ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತೃಪ್ತ ಶಾಸಕರ ರಾಜೀನಾಮೆ ತಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್‌

|
Google Oneindia Kannada News

ಬೆಂಗಳೂರು, ಜನವರಿ 15: ಕಾಂಗ್ರೆಸ್ ಕೈತಪ್ಪಿ ಹೋಗಿರುವ ಐದು ಜನ ಶಾಸಕರು ಯಾವ ಸಮಯದಲ್ಲಾದರೂ ರಾಜೀನಾಮೆ ಕೊಡಬಹುದು. ಆದರೆ ಅವರ ರಾಜೀನಾಮೆ ತಡೆಯಲು ಕಾಂಗ್ರೆಸ್ ಒಂದು ಮಾಸ್ಟರ್ ಪ್ಲಾನ್ ಸಿದ್ದಮಾಡಿಕೊಂಡಿದೆ.

ಕಾಂಗ್ರೆಸ್‌ನ ಐದು ಶಾಸಕರು ಈಗಾಗಲೇ ಕರ್ನಾಟಕದ ಗಡಿ ದಾಟಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ಇಂದು ಅಥವಾ ನಾಳೆ ಸ್ಪೀಕರ್ ರಮೇಶ್‌ ಕುಮಾರ್‌ಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಆದರೆ ಅವರು ರಾಜೀನಾಮೆ ನೀಡದಂತೆ ತಡೆಯಲು ಕಾಂಗ್ರೆಸ್‌ ತಂತ್ರವೊಂದನ್ನು ಹೂಡಲಿದೆ.

ಶಾಸಕರು ವಿಧಾನಸಭೆ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಲು ಅವಕಾಶವೇ ನೀಡದಂತೆ ಮಾಡಲು, ಸ್ಪೀಕರ್ ರಮೇಶ್‌ ಕುಮಾರ್ ಅವರನ್ನು ಪ್ರವಾಸಕ್ಕೆ ಕಳಿಸಿಬಿಡುವ ಆಲೋಚನೆಯೂ ಕಾಂಗ್ರೆಸ್‌ ಮುಖಂಡರು ಮಾಡಿದ್ದಾರೆ.

'ಕೈ' ತಪ್ಪಿರುವ ಶಾಸಕರ ವಾಪಸ್ ಕರೆತರಲು ಸೇನಾಪತಿ ಡಿ.ಕೆ.ಶಿವಕುಮಾರ್ ಮುಂಬೈಗೆ 'ಕೈ' ತಪ್ಪಿರುವ ಶಾಸಕರ ವಾಪಸ್ ಕರೆತರಲು ಸೇನಾಪತಿ ಡಿ.ಕೆ.ಶಿವಕುಮಾರ್ ಮುಂಬೈಗೆ

ರಮೇಶ್ ಕುಮಾರ್ ಅವರನ್ನು ಪ್ರವಾಸಕ್ಕೆ ಕಳುಹಿಸಿದರೆ, ಅವರು ಮರಳುವವರೆಗೆ ತಮ್ಮ ರಾಜೀನಾಮೆ ಅಂಗೀಕಾರಗೊಳ್ಳುವುದಿಲ್ಲ. ಇದು ಕಾಂಗ್ರೆಸ್‌ಗೆ ಸಮಯವಾಕಾಶ ದೊರಕಿಸಿಕೊಡುತ್ತದೆ. ಆ ಸಮಯದಲ್ಲಿ ಅತೃಪ್ತ ಶಾಸಕರ ಮನವೊಲಿಸಲು ಅಥವಾ ಬಿಜೆಪಿಯ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವ ಯತ್ನ ಕಾಂಗ್ರೆಸ್ ಮಾಡಬಹುದಾಗಿದೆ.

ರಮೇಶ್‌ ಕುಮಾರ್ ಒಪ್ಪುತ್ತಾರೆಯೇ?

ರಮೇಶ್‌ ಕುಮಾರ್ ಒಪ್ಪುತ್ತಾರೆಯೇ?

