ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್.ಡಿ.ರೇವಣ್ಣ ವಿರುದ್ಧ ಕಾಂಗ್ರೆಸ್ ನಾಯಕರ ಅಸಮಾಧಾನ

|
Google Oneindia Kannada News

ಬೆಂಗಳೂರು, ಜುಲೈ 15 : ಕರ್ನಾಟಕ ಕಾಂಗ್ರೆಸ್‌ನ ಹಲವು ನಾಯಕರು ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಇಂದಿನ ಸ್ಥಿತಿಗೆ ರೇವಣ್ಣ ಕಾರಣ ಎಂದು ಆರೋಪಿಸುತ್ತಿದ್ದಾರೆ.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹೋದರ ಎಚ್. ಡಿ. ರೇವಣ್ಣ 'ಸೂಪರ್ ಸಿಎಂ' ಎಂದು ಮಾಧ್ಯಮಗಳು ಹೇಳುತ್ತವೆ. ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ಅವರು ಉಳಿದ ಇಲಾಖೆಗಳ ವರ್ಗಾವಣೆ ಇತರ ಕೆಲಸಗಳಲ್ಲಿ ಮೂಗು ತೂರಿಸುತ್ತಾರೆ ಎಂಬುದು ಕಾಂಗ್ರೆಸ್ ನಾಯಕರ ದೂರು.

ಸರ್ಕಾರ ಉಳಿಸಿಕೊಳ್ಳಲು ದೇವಸ್ಥಾನಗಳ ಸುತ್ತು ಹಾಕಿದ ಎಚ್‌.ಡಿ.ರೇವಣ್ಣಸರ್ಕಾರ ಉಳಿಸಿಕೊಳ್ಳಲು ದೇವಸ್ಥಾನಗಳ ಸುತ್ತು ಹಾಕಿದ ಎಚ್‌.ಡಿ.ರೇವಣ್ಣ

ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ರೇವಣ್ಣ ವಿರುದ್ಧ ಕೆಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ಮುಂಬೈಗೆ ಹಾರಿದ್ದ ಹೊಸಕೋಟೆ ಶಾಸಕ ಎಂ. ಟಿ. ಬಿ. ನಾಗರಾಜ್ ಸಹ ರೇವಣ್ಣ ವಿರುದ್ಧ ಆರೋಪ ಮಾಡಿದ್ದರು.

ರೇವಣ್ಣ ಅಲ್ಲ 'ರಾವಣ' ಅಂತ ಹೆಸರಿಡಬೇಕಿತ್ತು: ರಾಜಣ್ಣರೇವಣ್ಣ ಅಲ್ಲ 'ರಾವಣ' ಅಂತ ಹೆಸರಿಡಬೇಕಿತ್ತು: ರಾಜಣ್ಣ

"ಮೈತ್ರಿ ಸರ್ಕಾರದ ಈ ಸ್ಥಿತಿಗೆ ಸಿಎಂ ಕುಮಾರಸ್ವಾಮಿಯೇ ನೇರ ಹೊಣೆ ಹೊರತು ರೇವಣ್ಣ ಅಲ್ಲ. ರಾಜಕೀಯ ಅನುಭವ ಇಲ್ಲದವರು ರೇವಣ್ಣ ಅಂತಾರೆ ಅಷ್ಟೇ", ಎಂದು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು, ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿ ಒತ್ತಡಕ್ಕೆ ಮಣಿದ ಸ್ಪೀಕರ್: ಗುರುವಾರಕ್ಕೆ ಕಲಾಪ ಮುಂದೂಡಿಕೆಬಿಜೆಪಿ ಒತ್ತಡಕ್ಕೆ ಮಣಿದ ಸ್ಪೀಕರ್: ಗುರುವಾರಕ್ಕೆ ಕಲಾಪ ಮುಂದೂಡಿಕೆ

