• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕಕ್ಕೆ ಬರುತ್ತಿರುವ ಮೋದಿಗೆ ಹಲವು ಪ್ರಶ್ನೆ ಕೇಳಿದ ಕಾಂಗ್ರೆಸ್!

|

ಬೆಂಗಳೂರು, ಫೆಬ್ರವರಿ 10 : 'ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿಯವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ' ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟರು. ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.

ಹುಬ್ಬಳ್ಳಿ : ಸಂಜೆ 5 ಗಂಟೆಗೆ ನರೇಂದ್ರ ಮೋದಿ ಸಮಾವೇಶಹುಬ್ಬಳ್ಳಿ : ಸಂಜೆ 5 ಗಂಟೆಗೆ ನರೇಂದ್ರ ಮೋದಿ ಸಮಾವೇಶ

'ನಾ ಮೈ ಖಾವುಂಗಾ, ನಾ ಮೈ ಖಾನೆದುಂಗ ಎಂದು ಹೇಳುವ ಮೋದಿಯವರು ಆಪರೇಷನ್ ಕಮಲ ಆಡಿಯೋದಲ್ಲಿರುವ ಸಂಭಾಷಣೆ ಕುರಿತು ಸ್ಪಷ್ಟನೆ ನೀಡಲಿ' ಎಂದು ದಿನೇಶ್ ಗುಂಡೂರಾವ್ ಅವರು ಆಗ್ರಹಿಸಿದರು.

ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ 10 ಪ್ರಶ್ನೆಗಳುಯಡಿಯೂರಪ್ಪನವರಿಗೆ ಸಿದ್ದರಾಮಯ್ಯ 10 ಪ್ರಶ್ನೆಗಳು

ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಮೋದಿ ಆಗಮನಕ್ಕೂ ಮೊದಲೇ ಕಾಂಗ್ರೆಸ್ ನಾಯಕರು ಅವರ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಮೋದಿ ಭಾಷಣದಲ್ಲಿ ಇವುಗಳಿಗೆ ಉತ್ತರ ನೀಡುವರೇ? ಕಾದು ನೋಡಬೇಕು.

ಕರ್ನಾಟಕ ಕಾಂಗ್ರೆಸ್‌ನ 'ನಮ್ಮ ಕಾಂಗ್ರೆಸ್' ಪಾಕ್ಷಿಕ ಪತ್ರಿಕೆ ಬಿಡುಗಡೆಕರ್ನಾಟಕ ಕಾಂಗ್ರೆಸ್‌ನ 'ನಮ್ಮ ಕಾಂಗ್ರೆಸ್' ಪಾಕ್ಷಿಕ ಪತ್ರಿಕೆ ಬಿಡುಗಡೆ

ಪ್ರಶ್ನೆ - 1

ಆಪರೇಷನ್ ಕಮಲ ಆಡಿಯೋದಲ್ಲಿರುವ ಸಂಭಾಷಣೆ ಕುರಿತು ಸ್ಪಷ್ಟನೆಯನ್ನು ನೀಡಲಿ. ಯಡಿಯೂರಪ್ಪ, ಹಾಗೂ ತಮ್ಮ ಪಾತ್ರದ ಕುರಿತು ವಿವರಣೆ ನೀಡಲಿ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಪ್ರಶ್ನೆ - 2

ಪ್ರತಿ ಶಾಸಕರಿಗೆ 10 ಕೋಟಿ ಅಂದರೆ ಆಪರೇಷನ್ ಕಮಲಕ್ಕೆ ಸುಮಾರು 200 ಕೋಟಿ ಹಣ ಮೀಸಲಿಟ್ಟಿದ್ದು, ಇದು ಎಲ್ಲಿಂದ ಬಂದಿದ್ದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪ್ರಶ್ನೆ - 3

ಮಹದಾಯಿ, ನರೇಗ ಯೋಜನೆಗಳಿಗೆ ರಾಜ್ಯಕ್ಕೆ ಅಗತ್ಯ ಹಣ ಯಾಕೆ ನೀಡುತ್ತಿಲ್ಲ? ಕರ್ನಾಟಕ ರಾಜ್ಯದ ಬಗ್ಗೆ ಇಷ್ಟೊಂದು ತಾತ್ಸಾರವೇಕೆ? ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಪ್ರಶ್ನೆ - 4

ಐಐಟಿಗೆ ಧಾರವಾಡದಲ್ಲಿ 500 ಎಕರೆ ಉಚಿತವಾಗಿ ಕೊಟ್ಟಿದ್ದೇವೆ. ಅದನ್ನು ಇಂದು ಮೋದಿ ಉದ್ಘಾಟಿಸಿಲಿದ್ದಾರೆ. ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಏಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಲಾಗಿದೆ.

ಪ್ರಶ್ನೆ - 5

ನಿಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಯುವಕರಿಗೆ ಒದಗಬಹುದಾಗಿದ್ದ ಉದ್ಯೋಗ ಅವಕಾಶವನ್ನು ನೀವು ವಂಚಿಸಿದ್ದೀರಿ. ಇದನ್ನು ರಾಜ್ಯದ ಜನತೆಗೆ ಹೇಗೆ ವಿವರಿಸುವಿರಿ? ಎಂದು ಕಾಂಗ್ರೆಸ್ ಕೇಳಿದೆ.

ಪ್ರಶ್ನೆ - 6

ರಾಜ್ಯ ಸರ್ಕಾರ ಹಲವು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷವೇಕೆ? ರಾಜ್ಯದ ಯಾವುದೇ ಸಮಸ್ಯೆಗಳ ಪರಿಹರಿಸುವ ಬಗ್ಗೆ ಗಮನ ಹರಿಸುವುದಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪ್ರಶ್ನೆ - 7

ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿರುವ ಹಂಪಿ ಅಭಿವೃದ್ಧಿಗಾಗಿ ಕಳೆದ ಬಜೆಟ್ನಲ್ಲಿ ಪಾರಂಪರಿಕ ನಗರಾಭಿವೃದ್ಧಿ ಎಂದು ಘೋಷಿಸಿದ್ದೀರಿ. ಇಲ್ಲಿಯವರೆಗೆ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

English summary
Karnataka Pradesh Congress Committee (KPCC) president Dinesh Gundu Rao asked questions for Prime Minister Narendra Modi. Narendra Modi will visit Karnataka today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X