ಈ ಬಗ್ಗೆ ಇಂದಿನ ಕಾಂಗ್ರೆಸ್‌ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಮಾಹಿತಿ ಇದೆ. ಸಭಾಧ್ಯಕ್ಷರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮ ಇದೆ ಹಾಗಾಗಿ, ಈ ರಾಜಕೀಯ ಆಟಕ್ಕೆ ರಮೇಶ್‌ ಕುಮಾರ್ ಒಪ್ಪಿಕೊಳ್ಳುತ್ತಾರೆಯೇ ಎಂಬ ಅನುಮಾನವೂ ಇದೆ.

'ಐ ಆಮ್ ನಾಟ್ ಸೇಲೆಬಲ್, ಐ ಆಮ್ ಗೂಳಿಹಟ್ಟಿ' ಖದರ್ ಡೈಲಾಗ್'ಐ ಆಮ್ ನಾಟ್ ಸೇಲೆಬಲ್, ಐ ಆಮ್ ಗೂಳಿಹಟ್ಟಿ' ಖದರ್ ಡೈಲಾಗ್

ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಬೇಕು

ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಬೇಕು

ನಿಯಮದ ಪ್ರಕಾರ ಶಾಸಕರು ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು. ಸಭಾಧ್ಯಕ್ಷರು ಅಂಕಿತ ಹಾಕುವವರೆಗೂ ರಾಜೀನಾಮೆ ಅಂಗೀಕಾರಗೊಳ್ಳುವುದಿಲ್ಲ. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲು ರಮೇಶ್ ಕುಮಾರ್ ಅವರನ್ನು ಪ್ರವಾಸಕ್ಕೆ ಕಳುಹಿಸುವ ಯತ್ನ ಮಾಡಲಿದೆ ಎನ್ನಲಾಗಿದೆ.

ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು: ಏನಿದು ಎಚ್ದಿಕೆ ಮಾತಿನ ಮರ್ಮ?ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು: ಏನಿದು ಎಚ್ದಿಕೆ ಮಾತಿನ ಮರ್ಮ?

ಐದು ಶಾಸಕರು ಮುಂಬೈನಲ್ಲಿ

ಐದು ಶಾಸಕರು ಮುಂಬೈನಲ್ಲಿ

ರಮೇಶ್ ಜಾರಕಿಹೊಳಿ, ಉಮೇಶ್ ಜಾದವ್, ಶ್ರೀಮಂತ ಪಾಟೀಲ್ ಸೇರಿ ಇನ್ನೂ ಕೆಲವರು ಈಗಾಗಲೇ ಮುಂಬೈನಲ್ಲಿದ್ದಾರೆ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಇವರು ಬಿಜೆಪಿ ಸಂಪರ್ಕದಲ್ಲಿದ್ದು, ಯಾವಾಗ ಬೇಕಾದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

ಬಿಜೆಪಿಗೆ ಹಾರುತ್ತಿರುವ 15 ಶಾಸಕರು ಯಾರು? ಇವರ ಮೇಲಿದೆ ಗುಮಾನಿ ಬಿಜೆಪಿಗೆ ಹಾರುತ್ತಿರುವ 15 ಶಾಸಕರು ಯಾರು? ಇವರ ಮೇಲಿದೆ ಗುಮಾನಿ

ಮುಂಬೈಗೆ ತೆರಳಲಿರುವ ಡಿಕೆಶಿ

ಮುಂಬೈಗೆ ತೆರಳಲಿರುವ ಡಿಕೆಶಿ

ಅತೃಪ್ತ ಶಾಸಕರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಅವರು ಮುಂಬೈಗೆ ತೆರಳಲಿದ್ದಾರೆ. ಸಮ್ಮೇಳನವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಔರಂಗಾಬಾದ್‌ಗೆ ಹೋಗುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರಾದರೂ ಅವರು ಮುಂಬೈನಲ್ಲಿ ತಂಗಿರುವ ತಮ್ಮ ಪಕ್ಷದ ಶಾಸಕರನ್ನು ವಾಪಸ್ ಕರೆತರಲು ಮುಂಬೈಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.

English summary
Karnataka congress master plan to prevent dissident MLAs giving resignation. They plan to send speaker Ramesh Kumar on tour. MLAs should send resignation to speaker. if speaker out on state they need to wait for approval of their resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X