ಸಚಿವ ಎಚ್. ಡಿ. ರೇವಣ್ಣ ನಿಜವಾದ ಶನಿ

ಸಚಿವ ಎಚ್. ಡಿ. ರೇವಣ್ಣ ನಿಜವಾದ ಶನಿ

"ನಾವು ಜೆಡಿಎಸ್ ಬಿಟ್ಟ ಸಂದರ್ಭದಲ್ಲಿ ನಮ್ಮನ್ನ ರೇವಣ್ಣ ಶನಿ ಅಂದಿದ್ರು. ಶನಿಗಳು ಪಕ್ಷ ಬಿಟ್ಟು ಹೋಗಿವೆ ಅಂದಿದ್ರು. ಆದ್ರೆ, ಈಗ ಎಲ್ಲರೂ ರೇವಣ್ಣರ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ನಿಜವಾದ ಶನಿ ಯಾರು? ಸಚಿವ ಎಚ್. ಡಿ. ರೇವಣ್ಣ ನಿಜವಾದ ಶನಿ" ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್. ಸಿ. ಬಾಲಕೃಷ್ಣ ಆರೋಪಿಸಿದರು.

ವಸತಿ ಇಲಾಖೆಯಲ್ಲಿಯೂ ಹಸ್ತಕ್ಷೇಪ

ವಸತಿ ಇಲಾಖೆಯಲ್ಲಿಯೂ ಹಸ್ತಕ್ಷೇಪ

ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಹೊಸಕೋಟೆ ಶಾಸಕ ಎಂ. ಟಿ. ಬಿ.ನಾಗರಾಜ್, "ವಸತಿ ಇಲಾಖೆಯಲ್ಲಿ ರೇವಣ್ಣ ಹಸ್ತಕ್ಷೇಪ ಅತಿಯಾಗಿದೆ. ನನ್ನ ಇಲಾಖೆಯಲ್ಲಿನ ವರ್ಗಾವಣೆ ವಿಚಾರದಲ್ಲಿಯೂ ಅವರು ತಲೆ ಹಾಕುತ್ತಾರೆ' ಎಂದು ಕಿಡಿಕಾರಿದ್ದರು.

ಸರ್ಕಾರದ ಸ್ಥಿತಿಗೆ ರೇವಣ್ಣ ಕಾರಣ

ಸರ್ಕಾರದ ಸ್ಥಿತಿಗೆ ರೇವಣ್ಣ ಕಾರಣ

ಮಾಜಿ ಸಚಿವ, ಬಿಜೆಪಿ ನಾಯಕ ಎ. ಮಂಜು ಸಹ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು. "ಸಮ್ಮಿಶ್ರ ಸರ್ಕಾರದ ಈ ಸ್ಥಿತಿಗೆ ಎಚ್. ಡಿ. ರೇವಣ್ಣ ಕಾರಣ. ನಾನು ಹಿಂದೆಯೇ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಹಾನಿಯಾಗುತ್ತದೆ ಎಂದು ಹಿಂದೆಯೇ ಹೇಳಿದ್ದೆ. ಅಪ್ಪ-ಮಕ್ಕಳ ಜೊತೆ ಹೋದರೆ ಬೀದಿಗೆ ಬರುತ್ತೀರಿ ಎಂದು ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೆ ಹೇಳಿದ್ದರು ಅದು ಈಗ ಸತ್ಯವಾಗಿದೆ, " ಎಂದರು.

ರೇವಣ್ಣ ಕಾರಣ ಅಲ್ಲ

ರೇವಣ್ಣ ಕಾರಣ ಅಲ್ಲ

ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಮಾತನಾಡಿ, "ಸರ್ಕಾರದ ಸ್ಥಿತಿಗೆ ನೇರ ಹೊಣೆ ಸಿಎಂ ಕುಮಾರಸ್ವಾಮಿಯೇ ಹೊರತು ರೇವಣ್ಣ ಅಲ್ಲ. ರಾಜಕೀಯ ಅನುಭವ ಇಲ್ಲದವರು ರೇವಣ್ಣ ಅಂತಾರೆ. ರೇವಣ್ಣ ಅವರಿಂದ ಇಂತಹ ಸ್ಥಿತಿ ಬಂದಿದೆ ಎಂದರೆ ಅವರನ್ನು ಸಚಿವ ಸ್ಥಾನದಿಂದ ಹೊರಗಿಟ್ಟು ಸರ್ಕಾರ ನಡೆಸಬಹುದಿತ್ತು", ಎಂದು ಹೇಳಿದರು.

English summary
Karnataka Congress leaders upset with PWD minister H.D.Revanna. Leaders alleged that H.D.Revanna main reason behind the party MLA's resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X