ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಬಗ್ಗೆ 'ಕೈ' ನಿರಾಸಕ್ತಿ? ಅತೃಪ್ತರ ಮೇಲೆ ಹಿಡಿತ ಕೈಬಿಟ್ಟ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಮೇ 21: ಲೋಕಸಭಾ ಚುನಾವಣೆ 2019 ರ ಫಲಿತಾಂಶಕ್ಕೆ ಒಂದೇ ದಿನ ಬಾಕಿ ಇದೆ. ಆದಕ್ಕೂ ಮುಂಚೆ ಬಂದಿರುವ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳ ಜಂಗಾಬಲ ಕುಂದಿಸಿವೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ನಾಯಕರ ಉತ್ಸಾಹ ಇಳಿದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕರ್ನಾಟಕ ಕಾಂಗ್ರೆಸ್ ಪಕ್ಷ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಡೆದಷ್ಟು ಸೀಟುಗಳನ್ನು ರಾಜ್ಯದಲ್ಲಿ ಈ ಬಾರಿ ಗೆಲ್ಲುವುದು ಕಷ್ಟವೆಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಹೇಳುತ್ತಿರುವುದು ರಾಜ್ಯ ಕೈ ನಾಯಕರಿಗೆ ಆತಂಕ ಜೊತೆಗೆ ನಿರಾಸೆ ತಂದಿದೆ.

ಜೆಡಿಎಸ್ ಜೊತೆ ಒಟ್ಟಾಗಿ ಚುನಾವಣೆಗೆ ತೆರಳಿದ್ದ ಕಾಂಗ್ರೆಸ್ ನಾಯಕರು ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನವನ್ನು ಮೈತ್ರಿಯು ಗೆಲ್ಲುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿದ್ದರು, ಆದರೆ ಕಾಂಗ್ರೆಸ್‌ಗೆ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನ ಬರುತ್ತಿರುವುದು ಸಹಜವಾಗಿ ಭಾರಿ ನಿರಾಸೆಯ ಜೊತೆಗೆ ಆತ್ಮವಾವಲೋಕನಕ್ಕೆ ದೂಡಿದಂತೆ ಮಾಡಿದೆ ಎನ್ನಲಾಗಿದೆ.

ಬಿ.ಎಸ್.ಯಡಿಯೂರಪ್ಪಗೆ ಹೈಕಮಾಂಡ್‌ನಿಂದ ಭರ್ಜರಿ ಉಡುಗೊರೆ?ಬಿ.ಎಸ್.ಯಡಿಯೂರಪ್ಪಗೆ ಹೈಕಮಾಂಡ್‌ನಿಂದ ಭರ್ಜರಿ ಉಡುಗೊರೆ?

ಜೆಡಿಎಸ್‌ ಜೊತೆಗಿನ ಮೈತ್ರಿಯಿಂದಲೇ ಕಾಂಗ್ರೆಸ್‌ನ ಬಲ ಕಡಿಮೆ ಆಗಿದೆ ಎಂಬ ಮಾತುಗಳು ಪಕ್ಷದ ಕೆಳ ಹಂತದ ನಾಯಕರಿಂದ ಬರುತ್ತಿವೆ. ಹಳೆ ಮೈಸೂರು, ಕರಾವಳಿ ಭಾಗದಲ್ಲಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಬ್ಲಾಕ್ ಹಂತದ ನಾಯಕರು ಕೆಪಿಸಿಸಿಗೆ ದೂರುಗಳನ್ನು ಈಗಾಗಲೇ ನೀಡಿದ್ದಾರೆ. ಮೈತ್ರಿ ಬಗ್ಗೆ ಕಠಿಣ ನಿರ್ಧಾರವನ್ನು ತಳೆಯುವಂತೆ ಒತ್ತಾಯವನ್ನೂ ಹೇರಿದ್ದಾರೆ.

ಎಕ್ಸಿಟ್ ಪೋಲ್ ವರದಿಯಿಂದ ಕಾಂಗ್ರೆಸ್‌ ಕಂಗಾಲು?

ಎಕ್ಸಿಟ್ ಪೋಲ್ ವರದಿಯಿಂದ ಕಾಂಗ್ರೆಸ್‌ ಕಂಗಾಲು?

