ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಭಾಷಣದ ನಂತರ ಮೋದಿಗೆ ಕಾಂಗ್ರೆಸ್ಸಿನ ಪ್ರಶ್ನೆಗಳ ಸುರಿಮಳೆ

|
Google Oneindia Kannada News

Recommended Video

ನರೇಂದ್ರ ಮೋದಿಯವರಿಗೆ ಕರ್ನಾಟಕ ಕಾಂಗ್ರೆಸ್ ಕೇಳಿದ ಪ್ರಶ್ನೆಗಳು | Oneindia Kannada

ಬೆಂಗಳೂರು, ಫೆಬ್ರವರಿ 19 : ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಹಲವು ಪ್ರಶ್ನೆಗಳನ್ನು ಕೇಳಿದೆ.

ನರೇಂದ್ರ ಮೋದಿ ಮೈಸೂರು ಭಾಷಣದಲ್ಲಿನ ಕನ್ನಡ, ಪುಟ್ಟಣ್ಣಯ್ಯ, ಕಾಂಗ್ರೆಸ್ನರೇಂದ್ರ ಮೋದಿ ಮೈಸೂರು ಭಾಷಣದಲ್ಲಿನ ಕನ್ನಡ, ಪುಟ್ಟಣ್ಣಯ್ಯ, ಕಾಂಗ್ರೆಸ್

ಕರ್ನಾಟಕ ಕಾಂಗ್ರೆಸ್‌ನ ಟ್ವಿಟರ್ ಖಾತೆ INCKarnataka ಮೂಲಕ ಪ್ರಧಾನಿ ಮೋದಿ ಅವರಿಗೆ ಹಲವು ಪ್ರಶ್ನೆ ಕೇಳಲಾಗಿದೆ. #MaunModi ಎಂಬ ಹ್ಯಾಷ್‌ ಟ್ಯಾಗ್ ಬಳಸಿ ಪ್ರಶ್ನೆಗಳನ್ನು ಕೇಳಲಾಗಿದ್ದು, ಉತ್ತರಿಸಿ ಎಂದು ಆಗ್ರಹಿಸಲಾಗಿದೆ.

ಮುಂದುವರಿದ ಸಿದ್ದು-ಬಿಎಸ್ ವೈ ಟ್ವಿಟ್ಟರ್ ವಾರ್!ಮುಂದುವರಿದ ಸಿದ್ದು-ಬಿಎಸ್ ವೈ ಟ್ವಿಟ್ಟರ್ ವಾರ್!

ನರೇಂದ್ರ ಮೋದಿ ಅವರು ಸೋಮವಾರ ಮೈಸೂರಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. 'ಕರ್ನಾಟಕದ ಕಮೀಷನ್ ಸರ್ಕಾರ ಬೇಕಾ?, ಬಿಜೆಪಿಯ ವಿಷನ್ ಸರ್ಕಾರ ಬೇಕಾ?' ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ ಮತ್ತೆ 5 ಪ್ರಶ್ನೆ ಕೇಳಿದ ಯಡಿಯೂರಪ್ಪ!ಸಿದ್ದರಾಮಯ್ಯಗೆ ಮತ್ತೆ 5 ಪ್ರಶ್ನೆ ಕೇಳಿದ ಯಡಿಯೂರಪ್ಪ!

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಯಾವುದೇ ಆಧಾರವಿಲ್ಲದೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಕೇಳಿದ ಪ್ರಶ್ನೆಗಳೇನು?...

ಯಾವ ಆಧಾರದ ಮೇಲೆ ಆರೋಪ

'ನರೇಂದ್ರ ಮೋದಿ ಅವರು ಯಾವುದೇ ಆಧಾರವಿಲ್ಲದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ' ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಲೂಟಿ ಮಾಡುವುದು ವಿಷನ್

'ಯಡಿಯೂರಪ್ಪ ಲೂಟಿ ಮಾಡುವುದೇ ಬಿಜೆಪಿಯ ವಿಷನ್' ಎಂದು ಕಾಂಗ್ರೆಸ್ ಟೀಕಿಸಿದೆ.

ಮನೆ ನಿರ್ಮಾಣದ ಅಂಕಿ-ಅಂಶ

ಮನೆಗಳ ನಿರ್ಮಾಣದ ಬಗ್ಗೆ ನರೇಂದ್ರ ಮೋದಿ ಹೇಳಿರುವ ಅಂಕಿ-ಅಂಶ ಸುಳ್ಳು ಎಂದು ಕಾಂಗ್ರೆಸ್ ಆರೋಪಿಸಿದೆ.

ನೀವು ಉತ್ತರ ಕೊಡುವುದಿಲ್ಲ ಎಂದು ಗೊತ್ತು

'ಪ್ರಧಾನಿಗಳೇ ಈ ಪ್ರಶ್ನೆಗಳಿಗೆ ನೀವು ಉತ್ತರ ನೀಡುವುದಿಲ್ಲ ಎಂದು ನಮಗೆ ಗೊತ್ತಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.

ಯಾವ ರಾಜ್ಯದಲ್ಲಿ ಯೋಜನೆ ಜಾರಿಯಲ್ಲಿದೆ?

'ಅನ್ನಭಾಗ್ಯ ಯೋಜನೆ ಬೇರೆ ಯಾವ ರಾಜ್ಯದಲ್ಲೂ ಏಕೆ ಜಾರಿಯಲ್ಲಿಲ್ಲ?' ಎಂದು ಪ್ರಶ್ನಿಸಲಾಗಿದೆ.

English summary
With no evidence Prime Minister of India Narendra Modi makes corruption allegations against Karnataka government alleged Karnataka Congress. In a tweet Congress asks several questions to Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X