ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿಯನ್ನು 'ಹೆಬ್ಬೆಟ್ಟು ಗಿರಾಕಿ ಮೋದಿ' ಎಂದು ಕಾಂಗ್ರೆಸ್ ಲೇವಡಿ

|
Google Oneindia Kannada News

ಬೆಂಗಳೂರು, ಅ 18: ಬೆಲೆ ಏರಿಕೆ ಸೇರಿದಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯವನ್ನು ಸಾಲುಸಾಲು ಟ್ವೀಟ್ ಮೂಲಕ ಕೆಪಿಸಿಸಿ ಖಂಡಿಸುತ್ತಿದೆ. ಪ್ರಧಾನಿ ಮೋದಿಯವರನ್ನು 'ಹೆಬ್ಬೆಟ್ಟು ಗಿರಾಕಿ ಮೋದಿ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಕಾಂಗ್ರೆಸ್ಸಿನ ಇಬ್ಬರು ಮುಖಂಡರು ಸುದ್ದಿಗೋಷ್ಠಿಗೆ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಪರ್ಸೆಂಟೇಜ್ ಗಿರಾಕಿ ಎಂದು ಮಾತನಾಡಿದ್ದು ಬಹಿರಂಗಗೊಂಡ ನಂತರ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್/ಟ್ವೀಟ್ ಸಮರ ತಾರಕಕ್ಕೇರಿದೆ.

ಪುತ್ರನ ರಕ್ಷಣೆಗೆ ಭಿನ್ನರ ಉಸಿರು ಎತ್ತದಂತೆ ಮಾಡಿ ಜಾಣ ನಡೆಯಿಟ್ಟ ಸೋನಿಯಾ ಗಾಂಧಿಪುತ್ರನ ರಕ್ಷಣೆಗೆ ಭಿನ್ನರ ಉಸಿರು ಎತ್ತದಂತೆ ಮಾಡಿ ಜಾಣ ನಡೆಯಿಟ್ಟ ಸೋನಿಯಾ ಗಾಂಧಿ

"ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ ವಿ.ಎಸ್‌.ಉಗ್ರಪ್ಪ ಮಾಧ್ಯಮಗಳಲ್ಲಿ ಬಹಿರಂಗ ಮಾಡಿದ ಆ ಪಕ್ಷದ ಅಧ್ಯಕ್ಷರ ಸತ್ಯ ವಿಶ್ವವಿಖ್ಯಾತವಾಗುತ್ತಿದ್ದಂತೆ ಬಿಜೆಪಿ ನಾಯಕರ ತಲೆಗೆ ಕಟ್ಟಲು ಮುಂದಾದರು. ಕಮಿಷನ್‌ ಗಿರಾಕಿಗಳ ಸತ್ಯ ಹೊರ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ಟ್ಟೀಟ್‌ ಮಾಡಿ ವಿಷಯಾಂತರ ಮಾಡುತ್ತಿರುವುದು ನಾಚಿಕೆಗೇಡು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಮಾಡಿದ್ದರು.

ಕೇರಳ ಮಳೆ: ಮೃತರ ಸಂಖ್ಯೆ 26 ಕ್ಕೆ ಏರಿಕೆ, ಪಿಣರಾಯಿ ಜತೆ ಮೋದಿ ಮಾತುಕತೆ ಕೇರಳ ಮಳೆ: ಮೃತರ ಸಂಖ್ಯೆ 26 ಕ್ಕೆ ಏರಿಕೆ, ಪಿಣರಾಯಿ ಜತೆ ಮೋದಿ ಮಾತುಕತೆ