ಎಕ್ಸಿಟ್ ಪೋಲ್ ಮತ್ತು ಗುಪ್ತಚರ ಇಲಾಖೆ ಮಾಹಿತಿಯೂ ಕಾಂಗ್ರೆಸ್ ಅನ್ನು ಕಂಗಾಲು ಮಾಡಿದ್ದು, ಮೈತ್ರಿ ಬಗ್ಗೆ ಬೇಸರವನ್ನು ಕೆಲವು ಹಿರಿಯ ನಾಯಕರು ಹೊಂದಿದ್ದಾರೆ ಎನ್ನಲಾಗಿದ್ದು, ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಅಸಮಾಧಾನವನ್ನು ಕೆಲವರ ಬಳಿ ಹೊರಹಾಕಿದ್ದಾರೆ.

ಯಡಿಯೂರಪ್ಪ ಭವಿಷ್ಯ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ! ಯಡಿಯೂರಪ್ಪ ಭವಿಷ್ಯ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ!

ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟ ಹೆಚ್ಚಾಗಿದೆ?

ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟ ಹೆಚ್ಚಾಗಿದೆ?

ಜೆಡಿಎಸ್‌ ಜೊತೆ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತಲೂ ಹೆಚ್ಚಾಗಿ ನಷ್ಟವೇ ಆಗಿದೆ ಎಂಬುದು ಎಂಬುದು ಎಕ್ಸಿಟ್ ಪೋಲ್ ಹಾಗೂ ಗುಪ್ತಚರ ಮಾಹಿತಿಗಳಿಂದ ಬಹಿರಂಗವಾಗಿದೆ ಹಾಗಾಗಿ ಮೈತ್ರಿಯನ್ನು ಕೊನೆಗಾಣಿಸುವ ಸಣ್ಣ ಪ್ರಯತ್ನವೊಂದು ಕಾಂಗ್ರೆಸ್‌ನಿಂದಲೇ ಆರಂಭವಾಗಿದೆ.

ರೋಷನ್ ಬೇಗ್ ಹೇಳಿಕೆಗೆ ಕಾಂಗ್ರೆಸ್ಸಿಗರು ಫುಲ್ ಗುಸ್ಸಾ: ಕೋಳಿ, ಕಬಾಬ್ ಏನಿದು?ರೋಷನ್ ಬೇಗ್ ಹೇಳಿಕೆಗೆ ಕಾಂಗ್ರೆಸ್ಸಿಗರು ಫುಲ್ ಗುಸ್ಸಾ: ಕೋಳಿ, ಕಬಾಬ್ ಏನಿದು?

ಗುಟ್ಟಾಗಿ ಸಂದೇಶ ರವಾನಿಸಿರುವ ಸಿದ್ದರಾಮಯ್ಯ

ಗುಟ್ಟಾಗಿ ಸಂದೇಶ ರವಾನಿಸಿರುವ ಸಿದ್ದರಾಮಯ್ಯ

ಕಾಂಗ್ರೆಸ್‌ನ ಅತೃಪ್ತ ಶಾಸಕರು ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳಲು ಸರ್ವ ಸ್ವತಂತ್ರ್ಯರು ಎಂದು ಈಗಾಗಲೇ ಸಿದ್ದರಾಮಯ್ಯ ಅವರು ಅನಧಿಕೃತ ಗುಪ್ತ ಸಂದೇಶವನ್ನು ಹರಿಬಿಟ್ಟಿದ್ದಾರೆ, ಇದು ಪರೋಕ್ಷವಾಗಿ ಕಾಂಗ್ರೆಸ್‌ನ ಶಾಸಕರು ಮೈತ್ರಿ ಬಿಟ್ಟು ಹೊರಡಬಹುದೆಂದು ಸಿದ್ದರಾಮಯ್ಯ ಅವರೇ ಸೂಚಿಸಿದಂತಾಗಿದೆ.

