನಾಯಕತ್ವದ ಬಗ್ಗೆ ಮಾತನಾಡುತ್ತಿದೆ. ಆದರೆ ಅಸಮಾಧಾನಗಳಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್‌ನಲ್ಲಿ ಸುಲಭವಲ್ಲ. ಆದರೆ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರ ಮೇಲೆ ಅಪಾರ ನಂಬಿಕೆ ಇದ್ದಂತಿದೆ. ಸಿದ್ದರಾಮಯ್ಯ ಅವರ ಉಸ್ತುವಾರಿಯಲ್ಲಿಯೇ ಚುನಾವಣಾ ಪ್ರಚಾರ ನಡೆಯಬೇಕೆಂಬ ಆಸೆ ಹೈಕಮಾಂಡ್‌ನದ್ದು, ಆದರೆ ಕೊನೆಯ ಕ್ಷಣದಲ್ಲಿ ಬದಲಾವಣೆ ಆಗುತ್ತದೆಯೇ ನೋಡಬೇಕು.

ಕಾಂಗ್ರೆಸ್‌ ಮೇಲೆ ಭಾರಿ ಪ್ರಭಾವ

ಕಾಂಗ್ರೆಸ್‌ ಮೇಲೆ ಭಾರಿ ಪ್ರಭಾವ

ಸಿದ್ದರಾಮಯ್ಯ ಅವರನ್ನು ಪಕ್ಷದ ಮುಖ್ಯ ಜವಾಬ್ದಾರಿಯಿಂದ ಹಿಂದೆ ಸರಿಸಿದರೆ ಕಾಂಗ್ರೆಸ್‌ಗೆ ಅದು ದೊಡ್ಡ ಹಿನ್ನಡೆಯೇ ಆಗುತ್ತದೆ. ಸಿದ್ದರಾಮಯ್ಯ ಅವರ ಅಹಿಂದ ನಾಯಕನ ಪಟ್ಟ ಕಾಂಗ್ರೆಸ್‌ನ ಮತ್ತೊಬ್ಬರಿಗೆ ಇಲ್ಲ, ಸಿದ್ದರಾಮಯ್ಯ ಹಿನ್ನೆಲೆ ಆದರೆ ಅಹಿಂದ ಮತಗಳು ಚದುರಿ ಹೋಗುತ್ತವೆ. ಅಲ್ಲದೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರ ದೊಡ್ಡ ಪಡೆ ಸದ್ಯದ ಕಾಂಗ್ರೆಸ್‌ನಲ್ಲಿದೆ ಅವರೂ ಸಹ ಚುನಾವಣೆಯಲ್ಲಿ ನಿರಾಸಕ್ತಿ ತೋರಬಹುದು ಇದು ಸಹ ಹಿನ್ನಡೆ ಆಗುತ್ತದೆ.

ಟಿಪ್ಪು ಜಯಂತಿಗೆ ಕೈಕೊಟ್ಟ ಸಿಎಂ, ಡಿಸಿಎಂ ವಿರುದ್ಧ ಸಿದ್ದರಾಮಯ್ಯ ಟ್ವೀಟ್‌ಟಿಪ್ಪು ಜಯಂತಿಗೆ ಕೈಕೊಟ್ಟ ಸಿಎಂ, ಡಿಸಿಎಂ ವಿರುದ್ಧ ಸಿದ್ದರಾಮಯ್ಯ ಟ್ವೀಟ್‌

English summary
Karnataka Congress some leaders trying to change Siddaramaiah's leadership for upcoming Lok Sabha elections 2019. DK. Shivakumar emerging as state leader so some leaders wants DK Shivakumar to lead them in Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X