"ಭ್ರಷ್ಟಾಚಾರದ ಯೂನಿವರ್ಸಿಟಿಯಾದ @BJP4Karnataka ಪಕ್ಷದ ಆಡಳಿತದಲ್ಲಿ ಜೈಲಿಗೆ ಹೋಗಲು ನೂಕುನುಗ್ಗಲು ಏರ್ಪಟ್ಟಿದ್ದನ್ನು ರಾಜ್ಯ ಕಂಡಿದೆ! ಜೈಲಿಗೆ ಹೋಗಿ ಗಡಿಪಾರಾದವನನ್ನು ಗೃಹಮಂತ್ರಿ, ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡಿದ ಕರಾಳ ಇತಿಹಾಸ ಹೊಂದಿದ ಬಿಜೆಪಿಯಲ್ಲಿ ತುಂಬಿರುವುದು ಬರೀ 'ನುಂಗಣ್ಣರೇ" ಎಂದು ಕೆಪಿಸಿಸಿ ಟ್ವೀಟ್ ಮೂಲಕ ತಿರುಗೇಟು ನೀಡಿತ್ತು. ಈಗ, ನೇರವಾಗಿ ಪ್ರಧಾನಿ ಮೋದಿಯನ್ನು ಹೆಬ್ಬೆಟ್ಟು ಎಂದು ಕೆಪಿಸಿಸಿ ಲೇವಡಿ ಮಾಡಿದೆ.

ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ

"ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ.

  • ಬೆಲೆ ಏರಿಕೆಯ ಬಗ್ಗೆ -ಮೌನ
  • ಕಾಶ್ಮೀರದ ದಳ್ಳುರಿಗೆ -ಮೌನ
  • ಚೀನಾ ಅತಿಕ್ರಮಣಕ್ಕೆ -ಮೌನ
  • ರೈತರ ಹತ್ಯೆಗೆ -ಮೌನ
  • ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ
  • ನಿರುದ್ಯೋಗದ ಬಗ್ಗೆ -ಮೌನ
  • ಪತ್ರಿಕಾಗೋಷ್ಠಿಗೆ -ಮೌನ

#ಹೆಬ್ಬೆ‌ಟ್‌ಗಿರಾಕಿಮೋದಿ

 ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನ

ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನ

ಇನ್ನೊಂದು ಟ್ವೀಟ್ ನಲ್ಲಿ, "ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ @narendramodi ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ, ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ. #ಹೆಬ್ಬೆಟ್ಟುಗಿರಾಕಿಮೋದಿ ಯಿಂದ ದೇಶ ನರಳುತ್ತಿದೆ"ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

 ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು?

ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು?

"ಅದೇನು ಮಾಯವೋ! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ. ಅವರೆಲ್ಲರ ಹಗರಣದಲ್ಲಿ #ಹೆಬ್ಬೆಟ್‌ಗಿರಾಕಿಮೋದಿ ಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು? ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ @BJP4Karnataka ನಾಯಕರಿಗಾದ ಹಂಚಿಕೆ ಎಷ್ಟು?" ಎಂದು ಇನ್ನೊಂದು ಟ್ವೀಟ್ ಮೂಲಕ, ಕೆಪಿಸಿಸಿ ಕಾಲೆಳೆದಿದೆ.

Recommended Video

ದೀಪಾವಳಿ ಬಗ್ಗೆ ವಿರಾಟ್ ಹೇಳಿದ ಮಾತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು | Oneindia Kannada

ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ

"ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ! ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ! ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ! ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ!".

"ಇಂಧನ ತೈಲಗಳಲ್ಲಿ ಏರಿದ ಸರಕಾರದ ಆದಾಯ. 2014 = ರೂ. 75 ಸಾವಿರ ಕೋಟಿ, 2021 = ರೂ. 3.25 ಲಕ್ಷ ಕೋಟಿ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕುಸಿತ.
2014ರಲ್ಲಿ- 55
2021ರಲ್ಲಿ - 101

ಸರ್ಕಾರದ ಆದಾಯ ಹೆಚ್ಚಿದಂತೆ, ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. #ಹೆಬ್ಬೆಟ್‌ಗಿರಾಕಿಮೋದಿ ಸರ್ಕಾರದ ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ?" ಎಂದು ಮಗುದೊಂದು ಟ್ವೀಟ್ ಮೂಲಕ, ಕೆಪಿಸಿಸಿಯು ಬಿಜೆಪಿ ಸರಕಾರವನ್ನು ಟೀಕಿಸಿದೆ.

English summary
Karnataka Congress slams Narendra Modi: calls him Uneducated over increase fuel prices. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X