ಮಹತ್ವದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಇಲ್ಲ

ಮಹತ್ವದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಇಲ್ಲ

ಚುನಾವಣೆ ಫಲಿತಾಂಶ ಹಾಗೂ ಅದು ರಾಜ್ಯ ರಾಜಕಾರಣದಲ್ಲಿ ಬೀರಲಿರುವ ಪರಿಣಾಮದ ಬಗ್ಗೆ ಅರಿವಿದ್ದರೂ ಸಹ ಡಿ.ಕೆ.ಶಿವಕುಮಾರ್ ಅವರಂತಹಾ ಸಂಕಷ್ಟಹರ ರಾಜಕಾರಣಿ ಇದೇ ಸಮಯದಲ್ಲಿ ವಿದೇಶ ಪ್ರವಾಸಕ್ಕೆ ಹೋಗಿರುವುದು ಸಹ ಸಣ್ಣ ಅನುಮಾನವನ್ನು ಹುಟ್ಟುಹಾಕದೇ ಇಲ್ಲ.

ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರುತ್ತಿದೆ ಕಾಂಗ್ರೆಸ್‌

ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರುತ್ತಿದೆ ಕಾಂಗ್ರೆಸ್‌

ಈ ಹಿಂದೆ ಬಿಜೆಪಿಯು ಆಪರೇಷನ್ ಕಮಲಕ್ಕೆ ಕೈ ಹಾಕಿದ ಸಣ್ಣ ಸುದ್ದಿ ಹೊರ ಬೀಳುತ್ತಿದ್ದಂತೆ, ತನ್ನ ಶಾಸಕರ ಮೇಲೆ ದಿಗ್ಭಂದನ ಹೇರುತ್ತಿದ್ದ ಕಾಂಗ್ರೆಸ್ ಈ ಬಾರಿ ಅಂತಹಾ ಯಾವುದೇ ಪ್ರಯತ್ನಗಳಿಗೆ ಮುಂದಾಗಿಲ್ಲ. ರಮೇಶ್ ಜಾರಕಿಹೊಳಿ ನಿನ್ನೆಯಷ್ಟೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 'ದೆಹಲಿಗೆ ಹೋಗುತ್ತಿದ್ದೇನೆ, ಸಿಹಿ ಸುದ್ದಿ ನೀಡುತ್ತೇನೆ' ಎಂದು ಧೈರ್ಯವಾಗಿ ಹೇಳಿಯೇ ಹೋಗಿದ್ದಾರೆ ಆದರೂ ಸಹ ಕೈ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇದನ್ನು ಉದ್ದೇಶಪೂರ್ವಕ ನಿರ್ಲಕ್ಷ್ಯ ಎನ್ನದಿರಲಾದೀತೇ?

ಕಾಂಗ್ರೆಸ್‌ಗೆ ಮೈತ್ರಿ ಗೆದ್ದಲ ಹುಳು?

ಕಾಂಗ್ರೆಸ್‌ಗೆ ಮೈತ್ರಿ ಗೆದ್ದಲ ಹುಳು?

ಮೈತ್ರಿಯು ಕಾಂಗ್ರೆಸ್‌ಗೆ ಗೆದ್ದಲ ಹುಳುವಾಗಿ ಪರಿಣಮಿಸುತ್ತಿದೆ ಎಂದು ಕೆಲ ಹಿರಿಯ ನಾಯಕರೇ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಮೈತ್ರಿಯಿಂದಾಗಿ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಹಳೆ ಮೈಸೂರು ಭಾಗದಲ್ಲಿ ಅಲ್ಪ ಪೆಟ್ಟು ಈಗಾಗಲೇ ಬಿದ್ದಿದೆ. ಬಿಜೆಪಿಯ ಅಸ್ಥಿತ್ವವೇ ಇಲ್ಲದ ಕೋಲಾರದಂತಹಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಭಾರಿ ಪೈಪೋಟಿ ನೀಡುವಂತಾಗಿದೆ. ಇದನ್ನೆಲ್ಲಾ ಗಮನಿಸಿ ಮೈತ್ರಿಯಿಂದ ಹೊರಬಂದು ಕಷ್ಟವಾದರೂ ಸರಿ ಪಕ್ಷದ ಉಳಿವಿಗಾಗಿ ಮತ್ತೆ ಚುನಾವಣೆಗೆ ಹೋಗುವ ಬಗ್ಗೆ ರಾಜ್ಯ ಕಾಂಗ್ರೆಸ್‌ ಚಿಂತಿಸುತ್ತಿದೆ ಎನ್ನಲಾಗಿದೆ.

English summary
Karnataka congress not happy with coalition with JDS. congress may get less seats Lok sabha elections 2019 than last lok sabha elections so they were unhappy with coalition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X